POTS: ಗುರುತ್ವಾಕರ್ಷಣೆಯಿಂದ ಅಲರ್ಜಿ: 23 ಗಂಟೆ ಹಾಸಿಗೆಯಲ್ಲೇ ಕಳೆಯುವ ಮಹಿಳೆ!

ಅಮೆರಿಕದ ಮೈನ್ ರಾಜ್ಯದ ಬೆಂಗರ್ ನಗರದವರಾದ ಲಿಂಡ್ಸಿಯವರು ಪೊಸ್ಚುರಲ್ ಆರ್ಥೋಸ್ಟ್ಯಾಟಿಕ್ ಟ್ಯಾಕಿಕಾರ್ಡಿಯಾ ಸಿಂಡ್ರೋಮ್ ಎಂಬ ಕಾಯಿಲೆಗೆ ತುತ್ತಾಗಿದ್ದು ಮಾಧ್ಯಮವೊಂದಕ್ಕೆ ಇದರ ಬಗ್ಗೆ ವಿವರಿಸಿದ್ದಾರೆ. ವೈಜ್ಞಾನಿಕವಾಗಿ ಈ ಸ್ಥಿತಿಯಲ್ಲಿ ಎದ್ದು ನಿಂತಾಗ ರಕ್ತದ ಪ್ರಮಾಣ ತ್ವರಿತವಾಗಿ ತಗ್ಗಿ ಹೃದಯ ಬಡಿತವು ವೇಗಗೊಳ್ಳುತ್ತದೆ. ಇದರಿಂದಾಗಿ ಆ ವ್ಯಕ್ತಿಯು ತಲೆ ಸುತ್ತುತ್ತಿರುವಂತಹ ಅನುಭವ ಪಡೆಯುತ್ತಾರೆ.

ವಿಶೇಷ ಕಾಯಿಲೆಗೆ ತುತ್ತಾದ ಲಿಂಡ್ಸಿ

ವಿಶೇಷ ಕಾಯಿಲೆಗೆ ತುತ್ತಾದ ಲಿಂಡ್ಸಿ

  • Share this:
  ನೀವು ಎಂದಾದರೂ ನಿಂತಾಗ, ನಡೆಯುವಾಗ ಅಥವಾ ನೇರವಾಗಿ ಕುಳಿತಾಗ (Sitting) ನಿಮಿಷ ನಿಮಿಷಕ್ಕೂ ತಲೆ ಸುತ್ತುತ್ತಿರುವಂತಹ ಅಥವಾ ಪ್ರಜ್ಞೆ ತಪ್ಪುವಂತಹ ಸ್ಥಿತಿಯ ಬಗ್ಗೆ ಕೇಳಿದ್ದೀರಾ? ಅಥವಾ ಈ ರೀತಿಯ ಸ್ಥಿತಿ ಬಂದಾಗ ಜೀವನ ಹೇಗಾದಿತು ಎಂಬುದರ ಬಗ್ಗೆ ಕಲ್ಪಿಸಿಕೊಳ್ಳುವಿರಾ? ಇದು ನಿಜಕ್ಕೂ ಶಾಕ್ ನೀಡುವಂತಹ ಸ್ಥಿತಿ. ಇದನ್ನು ವೈದ್ಯಕೀಯವಾಗಿ ಪೊಸ್ಚುರಲ್ ಆರ್ಥೋಸ್ಟ್ಯಾಟಿಕ್ ಟ್ಯಾಕಿಕಾರ್ಡಿಯಾ ಸಿಂಡ್ರೋಮ್ (POTS) (Postural orthostatic tachycardia syndrome) ಎಂದು ಕರೆಯಲಾಗುತ್ತದೆ. ಇಂತಹ ಒಂದು ಸ್ಥಿತಿಯನ್ನು ಲಿಂಡ್ಸಿ ಜಾನ್ಸನ್ (Lyndsi Johnson) ಎಂಬ ಮಹಿಳೆ (Women) ಅನುಭವಿಸುತ್ತಿದ್ದಾರೆ. ಅಮೆರಿಕದ ಮೈನ್ ರಾಜ್ಯದ ಬೆಂಗರ್ ನಗರದವರಾದ ಲಿಂಡ್ಸಿ, ತಮ್ಮ ಈ ಸ್ಥಿತಿ ಬಗ್ಗೆ ಸೌತ್ ವೆಸ್ಟ್ ನ್ಯೂಸ್ ಸರ್ವಿಸ್ ಮಾಧ್ಯಮವೊಂದಕ್ಕೆ ವಿವರಿಸಿದ್ದಾರೆ.

ವೈಜ್ಞಾನಿಕವಾಗಿ ಈ ಸ್ಥಿತಿಯಲ್ಲಿ ಎದ್ದು ನಿಂತಾಗ ರಕ್ತದ ಪ್ರಮಾಣ ತ್ವರಿತವಾಗಿ ತಗ್ಗಿ ಹೃದಯ ಬಡಿತವು ವೇಗಗೊಳ್ಳುತ್ತದೆ. ಇದರಿಂದಾಗಿ ಆ ವ್ಯಕ್ತಿಯು ತಲೆ ಸುತ್ತುತ್ತಿರುವಂತಹ ಅನುಭವ ಪಡೆಯುತ್ತಾರೆ.

ಗುರುತ್ವಾಕರ್ಷಣೆಯ ಶಕ್ತಿಗೆ ಅಲರ್ಜಿ
ತಮಗೆ ಬಂದಿರುವ ಈ ಸ್ಥಿತಿ ಬಗ್ಗೆ ಲಿಂಡ್ಸಿ, "ನಾನು ಗುರುತ್ವಾಕರ್ಷಣೆಯ ಶಕ್ತಿಗೆ ಅಲೆರ್ಜಿಕ್ ಆಗಿರುವೆ, ಇದು ಹುಚ್ಚುತನ ಎಂದೆನಿಸಿದರೂ ನಿಜವಾಗಿದೆ, ನಾನು ಮೂರು ನಿಮಿಷಗಳಿಗಿಂತ ಹೆಚ್ಚು ಸಮಯ ಎದ್ದು ನಿಲ್ಲಲಾರೆ, ನಾನು ಸದಾ ಮಲಗಿರುವ ಸ್ಥಿತಿಯಲ್ಲಿಯೇ ಇರಬೇಕು, ಹಾಗಾಗಿ ನಾನು ದಿನವೆಲ್ಲ ಮಲಗಿಯೇ ಇರುತ್ತೇನೆ" ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Cooking: ಒಂದಲ್ಲ, ಎರಡಲ್ಲ ಬರೋಬ್ಬರಿ 426 ಬಗೆಯ ಖಾದ್ಯ ತಯಾರಿಸಿದ್ದಾರೆ ಈಕೆ, ಎಲ್ಲಾ ನೆಂಟರಿಗಾಗಿ!

POTS ಕಾಯಿಲೆಯ ಲಕ್ಷಣಗಳು 
ಲಿಂಡ್ಸಿ ಅವರಿಗೆ POTS ಸ್ಥಿತಿ ಬರುವ ಮೊದಲು ಅಂದರೆ 2015 ರಲ್ಲಿ ಅವರು ಏವಿಯೇಷನ್ ವಿಭಾಗದಲ್ಲಿ ಡೀಸೆಲ್ ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಸಮಯದಲ್ಲಿ ಅವರು ನಿರಂತರವಾಗಿ ಬೆನ್ನು ಹಾಗೂ ಹೊಟ್ಟೆ ನೋವಿನಿಂದ ಬಳಲತೊಡಗಿದರು. ಮುಂದುವರೆದಂತೆ ಅವರು ತಲೆ ಸುತ್ತುವಂತಹ ಅನುಭವ ಹಾಗೂ ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಯನ್ನು ನಿರಂತರವಾಗಿ ಅನುಭವಿಸತೊಡಗಿದರು. ಇದರಿಂದ ಆತಂಕಗೊಂಡ ಲಿಂಡ್ಸಿ ವೈದ್ಯರ ಬಳಿ ಹೋದಾಗ ವೈದ್ಯರು ಪ್ರಾರಂಭದಲ್ಲಿ ಅವರಿಗೆ ಆತಂಕ ಉಂಟಾಗುವ ಮನಸ್ಥಿತಿಯಿದೆ ಎಂದೇ ಭಾವಿಸಿದ್ದರು.

ತನ್ನ ಆತಂಕದ ಕ್ಷಣಗಳನ್ನು ನೆನಪಿಸಿಕೊಂಡ ಲಿಂಡ್ಸಿ
ಈ ಬಗ್ಗೆ ತಮ್ಮ ಅನುಭವ ಬಿಚ್ಚಿಡುವ ಲಿಂಡ್ಸಿ ಅವರು, "ನಾನು ನಿರಂತರವಾಗಿ ಪ್ರಜ್ಞೆ ಕಳೆದುಕೊಳ್ಳಲು ಪ್ರಾರಂಭಿಸಿದೆ, ಶಾಪಿಂಗ್ ಮಾಡುವಾಗ ಸ್ವಲ್ಪ ನಡೆದರೂ ತಲೆ ಸುತ್ತುವ ಅನುಭವವಾಗತೊಡಗಿ ನಾನು ಕುಳಿತುಕೊಳ್ಳುತ್ತಿದ್ದೆ, ನನ್ನ ಸಾಕಿದ ನಾಯಿ ಬೊಗಳಿದಾಗಲೂ ನಾನು ಪ್ರಜ್ಞೆ ಕಳೆದುಕೊಳ್ಳುತ್ತಿದ್ದೆ, ಇದರಿಂದ ನಾನು ನಿಜಕ್ಕೂ ಭಯಭೀತಳಾಗಿದ್ದೆ" ಎಂದು ಆ ಆತಂಕದ ಕ್ಷಣಗಳನ್ನು ನೆನೆಸಿಕೊಳ್ಳುತ್ತಾರೆ.

ಇದನ್ನೂ ಓದಿ:  Cough Remedies: ಕಫ, ಕೆಮ್ಮಿನಿಂದ ಬಳಲುತ್ತಿದ್ದೀರಾ? ಮನೆಯಲ್ಲೇ ಸಿಗುವ ತಕ್ಷಣದ ಪರಿಹಾರಗಳಿವು

2018 ರಲ್ಲಿ ಲಿಂಡ್ಸಿ ಜಾನ್ಸನ್ ಅವರನ್ನು ವೈದ್ಯಕೀಯ ಕಾರಣಗಳಿಂದಾಗಿ ಕರ್ತವ್ಯದಿಂದ ಮುಕ್ತಗೊಳಿಸಲಾಯಿತು. ತದನಂತರ ಅವರ ಸ್ಥಿತಿ ಮತ್ತಷ್ಟು ಹದಗೆಡಲು ಪ್ರಾರಂಭಿಸಿತು. 2022ರ ಆರಂಭದಲ್ಲಿ ಅವರ ಸ್ಥಿತಿ ಯಾವ ರೀತಿ ಆಯಿತೆಂದರೆ ಆಹಾರವನ್ನೂ ಸಹ ಕೆಳಗೆ ಇಡಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ ಹಾಗೂ ನಿರಂತರವಾಗಿ ಅವರಿಗೆ ವಾಕರಿಯಾಗತೊಡಗಿತು. "ನಾನು ಎಷ್ಟು ಪ್ರಜ್ಞೆ ತಪ್ಪುತ್ತಿದ್ದೆ ಎಂದರೆ ನಿರಂತರವಾಗಿ ನನ್ನ ಹೃದಯದ ಸ್ಥಿತಿಯನ್ನು ಆಸ್ಪತ್ರೆಯಲ್ಲಿ ಮಾನಿಟರ್ ಮಾಡಲಾಗುತ್ತಿತ್ತು" ಎನ್ನುತ್ತಾರೆ ಲಿಂಡ್ಸಿ.

"ಟಿಲ್ಟ್" ಪರೀಕ್ಷೆ ಎಂದರೇನು
ಆ ನಂತರ ವೈದ್ಯರು, ಅವರು POTS ಸ್ಥಿತಿಯಿಂದ ಬಳಲುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅದಕ್ಕಾಗಿ ಅವರನ್ನು "ಟಿಲ್ಟ್" ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಿದರು. ಈ ಪರೀಕ್ಷೆಯಲ್ಲಿ ವ್ಯಕ್ತಿಯನ್ನು ಟೇಬಲ್ ಒಂದರ ಮೇಲೆ ಮಲಗಿಸಿ ಅವರು ಬೀಳದಂತೆ ಕಟ್ಟಲಾಗುತ್ತದೆ. ನಂತರ ಟೇಬಲ್ ಅನ್ನು ತಲೆಬುಡವಾಗುವಂತೆ ತಿರುಗಿಸಲಾಗುತ್ತದೆ. ಈ ಸಮಯದಲ್ಲಿ ವ್ಯಕ್ತಿಯ ಹೃದಯದ ಗತಿ ಹಾಗೂ ರಕ್ತದೊತ್ತಡವನ್ನು ಪರಿಶೀಲಿಸಲಾಗುತ್ತದೆ.

ಇದೇ ಪರೀಕ್ಷೆಯನ್ನು ವೈದ್ಯರು ಲಿಂಡ್ಸಿ ಅವರ ಮೇಲೆ ನಡೆಸಿ ಕೊನೆಗೆ ಫೆಬ್ರುವರಿಯಲ್ಲಿ ಅವರು POTS ಸ್ಥಿತಿಯಿಂದಲೇ ಬಳಲುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದಕ್ಕಾಗಿ ಯಾವುದೇ ಚಿಕಿತ್ಸೆಯಿಲ್ಲ. ಅದಾಗ್ಯೂ ಲಿಂಡ್ಸಿ ಅವರು ದಿನದಲ್ಲಿ ಕೇವಲ ಮೂರು ಬಾರಿ ಮಾತ್ರ ತಲೆಸುತ್ತು ಅನುಭವಿಸುವಂತೆ ಕೆಲ ಮಾತ್ರೆಗಳನ್ನು ಸೇವಿಸಲು ಅವರಿಗೆ ಶಿಫಾರಸ್ಸು ಮಾಡಲಾಗಿದೆ. ಸದ್ಯ, ಎಲ್ಲರಂತೆ ಸಹಜ ಬದುಕನ್ನೂ ಬದುಕಲು ಲಿಂಡ್ಸಿ ಕಷ್ಟಪಡುತ್ತಿದ್ದು ತಮ್ಮ ಆರೈಕೆಗಾಗಿ ಬಹುತೇಕವಾಗಿ ಅವರು ತಮ್ಮ ಪತಿ ಜೇಮ್ಸ್ ಅವರ ಮೇಲೆಯೇ ಅವಲಂಬಿತರಾಗಿದ್ದಾರೆ.

ಇದನ್ನೂ ಓದಿ:  Turkey Teeth: ಹಲ್ಲಿನ ಸಮಸ್ಯೆಗೆ ಟರ್ಕಿ ಟೀತ್ ಟ್ರೀಟ್ಮೆಂಟ್!​ ಎಲ್ಲೆಡೆ ಫುಲ್​ ವೈರಲ್​

ಪ್ರಸ್ತುತ ಅವರು, ತಮ್ಮ ಪತಿಯ ಸಹಮತದೊಂದಿಗೆ ಮ್ಯೂಸಿಕ್ ಬಿಸಿನೆಸ್ ಪದವಿ ಓದುತ್ತಿದ್ದು, ಮುಂದೆ ಅವರು ಮತ್ತೆ ಕೆಲಸ ಮಾಡಬೇಕೆಂಬ ಆಸೆ ವ್ಯಕ್ತಪಡಿಸುತ್ತಾರೆ. ಅವರು ಮಲಗಿಕೊಂಡೇ ಕರ್ತವ್ಯ ನಿರ್ವಹಿಸುವಂತಹ ಯಾವುದಾದರೂ ರಿಮೋಟ್ ಕೆಲಸ ತನಗೆ ದೊರಕುವಂತಾಗಲಿ ಎಂಬ ಇಚ್ಛೆಯನ್ನು ಅವರು ವ್ಯಕ್ತಪಡಿಸುತ್ತಾರೆ.
Published by:Ashwini Prabhu
First published: