• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral News: ಕೇವಲ 18 ತಿಂಗಳ ಮಗುವಿನ ಕೈಯಲ್ಲಿ ಮೂಡಿತು 43 ಕಲಾಕೃತಿ! ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್​​ಗೆ ಆಯ್ಕೆ

Viral News: ಕೇವಲ 18 ತಿಂಗಳ ಮಗುವಿನ ಕೈಯಲ್ಲಿ ಮೂಡಿತು 43 ಕಲಾಕೃತಿ! ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್​​ಗೆ ಆಯ್ಕೆ

ವರ್ಲ್ಡ್​ ರೆಕಾರ್ಡ್​​ ಮಾಡಿದ 18 ತಿಂಗಳ ಮಗು

ವರ್ಲ್ಡ್​ ರೆಕಾರ್ಡ್​​ ಮಾಡಿದ 18 ತಿಂಗಳ ಮಗು

ಕೇವಲ 18 ತಿಂಗಳಿರುವಾಗಲೇ ಅದ್ಭುತ ರೀತಿಯಲ್ಲಿ ಕಲಾಕೃತಿಯನ್ನು ಮಾಡುವ ಮೂಲಕ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾನೆ. ಜೊತೆಗೆ ವರ್ಲ್ಡ್​ ಬುಕ್​ಆಫ್​ ರೆಕಾರ್ಡ್​​ಗೂ ಆಯ್ಕೆಯಾಗಿದ್ದಾನೆ. ಹಾಗಿದ್ರೆ ಅಷ್ಟಕ್ಕೂ ಈ ಪುಟಾಣಿ ಮಗು ಮಾಡಿದ ಸಾಧನೆ ಏನು ಎಂಉ ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • New Delhi, India
 • Share this:

  ನಾವು ಪ್ರತಿನಿತ್ಯ ಹಲವಾರು ವಿಸ್ಮಯಕಾರಿ ಸಂಗತಿಗಳನ್ನು ನೋಡುತ್ತಿರುತ್ತೇವೆ. ಹಿಂದಿನ ಕಾಲದ ಜನರಿಗೆ ತಮ್ಮ ಮಕ್ಕಳನ್ನು ಬೆಳೆಸಲು ವಿದ್ಯಾಭ್ಯಾಸದ ಕೊರತೆಯೂ, ಹಣದ ಸಮಸ್ಯೆಯೂ ಅಡ್ಡ ಬರುತ್ತಿತ್ತು. ಆದರೆ ಈಗ ಹಾಗಲ್ಲ, ಎಲ್ಲರೂ ವಿದ್ಯಾವಂತರಾಗಿದ್ದಾರೆ. ಬಡತನದ ಸಮಸ್ಯೆಯೂ ಇಲ್ಲ. ಇದೇ ಕಾರಣಕ್ಕಾಗಿ ಹೇಳಬಹುದು, ಹುಟ್ಟಿದ ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ. ಈಗಂತೂ ಮಕ್ಕಳ ಟ್ಯಾಲೆಂಟ್ (Talent)​ ಬಗ್ಗೆ ಹೇಳೋ ಹಾಗಿಲ್ಲ. ಚಿಕ್ಕದಿನಿಂದಲೇ ಏನಾದರೊಂದು ಟ್ಯಾಲೆಂಟ್​ ಅನ್ನು ಹೊಂದಿರುತ್ತಾರೆ. ಅದೇ ರೀತಿ ಇಲ್ಲೊಂದು ಕೇವಲ 18 ತಿಂಗಳ ಮಗು (18 Month Child) ತನ್ನ ಟ್ಯಾಲೆಂಟ್​ನಿಂದಾಗಿ ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್ (World Book Off Record)​ ಮಾಡಿದೆ.


  ಹೌದು, ಕೇವಲ 18 ತಿಂಗಳಿರುವಾಗಲೇ ಅದ್ಭುತ ರೀತಿಯಲ್ಲಿ ಕಲಾಕೃತಿಯನ್ನು ಮಾಡುವ ಮೂಲಕ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾನೆ. ಜೊತೆಗೆ ವರ್ಲ್ಡ್​ ಬುಕ್​ಆಫ್​ ರೆಕಾರ್ಡ್​​ಗೂ ಆಯ್ಕೆಯಾಗಿದ್ದಾನೆ. ಹಾಗಿದ್ರೆ ಅಷ್ಟಕ್ಕೂ ಈ ಪುಟಾಣಿ ಮಗು ಮಾಡಿದ ಸಾಧನೆ ಏನು ಎಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


  ಒಂದೂವರೆ ವರ್ಷದ ಮಗು


  ಅರ್ಹಾನ್ ಎಂಬ ಒಂದೂವರೆ ವರ್ಷದ ಮಗುವೊಂದು ಅದ್ಭುತ ರೀತಿಯಲ್ಲಿ ಕಲಾಕೃತಿಯನ್ನು ರಚಿಸುವ ಮೂಲಕ ಜಗತ್ತಿನಾದ್ಯಂತ ಭಾರೀ ಮನ್ನಣೆಯನ್ನು ಗಳಿಸಿದೆ. ಅರ್ಹಾನ್​ ಸಾಯಿ ಗೌರಿಶೆಟ್ಟಿ ಎಂಬ 18 ತಿಂಗಳಿನ ಮಗುವೊಂದು ತನ್ನ ವಿಶಿಷ್ಟ ರೀತಿಯಲ್ಲಿ 43 ರೀತಿಯ ಕಲಾತಂತ್ರಗಳನ್ನು ಬಳಸಿ 50 ಕಲಾಕೃತಿಗಳನ್ನು ರಚಿಸಿದ್ದಾನೆ. ಈ ಮೂಲಕ ಅತ್ಯಂತ ಕಿರಿಯ ಕಲಾವಿದ ಎಂಬ ಬಿರುದಿಗೂ ಪಾತ್ರವಾಗಿದ್ದಾನೆ.


  ಇದನ್ನೂ ಓದಿ: ತಿಮಿಂಗಿಲದ ಹೃದಯದ ಸೈಜ್​ ಕೇಳಿದ್ರೆ ಶಾಕ್ ಆಗ್ತೀರಾ, 3 ಮನುಷ್ಯರ ತೂಕ ಅಂದ್ರೆ ನಂಬ್ತೀರಾ?


  ಇನ್ನು ಈತನ ಈ ಟ್ಯಾಲೆಂಟ್​​ ಅನ್ನು ಕಂಡು ಲಂಡನ್​​ನ ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್​ನಿಂದ ’ಚೈಲ್ಡ್​ ಪ್ರಾಡಿಜಿ’ ಎಂಬ ಪ್ರಶಸ್ತಿಯನ್ನು ಪಡೆದಿದ್ದಾನೆ. ಇನ್ನು ಈತ ತನ್ನ ಕಲೆಯಲ್ಲಿ ವಿಶೇಷವಾಗಿ ತನ್ನ ಕಲಾಕೃತಿಯ ಅಂದಕ್ಕಾಗಿ ಆಟಿಕೆ ಕಾರೊಂದನ್ನು ಬಳಸುತ್ತಾನೆ. ಇನ್ನು ಈ ಮಗು ಕಲೆಗೆ ಸಂಬಂಧಪಟ್ಟಂತಹ ಯಾವುದೇ ತರಬೇತಿಯನ್ನು ಪಡೆಯದೇ ಈ ರೀತಿಯ ಚಿತ್ರವನ್ನು ಮಾಡುತ್ತಿರುವುದು ವಿಶೇಷವಾಗಿದೆ.


  ವರ್ಲ್ಡ್​ ರೆಕಾರ್ಡ್​​ ಮಾಡಿದ 18 ತಿಂಗಳ ಮಗು


  ಹಲವಾರು ಕಲಾಕೃತಿ ತಂತ್ರಗಳನ್ನು ಬಳಸುವ ಅರ್ಹಾನ್


  ಇನ್ನು ಅರ್ಹಾನ್​ ತನ್ನ ಕಲಾಕೃತಿಗಳಲ್ಲಿ, ಸ್ಲಿನ್ ಆರ್ಟ್​, ರಿಪಲ್ ಪೇಂಟಿಂಗ್​ ಇಂತಹ ಹಲವಾರು ಕಲಾತಂತ್ರಗಳನ್ನು ಬಳಸುತ್ತಾನೆ. ಇನ್ನು ಅದ್ಭುತ ಎಂದರೆ ಈ ತಂತ್ರಗಳ ಯಾವುದೇ ಹೆಸರುಗಳು ಆ ಮಗುವಿಗೆ ತಿಳಿದಿಲ್ಲ, ಆದರೂ ಕೆಲವೊಂದು ತಂತ್ರಗಳನ್ನು ಬಳಸಿಕೊಂಡು ಆತನೇ ಕಲಾಕೃತಿಗಳನ್ನು ರಚಿಸುತ್ತಾನೆ. ಈ ಬಗ್ಗೆ ನಾವು ತುಂಬಾನೇ ಸಂಭ್ರಮಿಸುತ್ತೇವೆ. ಈ ಕ್ಷೇತ್ರದಲ್ಲಿ ಮುಂದುವರೆಯಲು ನಮ್ಮ ಪ್ರೋತ್ಸಾಹ ಅವನಿಗೆ ಯಾವತ್ತೂ ಇರುತ್ತದೆ. ಇನ್ನೂ ಪ್ರೋತ್ಸಾಹ ನೀಡ್ಬೇಕು, ಎಂದು ಅರ್ಹಾನ್ ತಾಯಿ ಹೇಳುತ್ತಾರೆ.


  ಜೀನಿಯಸ್​ ಕುಟುಂಬ 


  ಇನ್ನು ಅರ್ಹಾನ್​ ಮಾತ್ರವಲ್ಲದೇ ಇವರ ಕುಟುಂಬವೇ ಒಂದು ರೀತಿಯಲ್ಲಿ ಟ್ಯಾಲೆಂಟ್​ಗಳನ್ನು ತುಂಬಿಕೊಂಡಿದೆ ಅಂತಾನೇ ಹೇಳ್ಬಹುದು. ಏಕೆಂದರೆ ಅರ್ಹಾನ್ ಅವರ ಸಹೋದರೆ ಅದಿತ್​​ ಗೌರಿಶೆಟ್ಟಿ ಸಹ ಕೇವಲ 21 ತಿಂಗಳ ಮಗುವಾಗಿದ್ದಾಗ, ಆತನ ಯಾರೂ ಹೊಂದಿರ ಜ್ಞಾಪನಾ ಶಕ್ತಿಯ ಪ್ರದರ್ಶನದಿಂದಾಗಿ ಹಲವಾರು ಪ್ರಶಸ್ತಿಗಳನ್ಜು ಪಡೆದಿದ್ದಾನೆ. ಇನ್ನು ಇದಕ್ಕಾಗಿಯೇ ಇವರ ಕುಟುಂಬವನ್ನು ಜೀನಿಯಸ್​ ಕುಟುಂಬವೆಂದು ಕರೆದಿದ್ದು, ಇದಕ್ಕೂ ಮೊದಲು 3 ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್​ ಅನ್ನು ಬಾಚಿಕೊಂಡಿದೆ.
  ಅರ್ಹನ್​ ತಾಯಿ ಅವರ ಅಭಿಪ್ರಾಯ


  ಈ ಸಂದರ್ಭದಲ್ಲಿ ಮಾತನಾಡಿದ ಅರ್ಹಾನ್ ತಾಯಿ, ನನ್ನ ಹಿರಿಯ ಮಗ ಜ್ಞಾಪಕ ಶಕ್ತಿಯ ಕೌಶಲ್ಯದಿಂದ ಈ ಹಿಂದೆ ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್​ಗೆ ಆಯ್ಕೆಯಾಗಿದ್ದ, ಇದೀಗ ಅರ್ಹಾನ್​ ಸಹ ವರ್ಲ್​​ ಬುಕ್​ ಆಫ್ ರೆಕಾರ್ಡ್​ ಪಡೆದುಕೊಂಡಿರುವುದು ಸಂತೋಷದ ವಿಷಯವಾಗಿದೆ. ಈ ಸಂದರ್ಭದಲ್ಲಿ ಇದುವರೆಗೆ ಅರ್ಹಾನ್ ಸೇರಿ ಒಟ್ಟು 4 ವರ್ಲ್ಡ್​ಬುಕ್​ ಆಫ್​ ರೆಕಾರ್ಡ್​ ನಮ್ಮ ಕುಟುಂಬದಲ್ಲೇ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಮೂರು ಮಕ್ಕಳು ಜ್ಞಾಪಕ ಶಕ್ತಿಯ ಕೌಶಲ್ಯದಿಂದ ಈ ಪ್ರಶಸ್ತಿಯನ್ನು ಪಡೆದರೆ, ಅರ್ಹಾನ್ ಮಾತ್ರ ಕಲಾತ್ಮಕ ಕೌಶಲ್ಯಕ್ಕೆ ಈ ಪ್ರಶಸ್ತಿಯನ್ನು ಪಡೆದಿದ್ದಾನೆ ಎಂದು ಅರ್ಹಾನ್​ ಅವರ ತಾಯಿ ಹೇಳಿದ್ದಾರೆ.

  Published by:Prajwal B
  First published: