• Home
 • »
 • News
 • »
 • trend
 • »
 • Soldier: ಸೈನ್ಯ ಸೇರುವ ಹಂಬಲದಿಂದ ಐಐಟಿ ಪಾಸಾಗಿದ್ದೇ ಮುಚ್ಚಿಟ್ಟ! ಸೇನೆಯಲ್ಲಿ ಸಾಧನೆ ಮಾಡ್ತಿದ್ದಾನೆ ಈ ಯುವಕ

Soldier: ಸೈನ್ಯ ಸೇರುವ ಹಂಬಲದಿಂದ ಐಐಟಿ ಪಾಸಾಗಿದ್ದೇ ಮುಚ್ಚಿಟ್ಟ! ಸೇನೆಯಲ್ಲಿ ಸಾಧನೆ ಮಾಡ್ತಿದ್ದಾನೆ ಈ ಯುವಕ

ಐಐಟಿ ಬಿಟ್ಟು ಸೇನೆ ಸೇರಿದ ಗೌರವ್ ಯಾದವ್

ಐಐಟಿ ಬಿಟ್ಟು ಸೇನೆ ಸೇರಿದ ಗೌರವ್ ಯಾದವ್

ಗೌರವ್ ಎಂಬ ಯುವಕ ಕಠಿಣ ಎನ್ನಲಾಗುವ ಐಐಟಿ ಪ್ರವೇಶ ಪರೀಕ್ಷೆ ಉತ್ತೀರ್ಣನಾಗಿದ್ದರು. ಆದರೆ ಅವನ ಕನಸು ಮಾತ್ರ ಸೈನ್ಯಕ್ಕೆ ಸೇರಬೇಕೆಂದಿತ್ತು. ಹಾಗಾಗಿ, ತಾನು ಐಐಟಿ ಕ್ಲಿಯರ್ ಮಾಡಿರುವ ವಿಚಾರವನ್ನೇ ಗೌರವ್ ತನ್ನ ಕುಟುಂಬಕ್ಕೆ ಹೇಳಲೇ ಇಲ್ಲ!

 • Trending Desk
 • Last Updated :
 • Rajasthan, India
 • Share this:

  ಕೆಲವರು ಸಾಮಾನ್ಯದವರಿಗಿಂತ ಸ್ವಲ್ಪ ಭಿನ್ನವೇ ಆಗಿರುತ್ತಾರೆ. ತಮ್ಮ ಆಸೆ ಅಥವಾ ಕನಸನ್ನು (dream) ಈಡೇರಿಸಿಕೊಳ್ಳುವ ಹೆಬ್ಬಯಕೆಯಿಂದ ಸಾಮಾನ್ಯವಾಗಿ ಯಶಸ್ಸಿಗೆ (success) ದಾರಿ ಎಂದು ನಂಬಲಾಗುವ ಅದೆಷ್ಟೋ ಮಾರ್ಗಗಳನ್ನು ಪರಿಗಣಿಸುವುದಿಲ್ಲ ಕೂಡ. ಈ ಲೇಖನದಲ್ಲಿ ಅಂತಹ ವ್ಯಕ್ತಿತ್ವವುಳ್ಳ ಒಬ್ಬ ವ್ಯಕ್ತಿಯ ಕುರಿತು ತಿಳಿಸಲಾಗಿದೆ. ಸಹಜವಾಗಿ ಇಂದಿನ ದಿನಮಾನಗಳಲ್ಲಿ ಕೆಲವು ಉನ್ನತ ಮಟ್ಟದ ವ್ಯಾಸಂಗಗಳನ್ನು ಯಶಸ್ಸಿನ ಖಾತರಿ ದಾರಿ ಎಂದು ಕೊಳ್ಳುತ್ತೇವೆ. ಅವುಗಳಲ್ಲಿ ಐಐಟಿ ಶಿಕ್ಷಣವೂ (IIT education) ಸಹ ಒಂದು. ಇಂದಿಗೂ ಸಾವಿರಾರುಗಟ್ಟಲೇ ವಿದ್ಯಾರ್ಥಿಗಳು (Students) ತಾವು ಐಐಟಿಯಲ್ಲಿ ಪ್ರವೇಶ ಪಡೆಯಬೇಕೆಂಬ ಕನಸು ಕಾಣುತ್ತಿರುತ್ತಾರೆ ಹಾಗೂ ಅದಕ್ಕಾಗಿ ಕಟ್ಟುನಿಟ್ಟಾಗಿ ವ್ಯಾಸಂಗ ಸಹ ಮಾಡುತ್ತಿರುತ್ತಾರೆ. ಆದರೆ, ರಾಜಸ್ಥಾನದ (Rajasthan) ಅಳ್ವಾರ್ (Alwar) ಜಿಲ್ಲೆಯ ರೈತ ಕುಟುಂಬದಿಂದ ಬಂದ ಗೌರವ್ ಯಾದವ್ ಇಂತಹ ವಿದ್ಯಾರ್ಥಿಗಳಿಗೆ ಭಿನ್ನವಾಗಿ ನಿಲ್ಲುತ್ತಾನೆ ಎಂದರೆ ತಪ್ಪಾಗಲಿಕ್ಕಿಲ್ಲ.


  ಐಐಟಿ ಪಾಸಾಗಿದ್ದ ಯುವಕನಿಗೆ ಸೇನೆ ಸೇರುವ ಕನಸು


  ಗೌರವ್ ಎಂಬ ಯುವಕ ಕಠಿಣ ಎನ್ನಲಾಗುವ ಐಐಟಿ ಪ್ರವೇಶ ಪರೀಕ್ಷೆ ಉತ್ತೀರ್ಣನಾಗಿದ್ದರು. ಆದರೆ ಅವನ ಕನಸು ಮಾತ್ರ ಸೈನ್ಯಕ್ಕೆ ಸೇರಬೇಕೆಂದಿತ್ತು. ಹಾಗಾಗಿ, ತಾನು ಐಐಟಿ ಕ್ಲಿಯರ್ ಮಾಡಿರುವ ವಿಚಾರವನ್ನೇ ಗೌರವ್ ತನ್ನ ಕುಟುಂಬಕ್ಕೆ ಹೇಳಲೇ ಇಲ್ಲ, ಬದಲಾಗಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ (ಎನ್‍ಡಿಎ) ಪರೀಕ್ಷೆಗಾಗಿ ತಯಾರಿ ನಡೆಸಿದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


  ಭಾರತೀಯ ಸೇನೆ ಸೇರಿದ ಗೌರವ್


  ಸೇನೆ ಸೇರುವ ಕನಸಿಗೆ ದಾರಿ ದೀಪ


  ಭಾರತದಲ್ಲಿ ನಡೆಯುವ ಎನ್‍ಡಿಎ ಪರೀಕ್ಷೆಯು ಭಾರತೀಯ ಸೇನೆಗೆ ಸೇರಬೇಕೆನ್ನುವ ಆಕಾಂಕ್ಷಿಗಳಿಗೆ ಗೇಟ್ ಪಾಸ್ ಆಗಿದೆ. ಈ ಪರೀಕ್ಷೆಯನ್ನು ಪಾಸ್ ಮಾಡಿದಾಗ, ಪಾಸ್ ಆದಂತಹ ವಿದ್ಯಾರ್ಥಿಗಳಿಗೆ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆಗಳಿರುತ್ತವೆ. ಇವೆಲ್ಲವನ್ನು ಕ್ಲಿಯರ್ ಮಾಡಿದಾಗ ಮೂರು ವರ್ಷಗಳ ಎನ್‍ಡಿಎ ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಒಳಪಡುತ್ತಾರೆ.


  ಸಹೋದರನ ಜೊತೆ ಗೌರವ್


  ಇದನ್ನೂ ಓದಿ: Indian Army: ಭಾರತೀಯ ಸೇನೆಯನ್ನೇ ಮದ್ವೆಗೆ ಆಹ್ವಾನಿಸಿದ ವಧು-ವರ! ಗಡಿಯಿಂದಲೇ ಬಂತು ಶುಭಸಂದೇಶ!


  ಪರೇಡ್ ನೇತೃತ್ವ ವಹಿಸಿಕೊಂಡ ಗೌರವ್


  ಕಳೆದ ಬುಧವಾರದಂದು ನಡೆದ ಎನ್‍ಡಿಎ ಪಾಸಿಂಗ್ ಔಟ್ ಪರೇಡ್ ನಲ್ಲಿ ಅಕ್ಷರಶಃ ಗೌರವ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ. ಏಕೆಂದರೆ ಗೌರವ್ ಈ ತರಬೇತಿ ಪಡೆದಿದ್ದಲ್ಲದೆ ರಾಷ್ಟ್ರಪತಿ ಪದಕವನ್ನೂ ಸಹ ಗಳಿಸಿದ್ದ. ಇನ್ನೊಂದು ವಿಷಯವೆಂದರೆ ಗೌರವ್ ತನ್ನ ಕನಸಲ್ಲೂ ಊಹಿಸಿರದಂತೆ ಆ ಪರೇಡ್ ನಲ್ಲಿ ನೇತೃತ್ವವಹಿಸಿಕೊಂಡಿದ್ದ. ಇದೊಂದು ನಿಜಕ್ಕೂ ಅನೀರಿಕ್ಷಿತ ಗೌರವ, ಗೌರವನಿಗೆ ಸಂದಿತ್ತು.


  ಪೆರೇಡ್‌ ನೇತೃತ್ವ ವಹಿಸಿದ ಗೌರವ್


  ತರಬೇತಿ ಎನ್ನವುದು ಕಲ್ಲು ಮುಳ್ಳಿನ ಹಾದಿ


  ಗೌರವನಿಗೆ ಎನ್‍ಡಿಎ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಈ ಅಭಿಯಾನದಲ್ಲಿ ಅವನು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದ. ಈ ಹಿಂದೆ ಗೌರವ್ ಎನ್‍ಡಿಎ ಪರೀಕ್ಷೆಯನ್ನು ಎರಡು ಬಾರಿ ಕ್ಲಿಯರ್ ಮಾಡಿದ್ದರೂ ಸಂದರ್ಶನಗಳಲ್ಲಿ ವೈಫಲ್ಯನಾಗಿದ್ದ. ತದನಂತರ ಅಂತಿಮವಾಗಿ ಆಯ್ಕೆಯಾಗಿ ತರಬೇತಿ ಸೇರಿದಾಗ ಅಲ್ಲಿನ ಕಠಿಣ ತರಬೇತಿ ಪಡೆಯುವಾಗ ಸಾಕಷ್ಟು ಶ್ರಮಪಟ್ಟಿದ್ದ.


  ಸಾಧನೆಯ ಹಿಂದೆ ಕಠಿಣ ಪರಿಶ್ರಮ


  ಆದರೆ, ಅದೇನೋ ಹೇಳ್ತಾರಲ್ಲ, ಮನಸ್ಸಿದ್ದಲ್ಲಿ ಮಾರ್ಗವಿದೆ, ಪ್ರಯತ್ನವಿರುವಲ್ಲಿ ಯಶಸ್ಸಿದೆ ಅಂತ. ಆ ರೀತಿ ಗೌರವನಿಗೂ ತಾನು ಕಂಡಿದ್ದ ಕನಸು ನನಸಾಗಿತ್ತು. ಉತ್ತಮ ಸಂಬಳದೊಂದಿಗೆ ಅದ್ಭುತ ಕರಿಯರ್ ಅನ್ನು ರೂಪಿಸಿಕೊಳಬಹುದಾದಂತಹ ಐಐಟಿ ವ್ಯಾಸಂಗದ ಅವಕಾಶ ದೊರೆತಿದ್ದರೂ ಅದರಿಂದ ಸ್ವಲ್ಪವೂ ವಿಚಲಿತನಾಗದೆ ಸೈನ್ಯ ಸೇರಲೇಬೇಕೆಂಬ ಗೌರವ್‌ನ ದೃಢ ಸಂಕಲ್ಪ ಹಾಗೂ ಆ ನಿಟ್ಟಿನಲ್ಲಿ ಮನಸ್ಸಿಟ್ಟು ಸತತ ಪ್ರಯತ್ನ ಇಂದು ಗೌರವ್‌ನಿಗೆ ಯಶಸ್ಸು ತಂದುಕೊಟ್ಟಿದೆ.


  ಇದನ್ನೂ ಓದಿ: Galwan Taunt: ಭಾರತೀಯ ಸೇನೆ ಬಗ್ಗೆ ಲೇವಡಿ ಮಾಡಿ ಟ್ವೀಟ್ ಮಾಡಿದ ಬಾಲಿವುಡ್ ನಟಿ


  ಗೌರವ್‌ ಬಗ್ಗೆ ಸಹೋದರನಿಗೆ ಹೆಮ್ಮೆ


  ಇನ್ನು, ಗೌರವನ ಸಹೋದರನೂ ಸಹ ಸೈನ್ಯದಲ್ಲಿದ್ದು ತನ್ನ ತಮ್ಮನ ಕುರಿತು ಸಾಕಷ್ಟು ಹೆಮ್ಮೆ ಪಡುವಂತಾಗಿದೆ. ಗೌರವ್‌ನ ಸಹೋದರ ಹೇಳಿರುವಂತೆ ಗೌರವ್ ಮೊದಲಿಗೆ ತರಬೇತಿಗೆ ಆಯ್ಕೆಯಾಗಿ ಕಠಿಣವಾದ ತರಬೇತಿ ಪಡೆಯುತ್ತಿದ್ದಾಗ ಅವನ ಮಾನಸಿಕ ಸ್ಥಿತಿ ಕುರಿತು ಆತನ ಸಹೋದರ ಬಲು ಚಿಂತಿತನಾಗಿದ್ದನಂತೆ. ಆದರೆ, ಗೌರವ್ ಫಿನಿಕ್ಸ್ ಹಕ್ಕಿಯಂತೆ ಎಲ್ಲ ಒತ್ತಡಗಳನ್ನು ಸಹಿಸಿ ಪದಕ ಪಡೆಯುವಷ್ಟರ ಮಟ್ಟಿಗೆ ತಲುಪಿದ್ದು ಅಣ್ಣನಿಗೆ ಅಪಾರ ಸಂತಸ ಹಾಗೂ ಹೆಮ್ಮೆ ಉಂಟು ಮಾಡಿದೆ.

  Published by:Annappa Achari
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು