Viral Photo: ಅಬ್ಬಬ್ಬಾ ಎಂಥಹಾ ಧೈರ್ಯ ನೋಡಿ; ಚಿರತೆಗೆನೇ ರಾಖಿ ಕಟ್ಟಿದ್ದಾರೆ ಈ ಮಹಿಳೆ!

ಇಲ್ಲೊಬ್ಬ ಮಹಿಳೆ ತನ್ನ ಈ ರಾಖಿ ಹಬ್ಬವನ್ನು ಸ್ವಲ್ಪ ವಿಶಿಷ್ಟವಾದ ರೀತಿಯಲ್ಲಿ ಆಚರಿಸಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ರಾಜಸ್ಥಾನದಲ್ಲಿ ಮಹಿಳೆಯೊಬ್ಬಳು ಚಿರತೆಗೆ ರಾಖಿ ಕಟ್ಟುತ್ತಿರುವ ಫೋಟೋವೊಂದು ಅಂತರ್ಜಾಲದಲ್ಲಿ ಜೋರಾಗಿಯೇ ಹರಿದಾಡುತ್ತಿದ್ದು, ನೆಟ್ಟಿಗರ ಹೃದಯವನ್ನು ಗೆಲ್ಲುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಚಿರತೆಗೆ ರಾಖಿ ಕಟ್ಟಿದ ಮಹಿಳೆ

ಚಿರತೆಗೆ ರಾಖಿ ಕಟ್ಟಿದ ಮಹಿಳೆ

  • Share this:

ಮೊನ್ನೆ ತಾನೇ ನಾವೆಲ್ಲಾ ರಾಖಿ (Rakhi) ಹಬ್ಬವನ್ನು ನಮ್ಮ ಸಹೋದರ ಮತ್ತು ಸಹೋದರಿಯರೊಂದಿಗೆ ಆಚರಿಸಿಕೊಂಡಿದ್ದೇವೆ. ಬಣ್ಣ ಬಣ್ಣದ ರಾಖಿಗಳನ್ನು ತಂದು ಅಕ್ಕ ತಂಗಿಯರು ತಮ್ಮ ಅಣ್ಣ ತಮ್ಮಂದಿರ ಕೈಗೆ ಕಟ್ಟಿ ಸಿಹಿ ತಿನ್ನಿಸಿ ಅವರಿಗೆ ಅರತಿಯನ್ನು ಬೆಳಗಿ, ನೂರು ಕಾಲ ಚೆನ್ನಾಗಿ ಬಾಳಿ ಅಂತ ಹೇಳಿ ಆಶೀರ್ವಾದ (Blessings) ಸಹ ನೀಡಿರುತ್ತಾರೆ. ಹಾಗೆಯೇ ರಾಖಿ ಕಟ್ಟಿಸಿಕೊಂಡ ಸಹೋದರರು (Brothers) ತಮ್ಮ ಸಹೋದರಿಯರಿಗೆ (Sisters) ತಮ್ಮ ಕೈಲಾದಷ್ಟು ಉಡುಗೊರೆಯನ್ನು ನೀಡಿ ಖುಷಿ ಪಡಿಸುತ್ತಾರೆ. ಇದು ನಾವು ಪ್ರತಿವರ್ಷ ಆಚರಿಸುವ ರಾಖಿ ಹಬ್ಬ ಮತ್ತು ಇದನ್ನು ನಾವು ಅನೇಕ ದಶಕಗಳಿಂದ ಆಚರಿಸಿಕೊಂಡು ಬಂದಿದ್ದೇವೆ.


ಚಿರತೆಗೆ ರಾಖಿ ಕಟ್ಟಿದ ಮಹಿಳೆ
ಆದರೆ ಇಲ್ಲೊಬ್ಬ ಮಹಿಳೆ ತನ್ನ ಈ ರಾಖಿ ಹಬ್ಬವನ್ನು ಸ್ವಲ್ಪ ವಿಶಿಷ್ಟವಾದ ರೀತಿಯಲ್ಲಿ ಆಚರಿಸಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ರಾಜಸ್ಥಾನದಲ್ಲಿ ಮಹಿಳೆಯೊಬ್ಬಳು ಚಿರತೆಗೆ ರಾಖಿ ಕಟ್ಟುತ್ತಿರುವ ಫೋಟೋವೊಂದು ಅಂತರ್ಜಾಲದಲ್ಲಿ ಜೋರಾಗಿಯೇ ಹರಿದಾಡುತ್ತಿದ್ದು, ನೆಟ್ಟಿಗರ ಹೃದಯವನ್ನು ಗೆಲ್ಲುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಅಯ್ಯೋ ದೇವರೇ.. ಇದೇನಿದು ಮಹಿಳೆಗೆ ಭಯಾನಕ ಪ್ರಾಣಿಯ ಬಗ್ಗೆ ಸ್ವಲ್ಪವೂ ಹೆದರಿಕೆ ಇಲ್ಲವೇ? ಅಂತ ನಿಮಗೆ ಅನ್ನಿಸಬಹುದು. ಆದರೆ ಪ್ರಾಣಿಯ ಬಗ್ಗೆ ಬೇಷರತ್ತಾದ ಪ್ರೀತಿ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಹೃದಯವನ್ನು ಗೆಲ್ಲುತ್ತಿದೆ ಎಂದು ಹೇಳಬಹುದು.


ಗುಲಾಬಿ ಬಣ್ಣದ ಸೀರೆಯುಟ್ಟ ಮಹಿಳೆ ತಮ್ಮ ತಲೆಯನ್ನು ಸೀರೆಯ ಸೆರಿಗಿನಿಂದ ಮುಚ್ಚಿಕೊಂಡು, ಗಾಯಗೊಂಡ ಚಿರತೆಯನ್ನು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕೆಲವೇ ಕ್ಷಣಗಳ ಮೊದಲು ರಾಖಿ ಕಟ್ಟುತ್ತಿರುವುದನ್ನು ನಾವೆಲ್ಲಾ ಈ ವೈರಲ್ ಆದ ಫೋಟೋದಲ್ಲಿ ನೋಡಬಹುದಾಗಿದೆ.


ಟ್ವಿಟ್ಟರ್ ನಲ್ಲಿ ಮಹಿಳೆಯ ಫೋಟೋ ವೈರಲ್ 
ಭಾರತೀಯ ಅರಣ್ಯ (ಐಎಫ್ಎಸ್) ಅಧಿಕಾರಿ ಸುಸಂತಾ ನಂದಾ ಅವರು ತಮ್ಮ ಟ್ವಿಟರ್ ಖಾತೆಯ ಪುಟದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು "ಯುಗಯುಗಗಳಿಂದ, ಭಾರತದಲ್ಲಿ ಮನುಷ್ಯ ಮತ್ತು ಪ್ರಾಣಿಗಳು ಪರಸ್ಪರರು ಬೇಷರತ್ತಾದ ಪ್ರೀತಿಯನ್ನು ಹೊಂದಿರುವುದು ಮತ್ತು ಸಾಮರಸ್ಯದಿಂದ ಬದುಕು ನಡೆಸುತ್ತಿದ್ದಾರೆ ಎಂದು ಹೇಳಬಹುದು. ರಾಜಸ್ಥಾನದಲ್ಲಿ, ಮಹಿಳೆಯೊಬ್ಬಳು ಗಾಯಗೊಂಡಿರುವ ಚಿರತೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೊದಲು ಅನಾರೋಗ್ಯ ಪೀಡಿತ ಚಿರತೆಗೆ ರಾಖಿಯನ್ನು ಕಟ್ಟುವ ಮೂಲಕ ಕಾಡು ಪ್ರಾಣಿಯ ಬೆಗ್ಗೆ ಇರುವ ಅನಿರ್ಬಂಧಿತ ಪ್ರೀತಿಯನ್ನು ತೋರಿಸಿದ್ದಾರೆ.


ಇದನ್ನೂ ಓದಿ: Viral News: ತನ್ನನ್ನು ಕಚ್ಚಿದ ಹಾವಿಗೆ ಕಚ್ಚಿ ಸೇಡು ತೀರಿಸಿದ 2 ವರ್ಷದ ಕಂದ, ಸತ್ತ ಉರಗ!ಈ ಫೋಟೋ ಹಂಚಿಕೊಂಡಾಗಿನಿಂದಲೂ ಈ ಪೋಸ್ಟ್ ಟ್ವಿಟರ್ ನಲ್ಲಿ 900ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಇಲ್ಲಿಯವರೆಗೆ 90ಕ್ಕೂ ಹೆಚ್ಚು ಬಳಕೆದಾರರು ಈ ಪೋಸ್ಟ್ ಅನ್ನು ಮರು ಟ್ವೀಟ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿನ ಮಹಿಳೆಯನ್ನು ಬಳಕೆದಾರರು ಸುತ್ತಮುತ್ತಲಿನ ಜನರಿಗೆ ಅಂತಹ ಅದ್ಭುತ ಸಂದೇಶವನ್ನು ನೀಡಿದ್ದಕ್ಕಾಗಿ ತುಂಬಾನೇ ಶ್ಲಾಘಿಸಿದ್ದಾರೆ.


ಫೋಟೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ
"ಅದು ಹೀಗೆಯೇ ಇರಬೇಕು. ನಾವು ಕಾಡುಗಳು ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕಾಗಿದೆ. ದೇವರು ಎಲ್ಲಾ ರೀತಿಯ ಜೀವನವನ್ನು ಸೃಷ್ಟಿಸಿದ್ದಾನೆ ಮತ್ತು ಜಗತ್ತು ಕೇವಲ ಮನುಷ್ಯರಿಗಾಗಿ ಮಾತ್ರವಲ್ಲ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.


ಇನ್ನೊಬ್ಬ ಬಳಕೆದಾರರು "ರಾಖಿ ಕಟ್ಟುವುದು ಸಾಂಕೇತಿಕವಾಗಿದೆ... ಪ್ರೀತಿ ಮತ್ತು ವಾತ್ಸಲ್ಯವು ತುಂಬಾ ಸುಂದರವಾಗಿದೆ... ಮಹಿಳೆ ಇಲ್ಲಿ ತೋರಿಸಿದಂತೆ ನಮ್ಮ ಕಾಡುಗಳನ್ನು ನೋಡಿಕೊಳ್ಳುವ ಎಲ್ಲಾ ಸಿಬ್ಬಂದಿಗೆ ದೊಡ್ಡ ಚಪ್ಪಾಳೆ" ಎಂದು ಕಾಮೆಂಟ್ ಮಾಡಿದ್ದಾರೆ. ನಂದಾ ಅವರು ಸಕ್ರಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದು, ಅವರು ಟ್ವಿಟರ್ ನಲ್ಲಿ ವನ್ಯಜೀವಿ ಸಂಬಂಧಿತ ವಿಷಯವನ್ನು ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ ಎಂದು ಹೇಳಬಹುದು.


ಇದನ್ನೂ ಓದಿ:  Viral Photos: ಕಾಡಿನ ರಾಜನ ಪರಿಸ್ಥಿತಿ ಹೇಗಿದೆ ನೋಡಿ, ಈ ಸಿಂಹಗಳ ಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತೆ!

ಇತ್ತೀಚೆಗೆ, ಅವರು ಹುಲಿಗಳ ಗುಂಪೊಂದು ನೀರಿನ ಹೊಳೆಯ ಬಳಿ ಆನಂದಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ನಾಲ್ಕು ಹುಲಿಗಳು ಕೊಳದಲ್ಲಿ ಲಂಗರು ಹಾಕುವುದರೊಂದಿಗೆ ವೀಡಿಯೋ ಪ್ರಾರಂಭವಾಯಿತು. ಇನ್ನೊಂದು ಹುಲಿ ಕುಳಿತುಕೊಳ್ಳಲು ಉತ್ತಮ ಸ್ಥಳವನ್ನು ಹುಡುಕುತ್ತಾ ತಿರುಗಾಡುತ್ತಿರುವುದು ಕಂಡು ಬಂದಿತು, ನಂತರ ಕೊಳದ ಮಧ್ಯದಲ್ಲಿ ಕಲ್ಲಿನ ಮೇಲೆ ತನ್ನ ಪಂಜವನ್ನು ಇಟ್ಟುಕೊಂಡು ಕುಳಿತಿರುವುದು ಕಂಡು ಬಂದಿತು.

Published by:Ashwini Prabhu
First published: