• Home
 • »
 • News
 • »
 • trend
 • »
 • RTI: ತಿಂಗಳ ಸಂಬಳದ ಮಾಹಿತಿ ನೀಡದ ಗಂಡ; ಆದಾಯ ತಿಳಿಯೋಕೆ RTI ಮೊರೆ ಹೋದ ಹೆಂಡತಿ

RTI: ತಿಂಗಳ ಸಂಬಳದ ಮಾಹಿತಿ ನೀಡದ ಗಂಡ; ಆದಾಯ ತಿಳಿಯೋಕೆ RTI ಮೊರೆ ಹೋದ ಹೆಂಡತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗಂಡ ಹೆಂಡತಿಯರು ಕುಳಿತ ಮಾತುಕತೆ ಮೂಲಕ  ಮುಗಿಯಬಹುದಾದ ಸಮಸ್ಯೆಯನ್ನು ಕಾನೂನಿನಾತ್ಮಕವಾಗಿಯೇ ಬಗೆಹರಿದಿದೆ.

 • Share this:

  ಬಹಳಷ್ಟು ಜನರು ತಾವು ಎಷ್ಟು ಸಂಪಾದನೆ ಮಾಡ್ತೀದೀವಿ ಅಂತ ಹೇಳೋಕೆ ಇಷ್ಟಪಡಲ್ಲ. ಸಾಕಷ್ಟು ಜನರಿಗೆ ನಿಮ್ಮ ಸ್ಯಾಲರಿ ಎಷ್ಟು ಅಂತ ಕೇಳೋದೂ ಇಷ್ಟ ಆಗಲ್ಲ. ಅಲ್ದೇ ಹಾಗೆ ಕೇಳೋದು ಸೌಜನ್ಯ ಕೂಡ ಅಲ್ಲ. ಆದ್ರೆ ಗಂಡ-ಹೆಂಡಿರಲ್ಲಿ ಅದೆಂತಹ ಗುಟ್ಟು.. ? ಇದು ಸಾಮಾನ್ಯವಾಗಿ ಎಲ್ಲರ ತಲೆಗೆ ಬರುವ ವಿಚಾರ. ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ಇಲ್ಲೂ ಕೂಡ ಗುಟ್ಟು ಮಾಡ್ತಾರೆ. ಹೌದು.. ಎಲ್ಲ ಸರಿ ಇದ್ದಾಗ ಸಂಸಾರ ಸರಾಗವಾಗಿ ನಡೆಯುತ್ತೆ. ಆದ್ರೆ ದಾಂಪತ್ಯದಲ್ಲಿ ಬಿರುಕು ಮೂಡಿದಾಗಲೇ ಸಮಸ್ಯೆಗಳು, ಗುಟ್ಟುಗಳು ಶುರುವಾಗೋದು. ಹೌದು.. ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ, ಭಾವನಾತ್ಮಕ ಸವಾಲುಗಳ ಜೊತೆಗೆ ನಿಮ್ಮ ಹಣಕಾಸು ಸಹ ಪರಿಣಾಮ ಬೀರುತ್ತದೆ.


  ಇನ್ನು ವಿಚ್ಛೇದನ ಪರಸ್ಪರ ಒಪ್ಪಿಗೆಯಿಂದ ನಡೆದಾಗ ಪತ್ನಿ ಪತಿಯ ಆದಾಯವನ್ನು ಕೇಳಬಹುದು. ಅಲ್ಲದೇ ಅದಕ್ಕೆ ಸಂಬಂಧಿಸಿ ಜೀವನಾಂಶವನ್ನೂ ಕೇಳಬಹುದು. ಇಲ್ಲಿ ಆಸ್ತಿಯನ್ನು ಹಂಚಲಾಗುತ್ತೆ. ಪತ್ನಿಗೆ ಜೀವನಾಂಶ ನೀಡಬೇಕಾಗುತ್ತೆ.


  ಕಾನೂನಿನ ಮೂಲಕವೇ ಗಂಡನ ಆದಾಯದ ಗುಟ್ಟು ರಟ್ಟು!


  ಆದರೆ ಸಮಸ್ಯೆ ಶುರುವಾಗೋದೇ ಪತಿಯಾದವನು ಆದಾಯದ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರೆ. ಆದ್ರೆ ಪಡೆಯಲೇಬೇಕು ಅಂದ್ರೆ ಮಹಿಳೆಯೊಬ್ಬಳಿಗೆ ವಿವರಗಳನ್ನು ಪಡೆಯೋಕೆ ಬೇಕಾದಷ್ಟು ದಾರಿಗಳಿವೆ. ಪತ್ನಿಯಾದವಳು ಬೇರೆ ವಿಧಾನಗಳ ಮೂಲಕ ವಿವರಗಳನ್ನು ಪಡೆಯಬಹುದು. ಅದೂ ಕಾನೂನಿನ ಮೂಲಕವೇ.


  ಇದನ್ನು ಓದಿ: ರಾಜಮನೆತನದಿಂದ ಹೊರಗುಳಿಯಲಿದ್ದಾರಾ ಪ್ರಿನ್ಸ್ ಹ್ಯಾರಿ, ಮೇಘನ್ ಮಾರ್ಕೆಲ್?


  ಇದಕ್ಕೆ ಬೆಸ್ಟ್‌ ಉದಾಹರಣೆ ಎಂಬಂತೆ ಆರ್‌ ಟಿ ಐ ಅಥವಾ ಮಾಹಿತಿ ಹಕ್ಕು ಕಾಯ್ದೆಯಡಿ. ಇದರಡಿ ಮಹಿಳೆಯೊಬ್ಬರು ತನ್ನ ಪತಿಯ ಆದಾಯದ ವಿವರಗಳನ್ನು ಕೋರಿದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.


  ದಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ತನ್ನ ಇತ್ತೀಚಿನ ಆದೇಶದಲ್ಲಿ ಮಹಿಳೆಗೆ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ/ಒಟ್ಟು ಆದಾಯದ ಸಾಮಾನ್ಯ ವಿವರಗಳನ್ನು 15 ದಿನಗಳೊಳಗೆ ಒದಗಿಸುವಂತೆ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.


  ಹಾಗೆ ಆರ್‌ ಟಿ ಐ ಗೆ ಅರ್ಜಿ ಸಲ್ಲಿಸಿದ ಮಹಿಳೆಯ ಹೆಸರು ಸಂಜು ಗುಪ್ತಾ ಅಂತ. ಈಕೆ ತನ್ನ ಪತಿಯ ಆದಾಯದ ವಿವರಗಳನ್ನು ಕೋರಿ ಆರ್‌ಟಿಐ ಸಲ್ಲಿಸಿದ ನಂತರ ಈ ಆದೇಶ ಬಂದಿದೆ. ಆರಂಭದಲ್ಲಿ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (CPIO), ಆದಾಯ ತೆರಿಗೆ ಅಧಿಕಾರಿ, ಬರೇಲಿಯ ಆದಾಯ ತೆರಿಗೆ ಇಲಾಖೆ ಕಚೇರಿ, ಪತಿ ಇದಕ್ಕೆ ಒಪ್ಪಿಗೆ ನೀಡದ ಕಾರಣ RTI ಅಡಿಯಲ್ಲಿ ವಿವರಗಳನ್ನು ನೀಡಲು ನಿರಾಕರಿಸಿದರು ಎಂದು ಹೇಳಲಾಗಿದೆ.


  ಆದಾಯ ವಿವರ ನೀಡಲು ಆದೇಶ!


  ನಂತರ ಮಹಿಳೆ ಮೇಲ್ಮನವಿ ಸಲ್ಲಿಸುವ ಮೂಲಕ ಮೊದಲ ಮೇಲ್ಮನವಿ ಪ್ರಾಧಿಕಾರದಿಂದ (ಎಫ್‌ಎಎ) ಸಹಾಯವನ್ನು ಕೋರಿದರು. ಆದಾಗ್ಯೂ, FAA CPIO ನ ಆದೇಶವನ್ನು ಎತ್ತಿ ಹಿಡಿದಿದೆ. ಇದರಿಂದ CIC ಗೆ ಎರಡನೇ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದರು.


  ಇದನ್ನು ಓದಿ: Viral Video: ಬರಿಗೈಲಿ ಟಾಯ್ಲೆಟ್ ಕ್ಲೀನ್ ಮಾಡಿದ ಬಿಜೆಪಿ ಸಂಸದ! ವಿಡಿಯೋ ಫುಲ್ ವೈರಲ್


  ಕೇಂದ್ರ ಮಾಹಿತಿ ಆಯೋಗವು ತನ್ನ ಹಿಂದಿನ ಕೆಲವು ಆದೇಶಗಳು ಮತ್ತು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ತೀರ್ಪುಗಳನ್ನು ಪರಿಶೀಲಿಸಿದ್ದು, ಸೆಪ್ಟೆಂಬರ್ 19, 2022 ರಂದು ತನ್ನ ಆದೇಶ ನೀಡಿದೆ. ಸ್ವೀಕರಿಸಿದ ದಿನಾಂಕದಿಂದ 15 ದಿನಗಳಲ್ಲಿ ಸಾರ್ವಜನಿಕ ಪ್ರಾಧಿಕಾರದಲ್ಲಿ ಲಭ್ಯವಿರುವ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ/ಒಟ್ಟು ಆದಾಯದ ವಿವರಗಳನ್ನು ಪತ್ನಿಗೆ ಒದಗಿಸುವಂತೆ ಅದು CPIO ಗೆ ನಿರ್ದೇಶಿಸಿದೆ.


  ಸ್ವಲ್ಪ ಯೋಚನೆ ಮಾಡಿದರೆ ಗಂಡ ಹೆಂಡತಿಯರು ಕುಳಿತ ಮಾತುಕತೆ ಮೂಲಕ  ಮುಗಿಯಬಹುದಾದ ಸಮಸ್ಯೆಯನ್ನು ಕಾನೂನಿನಾತ್ಮಕವಾಗಿಯೇ ಬಗೆಹರಿದಿದೆ. ಆದರೆ ಆದಾಯ, ಜೀವನಾಂಶ ಹಾಗೂ ಕೋರ್ಟ್‌ ಕಚೇರಿಯ ಹೊರತಾಗಿಯೂ ಮನುಷ್ಯತ್ವಕ್ಕೆ ಬೆಲೆ ಕೊಡಬೇಕು ಅನ್ನುವುದು ಮುಖ್ಯವಾಗುತ್ತೆ.

  Published by:Seema R
  First published: