• Home
  • »
  • News
  • »
  • trend
  • »
  • Viral Video: ದಿಕ್ಕು ತೋಚದೆ ರಸ್ತೆ ಪಾಲಾಗಿದ್ದ ಹಾವು ರಕ್ಷಿಸಿದ ಮಹಿಳೆ, ವಿಡಿಯೋ ಸಿಕ್ಕಾಪಟ್ಟೆ ವೈರಲ್!​

Viral Video: ದಿಕ್ಕು ತೋಚದೆ ರಸ್ತೆ ಪಾಲಾಗಿದ್ದ ಹಾವು ರಕ್ಷಿಸಿದ ಮಹಿಳೆ, ವಿಡಿಯೋ ಸಿಕ್ಕಾಪಟ್ಟೆ ವೈರಲ್!​

ವೈರಲ್​ ವಿಡಿಯೋ

ವೈರಲ್​ ವಿಡಿಯೋ

ಮಹಿಳೆಯೊಬ್ಬರು ಹಾವನ್ನು ರಕ್ಷಿಸುತ್ತಿರುವ ವಿಡಿಯೋ ವೈರಲ್​ ಆಗ್ತಾ ಇದೆ. ಸಾಮಾನ್ಯರಲ್ಲಿ ಅಸಮಾನ್ಯ ಪ್ರತಿಭೆಯ ತುಣುಕನ್ನು ನೀವು ನೋಡಿ.

  • Share this:

ಪ್ರಪಂಚದಾದ್ಯಂತ (World) ಅನೇಕ ರೀತಿಯ ಹಾವುಗಳು ಕಂಡುಬರುತ್ತವೆ. ವರದಿಯ ಪ್ರಕಾರ ಇವುಗಳಲ್ಲಿ ಕೆಲವು ಹಾವುಗಳು ವಿಷಪೂರಿತವಾಗಿವೆ. ಇತರ ಹಾವುಗಳಲ್ಲಿ ವಿಷ ಇರುವುದಿಲ್ಲ. ಆದರೆ, ಈ ವಿಷಕಾರಿ ಹಾವುಗಳ ಬಗ್ಗೆ ತಿಳಿವಳಿಕೆ ಇಲ್ಲದ ಕಾರಣ ಹೆಚ್ಚಿನವರು ಹಾವುಗಳನ್ನು ಸಾಯಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ಕೆಲವು ಸ್ಥಳೀಯ ಸಹಾಯಕರು ಈ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಲು (Save) ನೋಡುತ್ತಾರೆ. ಹಾವುಗಳು ಇತರ ಸಾಮಾನ್ಯ ಪ್ರಾಣಿಗಳಂತೆ. ಅವುಗಳಿಗೆ ಏನಾದ್ರೂ ಭಯ ಆದಾಗ ಮಾತ್ರ ಅವುಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಮತ್ತೊಂದೆಡೆ, ಹಾವುಗಳಲ್ಲಿ (Snake) ಕಂಡುಬರುವ ವಿಷವು ಮನುಷ್ಯರನ್ನು ಸಹ ಕೊಲ್ಲುತ್ತದೆ. ಈ ಕಾರಣದಿಂದಲೇ ಮನುಷ್ಯ ಭಯದಿಂದ (Fear) ತನ್ನನ್ನು ರಕ್ಷಿಸಿಕೊಳ್ಳಲು ಹಾವುಗಳನ್ನು ಕೊಲ್ಲುತ್ತಾನೆ. ಸದ್ಯ ಪರಿಸ್ಥಿತಿ ಬದಲಾಗುತ್ತಿದ್ದು, ಹಲವೆಡೆ ಮನೆಗಳ ಸುತ್ತಮುತ್ತ ಹಾವು ಕಾಣಿಸಿಕೊಂಡಾಗ ಸ್ಥಳೀಯರು ಹಾವುಗಳನ್ನು ರಕ್ಷಿಸುತ್ತಿರುವುದು ಕಂಡು ಬರುತ್ತಿದೆ. 


ಹೀಗಾಗಿ ಹಾವು ಹಿಡಿಯಲೆಂದೇ ಅನೇಕ ತರಬೇತಿಗಳನ್ನು ನೀಡಿರುತ್ತಾರೆ. ಈ ರೀತಿಯ ಜನರು ಕೊನೆಗೆ ಹಾವಿನಿಂದ ಕಚ್ಚಿಸಿಕೊಂಡೇ ಸಾಯುತ್ತಾರಂತೆ.  ಹಾವನ್ನು ರಕ್ಷಿಸಿಬೇಕು ಅವುಗಳಿಗೆ ಯಾವುದೇ ಹಾನಿಯನ್ನು ಮಾಡಬಾರದು ಎಂದು ಕೆಲವೊಂದಿಷ್ಟು ಜನರಿಗೆ ಕನ್ಸರ್ನ್​ ಇದ್ರೆ, ಇನ್ನೂ ಕೆಲವರಿಗೆ ಹಾವುಗಳನ್ನು ಸಾಯಿಸಿದರೆ ಸರ್ಪ ದೋಷ ಬರುತ್ತದೆ ಎಂದು ನಂಬಿ ಅವುಗಳಿಗೆ  ಏನು ಮಾಡದೆ ಬಿಡುತ್ತಾರೆ. ಇವರೆಲ್ಲಾ ಒಂದು ಗುಂಪಾದ್ರೆ ಇನ್ನೊಂದು ರೀತಿಯ ಜನರು ಇರ್ತಾರೆ. ಹಾವನ್ನು ಸಾಯಿಸಿ, ಯಾವುದೇ ದೋಷ ಬರದೇ ಇರ್ಲಿ ಎಂದು ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತಾರೆ. ಇಂತಹ ಪ್ರಪಂಚಸಲ್ಲಿ ಪಾಪ ಪ್ರಾಣಿ ಪಕ್ಷಿಗಳು ಜೀವನ ನಡೆಸುತ್ತಿವೆ.


ಇದನ್ನೂ ಓದಿ: ಅನ್ನ ಹಾಕಿದ ಮನೆ ಮಾಲೀಕರನ್ನೇ ಕಚ್ಚಿ ಕೊಂದ ಶ್ವಾನ! ‘ನಿಯತ್ತು’ ಎಂಬ ಮಾತಿಗೇ ಅಪಚಾರ ತಂದಿತಾ ಈ ನಾಯಿ?


ಇದೀಗ ಇಂತದ್ದೇ  ಒಂದು ವಿಡಿಯೋ ವೈರಲ್​ ಆಗ್ತಾ ಇದೆ. ಇದರಲ್ಲಿ ಮಹಿಳೆಯೊಬ್ಬರು ಹಾವನ್ನು ರಕ್ಷಿಸುತ್ತಿದ್ದಾರೆ. ವಿಡಿಯೋದಲ್ಲಿ ಹಾವು ಕುಳಿತಿರುವುದನ್ನು ಕಾಣಬಹುದು.      ಏನನ್ನೋ ಊಹಾಲೋಕದಲ್ಲಿ ಸರ್ಪ ಮಗ್ನವಾಗಿದೆ. ಆದರೆ ಮುಂದೆ ನಿಂತಿದ್ದ ಬಾಲಕಿ ನಿರ್ಭಯವಾಗಿ ಹಾವನ್ನು ಹಿಡಿದು ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಹಾಕಿ ರಕ್ಷಿಸುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿದ ಸೋಷಿಯಲ್ ಮೀಡಿಯಾ ಬಳಕೆದಾರರು ಶಾಕ್ ಆಗಿದ್ದಾರೆ. ಅವಳು ಈ ಹಾವನ್ನು ಎಷ್ಟು ಸುಲಭವಾಗಿ ಹಿಡಿಯುತ್ತಾಳೆ ಎಂಬುದಕ್ಕೆ ನೀವು ಆಶ್ಚರ್ಯಚಕಿತರಾಗುತ್ತೀರಿ ಎಂದು ಹಾಕಿಕೊಂಡಿದ್ದಾರೆ.


@TheFigen_ ಹೆಸರಿನ ಟ್ವಿಟರ್ ಖಾತೆಯಿಂದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಕೂಡ ಬೆವರಿಳಿಸಿದ್ದಾರೆ. ವಿಡಿಯೋ ಬಂದ ಕೆಲವೇ ಸಮಯದಲ್ಲಿ 25 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಿದೆ. ಹಾಗಾಗಿ ಈ ವಿಡಿಯೋವನ್ನು 40 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿ ಹಲವಾರು ಜನರು ಹಾವನ್ನು ರಕ್ಷಿಸಿದ ಮಹಿಳೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ.


ಗಂಡಸರು ಮಾತ್ರ ಒಂದು ಕಾಲದಲ್ಲಿ ಈ ರೀತಿಯ ಕಾರ್ಯಗಳನ್ನು ಮಾಡುತ್ತಾ ಇದ್ದರು. ಇದೀಗ ಮಹಿಳೆಯು ಕೂಡ ತಾನು ಯಾರಿಗಿಂತಲೂ ಕಡಿಮೆ ಇಲ್ಲ ಎಂದು ಹಾವನ್ನು ಹಿಡಿದು ಬಾಕ್ಸ್​ನಲ್ಲಿ ಹಾಕಿದ್ದಾರೆ.


How to catch snake... Brave girl! pic.twitter.com/nxT0a5Jxfe



ಇತ್ತೀಚೆಗೆ ಬಿಡುಗಡೆಯಾದ ಗಂಧದಗುಡಿ ಸಿನಿಮಾದಲ್ಲೂ ಕೂಡ ಪುನೀತ್​ ರಾಜ್​ಕುಮಾರ್​ ಮತ್ತು ಅಮೋಘ ವರ್ಷರವರು ಇದೇ ಸಂದೇಶವನ್ನು ನೀಡಿದ್ದಾರೆ. " ಪ್ರಾಣಿಗಳಿಗೆ ನೀವು ಏನಾದ್ರು ಹಾನಿಯನ್ನು ಮಾಡಿದ್ರೆ ಮಾತ್ರ ಅವುಗಳು ನಮ್ಮ ಮೇಲೆ ಅಟ್ಯಾಕ್​ ಮಾಡೋದು ಅಥವಾ ಅವುಗಳಿಗೆ ಭಯ ಆದರೆ ಜನರಿಂದ ತಪ್ಪಿಸಿಕೊಳ್ಳಲು ಈ ರೀತಿಯಾಗಿ ಮಾಡುತ್ತವೆ, ಎಲ್ಲಾ ಜನರ ವರ್ತನೆಗಳ ಮೇಲೆ ಡಿಪೆಂಡ್" ಎಂದು ಹೇಳಿದ್ದಾರೆ.

First published: