Baby Doll: ಈ ಹುಡುಗಿ 'ಬೇಬಿ ಡಾಲ್' ಆಗಬೇಕು ಅಂತ ಏನೆಲ್ಲಾ ಮಾಡಿದಳು ನೋಡಿ, ಈಗ ಮನೆಗೆ ಸೇರಿಸುತ್ತಿಲ್ಲ ಕುಟುಂಬಸ್ಥರು!

ಎಷ್ಟೋ ಜನ ಯುವತಿಯರು ತಾವು 'ಬಾರ್ಬಿ ಗೊಂಬೆ'ಯಂತೆ ಕಾಣಿಸಿಕೊಳ್ಳಬೇಕು ಅಂತ ಕನಸು ಕಾಣುತ್ತಾರೆ. ಆದರೆ ಜರ್ಮನ್ ಮೂಲದ 21 ವರ್ಷದ ಯುವತಿಯೊಬ್ಬಳು ಆ ಕನಸನ್ನು ನನಸು ಮಾಡಲು ಹೋಗಿ, ಈಗ ಏನೇನೆಲ್ಲಾ ಮಾಡಿಕೊಂಡಿದ್ದಾಳೆ!

'ಮಾನವ ಬಾರ್ಬಿ' ಜೆಸ್ಸಿಕಾ

'ಮಾನವ ಬಾರ್ಬಿ' ಜೆಸ್ಸಿಕಾ

 • Share this:
  ಬಾಲ್ಯದಲ್ಲಿ (Childhood) ಬಾರ್ಬಿ ಗೊಂಬೆಗಳನ್ನು (Barbie Doll) ಇಷ್ಟಪಡದ ಬಾಲೆಯರು (Girls) ವಿರಳ. ಗೊಂಬೆಯಲ್ಲಿ ಆಡುವ ವಯಸ್ಸು ಕಳೆದ ನಂತರವೂ, ಬಾರ್ಬಿ ಗೊಂಬೆಯ ಮೋಹವನ್ನು ಬಿಡದ ಹುಡುಗಿಯರ ಸಂಖ್ಯೆಯೂ ಕಮ್ಮಿ ಇಲ್ಲ. ಬಾರ್ಬಿ ಗೊಂಬೆಗಳ ಸೌಂದರ್ಯವೇ (Beauty) ಅಂತದ್ದು, ಎಂತವರು ಕೂಡ, ಆಹ್ ಎಷ್ಟು ಮುದ್ದಾಗಿದೆ ಎನ್ನದೇ ಇರಲು ಸಾಧ್ಯವಿಲ್ಲ. ಎಷ್ಟೋ ಜನ ಯುವತಿಯರು, ತಮಗೂ ಕೂಡ ಬಾರ್ಬಿ ಗೊಂಬೆಯಂತೆ ಹಾಟ್ ಮತ್ತು ಮೋಹಕ ಲುಕ್ ಇರಬೇಕೆಂದು ಕನಸು (Dreams) ಕಾಣುತ್ತಾರೆ. ಆದರೆ, ಬೇರೆಯವರೆಲ್ಲಾ ಬಾರ್ಬಿ ಡಾಲ್‍ನಂತೆ ಕಾಣಬೇಕೆಂಬ ಕನಸನ್ನು ಕಂಡು ಸುಮ್ಮನಿದ್ದರೆ, ಜರ್ಮನ್ (Germany) ಮೂಲದ 21 ವರ್ಷದ ಯುವತಿಯೊಬ್ಬಳು ಆ ಕನಸನ್ನು ನನಸು ಮಾಡಲು ಹೋಗಿ, ತನ್ನ ಇಡೀ ಕುಟುಂಬದ (Family) ಜೊತೆ ಸಂಬಂಧವನ್ನೇ (Relationship) ಕಡಿದುಕೊಳ್ಳುವಂತಾಗಿದೆ.

  ಮಾನವ ಬಾರ್ಬಿ ಡಾಲ್ ಜೆಸ್ಸಿಕಾ

  ಜೆಸ್ಸಿಕಾ ಎಂಬ ಹೆಸರಿನ ಆಕೆ, ತಾನು ‘ಮಾನವ ಬಾರ್ಬಿ’ ಆಗಬೇಕೆಂದು, ಕಾಸ್ಮೆಟಿಕ್ ಸರ್ಜರಿಗಳಿಗೆ ಇದುವರೆಗೆ 70,000 ಡಾಲರ್‌ಗಿಂತಲೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದು, ಇದೀಗ ತನ್ನನ್ನು ತಾನು ಜೆಸ್ಸಿ ಬನ್ನಿ ಎಂಬ ಹೆಸರಿನಿಂದ ಕರೆದುಕೊಳ್ಳುತ್ತಿದ್ದಾಳೆ. ಇನ್‍ಸ್ಟಾಗ್ರಾಂನಲ್ಲಿ ತನ್ನ ದೇಹದ ಅಳತೆಗಳನ್ನು ಹಂಚಿಕೊಂಡಿರುವ ಅವಳು, “2000 ಸಿಸಿ (ಕ್ಯುಬಿಕ್ ಸೆಂಟಿಮೀಟರ್‌ಗಳು) ಮತ್ತು ಇನ್ನು ಬೆಳೆಯುತ್ತಿರುವ” ಕಪ್ ಗಾತ್ರವುಳ್ಳ ಫ್ಯಾಷನ್ ಮಾಡೆಲ್ ತಾನೆಂದು ಹೇಳಿಕೊಂಡಿದ್ದಾಳೆ.

  ಶಸ್ತ್ರ ಚಿಕಿತ್ಸೆಗಾಗಿ 73 ಸಾವಿರ ಡಾಲರ್!

  ಜೆಸ್ಸಿ ವಿಯೆನ್ನಾದ ನಿವಾಸಿಯಾಗಿದ್ದು, ಮೂರು ಬಾರಿ ಸ್ತನ ವರ್ಧನೆ ಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾಳೆ ಎಂದು ಆಸ್ಟ್ರಿಯನ್ ಮಾಧ್ಯಮವೊಂದು ವರದಿ ಮಾಡಿದೆ. ಅಷ್ಟೇ ಅಲ್ಲ, ಆಕೆ ಮೂಗಿನ ಶಸ್ತ್ರ ಚಿಕಿತ್ಸೆ, ತುಟಿ ಮತ್ತು ಪೃಷ್ಟವನ್ನು ಉಬ್ಬಿಸಿಕೊಳ್ಳುವ ಶಸ್ತ್ರಚಿಕಿತ್ಸೆಗಳನ್ನು ಕೂಡ ಮಾಡಿಸಿಕೊಂಡಿದ್ದಾಳೆ. ಇಷ್ಟು ವರ್ಷಗಳಲ್ಲಿ ಆಕೆ, ಈ ಎಲ್ಲಾ ಶಸ್ತ್ರಚಿಕಿತ್ಸೆಗಳಿಗಾಗಿ, ಸುಮಾರು 73,000 ಡಾಲರ್‌ಗಳನ್ನು ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.

  ಇದನ್ನೂ ಓದಿ: Birth Gift: "ಮೂರನೇ ಮಗು ಹುಟ್ಟಿಸಿಕೊಳ್ಳಿ, 11 ಲಕ್ಷ ರೂಪಾಯಿ ಬಹುಮಾನ ಪಡೆಯಿರಿ"! ದಂಪತಿಗೆ ಖಾಸಗಿ ಕಂಪನಿಯಿಂದ ಬಿಗ್ ಆಫರ್

  ರೂಪಾಂತರದ ಬಗ್ಗೆ ಕುಟುಂಬಸ್ಥರ ವಿರೋಧ

  ಇನ್ನೂ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವ ಕಲ್ಪನೆ ಜೆಸ್ಸಿಕಾಗೆ ಇದೆಯಂತೆ. ಆದರೆ, ಆಕೆಯ ಈ ರೂಪಾಂತರ ಕುಟುಂಬದ ಸದಸ್ಯರಿಗೆ ಮಾತ್ರ ಒಂದಿಷ್ಟೂ ಹಿಡಿಸಿಲ್ಲ. ಹಾಗಾಗಿ, ಕುಟುಂಬದವರು ಆಕೆಯ ಸಹವಾಸವೇ ಬೇಡ ಎಂದು ದೂರ ಇಟ್ಟಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ತನ್ನ ಫೋನ್ ಕರೆ ಮತ್ತು ಸಂದೇಶಗಳನ್ನು ಕೂಡ ಅವರು ಬ್ಲಾಕ್ ಮಾಡಿದ್ದಾರೆ ಎಂದು ಜೆಸ್ಸಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾಳೆ.

  ನೋವು ತೋಡಿಕೊಂಡ ಜೆಸ್ಸಿಕಾ

  “ಇದು ತುಂಬಾ ಖೇದನೀಯ. ಏಕೆಂದರೆ, ನನಗೆ ಅವರ ಸಂಪರ್ಕದಲ್ಲಿ ಇರಲು ಇಷ್ಟವಿದೆ. ವಿಶೇಷವಾಗಿ ನನ್ನ ಸಹೋದರ ಮತ್ತು ಅಜ್ಜಿಯ ಜೊತೆಗೆ. ಕೇವಲ ನನ್ನ ದೈಹಿಕ ನೋಟವನ್ನು ಬದಲಾಯಿಸಿದ್ದಕ್ಕಾಗಿ ಅವರು ಹಾಗೇಕೆ ವರ್ತಿಸುತ್ತಿದ್ದಾರೆ ಎಂಬುವುದು ನನಗೆ ಅರ್ಥವಾಗುತ್ತಿಲ್ಲ” ಎಂದು ಜೆಸ್ಸಿ ಬೇಸರ ವ್ಯಕ್ತಪಡಿಸಿದ್ದಾರೆ.

  ಬಾಹ್ಯರೂಪವನ್ನು ಬದಲಾಯಿಸಿಕೊಳ್ಳುವ ತನ್ನ ಆಯ್ಕೆಯ ಬಗ್ಗೆ ಕುಟುಂಬದವರು ನೀಡಿದ ಪ್ರತಿಕ್ರಿಯೆಯಿಂದ ಜೆಸ್ಸಿಗೆ ಗೊಂದಲ ಉಂಟಾಗಿದೆಯಂತೆ. ಹದಿಹರೆಯದ ದಿನಗಳಲ್ಲಿ ತಾನು “ ಕೂಲ್ ಮತ್ತು ಗಟ್ಟಿಗಿತ್ತಿ” ಎಂಬಂತೆ ತೋರಿಸಿಕೊಳ್ಳುತ್ತಿದ್ದೆ, ಆದರೆ ಅದು ಯಾವತ್ತೂ ಹಿತಕರವಾಗಿರಲಿಲ್ಲ ಮತ್ತು ತನಗೆ ತಾನು ಪ್ರಾಮಾಣಿಕಳಾಗಿ ಇರಲಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.

  17ನೇ ವಯಸ್ಸಿಗೆ ಮನೆ ತೊರೆದ ಜೆಸ್ಸಿಕಾ

  ತನ್ನ ಹೆತ್ತವರು, ಶಿಕ್ಷಣದ ಬಗ್ಗೆ ತುಂಬಾ ಸಾಂಪ್ರದಾಯಿಕ ಮನೋಭಾವವನ್ನು ಹೊಂದಿದ್ದರು, ತನ್ನ ಎದೆ ಸೀಳುಗಳನ್ನು ಮುಚ್ಚಿಕೊಳ್ಳಲು ರೇಷ್ಮೆ ಸ್ಕಾರ್ಫ್‍ಗಳನ್ನು ಕೂಡ ಕೊಟ್ಟಿದ್ದರು ಎಂದಿರುವ ಆಕೆ, 17 ನೇ ವಯಸ್ಸಿನಲ್ಲಿ ದೈಹಿಕ ರೂಪಾಂತರವನ್ನು ಹೊಂದಬೇಕೆಂಬ ನಿರ್ಧಾರವನ್ನು ಮಾಡಿ ಹೆತ್ತವರ ಮನೆಯನ್ನು ತೊರೆದೆ ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾಳೆ.

  ಇದನ್ನೂ ಓದಿ: Mango Season: ಬರೋಬ್ಬರಿ 4 ಕೆಜಿ ತೂಗುವ ಮಾವು! ಬೆಲೆ ಮಾತ್ರ ದುಬಾರಿ, ಬುಕ್ಕಿಂಗ್ ಶುರು

  ಡ್ರೈವಿಂಗ್‌ ಕ್ಲಾಸ್‌ಗೆ ಕೊಟ್ಟಿದ್ದ ಹಣದಿಂದ ಶಸ್ತ್ರ ಚಿಕಿತ್ಸೆ

  ಅಪ್ಪ ಮತ್ತು ಅಮ್ಮ, ತನಗೆ ಡ್ರೈವಿಂಗ್ ತರಬೇತಿ ಪಡೆಯಲೆಂದು ಕೊಟ್ಟಿದ್ದ ಹಣವನ್ನು ಆಕೆ ತನ್ನ ಮೊದಲ ಸ್ತನ ಶಸ್ತ್ರಚಿಕಿತ್ಸೆಗೆ ಬಳಸಿಕೊಂಡಿದ್ದಳಂತೆ. ಆ ಮೊದಲ ಸ್ತನ ಶಸ್ತ್ರಚಿಕಿತ್ಸೆ ತನಗೆ ಅತ್ಯಧಿಕ ಧೈರ್ಯವನ್ನು ನೀಡಿತು ಎಂದು ಜೆಸ್ಸಿ ಹೇಳಿಕೊಂಡಿದ್ದು, ಈಗ ತನ್ನ ದೇಹವನ್ನು “ಸಂಪೂರ್ಣವಾಗಿ ಬಾರ್ಬಿ ಗೊಂಬೆ” ಯಾಗಿ ಪರಿವರ್ತಿಸಿಕೊಳ್ಳವ ಯೋಜನೆಯಲ್ಲಿದ್ದಾಳೆ.
  Published by:Annappa Achari
  First published: