• Home
  • »
  • News
  • »
  • trend
  • »
  • Viral Story: ಆಕೆ ಗರ್ಭಿಣಿ ಅಂತ ಗೊತ್ತಾದ ಎರಡೇ ದಿನಕ್ಕೆ ಹೆರಿಗೆ ಆಯ್ತು! ಅರೇ, ಇವೆಲ್ಲ ನಿಜಕ್ಕೂ ಸಾಧ್ಯನಾ?

Viral Story: ಆಕೆ ಗರ್ಭಿಣಿ ಅಂತ ಗೊತ್ತಾದ ಎರಡೇ ದಿನಕ್ಕೆ ಹೆರಿಗೆ ಆಯ್ತು! ಅರೇ, ಇವೆಲ್ಲ ನಿಜಕ್ಕೂ ಸಾಧ್ಯನಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಮೆರಿಕದಲ್ಲಿ ದಂಪತಿ ತಾವು ಅಪ್ಪ-ಅಮ್ಮ ಆಗಲಿದ್ದೇವೆ ಎಂದು ತಿಳಿದು ಶಾಕ್‌ ಅನುಭವಿಸ್ತಾರೆ. ಹಾಗೆ ವಿಷಯ ತಿಳಿದ 48 ಗಂಟೆಗಳಲ್ಲೇ ಮಗುವಿಗೆ ಜನ್ಮ ನೀಡಬೇಕಾದ ಪರಿಸ್ಥಿತಿ ಆ ತಾಯಿಯದ್ದು. ಸಾಕಷ್ಟು ಆರೋಗ್ಯ ಸಮಸ್ಯೆಗಳಿರೋದ್ರಿಂದ ಇಂಥ ನಿರ್ಧಾರ ತೆಗೆದುಕೊಂಡ ಆ ದಂಪತಿ ಈಗ ಮುದ್ದಾದ ಗಂಡು ಮಗುವನ್ನು ಪಡೆದಿದ್ದಾರೆ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ಒಬ್ಬ ಗರ್ಭಿಣಿ (Pregnant) ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾಳೆ. ಅದು ಎಷ್ಟು ಖುಷಿ ನೀಡುವ ವಿಚಾರವೋ ಅಷ್ಟೇ ಕಷ್ಟದ ಕಾಲ ಕೂಡ. ಇನ್ನು ಆರಂಭದಲ್ಲಿ ಬಹಳಷ್ಟು ಜನರಿಗೆ ತಾವು ಗರ್ಭಿಣಿ ಎಂದು ತಿಳಿಯದೇ ಮುಂದೆ ಸಾಕಷ್ಟು ಕಷ್ಟ ಅನುಭವಿಸ್ತಾರೆ. ಅಮೆರಿಕದ (America) ಮಹಿಳೆಯೊಬ್ಬಳ ಪರಿಸ್ಥಿತಿ ಕೂಡ ಹಾಗೇ ಆಗಿದೆ. ಆಕೆಗೆ ತಾನು ತಾಯಿಯಾಗಲಿದ್ದೇನೆ ಎಂದು ತಿಳಿಯದೇ ಅನುಭವಿಸಿದ ಕಷ್ಟ ಹೇಳತೀರದು. ಅಮೆರಿಕದಲ್ಲಿ ದಂಪತಿ (Couple) ತಾವು ಅಪ್ಪ ಅಮ್ಮ ಆಗಲಿದ್ದೇವೆ ಎಂದು ತಿಳಿದು ಶಾಕ್‌ ಅನುಭವಿಸ್ತಾರೆ. ಹಾಗೆ ವಿಷಯ ತಿಳಿದ 48 ಗಂಟೆಗಳಲ್ಲೇ ಮಗುವಿಗೆ ಜನ್ಮ (Baby Birth) ನೀಡಬೇಕಾದ ಪರಿಸ್ಥಿತಿ ಆ ತಾಯಿಯದ್ದು.


ಸಾಕಷ್ಟು ಆರೋಗ್ಯ ಸಮಸ್ಯೆಗಳಿರೋದ್ರಿಂದ ಇಂಥ ನಿರ್ಧಾರ ತೆಗೆದುಕೊಂಡ ಆ ದಂಪತಿ ಈಗ ಮುದ್ದಾದ ಗಂಡು ಮಗುವನ್ನು ಪಡೆದಿದ್ದಾರೆ.


ಏನಿದು ಘಟನೆ?
ಅಷ್ಟಕ್ಕೂ ಆ ಮಹಿಳೆಯ ಹೆಸರು ಎಂ ಎಸ್‌ ಸ್ಟೋವರ್‌ ಅಂತ. ಒಮಹಾದಲ್ಲಿ ಮೊದಲ ವರ್ಷದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಈಕೆಗೆ 23 ವರ್ಷ. ತೀವ್ರ ವಾದ ಆಯಾಸ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ಅನುಭವಿಸಿದ ಬಳಿಕ ಈಕೆ ವೈದ್ಯರ ಬಳಿಗೆ ಹೋಗಿದ್ದಳು. ಸಾಮಾನ್ಯವಾಗಿ ಕೆಲಸದ ಒತ್ತಡದಿಂದ ಎಲ್ಲ ಸಮಯದಲ್ಲಿ ಆಯಾಸ ಆಗುತ್ತಿದೆ ಎಂದು ಭಾವಿಸಿದ್ದ ಸ್ಟೋವರ್‌ ಗೆ ವೈದ್ಯರು ಹೇಳಿದ ವಿಷಯ ಕೇಳಿ ಶಾಕ್‌ ಆಗಿತ್ತು.


ಇದನ್ನೂ ಓದಿ:  New York: ಮಗುವಿಗೆ ಒಂದೊಳ್ಳೆ ಹೆಸರು ಸೂಚಿಸುವುದಕ್ಕೆ ಪೋಷಕರು ಲಕ್ಷ ರೂಪಾಯಿ ಕೊಡ್ತಾರಂತೆ!


ಡಾಕ್ಟರ್‌ ಆಕೆಯನ್ನು ಆಕೆಯ ದೇಹದಲ್ಲಿನ ಬದಲಾವಣೆಗಳನ್ನು ಗಮನಿಸಿದಾಗ ಆಕೆಯ ಕಾಲುಗಳಲ್ಲಿ ಊತ ಕಾಣಿಸಿದ್ದು, ತಾವು ಗರ್ಭಿಣಿಯಾಗಿದ್ದೀರಿ ಎಂದು ಆಕೆಗೆ ತಿಳಿಸಿದರು. ನಂತರ ಕೆಲವಷ್ಟು ಪರೀಕ್ಷೆಗಳನ್ನು ನಡೆಸಿದರು. ಬಳಿಕ ಅಲ್ಟ್ರಾಸೌಂಡ್‌ ಕೂಡ ಮಾಡಿ ಆಕೆ ತಾಯಿ ಆಗುತ್ತಿದ್ದಾರೆ ಎಂದು ಕನ್ಫರ್ಮ್‌ ಮಾಡಿದರು.


ಸ್ಟೋವರ್‌ ಗೆಳೆಯ ಟವಿಸ್‌ ಕೋಸ್ಟರ್ಸ್‌ ಈ ಬಗ್ಗೆ ವಿವರ ನೀಡುತ್ತಾರೆ. ಸ್ಟೋವರ್‌ ಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿದ್ದವು. ಎಂ ಎಸ್‌ ಸ್ಟೋವರ್‌ ಅವರ ಮೂತ್ರಪಿಂಡಗಳು ಹಾಗೂ ಲೀವರ್‌ ಸರಿಯಾಗಿ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿತ್ತು. ಹಾಗಾಗಿ ಆ ರಾತ್ರಿಯೇ ಆಪರೇಷನ್‌ ಮೂಲಕ ಮಗುವನ್ನು ಹೊರತೆಗೆಯಬೇಕು ಎಂದು ವೈದ್ಯರು ಹೇಳಿದ್ದಾಗಿ ಟವಿಸ್‌ ತಿಳಿಸಿದ್ದಾರೆ.


ಕ್ಲಾಂಪ್ಸಿಯಾ ಕಾಯಿಲೆಯಿಂದ ಬಳಲುತ್ತಿದ್ದ ಸ್ಟೋವರ್‌
ಅಲ್ಲದೇ, Ms ಸ್ಟೋವರ್‌ಗೆ ಪ್ರಿಕ್ಲಾಂಪ್ಸಿಯಾ ಇದೆ ಎಂದು ವೈದ್ಯರು ಬಹಿರಂಗಪಡಿಸಿದ್ದರು. ಇದು ಗಂಭೀರ ತೊಡಕುಗಳನ್ನು ಉಂಟುಮಾಡುವ ಗರ್ಭಧಾರಣೆಯ ಸ್ಥಿತಿ. ಅಧಿಕ ರಕ್ತದೊತ್ತಡ ಮತ್ತು ಇನ್ನೊಂದು ಅಂಗ ವ್ಯವಸ್ಥೆಗೆ ಹಾನಿಯಾಗುವ ಚಿಹ್ನೆಗಳನ್ನು ಹೊಂದಿದೆ ಎಂದು ವೈದ್ಯರು ತಿಳಿಸಿದರು. ಆ ಕ್ಲಿಷ್ಟ ಪರಿಸ್ಥಿತಿಯಲ್ಲಿ ತಾಯಿ ಮತ್ತು ಮಗುವನ್ನು ರಕ್ಷಿಸಲು ವೈದ್ಯಕೀಯ ತಜ್ಞರು ತುರ್ತು ಸಿ-ಸೆಕ್ಷನ್ ನಡೆಸಿದರು. ಕೊನೆಗೂ ಸ್ಟೋವರ್‌ ಅವರು ಕಾಶ್‌ ಎಂಬ ಗಂಡು ಮಗುವಿಗೆ ಜನ್ಮ ನೀಡಿದರು. 10 ವಾರಗಳ ಮೊದಲೇ ಜನಿಸಿದ ಮಗು ಕೇವಲ 4 ಪೌಂಡ್‌ ತೂಕವಿತ್ತು.


ಇದನ್ನೂ ಓದಿ:  Viral News: ಗಂಡನ ಜೀವ ಉಳಿಸೋಕೆ 70ರಲ್ಲೂ ತನ್ನ ಕಿಡ್ನಿ ದಾನ ಮಾಡಿದ ಹೆಂಡ್ತಿ! ಇಂಥ ಪತ್ನಿ ಎಷ್ಟು ಜನಕ್ಕೆ ಸಿಗ್ತಾರೆ ಹೇಳಿ


ಈ ಅಗ್ನಿ ಪರೀಕ್ಷೆಯನ್ನು Ms ಸ್ಟೋವರ್ ಬಹಳ ಭಯಾನಕ ಎಂದು ವರ್ಣಿಸುತ್ತಾರೆ. ಆದ್ರೆ ಮಗುವಿನ ಆಗಮನದಿಂದ ಖುಷಿಯಾಗಿರುವ ದಂಪತಿ, ಇನ್ನು ಸ್ವಲ್ಪ ದಿನಗಳಲ್ಲಿಯಾದರೂ ನಮಗೆ ಮಗು ಬೇಕಿತ್ತು. ಆದರೆ ಈ ಮಗು ನಾವು ಅಂದುಕೊಂಡದ್ದಕ್ಕಿಂತ ಬೇಗ ಬಂದಿದೆ ಎಂದು ಹೇಳಿಕೊಂಡಿದ್ದಾರೆ.  ಒಟ್ಟಾರೆ, ಅಂದುಕೊಳ್ಳದೇ ಹೋದರೂ ಈ ದಂಪತಿಯ ಮನೆಗೆ ಮಗುವಿನ ಆಗಮನವಾಗಿದೆ. ಇಬ್ಬರೂ ಖುಷಿಯಾಗಿ ಮಗುವನ್ನು ಸ್ವೀಕರಿಸಿದ್ದಾರೆ ಅನ್ನೋದು ಸಮಾಧಾನದ ಸಂಗತಿ.

Published by:Ashwini Prabhu
First published: