• Home
  • »
  • News
  • »
  • trend
  • »
  • Diwali Viral Video: 1 ಲಕ್ಷ ಪಟಾಕಿಗಳಿಂದ ಕಾರು ಸಿಂಗರಿಸಿ, ಸ್ಫೋಟಿಸಿದ ಭೂಪ! ದೀಪಾವಳಿಗೆ ಹೀಗೂ ಮಾಡ್ತಾರಾ?

Diwali Viral Video: 1 ಲಕ್ಷ ಪಟಾಕಿಗಳಿಂದ ಕಾರು ಸಿಂಗರಿಸಿ, ಸ್ಫೋಟಿಸಿದ ಭೂಪ! ದೀಪಾವಳಿಗೆ ಹೀಗೂ ಮಾಡ್ತಾರಾ?

ಸ್ವಿಫ್ಟ್ ಕಾರ್‌ ತುಂಬಾ ಪಟಾಕಿ ಇಟ್ಟು ಸಿಡಿಸಿದ ಯುವಕ!

ಸ್ವಿಫ್ಟ್ ಕಾರ್‌ ತುಂಬಾ ಪಟಾಕಿ ಇಟ್ಟು ಸಿಡಿಸಿದ ಯುವಕ!

ಪಟಾಕಿ ಹಚ್ಚಬೇಕು ಅಥವಾ ಹಚ್ಚ ಬಾರದು ಎನ್ನುವ ಬಗ್ಗೆ ಈಗ ಸುಮಾರು ವರ್ಷಗಳಿಂದಲೂ ಪರ-ವಿರೋಧ ಚರ್ಚೆ ನಡೆಯುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲೇ ಯುವಕನೊಬ್ಬ ವಿಚಿತ್ರ ರೀತಿಯಲ್ಲಿ ಪಟಾಕಿ ಹಚ್ಚಿ, ಸಂಭ್ರಮಿಸಿದ್ದಾನೆ.

  • News18 Kannada
  • Last Updated :
  • Rajasthan, India
  • Share this:

ರಾಜಸ್ಥಾನ: ದೀಪಾವಳಿ (Deepavali) ಅಂದ್ರೆ ಮುಖ್ಯವಾಗಿ ದೀಪಗಳ ಹಬ್ಬ (Festival of Lights). ಕತ್ತಲಾಗುತ್ತಿದ್ದಂತೆ ಮನೆ ತುಂಬ ದೀಪ (Lamps) ಬೆಳಗಿ, ಬದುಕಿನ ಕತ್ತಲೆ ಕಳೆ ದೇವರೇ ಅಂತ ಪ್ರಾರ್ಥಿಸಿ, ಹಬ್ಬ ಆಚರಿಸಲಾಗುತ್ತದೆ. ಬಳಿಕ ದೀಪ ಬೆಳಗುವುದರ ಜೊತೆಗೆ ಪಟಾಕಿ (firecrackers) ಹಚ್ಚಿ, ಅದರ ಸದ್ದು, ಘರ್ಜನೆ ಕೇಳಿ ಸಂತಸ ಪಡುವುದೂ ರೂಢಿಯಲ್ಲಿ ಬಂತು. ಪಟಾಕಿ ಹಚ್ಚಬೇಕು ಅಥವಾ ಹಚ್ಚ ಬಾರದು ಎನ್ನುವ ಬಗ್ಗೆ ಈಗ ಸುಮಾರು ವರ್ಷಗಳಿಂದಲೂ ಪರ-ವಿರೋಧ ಚರ್ಚೆ ನಡೆಯುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲೇ ಯುವಕನೊಬ್ಬ ವಿಚಿತ್ರ ರೀತಿಯಲ್ಲಿ ಪಟಾಕಿ ಹಚ್ಚಿ, ಸಂಭ್ರಮಿಸಿದ್ದಾನೆ. ಈ ಹುಡುಗ ಹಚ್ಚಿದ ಪಟಾಕಿ ವಿಡಿಯೋ ಈಗ ವೈರಲ್ (Viral Video) ಆಗಿದ್ದು, ನೆಟ್ಟಿಗರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


 ಯೂಟ್ಯೂಬರ್ ಮಾಡಿದ ವಿಚಿತ್ರ ಕೆಲಸ


ಈಗ ಜನರು ಪ್ರಸಿದ್ಧರಾಗಲು ಸೋಶಿಯಲ್ ಮೀಡಿಯಾಗಳ ಮೊರೆ ಹೋಗ್ತಿದ್ದಾರೆ. ಎಲ್ಲಾ ಪ್ರಕಾರಗಳ ವಿಡಿಯೋ ಮಾಡಿ, ಅದನ್ನು YouTubeನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಅಂತಹ ಯೂಟ್ಯೂಬರ್ ಒಬ್ಬರು ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಯೂಟ್ಯೂಬರ್ ಆಗಿರುವ ಅಮಿತ್ ಶರ್ಮಾ ಅವರು ತಮ್ಮ ಚಾನಲ್‌ನಲ್ಲಿ ವಿವಿಧ ರೀತಿಯ ವಿಡಿಯೊಗಳನ್ನು ಮಾಡುವ ಮೂಲಕ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗಷ್ಟೇ ಇಂತಹದೊಂದು ವಿಡಿಯೋ ರೆಕಾರ್ಡ್ ಮಾಡಿದ್ದು, ನೋಡಿದ್ರೆ ನೀವು ಬೆಚ್ಚಿ ಬೀಳುತ್ತೀರಿ.



ಸ್ವಿಫ್ಟ್ ಕಾರಿನ ಮೇಲೆ 1 ಲಕ್ಷ ಪಟಾಕಿ ಇಟ್ಟು ಸಿಡಿಸಿದ ಭೂಪ!


ಪ್ರಸಿದ್ಧ ಯೂಟ್ಯೂಬರ್ ಅಮಿತ್ ಶರ್ಮಾ ಎಂಬಾತ ಸ್ವಿಫ್ಟ್ ಕಾರಿನ ಮೇಲೆ 1 ಲಕ್ಷಕ್ಕೂ ಹೆಚ್ಚು ಪಟಾಕಿಗಳನ್ನು ಇಟ್ಟು, ಅದನ್ನು ತಾವೇ ಸಿಡಿಸಿದ್ದಾರೆ. ಜೊತೆಗೆ ಅದು ಸ್ಫೋಟಗೊಳ್ಳುತ್ತಿರುವ ದೃಶ್ಯಗಳನ್ನು ಸಂಪೂರ್ಣವಾಗಿ ವಿಡಿಯೋ ರೆಕಾರ್ಡ್‌ ಮಾಡಲಾಗಿದೆ. ಯೂಟ್ಯೂಬರ್ ಅಮಿತ್ ಶರ್ಮಾ ಅವರು ದೀಪಾವಳಿಯ ಮೊದಲು ತಮ್ಮ ಕ್ರೇಜಿ XYZ ಚಾನೆಲ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.


ಕಾರಿನ ಮೇಲೆ ಪಟಾಕಿ ಸಿಡಿತ!


ಇದನ್ನೂ ಓದಿ: Deepavali 2022: ಸ್ಮಶಾನದಲ್ಲಿ ನಡೆಯಿತು ದೀಪಾವಳಿ, ಗೋರಿಗಳ ಮೇಲೆ ಬೆಳಗಿತು ದೀಪಗಳ ಸಾಲು!


ಗಾಜು ಬಿಟ್ಟು ಉಳಿದ ಎಲ್ಲಾ ಜಾಗಕ್ಕೆ ಪಟಾಕಿ ಕಟ್ಟಿದ ಟೀಂ


ವಿಡಿಯೋದಲ್ಲಿ ತೋರಿಸಿರುವಂತೆ ಅವರು ಕಾರ್‌ನ ಹೊರಗೆ ಸುಮಾರು 1 ಲಕ್ಷ ಪಟಾಕಿಗಳನ್ನು ಕಟ್ಟಿದ್ದಾರೆ. ಟೇಪ್ ಸಹಾಯದಿಂದ ಪಟಾಕಿಗಳನ್ನು ಕಾರಿನ ಮೇಲ್ಭಾಗಕ್ಕೆ ಅಂಟಿಸಲಾಗಿದೆ. ನೀವು ಕಾರಿನ ಮೇಲೆ ಕ್ರ್ಯಾಕರ್‌ಗಳನ್ನು ಸ್ಫೋಟಿಸಿದಾಗ ಏನಾಗುತ್ತದೆ? ಇದನ್ನು ವೀಕ್ಷಿಸಲು, ಪ್ರತಿಕ್ರಿಯೆ ವೀಡಿಯೊವನ್ನು ಮಾಡಲಾಗಿದೆ. ಅಮಿತ್ ಮತ್ತು ಆತನ ಸ್ನೇಹಿತರು ಕಾರಿನ ಮೇಲೆ 5,000 ರಿಂದ 10,000 ಪಟಾಕಿ ದಾರಗಳನ್ನು ಹಾರಿಸಿದ್ದಾರೆ. ಕಾರಿನ ಗಾಜುಗಳ ಮೇಲೆ ಮಾತ್ರ ಪಟಾಕಿಗಳನ್ನು ಹಾಕದೇ ಹಾಗೆಯೇ ಬಿಟ್ಟಿದ್ದಾರೆ.


ತನ್ನ ಕಾರಿಗೆ ತಾನೇ ಬೆಂಕಿ ಇಟ್ಟ ಯುವಕ!


ಅಮಿತ್ ಶರ್ಮಾ ರಿಮೋಟ್ ನಿಂದ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಡ್ರೋನ್ ಕ್ಯಾಮೆರಾಗಳು, ಗೋ-ಪ್ರೊ ಕ್ಯಾಮೆರಾಗಳು ಮತ್ತು ಇತರ ಕ್ಯಾಮೆರಾಗಳನ್ನು ಅಮಿತ್ ಶರ್ಮಾ ಮತ್ತು ಅವರ ಸಹೋದ್ಯೋಗಿಗಳು ವಿವಿಧ ಕೋನಗಳಿಂದ ಅಳವಡಿಸಿ ಒಂದು ಲಕ್ಷ ಪಟಾಕಿಗಳನ್ನು ಹೇಗೆ ಹೊತ್ತಿಸಿದರು ಎಂಬ ಸಂಪೂರ್ಣ ಸನ್ನಿವೇಶವನ್ನು ದಾಖಲಿಸಿದ್ದಾರೆ. ಪಟಾಕಿ ಸಿಡಿದ ನಂತರ ಬಹಳ ಹೊತ್ತಿನವರೆಗೆ ಬೊಬ್ಬೆ ಹೊಡೆಯುವ ಸದ್ದು ವಿಡಿಯೋದಲ್ಲಿ ಕೇಳಿ ಬಂದಿದೆ.


ಇದನ್ನೂ ಓದಿ: Notice To Hanuman: ಜಾಗ ಒತ್ತುವರಿ ಮಾಡ್ಕೊಂಡಿದ್ದಾನಂತೆ ಆಂಜನೇಯ! 10 ದಿನಗಳೊಳಗೆ ಖಾಲಿ ಮಾಡುವಂತೆ ನೋಟಿಸ್!


ಪಟಾಕಿ ಸ್ಫೋಟದ ಬಳಿಕ ಏನಾಯ್ತು?


ಪಟಾಕಿಗಳು ಸ್ಫೋಟಗೊಂಡಾಗ ಕಾರಿನ ಬಣ್ಣ ಬದಲಾಯಿತು. ಕಾರಿನಲ್ಲಿ ಹೊಗೆ ತುಂಬಿತ್ತು. ಕಾರಿನ ಕಿಟಕಿಯ ಮೇಲೆ ಯಾವುದೇ ಪಟಾಕಿಗಳಿಲ್ಲದಿದ್ದರೂ ಗಾಜು ಪುಡಿಪುಡಿಯಾಗಿದೆ. ಆದರೆ, ಅಷ್ಟೊಂದು ಪಟಾಕಿಗಳು ಸ್ಫೋಟಗೊಂಡ ನಂತರವೂ ಕಾರಿನ ಎಂಜಿನ್ ಕೆಲಸ ಮಾಡುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಸ್ವಲ್ಪ ಸಮಯದ ನಂತರ ಯೂಟ್ಯೂಬರ್ ಮತ್ತೆ ಕಾರನ್ನು ಸ್ಟಾರ್ಟ್ ಮಾಡಿ ತನ್ನ ಸ್ನೇಹಿತರೊಂದಿಗೆ ಡ್ರೈವಿಂಗ್ ಮಾಡುವುದನ್ನು ಆನಂದಿಸಿದ್ದಾನೆ.

Published by:Annappa Achari
First published: