• Home
 • »
 • News
 • »
 • trend
 • »
 • Viral News: ಗಡ್ಡ ಬಿಟ್ಟ ಹೆಂಗಸಿಗೆ ಡಿಮ್ಯಾಂಡ್ ಇಲ್ಲ ಡಿಮ್ಯಾಂಡ್! ಪಾಪ ಇವಳ ಸ್ಥಿತಿ ಏನಾಗಿದೆ ನೋಡಿ

Viral News: ಗಡ್ಡ ಬಿಟ್ಟ ಹೆಂಗಸಿಗೆ ಡಿಮ್ಯಾಂಡ್ ಇಲ್ಲ ಡಿಮ್ಯಾಂಡ್! ಪಾಪ ಇವಳ ಸ್ಥಿತಿ ಏನಾಗಿದೆ ನೋಡಿ

ಗಡ್ಡ ಬಿಟ್ಟ ಮಹಿಳೆ!

ಗಡ್ಡ ಬಿಟ್ಟ ಮಹಿಳೆ!

ಕೆಲವೊಮ್ಮೆ ಮಹಿಳೆಯರಿಗೂ ಗಡ್ಡ-ಮೀಸೆ ಬರುತ್ತದೆ. ಹೀಗಿ ಅನಗತ್ಯ ಕೂದಲುಗಳ ಜೊತೆ ಹೊರಾಡುವ ಮಹಿಳೆಯರು ಸಾಕಷ್ಟಿದ್ದಾರೆ. ಇಂತಹ ಮಹಿಳೆಯರಂತೆಯೇ ಈ ಅನಗತ್ಯ ಕೂದಲನ್ನು ನಿವಾರಿಸಲು ಹೋಗಿ ಮಹಿಳೆಯ ಸ್ಥಿತಿ ಏನಾಗಿದೆ ನೋಡಿ.

 • Share this:

  ಗಡ್ಡ (Beard), ಮೀಸೆ (mustache) ಪುರುಷರಿಗೆ ಒಂದು ಹೆಮ್ಮೆಯ ಸಂಕೇತ. ಈಗಂತೂ ಗಡ್ಡ, ಮೀಸೆ ಎಂಬುವುದು ಫ್ಯಾಷನ್‌ (Fashion) ಕೂಡ. ಆದರೆ ಹೆಣ್ಣು ಮಕ್ಕಳಿಗೆ (Ladies) ಮುಖದ ಮೇಲೆ ಇದೇ ರೀತಿಯಾದ ಅನಗತ್ಯ ಕೂದಲು ಬಂದರೆ ಏನಾಗಬಹುದು? ಖಂಡಿತ ಯಾರು ಇದನ್ನು ಸಹಜವಾಗಿ ತೆಗೆದುಕೊಳ್ಳುವುದಿಲ್ಲ. ಅಂತಹ ಹೆಣ್ಣು ಮಕ್ಕಳನ್ನು ಮೂದಲಿಸುವುದು, ಅಪಹಾಸ್ಯ ಮಾಡುವುದು ನಡೆಯುತ್ತದೆ. ಕೆಲವೊಮ್ಮೆ ಹಾರ್ಮೊನ್‌ಗಳ ವ್ಯತ್ಯಾಸವಾದಲ್ಲಿ ಅಪ್ಪರ್‌ ಲಿಪ್‌ ಎನ್ನುವ ಮೀಸೆ ರೀತಿ ಕಾಣುವ ಅನಗತ್ಯ ಕೂದಲು, ಇಲ್ಲ ಗಡ್ಡದಂತೆ ಬರುವ ಕೂದಲು ಉಂಟಾಗಬಹುದು. ಈ ರೀತಿಯಾದ ಕೂದಲನ್ನು ತೆಗೆಯಲು ಮಹಿಳೆಯರು ಶೇವಿಂಗ್‌, ವ್ಯಾಕ್ಸಿಂಗ್‌, ಇನ್ಯಾವುದೋ ಹೇರ್‌ ರಿಮೂವಲ್ ಕ್ರೀಮ್‌ಗಳನ್ನು ಬಳಕೆ ಮಾಡುತ್ತಾರೆ. ಈ ಅನಗತ್ಯ ಕೂದಲುಗಳ ಜೊತೆ ಹೊರಾಡುವ ಮಹಿಳೆಯರು ಸಾಕಷ್ಟಿದ್ದಾರೆ. ಇಂತಹ ಮಹಿಳೆಯರಂತೆಯೇ ಈ ಅನಗತ್ಯ ಕೂದಲನ್ನು ನಿವಾರಿಸಲು ಹೋಗಿ ಮಹಿಳೆಯ ಸ್ಥಿತಿ ಏನಾಗಿದೆ ನೋಡಿ.


  ಗಡ್ಡದ ಸಮಸ್ಯೆಯಿಂದ ಬೇಸತ್ತ ಡಕೋಟಾ ಕುಕ್


  ಈಕೆ ಡಕೋಟಾ ಕುಕ್, (30), ಒಮ್ಮೆ ನೋಡಿದರೆ ಅರೆ ಇವರು ಹುಡುಗನಾ, ಹುಡುಗಿನಾ ಅಂತಾ ಗೊಂದಲವಾಗಬಹುದು!  ಕಾರಣ ಇಷ್ಟೇ ಗಂಡಸರಂತೆ ಅವರ ಮುಖದ ಮೇಲಿರುವ ಗಡ್ಡ. ಹದಿಹರೆಯದಲ್ಲಿ ಮುಖದ ಮೇಲಿನ ಅನಗತ್ಯ ಕೂದಲಿನಿಂದ ಬೇಸತ್ತು ಹೋಗಿದ್ದ ಕುಕ್‌ ಈಗ ಅದೇ ಗಡ್ಡವನ್ನು ಮುಲಾಜಿಲ್ಲದೇ ಪ್ರೀತಿಯಿಂದ ಬೆಳೆಸುತ್ತಿದ್ದಾಳೆ.


  10 ವರ್ಷ ಖಿನ್ಗೆತೆಗೆ ಒಳಗಾಗಿದ್ದ ಕುಕ್
  ಡಕೋಟಾ ಕುಕ್, 13ನೇ ವಯಸ್ಸಿನಲ್ಲಿಯೇ ತನ್ನ ಮುಖದ ಮೇಲೆ ಅಸಹಜ ಕೂದಲು ಬೆಳವಣಿಗೆಯನ್ನು ಮೊದಲು ಗಮನಿಸಿದರು. ಮುಖದಲ್ಲಿ ಈ ರೀತಿಯ ಕೂದಲ ಬೆಳವಣಿಗೆಯಿಂದ ಈಕೆ ಅನೇಕ ಸವಾಲುಗಳನ್ನು, ನಿಂದನೆಗಳನ್ನು ಎದುರಿಸಬೇಕಾಯಿತು. ಈ ಸಮಸ್ಯೆಯಿಂದ ಹೊರಬರಲಾಗದೆ 10 ವರ್ಷಗಳ ಕಾಲ ಖಿನ್ನತೆಯನ್ನು ಅಹ ಅನುಭವಿಸಿದರು. ವಾರಕ್ಕೊಮ್ಮೆ ವ್ಯಾಕ್ಸಿಂಗ್ ಮಾಡಿಸಿಕೊಳ್ಳುವುದು, ದಿನಕ್ಕೆ ಎರಡು ಬಾರಿ ತನ್ನ ಮುಖದ ಕೂದಲನ್ನು ಶೇವ್ ಮಾಡುವುದು ಹೀಗೆ ಡಕೋಟಾ ಕುಕ್‌ ಈ ಕೂದಲ ನಿವಾರಣೆಗೆ ಇನ್ನಿಲ್ಲದ ರೀತಿಯಲ್ಲಿ ಪ್ರಯತ್ನಿಸಿದಳು.


  ಇದನ್ನೂ ಓದಿ: Air India: ಬಿಳಿ ಕೂದಲಿರೋ ಪುರುಷರು ಫುಲ್ ಬಾಲ್ಡ್ ಮಾಡ್ಕೊಳ್ಳಿ, ಮಹಿಳೆಯರು ಬಳೆ ಕಡಿಮೆ ಹಾಕಿ! ಏರ್ ಇಂಡಿಯಾ ಸಿಬ್ಬಂದಿಗೆ ಹೊಸ ರೂಲ್ಸ್


  ದಿನಕ್ಕೆ ಎರಡು ಬಾರಿ ಶೇವ್‌ ಮಾಡಿದ್ದೇ ಆಯ್ತು ಎಡವಟ್ಟು


  ಕುಕ್‌ ಕೂದಲನ್ನು ನಿವಾರಿಸಲು, ದಿನಕ್ಕೆ ಎರಡು ಬಾರಿ ಶೇವ್‌ ಮಾಡುತ್ತಿದ್ದಳು. ಆದರೆ ದುರದೃಷ್ಟವಶಾತ್‌ ಕುಕ್‌ ಶೇವ್ ಮಾಡಲು ಆರಂಭಿಸಿದ ನಂತರ ಈ ಗಡ್ಡದ ಸಮಸ್ಯೆ ಹೆಚ್ಚಾಯಿತು. ಮುಖದಲ್ಲಿ ಸಣ್ಣ ಕೂದಲಿನ ಬದಲಿಗೆ ಉದ್ದುದ್ದ ಕೂದಲುಗಳು ಬೆಳೆದವು.


  "ಮುಖದ ಕೂದಲನ್ನು ಹೊಂದಿರುವ ಮಹಿಳೆಯರು ತುಂಬಾ ಕಳಂಕಿತರಾಗಿರುವ ಅವಧಿಯಲ್ಲಿ ನಾನು ಬೆಳೆದಿದ್ದೇನೆ, ಹುಡುಗಿಯರು ಗಡ್ಡ ಬಿಟ್ಟರೆ ಚೆನ್ನಾಗಿರುವುದಿಲ್ಲ ಎಂದು ಸಲೂನ್‌ನಲ್ಲಿರುವ ಮಹಿಳೆಯರು ನನಗೆ ಹೇಳುತ್ತಿದ್ದರು" ಎಂದು ಕುಕ್ ‌ ಡೈಲಿ ಸ್ಟಾರ್‌ ಜೊತೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. 10 ವರ್ಷ ನಾನು ಬರೀ ಇಂತದ್ದೇ ಅವಮಾನಗಳ ಜೊತೆ ಬದುಕಿದೆ. ನಾನು ನನ್ನ ಮುಖವನ್ನು ಫೋಟೋಗಳಲ್ಲಿ ಮರೆಮಾಡಲು ಪ್ರಯತ್ನಿಸುತ್ತಿದ್ದೆ ಮತ್ತು ಪ್ರತಿ ವಾರ ವ್ಯಾಕ್ಸಿಂಗ್ ಸೆಷನ್‌ಗಳಿಗೆ ಹಾಜರಾಗುತ್ತಿದ್ದೆ' ಎಂದು ಡೆಕೋಟಾ ಕುಕ್ ಹೇಳಿದ್ದಾರೆ.


  ಈಗ ತನ್ನ ಗಡ್ಡವನ್ನು ಇಷ್ಟಪಡುತ್ತಿದ್ದಾಳೆ ಕುಕ್
  2015ರಲ್ಲಿ, ಕುಕ್ ಸ್ನೇಹಿತರೊಬ್ಬರು ಸರ್ಕಸ್ ಪ್ರದರ್ಶನದಲ್ಲಿ ಭಾಗವಹಿಸುವಂತೆ ಕೇಳಿಕೊಂಡರು. ಅವರು ಪ್ರದರ್ಶನದಲ್ಲಿ ಗಡ್ಡದ ಮಹಿಳೆ ಎಂಬ ಕಲ್ಪನೆಯನ್ನು ಇಷ್ಟಪಟ್ಟರು ಮತ್ತು‌ ಅಂದಿನಿಂದ ರೇಜರ್ ಮತ್ತು ವ್ಯಾಕ್ಸಿಂಗ್ ಬಿಟ್ಟು ಮುಖದ ಮೇಲೆ ಬೆಳೆಯುತ್ತಿರುವ ಗಡ್ಡವನ್ನು ಇಷ್ಟಪಡಲು ಮತ್ತು ಅದರ ಜೊತೆ ಎಲ್ಲರಂತೆ ಬದುಕಲು ಕುಕ್‌ ನಿರ್ಧರಿಸಿದಳು.


  ಇದನ್ನೂ ಓದಿ: Woman at Gym: ಸೀರೆಯಲ್ಲೇ ವರ್ಕೌಟ್‌ ಮಾಡ್ತಾರೆ ಈ ಮಹಿಳೆ, 56 ವರ್ಷವಾದ್ರೂ ಇನ್ನೂ ಫಿಟ್ ಆ್ಯಂಡ್ ಫೈನ್!


  ಹಾಗಂತ ಈ ಹಾದಿ ಯುವತಿಗೆ ಸುಲಭವಾಗಿರಲಿಲ್ಲ. ಎಲ್ಲಾ ಸವಾಲು, ಆತಂಕದ ಮಧ್ಯೆ ಕುಕ್‌ ಯಾವಯದಕ್ಕೂ ತಲೆ ಕೆಡಿಸಿಕೊಳ್ಳದೇ ಗಡ್ಡವನ್ನು ಶೇವಿಂಗ್‌, ವ್ಯಾಕ್ಸಿಂಗ್‌ ಮಾಡಿಸದೇ ಬೆಳೆಯಲು ಬಿಟ್ಟಳು. "ನನ್ನ ಈ ನಿರ್ಧಾರವನ್ನು ನನ್ನ ಕುಟುಂಬ ಮತ್ತು ಸ್ನೇಹಿತರು ಬೆಂಬಲಿಸಿದರು. ನಾನೀಗ ನನ್ನ ಗಡ್ಡವನ್ನು ಪ್ರೀತಿಸುತ್ತೇನೆ" ಎಂದು ಡಕೋಟಾ ಕುಕ್ ಹೇಳಿದ್ದಾರೆ.


  ಇಂತದ್ದನ್ನೆಲ್ಲಾ ಯಾರು ಬೇಕಂತ ಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ ನಮ್ಮ ದೇಹ ಸ್ಥಿತಿಯ ಏರು-ಪೇರಿನಿಂದಲೂ ಉಂಟಾಗುತ್ತವೆ. ಅಂತಹವರನ್ನು ಹಿಯಾಳಿಸದೆ, ನೋಯಿಸದೇ ನಮ್ಮಂತೆ ಅವರಿಗೂ ಬದಕಲು ಅವಕಾಶ ಮಾಡಿಕೊಡುವ ಮನಸ್ಥಿತಿ ನಾವು-ನೀವು ಬೆಳೆಸಿಕೊಳ್ಳಬೇಕು.

  Published by:Annappa Achari
  First published: