ಈಗಂತೂ ದಿನ ಬೆಳಗಾದರೆ ಸಾಕು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅನೇಕ ರೀತಿಯ ವಿಡಿಯೋಗಳು ನಮಗೆ ನೋಡಲು ಸಿಗುತ್ತವೆ. ಕೆಲವು ವಿಡಿಯೋಗಳು ನಮ್ಮ ಜೀವನಕ್ಕೆ ಸ್ಪೂರ್ತಿಯಾದರೆ, ಇನ್ನೂ ಕೆಲವು ನಮಗೆ ಖುಷಿ ಕೊಡುತ್ತವೆ ಮತ್ತು ಭಾವುಕರನ್ನಾಗಿ ಮಾಡುತ್ತವೆ. ಇಷ್ಟೇ ಅಲ್ಲದೆ ಕೆಲವು ಭಯಾನಕ ಪ್ರಾಣಿಗಳ ವಿಡಿಯೋಗಳನ್ನು (Viral Video) ನೋಡಿ ನಾವು ಬೆಚ್ಚಿ ಬಿದ್ದಿದ್ದು ಸಹ ಇರುತ್ತದೆ. ಆಗಾಗ್ಗೆ ಕೆಲವು ಆಸಕ್ತಿದಾಯಕ ಅಥವಾ ತಮಾಷೆಯ ವಿಡಿಯೋಗಳನ್ನು ನೋಡಿ ನಾವು ದಿನವಿಡೀ ಅದನ್ನು ನೆನಪಿಸಿಕೊಂಡು ನಕ್ಕಿದ್ದು ಇದೆ. ಇದೀಗ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ್ರೆ ನಿಮ್ಗೇ ಅಚ್ಚರಿಯಾಗುತ್ತೆ.
ಡ್ರೈವರ್ ಸೀಟಿನ ಮೇಲೆ ಕುಳಿತ ಮಹಿಳೆ
ಇಲ್ಲೊಂದು ವಿಡಿಯೋ ಇದೆ ನೋಡಿ, ಬಸ್ ಚಾಲಕನ ಸೀಟು ಖಾಲಿ ಇರುವುದನ್ನು ನೋಡಿದ ಮಹಿಳೆ ಬೇಗನೆ ಹೋಗಿ ಆ ಸೀಟಿನ ಮೇಲೆ ಕುಳಿತುಕೊಂಡಿದ್ದಾಳೆ. ನಂತರ ಬಸ್ ಚಾಲಕ ಬಂದು ಕೆಳಗೆ ಇಳಿಯಮ್ಮಾ, ನಾನು ಅಲ್ಲಿ ಕೂತು ಬಸ್ ಓಡಿಸಬೇಕು ಅಂತ ಎಷ್ಟೇ ಹೇಳಿದರೂ ಸಹ ಆ ಮಹಿಳೆ ಮಾತ್ರ ‘ನಾನು ಕೆಳಗಿಳಿಯಲ್ಲ, ಬೇಕಾದರೆ ಬೇರೆ ಸೀಟಿನಲ್ಲಿ ಕೂತು ಬಸ್ ಓಡಿಸು’ ಅಂತ ಒಂದೇ ಮಾತು.
ಈ ವಿಡಿಯೋವನ್ನು ಶಿರೀಶ್ ಥೋರತ್ ಎಂಬ ಟ್ವಿಟ್ಟರ್ ಬಳಕೆದಾರರು ಅಪ್ಲೋಡ್ ಮಾಡಿದ್ದಾರೆ. ಈ ಘಟನೆಯನ್ನು ಬಸ್ ಸುತ್ತಲೂ ಜಮಾಯಿಸಿದ್ದ ಸ್ಥಳೀಯರಲ್ಲಿ ಒಬ್ಬರು ರೆಕಾರ್ಡ್ ಮಾಡಿದ್ದಾರೆ. ಬಸ್ ಅನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದು, ಅದರ ಪಕ್ಕದಲ್ಲಿ ಇತರ ಬಸ್ಸುಗಳನ್ನು ನಿಲ್ಲಿಸಲಾಗಿದೆ. ಚಾಲಕ ಕೆಳಗೆ ಇಳಿದು ಹೋಗಿ ಮತ್ತೆ ಹಿಂತಿರುಗಿ ಬಂದಾಗ, ಮಹಿಳೆ ತನ್ನ ಸೀಟಿನಲ್ಲಿ ಕುಳಿತಿರುವುದನ್ನು ನೋಡಿ ಅವಳನ್ನು ಅಲ್ಲಿಂದ ಹೋಗು ಅಂತ ಕೇಳಿದನು.
ಇದನ್ನೂ ಓದಿ: ಐಫೋನ್ 12 ಮೇಲೆ ಅಮೆಜಾನ್ನಲ್ಲಿ ಬಂಪರ್ ಆಫರ್! ಕೆಲವು ದಿನಗಳವರೆಗೆ ಮಾತ್ರ
ಡ್ರೈವರ್ ಸೀಟಿನಲ್ಲಿ ಕುಳಿತಿರುವ ಮಹಿಳೆ ತನ್ನ ಅತ್ತೆಯೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ವೀಡಿಯೋ ಶೀರ್ಷಿಕೆ ಹೇಳುತ್ತದೆ. ಆಕೆಯ ಅತ್ತೆ ಹಿಂಭಾಗದ ಸೀಟಿನಲ್ಲಿ ಕುಳಿತಿರುವುದನ್ನು ನಾವು ನೋಡಬಹುದು. ಮಹಿಳೆ ಡ್ರೈವರ್ ಸೀಟಿನಲ್ಲಿ ಕುಳಿತುಕೊಳ್ಳುವುದಕ್ಕೆ ಏಕೆ ಸಾಧ್ಯವಿಲ್ಲ ಅಂತ ವಿವರಿಸಲು ಚಾಲಕ ಪ್ರಯತ್ನಿಸುತ್ತಿರುವುದನ್ನು ಇಲ್ಲಿ ನಾವು ನೋಡಬಹುದು.
ಆದರೆ, ಮಹಿಳೆ ಏನನ್ನೂ ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಅವಳು ಚಾಲಕನೊಂದಿಗೆ ವಾದಿಸುತ್ತಲೇ ಇರುತ್ತಾಳೆ ಮತ್ತು ಸ್ವಲ್ಪ ಸಮಯದ ನಂತರ, ಆಕೆಯ ಅತ್ತೆ ಕೂಡ ವಾಗ್ವಾದದಲ್ಲಿ ತೊಡಗುತ್ತಾಳೆ ಮತ್ತು ಚಾಲಕನನ್ನು ಬೇರೆಡೆಗೆ ಹೋಗಿ ಕುಳಿತುಕೊಳ್ಳುವಂತೆ ಕೇಳುತ್ತಾಳೆ.
Indian travel diaries 😂😂😂 Lady and her bahu board a bus and bahu sits in the driver's seat. When the driver asks her to vacate the seat both ladies refuse and ask him to drive the bus from any other seat 😂😂😂
Only in India ! pic.twitter.com/NXScZnUlBG
— Shirish Thorat (@shirishthorat) March 12, 2023
ವಿಡಿಯೋ ಕೊನೆಯಲ್ಲಿ ಆದದ್ದೇನು ನೋಡಿ..
ವಿಡಿಯೋದ ಕೊನೆಯಲ್ಲಿ, ಈ ವಿಡಿಯೋವನ್ನು ರೆಕಾರ್ಡ್ ಮಾಡುವ ವ್ಯಕ್ತಿಯನ್ನು ನಾವು ನೋಡುತ್ತೇವೆ ಮತ್ತು ಇದನ್ನು ನೋಡಲು ಅನೇಕ ಸ್ಥಳೀಯರು ಬಸ್ ಸುತ್ತಲೂ ಜಮಾಯಿಸಿದ್ದಾರೆ. ಬಸ್ ಚಾಲಕ ತಾನು ಬೇರೆ ಸೀಟಿನಲ್ಲಿ ಕುಳಿತು ಬಸ್ ಓಡಿಸಲು ಸಾಧ್ಯವಿಲ್ಲ ಅಥವಾ ಬಸ್ ಓಡಿಸಲು ತನಗೆ ಆ ಸೀಟ್ ಏಕೆ ಬೇಕು ಎಂದು ವಿವರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದನು, ಆದರೆ, ಇಬ್ಬರೂ ಮಹಿಳೆಯರು ಕೇಳುವ ಮನಸ್ಥಿತಿಯಲ್ಲಿರಲಿಲ್ಲ.
ಕೊನೆಯಲ್ಲಿ ಚಾಲಕ ಅವಳನ್ನು ಸೀಟಿನಿಂದ ಹೊರಗೆ ಎಳೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು, ಆದರೆ ಅವಳು ಪ್ರತಿರೋಧಿಸುತ್ತಲೇ ಇರುತ್ತಾಳೆ ಮತ್ತು ಬಸ್ಸಿನ ಕ್ಯಾಬಿನ್ ಅನ್ನು ಹಿಡಿದಿಟ್ಟುಕೊಳ್ಳುತ್ತಾಳೆ. ವಾಹನವನ್ನು ಹೇಗೆ ಓಡಿಸಲಾಗುತ್ತದೆ ಅಥವಾ ಚಾಲಕನ ಪಾತ್ರವೇನು ಎಂಬ ಮೂಲಭೂತ ಸಂಗತಿಯ ಬಗ್ಗೆ ಮಹಿಳೆಗೆ ತಿಳಿದಿರಲಿಲ್ಲವೇ ಅಥವಾ ಅವಳು ವೀಡಿಯೋಗಾಗಿ ದೃಶ್ಯವನ್ನು ಚಿತ್ರೀಕರಿಸಲು ಪ್ರಯತ್ನಿಸುತ್ತಿದ್ದಳೇ ಎಂಬುದು ನಮಗೆ ಖಚಿತವಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ