ಹಣಕ್ಕಾಗಿ ಬ್ಯಾಂಕ್ ದರೋಡೆ (Bank Robbery) ಮಾಡುವವರದ್ದು ಒಂದು ಕಥೆಯಾದರೆ, ಇಲ್ಲೊಬ್ಬ ಮಹಿಳೆ ಬ್ಯಾಂಕ್ ನಲ್ಲಿ ಹಣ ದೋಚಿ ಅದನ್ನು ಬೇರೆ ರೀತಿಯಾಗಿಯೇ ಸಮರ್ಥಿಸಿಕೊಂಡಿದ್ದಾರೆ. ಬ್ಯಾಂಕ್ ದರೋಡೆ ಎಂದರೆ ಬೇರೆ ಯಾರದ್ದೋ ಹಣವನ್ನು ಕಳ್ಳರು ಕದಿಯುವುದು, ಆದರೆ ಈ ಮಹಿಳೆ (Women) ಬ್ಯಾಂಕ್ ನಲ್ಲಿ ನಾನು ಸಹ ಠೇವಣಿ ಇಟ್ಟಿದ್ದೇನೆ, ನನಗೆ ತುರ್ತಾಗಿ ಹಣ ಬೇಕಿರುವ ಕಾರಣ ಅದನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಹೌದು, ತಾನೇ ಇಟ್ಟ ಠೇವಣಿ ಹಣವನ್ನು (Deposit money) ತುರ್ತು ಪರಿಸ್ಥಿತಿಗಾಗಿ ಬ್ಯಾಂಕ್ ಗೆ ಬಂದು ಕದ್ದಿದ್ದಾರೆ. ಒಬ್ಬಂಟಿ ಮಹಿಳೆ ಈ ರೀತಿಯಾದ ಕೆಲಸ ಕೈಗೊಳ್ಳಲು ಕಾರಣವೇನು? ಏನದು ತುರ್ತು ಪರಿಸ್ಥಿತಿ? ಏಕೆ ಮಹಿಳೆ ಹಣ ಕದ್ದಿದ್ದಾರೆ ಎಂಬುದರ ವಿವರ ಇಲ್ಲಿದೆ.
ಬ್ಯಾಂಕಿಗೆ ಬಂದು ಹಣ ದೋಚಿದ ಮಹಿಳೆ
ಹೌದು, ಲೆಬನಾನಿನ ಸಲಿ ಹಫೀಜ್ ಎಂಬ ಮಹಿಳೆ ಬೈರುತಾ ಬ್ಯಾಂಕ್ ನಲ್ಲಿ ಸಾವಿರಾರು ಡಾಲರ್ ಹಣ ದೋಚಿಕೊಂಡು ಹೋಗಿದ್ದಾಳೆ. ಮಹಿಳೆಯ ಸಹೋದರಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸೆಗೆ ತುರ್ತು ಹಣ ಬೇಕಿದ್ದ ಕಾರಣ ಬ್ಯಾಂಕ್ ನಲ್ಲಿ ತಾನೇ ಹೂಡಿಟ್ಟ ಹಣವನ್ನು ಬ್ಯಾಂಕ್ ಬಿಡುಗಡೆ ಮಾಡುವವರೆಗೂ ಕಾಯಲು ಸಾಧ್ಯವಾಗದೇ ಇದ್ದ ಕಾರಣ ಆಕೆಯೇ ಹೋಗಿ ಬ್ಯಾಂಕ್ ನಲ್ಲಿ ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ.
ಸಲಿ ಹಫೀಜ್, ಬೈರುತ್ ನ ಬ್ಲೋಮ್ ಬ್ಯಾಂಕ್ ಶಾಖೆಯ ಮೇಲೆ ಮಾಡಿದ ದಾಳಿಯನ್ನು ಲೈವ್ ವಿಡಿಯೋ ಸಹ ಮಾಡಿದ್ದಾರೆ. ಮಹಿಳೆಯು ಗನ್ ಹಿಡಿದು ಕೆಲವು ಸಹಚರರೊಂದಿಗೆ ಬ್ಯಾಂಕ್ ಗೆ ಬಂದು ಹೆದರಿಸಿ ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ.
ಇದನ್ನೂ ಓದಿ: Weird Laws: ಈ ದೇಶದಲ್ಲಿ ಹೆಂಡತಿ ಬರ್ತ್ ಡೇ ಮರೆಯುವಂತಿಲ್ಲ; ಮಹಿಳೆಯರು, ಪುರುಷರ ಒಳ ಉಡುಪು ಒಟ್ಟಿಗೆ ಒಣಗಿಸುವಂತಿಲ್ಲ!
ಬ್ಯಾಂಕ್ ಗೆ ಬಂದು ಮಾಡಿದ ಲೈವ್ ವಿಡಿಯೋ
ಬ್ಯಾಂಕ್ ಗೆ ಬಂದು ಲೈವ್ ವಿಡಿಯೋ ಮಾಡಿರುವ ಹಫೀಜ್ ಈ ರೀತಿಯಾಗಿ ಹೇಳಿಕೊಂಡಿದ್ದಾರೆ. "ನಾನು ಸಲಿ ಹಫೀಜ್, ನಾನು ಆಸ್ಪತ್ರೆಯಲ್ಲಿ ಸಾಯುತ್ತಿರುವ ನನ್ನ ಸಹೋದರಿಯ ಠೇವಣಿ ತೆಗೆದುಕೊಳ್ಳಲು ಬಂದಿದ್ದೇನೆ. ಆಕೆ ಆಸ್ಪತ್ರೆಯಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ, ಅವಳ ಚಿಕಿತ್ಸೆಗೆ ಹಣ ಬೇಕಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ. "ನಾನು ಯಾರನ್ನೂ ಕೊಲ್ಲಲು ಅಥವಾ ಬೆಂಕಿ ಹಚ್ಚಲು ಬಂದಿಲ್ಲ, ನಾನು ನನ್ನ ಹಕ್ಕುಗಳನ್ನು ಪಡೆಯಲು ಬಂದಿದ್ದೇನೆ." ಎಂದು ಹೇಳಿಕೆಯಲ್ಲಿ ತಿಳಿಸಿದ್ದಾಳೆ.
Sally Hafiz stormed into her local bank with a gun in Beirut, along with other activists, to demand the sum of approximately 20k of her own money, held by the bank, to help with her sister's Cancer treatment. #Lebanon
pic.twitter.com/mQ15FcDbjM
— Luna Safwan - لونا صفوان (@LunaSafwan) September 14, 2022
ದರೋಡೆಯ ನಂತರ ಸ್ಥಳೀಯ ಬ್ರಾಡ್‌ಕಾಸ್ಟರ್‌ಗೆ ನೀಡಿದ ಸಂದರ್ಶನದಲ್ಲಿ, ಹಫೀಜ್ ಅವರು ತಮ್ಮ ಕುಟುಂಬವು ಬ್ಯಾಂಕ್ ನಲ್ಲಿ ಠೇವಣಿ ಮಾಡಿದ್ದಾರೆ. ನನ್ನ ಸಹೋದರಿಯ ಕ್ಯಾನ್ಸರ್ ಚಿಕಿತ್ಸೆಗೆ $ 50,000 ವೆಚ್ಚವಾಗುತ್ತದೆ. ಚಿಕಿತ್ಸೆಗೆ ಹೆಚ್ಚಿನ ಹಣವಿರುವ ಕಾರಣ ಅದನ್ನು ಹೊಂದಿಸಲು ಬ್ಯಾಂಕ್ ನಲ್ಲಿ ಹಣವನ್ನು ತೆಗೆದುಕೊಂಡು ಬಂದಿದ್ದಾಗಿ ತಿಳಿಸಿದ್ದಾಳೆ.
ಘಟನಾ ಸ್ಥಳದಲ್ಲಿದ್ದ ವರದಿಗಾರ ಏನು ಹೇಳಿದ್ದಾರೆ
ಘಟನಾ ಸ್ಥಳದಲ್ಲಿದ್ದ ಎಎಫ್‌ಪಿ ವರದಿಗಾರರೊಬ್ಬರು, ಒಂದು ಗಂಟೆಯೊಳಗೆ ನಡೆದ ದರೋಡೆಯ ಸಮಯದಲ್ಲಿ ಬ್ಯಾಂಕಿನೊಳಗೆ ಗ್ಯಾಸೋಲಿನ್ ಸುರಿಯಲಾಯಿತು ಎಂದು ಹೇಳಿದರು. ಹಫೀಜ್ ತನ್ನ ಸೋದರಳಿಯನ ಆಟಿಕೆ ಪಿಸ್ತೂಲ್ ಅನ್ನು ಹಿಡಿದುಕೊಂಡು ಬಂದಿದ್ದಳು ಎಂದು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ: Amritsar Woman: ಡ್ರಗ್ಸ್ ನಶೆಯಲ್ಲಿ ತೇಲಾಟ, ಹೆಜ್ಜೆ ಇಡಲಾಗದೇ ಪರದಾಟ! ನಡು ರಸ್ತೆಯಲ್ಲಿ ಯುವತಿ ಹೈಡ್ರಾಮಾ
ಭದ್ರತಾ ಪಡೆಗಳು ಆಗಮಿಸುವ ಮೊದಲು ಹಫೀಜ್ ಮತ್ತು ಶಂಕಿತ ಸಹಚರರು ಬ್ಯಾಂಕಿನ ಹಿಂಭಾಗದಿಂದ ಒಡೆದ ಕಿಟಕಿಯ ಮೂಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಎಎಫ್‌ಪಿ ವರದಿಗಾರ ತಿಳಿಸಿದ್ದಾರೆ.
ಸಲಿ ಹಫೀಜ್ ಯಾರು
ಹಫೀಜ್ 28 ವರ್ಷ ವಯಸ್ಸಿನವಳಾಗಿದ್ದು, ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕೆಯ ಸಹೋದರಿ ಝೀನಾ ತಿಳಿಸಿದ್ದಾರೆ. ದರೋಡೆಯ ನಂತರ ಕುಟುಂಬವು ಹಫೀಜ್‌ನೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಅವರು ಹೇಳಿದರು. ಗನ್ ಹಿಡಿದುಕೊಂಡು ಬ್ಯಾಂಕಿನೊಳಗೆ ಹಫೀಜಾ ಮೇಜಿನ ಮೇಲೆ ನಿಂತಿರುವ ಚಿತ್ರಗಳು ಮತ್ತು ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಟ್ವಿಟ್ಟರ್ ಬಳಕೆದಾರರು ಈ ಫೋಟೋಗಳಿಗೆ ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ