• Home
  • »
  • News
  • »
  • trend
  • »
  • Viral News: ಲೇಡಿ ರೂಮ್‌ಮೇಟ್‌ ಬೇಕಾಗಿದ್ದಾರೆ; ನೋಡಲು ಸುಂದರವಾಗಿರಬೇಕು, ವಯಸ್ಸು 18-25ರ ಒಳಗಿರಬೇಕು!

Viral News: ಲೇಡಿ ರೂಮ್‌ಮೇಟ್‌ ಬೇಕಾಗಿದ್ದಾರೆ; ನೋಡಲು ಸುಂದರವಾಗಿರಬೇಕು, ವಯಸ್ಸು 18-25ರ ಒಳಗಿರಬೇಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಲ್ಲೊಬ್ಬ ಭೂಪ ತನ್ನ ಜೊತೆ ಫ್ಲಾಟ್‌ನಲ್ಲಿ ವಾಸ ಮಾಡೋದಕ್ಕೆ ಲೇಡಿ ರೂಮ್‌ಮೇಟ್‌ ಬೇಕಾಗಿದ್ದಾರೆ ಅಂತ ಫೇಸ್‌ಬುಕ್‌ನಲ್ಲಿ ಜಾಹೀರಾತು (Facebook Advertisement) ನೀಡಿದ್ದಾರೆ. ಆತನ ರೂಮ್‌ಮೇಟ್ ಆಗಿ ಬರುವ ಲೇಡಿ ನೋಡೋದಕ್ಕೆ ಸುಂದರವಾಗಿ ಇರ್ಬೇಕಂತೆ, ವಯಸ್ಸು 18ರಿಂದ 25ರ ಒಳಗೆ ಇರಬೇಕಂತೆ! ಅಂದಹಾಗೆ ಆತನ ವಯಸ್ಸು 25 ಅಲ್ಲ, 45!

ಮುಂದೆ ಓದಿ ...
  • Share this:

ಅಮೆರಿಕ: ಕೆಲಸ ಖಾಲಿ ಇದೆ (job is vacant), ಕೆಲಸಕ್ಕೆ ಬೇಕಾಗಿದ್ದಾರೆ (Wanted for work) ಅಂತ ಟಿವಿ, ಪೇಪರ್ ಇತ್ಯಾದಿ ಮಾಧ್ಯಮಗಳಲ್ಲಿ ಜಾಹೀರಾತು (TV, Paper Ad) ಕೊಡೋದನ್ನು ನೋಡಿದ್ದೀವಿ. ಮನೆ ಕೆಲಸಕ್ಕೆ ಜನ ಬೇಕಾಗಿದ್ದಾರೆ ಅಂತ ಆ್ಯಡ್ ಕೊಡೋದೂ ಕೂಡ ಕಾಮನ್. ಆದ್ರೆ ಇಲ್ಲೊಬ್ಬ ಭೂಪ ತನ್ನ ಜೊತೆ ಫ್ಲಾಟ್‌ನಲ್ಲಿ ವಾಸ ಮಾಡೋದಕ್ಕೆ ಲೇಡಿ ರೂಮ್‌ ಮೇಟ್‌ಗಳು (Lady Roommates) ಬೇಕಾಗಿದ್ದಾರೆ ಅಂತ ಫೇಸ್‌ಬುಕ್‌ನಲ್ಲಿ ಜಾಹೀರಾತು (Facebook Advertisement) ನೀಡಿದ್ದಾರೆ. ಇವಷ್ಟೇ ಸಾಲದ್ದಕ್ಕೆ ಕೆಲವೊಂದು ಕಂಡೀಷನ್ಸ್‌ (Conditions) ಕೂಡ ಹಾಕಿದ್ದಾನೆ. ಆತನ ರೂಂ ಮೇಟ್‌ ಆಗಿ ಬರುವ ಲೇಡಿ ನೋಡೋದಕ್ಕೆ ಸುಂದರವಾಗಿ ಇರ್ಬೇಕಂತೆ, ವಯಸ್ಸು 18ರಿಂದ 25ರ ಒಳಗೆ ಇರಬೇಕಂತೆ! ಅಂದಹಾಗೆ ಆತನ ವಯಸ್ಸು 25 ಅಲ್ಲ, 45! ಇದೀಗ ಈ ಭೂಪ ಹಾಕಿದ ಫೇಸ್‌ಬುಕ್ ಜಾಹೀರಾತು ಭಾರೀ ವೈರಲ್ (Viral) ಆಗಿದ್ದು, ನೆಟ್ಟಿಗರಂತೂ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.


“ಲೇಡಿ ರೂಮ್‌ ಮೇಟ್‌ಗಳು ಬೇಕಾಗಿದ್ದಾರೆ”


ಅಮೆರಿಕದ ಡೆಡ್ರಾಯಿಟ್ ಎಂಬ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ಹಾಕಿದ್ದ ಜಾಹೀರಾತೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಆತ ಒಂದು ಸಿಂಗಲ್ ಬೆಡ್ ರೂಮ್‌ ಫ್ಲಾಟ್‌ನಲ್ಲಿ ವಾಸ ಮಾಡ್ತಿದ್ದಾನಂತೆ. ಈತನಿಗೆ ಒಬ್ಬರು ರೂಮ್ ಮೇಟ್ ಬೇಕಂತೆ. ಅದೂ ಪುರುಷ ರೂಮ್‌ ಮೇಟ್ ಅಲ್ವಂತೆ, ಮಹಿಳಾ ರೂಮ್‌ಮೇಟ್ ಅಂತೆ.


“ನೋಡಲು ಸುಂದರವಾಗಿರಬೇಕು, ವಯಸ್ಸು 18ರಿಂದ 25ರ ಒಳಗಿರಬೇಕು”


ಇನ್ನು ಆ ವ್ಯಕ್ತಿ ತನ್ನ ಫ್ಲಾಟ್‌ಗೆ ತನ್ನ ರೂಮ್‌ ಮೇಟ್ ಆಗಿ ಬರುವ ಮಹಿಳೆಯರಿಗೆ ಕೆಲವೊಂದು ಕಂಡೀಷನ್ಸ್ ಕೂಡ ಹಾಕಿದ್ದಾನೆ. ಆತನ ರೂಮ್‌ ಮೇಟ್ ಆಗುವ ಹುಡುಗಿ ನೋಡಲು ಸುಂದರವಾಗಿ ಇರಬೇಕಂತೆ. ಆಕೆಯ ವಯಸ್ಸು 18ರಿಂದ 25 ವರ್ಷದೊಳೆ ಇರಬೇಕಂತೆ.


ಇದನ್ನೂ ಓದಿ: Viral Letter: ಐಶ್ವರ್ಯಾ ದಪ್ಪ ಆಗ್ಲಿ, ನನಗೆ ಮದುವೆ ಫಿಕ್ಸ್ ಆಗ್ಲಿ! ದೇವರ ಮುಂದೆ ಭಕ್ತನ ವಿಚಿತ್ರ ಡಿಮ್ಯಾಂಡ್


ಆಕೆಯ ಬಾಯ್‌ ಫ್ರೆಂಡ್ಸ್ ಮನೆಗೆ ಬರುವಂತಿಲ್ಲ!


ಇನ್ನು ಆ ಹುಡುಗಿಗೆ ಹಲವಾರು ಕ್ವಾಲಿಟೀಸ್ ಇರಬೇಕಂತೆ. ಅವುಗಳೆಂದರೆ ಆಕೆಗೆ ಅಡುಗೆ ಮಾಡಲು, ಮನೆ ಕ್ಲೀನ್ ಮಾಡಲು ಗೊತ್ತಿರಬೇಕಂತೆ. ಆತನಿಗೆ ರೂಂ ಮೇಟ್ ಆಗಿ ಬರುವವಳು, ಸಿಗರೇಟ್ ಸೇದಬಾರದಂತೆ, ಕುಡಿಯಬಾರದಂತೆ, ನಾಯಿಗಳನ್ನು ಸಾಕಬಾರದಂತೆ ಹಾಗೂ ಮನೆಗೆ ಆಕೆಯ ಬಾಯ್ ಫ್ರೆಂಡ್ಸ್‌ ಯಾರೂ ಬರಬಾರದಂತೆ.


ಆತನ ಬೆಡ್‌ ರೂಮ್‌ನಲ್ಲಿ ಮಲಗಲು ಅವಕಾಶ!


ಇನ್ನು ಆತ ಇರುವುದು ಸಿಂಗಲ್ ಬೆಡ್ ರೂಂ ಫ್ಲಾಟ್ ಆಗಿರುವುದರಿಂದ ಆತನಿಗೆ ರೂಮ್‌ಮೇಟ್ ಆಗಿ ಬರುವವಳು ಫ್ಲಾಟ್ನ ಹಾಲ್‌ನಲ್ಲಿ ಹಾಕಿರುವ ಸೋಫಾ ಮೇಲೆ ಮಲಗಬೇಕಂತೆ. ಆಕೆಗೆ, ತಾನು ಕಂಫರ್ಟಬಲ್ ಅಂತ ಅನ್ನಿಸಲು ಶುರು ಮಾಡಿದರೆ, ಆತನ ಬೆಡ್ ರೂಂನಲ್ಲೂ ಬಂದು ಮಲಗಲೂ ಕೂಡ ಅವಕಾಶವಿದೆಯಂತೆ!


ಅಂದಹಾಗೆ ಆತನ ವಯಸ್ಸು 25 ಅಲ್ಲ, 45 ವರ್ಷ!


ಅಂದಹಾಗೆ ಈ ರೀತಿ ಸುಂದರ ಹುಡುಗಿ, 18ರಿಂದ 25 ವರ್ಷ ವಯಸ್ಸಿನ ತರುಣಿ ನನ್ನ ಫ್ಲಾಟ್‌ಗೆ ರೂಮ್ ಮೇಟ್ ಆಗಿ ಬೇಕು ಅಂತ ವಿಚಿತ್ರ ಜಾಹೀರಾತು ಕೊಟ್ಟ ಈ ವ್ಯಕ್ತಿ ವಯಸ್ಸು 25 ಅಲ್ಲ. ಬದಲಾಗಿ ಆತ 45 ವರ್ಷ ವಯಸ್ಸಿನ ವ್ಯಕ್ತಿ.


ಇದನ್ನೂ ಓದಿ: Viral Post: ಮಗನ ಶಾಲೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ರಗಡ್ ಉತ್ತರ ಕೊಟ್ಟ ತಾಯಿ, ಮಮ್ಮಿ ರಾಕ್ ಟೀಚರ್ಸ್ ಶಾಕ್!


ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ವೈರಲ್


ಈ ಭೂಪ ಫೇಸ್‌ಬುಕ್‌ನಲ್ಲಿ ಹಾಕಿದ ಈ ವಿಚಿತ್ರ ಜಾಹೀರಾತು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಇದೀಗ ಆತನಿಗೆ ಲೇಡಿ ರೂಮ್‌ಮೇಟ್ ಸಿಕ್ಕಿದ್ದಾರಾ, ಇಲ್ಲವಾ ಎನ್ನುವುದು ತಿಳಿದಿಲ್ಲ.

Published by:Annappa Achari
First published: