MISSING: ಸೋಲೋ ಟ್ರಿಪ್ ಹೋದ ಯುವಕ ನಾಪತ್ತೆ, ಸಹಾಯಕ್ಕಾಗಿ ಸಹೋದರನ ಭಾವನಾತ್ಮಕ ಮನವಿ

ಏಕಾಂಗಿಯಾಗಿ ಅಜರ್‌ಬೈಜಾನ್‌ ಪ್ರವಾಸಕ್ಕೆ ಹೋದ ಭಾರತೀಯ ವ್ಯಕ್ತಿಯೊಬ್ಬರು ಹಲವು ದಿನಗಳಿಂದ ಕಾಣೆಯಾಗಿದ್ದಾರೆ. ಯುವಕನ ಪತ್ತೆಗಾಗಿ ಸಹೋದರ ಸಾರ್ವಜನಿಕರಲ್ಲಿ ಸಹಾಯಹಸ್ತ ಕೇಳಿದ್ದಾರೆ.

ನಾಪತ್ತೆಯಾದ ಯುವಕ ಮಣಿಕಾಂತ್ ಕೊಂಡವೀಟಿ

ನಾಪತ್ತೆಯಾದ ಯುವಕ ಮಣಿಕಾಂತ್ ಕೊಂಡವೀಟಿ

  • Share this:
ಏಕಾಂಗಿಯಾಗಿ ಅಜರ್‌ಬೈಜಾನ್‌ (Azerbaijan) ಪ್ರವಾಸಕ್ಕೆ (Tour) ಹೋದ ಭಾರತೀಯ (Indian) ವ್ಯಕ್ತಿಯೊಬ್ಬರು ಹಲವು ದಿನಗಳಿಂದ ಕಾಣೆಯಾಗಿದ್ದಾರೆ (Missing). ಯುವಕನ ಪತ್ತೆಗಾಗಿ ಸಹೋದರ ಸಾರ್ವಜನಿಕರಲ್ಲಿ ಸಹಾಯಹಸ್ತ ಕೇಳಿದ್ದಾರೆ. ಪೂರ್ವ ಯುರೋಪ್ (Eastern Europe) ಮತ್ತು ಪಶ್ಚಿಮ ಏಷ್ಯಾದ (West Asia) ಗಡಿಯಲ್ಲಿರುವ ಅಜರ್‌ಬೈಜಾನ್‌ಗೆ ಏಕಾಂಗಿ ಪ್ರವಾಸ ಕೈಗೊಂಡ ಮಣಿಕಾಂತ್ ಕೊಂಡವೀಟಿ (Manikanth Kondaveeti) ಎಂಬ ಯುವಕ ಕಳೆದ ತಿಂಗಳು ಭಾರತದಿಂದ ಪ್ರವಾಸಕ್ಕೆ ತೆರಳಿದ್ದರು, ನಂತರ ಮೇ 12ರಿಂದ ಕಾಣೆಯಾಗಿದ್ದಾರೆ ಅವರ ಬಗ್ಗೆ ಯಾವುದೇ ಸುಳಿವಿಲ್ಲ, ಮಣಿಕಾಂತ್ ಎರಡು ವಾರಗಳಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಸಹೋದರ ತಿಳಿಸಿದ್ದಾರೆ.

ಅಜರ್‌ಬೈಜಾನ್‌ ಗೆ 28 ವರ್ಷದ ಯುವಕನ ಸೋಲೋ ಟ್ರಿಪ್ ಸದ್ಯ ಭಾರತದಲ್ಲಿನ ಅವನ ಕುಟುಂಬಕ್ಕೆ ಅಕ್ಷರಶಃ ದುಃಸ್ವಪ್ನವಾಗಿ ಬಿಟ್ಟಿದೆ. ಏಪ್ರಿಲ್ 26ರಂದು ಭಾರತದಿಂದ ಹೊರಟ ಮಣಿಕಾಂತ್ ಕೊಂಡವೀಟಿ ಎರಡು ವಾರಗಳಿಂದ ನಾಪತ್ತೆಯಾಗಿದ್ದಾರೆ. ಅವರ ಕುಟುಂಬದ ಪ್ರಕಾರ, ಮೇ 12ರಿಂದ ಕೊಂಡವೀಟಿ ಕುಟುಂಬದ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದೇ ಇರುವುದು ಕುಟುಂಬದ ಆತಂಕವನ್ನು ಹೆಚ್ಚು ಮಾಡಿದೆ. ಹ್ಯೂಮನ್ಸ್ ಆಫ್ ಬಾಂಬೆಯ ಇನ್‌ಸ್ಟಾಗ್ರಾಮ್ ಪುಟದೊಂದಿಗೆ ವಿಷಯ ಹಂಚಿಕೊಂಡ ಮಣಿಕಾಂತ್ ಸಹೋದರ ಧರಣ್ ಕೊಂಡವೀಟಿ ಹದಿನೈದು ದಿನಗಳಿಂದ ಕುಟುಂಬವು ಅನುಭವಿಸುತ್ತಿರುವ ಅಗ್ನಿಪರೀಕ್ಷೆಯನ್ನು ತಮ್ಮ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.

“ಸಹೋದರ ಮಾತ್ರವಲ್ಲ ಉತ್ತಮ ಸ್ನೇಹಿತ”
ಮಣಿಕಾಂತ್ ಅವರ ಫೋಟೋವನ್ನು ಹಂಚಿಕೊಂಡ ಧರಣ್ “ಫೋಟೋದಲ್ಲಿ ನೀವು ನೋಡುತ್ತಿರುವ ಹುಡುಗ ನನ್ನ ಸಹೋದರ ಮಣಿಕಾಂತ್ ಮತ್ತು ಅವನು ಕಳೆದ ಎರಡು ವಾರಗಳಿಂದ ಕಾಣೆಯಾಗಿದ್ದಾನೆ. ಅವನ ನಾಪತ್ತೆಯಿಂದಾಗಿ ಕುಟುಂಬವು ಹೇಳಲಾರದಷ್ಟು ಸಂಕಟ ಅನುಭವಿಸುತ್ತಿದೆ ಎಂದು ಹೇಳಿದ್ದಾನೆ. ತಮ್ಮ ಬಾಂಧವ್ಯದ ಬಗ್ಗೆ ಮಾತನಾಡುತ್ತಾ ಧರಣ್, ಮಣಿಕಾಂತ್ ತನ್ನ ಸಹೋದರ ಮಾತ್ರವಲ್ಲದೆ ತನ್ನ ಉತ್ತಮ ಸ್ನೇಹಿತ ಕೂಡ ಎಂದು ಹೇಳುತ್ತಾರೆ.

ಇದನ್ನೂ ಓದಿ: How to Identify Liar: ನಿಮ್ಮ ಬಾಯ್​ ಫ್ರೆಂಡ್​ ಸುಳ್ಳು ಹೇಳುತ್ತಿದ್ದಾನಾ? ಹೀಗೆ ಪತ್ತೆಹಚ್ಚಿ

"ಅವರು ನನಗೆ ಕ್ರಿಕೆಟ್ ಮತ್ತು ಫುಟ್‌ಬಾಲ್ ಆಡುವುದನ್ನು ಕಲಿಸಿದರು, ಮತ್ತು ಕಂಪ್ಯೂಟರ್ ಆಟಗಳಿಗೆ ನನ್ನನ್ನು ವ್ಯಸನಿಯಾಗಿಸಿದರು. ಕಾಲೇಜಿಗಾಗಿ ಬೇರೆ ಬೇರೆ ನಗರಗಳಿಗೆ ಹೋದರೂ ನಾವಿಬ್ಬರೂ ತುಂಬಾ ಆತ್ಮೀಯರಾಗಿದ್ದೆವು ಎಂದು ಅಣ್ಣನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ.

ಮಣಿಕಾಂತ್ ಅವರ ಅಜರ್‌ಬೈಜಾನ್ ಪ್ರವಾಸದ ಕುರಿತು ಮಾತನಾಡುತ್ತಾ, ಧರನ್ ಹೇಳುತ್ತಾರೆ, “ಮಣಿಕಾಂತ್ ಒಬ್ಬ ಪ್ರಯಾಣಿಕ, ಸೋಲೋ ಪ್ರವಾಸ ಅವನಿಗೆ ಇಷ್ಟ. ಏಪ್ರಿಲ್ 26ರಂದು ಭಾರತದಿಂದ ಹೊರಟ. ಮಣಿಕಾಂತ್ ಪ್ರತಿನಿತ್ಯ ಕುಟುಂಬದ ಜೊತೆ ಮಾತನಾಡುತ್ತಾ ಸಂಪರ್ಕದಲ್ಲಿದ್ದರು. ಆದರೆ ಮೇ 13ರಿಂದ ನನ್ನ ಅಣ್ಣನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ” ಎಂದು ಘಟನೆಯನ್ನು ವಿವರಿಸಿದ್ದಾರೆ.

ಮೇ 12ಕ್ಕೆ ಕೊನೆ ಬಾರಿ ಮಾತನಾಡಿದ ಸಹೋದರರು
"ಮೇ 12, ಸಂಜೆ 7 ಗಂಟೆಗೆ ನಾವು ಕೊನೆಯ ಬಾರಿಗೆ ಮಾತನಾಡಿದ್ದೇವೆ.ನಂತರದ ಯಾವ ಸಂದೇಶ, ಕರೆಗಳಿಗೆ ಅವನಿಂದ ಪ್ರತಿಕ್ರಿಯೆ ಬಂದಿಲ್ಲ. ಇದುವರೆಗೂ ನಾವು ಅವನ ಬಗ್ಗೆ ಒಳ್ಳೆಯದನ್ನೇ ಯೋಚಿಸಿದ್ದೇವೆ” ಎಂದು ಅವರು ಬರೆದುಕೊಂಡಿದ್ದಾರೆ. ಆದರೆ ಮಣಿಕಾಂತ್ ಅವರನ್ನು ಸಂಪರ್ಕಿಸುವ ಪ್ರಯತ್ನ ದಿನದಿಂದ ದಿನಕ್ಕೆ ವಿಫಲವಾಗುತ್ತಿದೆ. ನಮ್ಮ ಆತಂಕವೂ ಹೆಚ್ಚುತ್ತಿದೆ ಎಂದು ಸಹೋದರ ಅಳಲು ತೊಡಿಕೊಂಡಿದ್ದಾರೆ.




ಅಜರ್‌ಬೈಜಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ ಕುಟುಂಬ
ಕುಟುಂಬವು ಅಜರ್‌ಬೈಜಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು "ಅವನು ಬೆಟ್ಟಗಳಲ್ಲಿ ಇರಬಹುದು.ಆದ್ದರಿಂದ ನೆಟ್ ವರ್ಕ್ ಇಲ್ಲದಿರಬಹುದು ಎಂದು ನಮಗೆ ಧೈರ್ಯ ತುಂಬಿದ್ದಾರೆ. ಅಲ್ಲದೇ ಹುಡುಕಾಟಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಧರನ್ ಹೇಳಿದ್ದಾರೆ.

ಹೋಟೆಲ್ ನಲ್ಲಿ ಮಣಿಕಾಂತ್ ಲಗೇಜ್ ಪತ್ತೆಯಾಗಿತ್ತು. “ನಾವು ಅವರ ಗೂಗಲ್ ಖಾತೆಯನ್ನು ಪ್ರವೇಶಿಸಿದ್ದಾಗ ಅವರು ನಗರದ ಹೊರವಲಯದಲ್ಲಿರುವ ಗುಡಿಸಲಿನಲ್ಲಿರುವುದು ಪತ್ತೆಯಾಗಿದೆ. ಇದು ನಮಗೆ ಭಯ ಹುಟ್ಟಿಸಿದೆ" ಎಂದು ಧರಣ್ ಹೇಳಿದ್ದಾರೆ.

ಇದನ್ನೂ ಓದಿ: DC Jumps to Reservoir: ಅಧಿಕಾರಿಗಳನ್ನು ಪರೀಕ್ಷಿಸಲು ಸ್ವತಃ ಜಲಾಶಯಕ್ಕೆ ಧುಮುಕಿದ ಜಿಲ್ಲಾಧಿಕಾರಿ

ತನ್ನ ಸಹೋದರನನ್ನು ಹುಡುಕುವ ತಮ್ಮ ನಿರಂತರ ಪ್ರಯತ್ನಗಳ ಬಗ್ಗೆ ಮಾತನಾಡುತ್ತಾ, ಧರಣ್ ಹೀಗೆ ಹೇಳಿದ್ದಾರೆ . “ನಾವು ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಪ್ರಧಾನ ಮಂತ್ರಿ ಸೇರಿ ಎಲ್ಲರನ್ನೂ ಸಂಪರ್ಕಿಸಿದ್ದೇವೆ. ನಾವು ಅವನನ್ನು ಹುಡುಕಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಕುಟುಂಬಕ್ಕೆ ಸಹಾಯ ಮಾಡುವಂತೆ ಸಾರ್ವಜನಿಕರಲ್ಲೂ ಸಹ ವಿನಂತಿಸಿದ್ದಾರೆ.
Published by:Ashwini Prabhu
First published: