Gold: ಬ್ರೆಡ್‌ನ ಬದಲು ಚಿನ್ನ ಕೊಟ್ಟ ಮಹಿಳೆ, ಗಟ್ಟಿಯಾಗಿದೆ ತಿನ್ನೋದಕ್ಕೆ ಆಗಲ್ಲ ಅಂತ ಎಸೆದು ಹೋದ ಭಿಕ್ಷುಕಿ!

ಮಹಿಳೆಯೊಬ್ಬಳು ಭಿಕ್ಷುಕಿಗೆ ಭಿಕ್ಷೆ ಕೊಡೋದಕ್ಕೆ ಹೋಗಿ ಯಡವಟ್ಟು ಮಾಡಿಕೊಂಡಿದ್ದಾಳೆ. ತನ್ನ ಎದುರಿಗೆ ಬಂದು ನಿಂತ ಭಿಕ್ಷುಕಿಗೆ ಬ್ರೇಡ್ ಅಂತ ತಿಳಿದು ಇನ್ನೇನೋ ಅಮೂಲ್ಯ ವಸ್ತುವನ್ನು ಕೊಟ್ಟಿದ್ದಾಳೆ. ತನ್ನ ತಟ್ಟೆಗೆ ಬಿದ್ದ ವಸ್ತು ಗಟ್ಟಿಯಾಗಿದೆ, ಇದನ್ನ ಹೇಗೆ ತಿನ್ನೋದು ಅಂತ ಮನಸ್ಸಿನಲ್ಲೇ ಬೈಯ್ದುಕೊಳ್ಳುತ್ತಾ ಅದನ್ನು ತಿಪ್ಪೆಗೆ ಎಸೆದು ಮುಂದಕ್ಕೆ ಹೋಗಿದ್ದಾಳೆ. ಅಂದಹಾಗೆ ಅದು ಬ್ರೆಡ್ ಅಲ್ಲ, ಚಿನ್ನದ ಬಿಸ್ಕತ್ತು!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಮುಂಬೈ: ಮನೆಗೆ ಭಿಕ್ಷುಕರು (Beggars) ಬಂದು, “ಅಮ್ಮಾ ಭಿಕ್ಷೆ ಕೊಡಿ, ತಿನ್ನೋದಕ್ಕೆ ಏನಾದ್ರೂ ಕೊಡಿ” ಅನ್ನೋದು ಕಾಮನ್. ಹೀಗೆ ಮನೆ ಬಾಗಿಲಿಗೆ ತಟ್ಟೆ ಹಿಡಿದು ಬಂದ ಭಿಕ್ಷುಕರನ್ನು ಬರಿಗೈಯಲ್ಲಿ ಕಳಿಸೋ ಸಂಪ್ರದಾಯ ನಮ್ಮಲ್ಲಿಲ್ಲ. ಹೀಗಾಗಿ ಹಸಿವು (Hungry), ಭಿಕ್ಷೆ ಕೊಡಿ ಅಂತ ಬಂದ ಭಿಕ್ಷುಕರಿಗೆ ತಿನ್ನೋದಕ್ಕೆ ಆಹಾರವನ್ನೋ (Food), ಒಂದೆರಡು ಕಾಸು ಹಣವನ್ನೋ (Money) ಕೊಟ್ಟು ಕಳಿಸೋದು ರೂಢಿ. ಆದರೆ ಇಲ್ಲಿ ಮಹಿಳೆಯೊಬ್ಬಳು ಭಿಕ್ಷುಕಿಗೆ ಭಿಕ್ಷೆ ಕೊಡೋದಕ್ಕೆ ಹೋಗಿ ಯಡವಟ್ಟು ಮಾಡಿಕೊಂಡಿದ್ದಾಳೆ. ಈ ಮಹಿಳೆ ಅದ್ಯಾವ ಅವಸರದಲ್ಲಿ ಇದ್ದಳೋ ಏನೋ, ಏನಾದ್ರೂ ಕೊಡಿ ಎಂದ ಭಿಕ್ಷುಕಿಗೆ ಬ್ರೇಡ್ (Bread) ಅಂತ ತಿಳಿದು ಇನ್ನೇನೋ ಅಮೂಲ್ಯ ವಸ್ತುವನ್ನು ಕೊಟ್ಟು ತನ್ನ ಕೆಲಸದಲ್ಲಿ ತೊಡಗಿದ್ದಾಳೆ. ತನ್ನ ತಟ್ಟೆಗೆ ಬಿದ್ದ ವಸ್ತುವನ್ನು ಮೂಸಿ ನೋಡಿ, ಕೈಯಲ್ಲಿ ಹಿಡಿದು ಪರೀಕ್ಷಿಸಿದ ಭಿಕ್ಷುಕಿ, ಇದು ಗಟ್ಟಿಯಾಗಿದೆ, ಇದನ್ನ ಹೇಗೆ ತಿನ್ನೋದು ಅಂತ ಮನಸ್ಸಿನಲ್ಲೇ ಬೈಯ್ದುಕೊಳ್ಳುತ್ತಾ ಅದನ್ನು ತಿಪ್ಪೆಗೆ (Dustbeen) ಎಸೆದು ಮುಂದಕ್ಕೆ ಹೋಗಿದ್ದಾಳೆ. ಅಂದಹಾಗೆ ಆ ಮಹಿಳೆ ಕೊಟ್ಟ ವಸ್ತು, ಭಿಕ್ಷುಕಿ ಇದನ್ನು ತಿನ್ನೋಕೆ ಆಗೋದಿಲ್ಲ ಅಂತ ಎಸೆದ ವಸ್ತು ಬ್ರೆಡ್ ಅಲ್ಲ, ಚಿನ್ನದ ಬಿಸ್ಕತ್ತು (Gold Biscuit)!

 ಕಸದ ತೊಟ್ಟಿಯಲ್ಲಿ ಬಿದ್ದಿತ್ತು ಬಂಗಾರದ ಬಿಸ್ಕತ್ತು!

ಗುರುವಾರ ಜೂನ್ 16 ರಂದು ಮುಂಬೈ ಪೊಲೀಸರು ಮುಂಬೈನ ಗೋಕುಲಧಾಮ್ ಕಾಲೋನಿ ಬಳಿಯ ಕಸದ ತೊಟ್ಟಿಯಲ್ಲಿ ಇಲಿಗಳ ಹಿಡಿತದಲ್ಲಿದ್ದ ಬರೋಬರಿ 5 ಲಕ್ಷ ರೂಪಾಯಿ ಮೌಲ್ಯದ  100 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು. ನಂತರ ಅದನ್ನು ಪೊಲೀಸರು ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

ಬ್ರೆಡ್ ಎಂದು ತಿಳಿದು ಚಿನ್ನದ ಗಟ್ಟಿ ಕೊಟ್ಟ ಮಹಿಳೆ

ಮುಂಬೈನಲ್ಲಿ ವಾಸಿಸುತ್ತಿದ್ದ ಸುಂದರಿ ಎಂಬ ಮಹಿಳೆ ಈ ರೀತಿ ಬ್ರೆಡ್ ಅಂತ ತಿಳಿದು ಚಿನ್ನದ ಗಟ್ಟಿ ಕೊಟ್ಟು ಯಡವಟ್ಟು ಮಾಡಿಕೊಂಡಿದ್ದಳು. ಈಕೆ ತನ್ನ ಮಗಳ ಮದುವೆಗಾಗಿ ತನ್ನ ಚಿನ್ನವನ್ನು ಬ್ಯಾಂಕ್‌ನಲ್ಲಿ ಅಡಮಾನ ಇಡಲು ಹೋಗುತ್ತಿದ್ದರು. ಈ ವೇಳೆ ದಾರಿಯಲ್ಲಿ ಭಿಕ್ಷುಕಿಯೊಬ್ಬಳು ಸಿಕ್ಕಿ, ಭಿಕ್ಷೆ ಕೇಳಿದ್ದಾಳೆ. ಆಗ ಅವಸರದಲ್ಲಿದ್ದ ಮಹಿಳೆ ತನ್ನ ಬ್ಯಾಗ್‌ನಲ್ಲಿದ್ದ ಚಿನ್ನದ ಗಟ್ಟಿಯನ್ನು ಬ್ರೆಡ್ ಎಂದು ತಪ್ಪಾಗಿ ಭಾವಿಸಿ, ಭಿಕ್ಷುಕಿಗೆ ಅದನ್ನು ಕೊಟ್ಟಿದ್ದಾಳೆ.

ಇದನ್ನೂ ಓದಿ: Beard Boys: ಗಡ್ಡ ಬಿಟ್ಟ ಗಂಡಸಿಗೆ ಡಿಮ್ಯಾಂಡಿಲ್ಲ ಡಿಮ್ಯಾಂಡು! ಇಲ್ಲಿ ಗಡ್ಡಪ್ಪಂದಿರ ಮದ್ವೆಗೆ ಹೆಣ್ಣೇ ಕೊಡೋದಿಲ್ಲ!

ಚಿನ್ನವನ್ನು ಕಸದ ಬುಟ್ಟಿಗೆ ಎಸೆದು ಹೋದ ಭಿಕ್ಷುಕಿ!

ಮಕ್ಕಳೊಂದಿಗೆ ಬಂದಿದ್ದ ಆ ಭಿಕ್ಷುಕಿ ಚಿನ್ನದ ಗಟ್ಟಿ ಹಿಡಿದು ಪರೀಕ್ಷೆ ಮಾಡಿದ್ದಾಳೆ. ಗಟ್ಟಿಯಾಗಿರುವ, ಯಾವುದೇ ವಾಸನೆ ಇಲ್ಲದ ಅದು ಏನೆಂದೇ ಆಕೆಗೆ ತಿಳಿಯಲಿಲ್ಲ. ಹೀಗಾಗಿ ಇದು ತಿನ್ನೋದಕ್ಕೆ ಬಾರದ ಒಣ ಬ್ರೆಡ್ ಅಂತ ತಿಳಿದುಕೊಂಡಿದ್ದಾಳೆ. ಇದನ್ನು ತಿನ್ನೋದಕ್ಕೆ ಆಗೋದಿಲ್ಲ ಅಂತ ಕಸದ ಬುಟ್ಟಿಗೆ ಎಸೆದು ಹೋಗಿದ್ದಾಳೆ.

ಬ್ಯಾಂಕ್‌ಗೆ ಹೋದಾಗ ನಡೆದ ಪ್ರಮಾದದ ಅರಿವು

ಇತ್ತ ಬ್ಯಾಂಕ್‌ಗೆ ಚಿನ್ನ ಅಡಮಾನ ಇಡಲು ಬಂದ ಮಹಿಳೆಗೆ ತಾನು ಭಿಕ್ಷುಕನಿಗೆ ನೀಡಿರುವುದು ಚಿನ್ನ ಬ್ರೆಡ್‌ ಅಲ್ಲ ಎಂಬುದರ ಅರಿವಾಗಿದೆ. ಕೂಡಲೇ ಆಕೆ ತನ್ನ ಮಗನೊಂದಿಗೆ  ಭಿಕ್ಷುಕಿ ಸಿಕ್ಕಿದ್ದ ಸ್ಥಳಕ್ಕೆ ಓಡೋಡಿ ಬಂದಿದ್ದಾಳೆ. ಆದರೆ ಆ ವೇಳೆಗೆ ಭಿಕ್ಷುಕಿ ಅಲ್ಲಿರಲಿಲ್ಲ. ಹೀಗಾಗಿ ಭಯಗೊಂಡ ಆಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ: Breaking News: ಹಲ್ಲಿನ ಚಿಕಿತ್ಸೆಗೆ ಅಂತ ಹೋದವಳ ಮುಖವೇ ವಿರೂಪವಾಗಿ ಹೋಯ್ತು! ನಟಿ ಬಾಳಲ್ಲಿ ವಿಲನ್ ಆದ ಡಾಕ್ಟರ್

ಇಲಿಗಳ ಬಾಯಲ್ಲಿತ್ತು ಚಿನ್ನದ ಗಟ್ಟಿ!

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿ ಕ್ಯಾಮೆರಾ ಸಹಾಯದಿಂದ ಭಿಕ್ಷುಕಿಯನ್ನು ಗುರುತಿಸಿ, ಆಕೆಯ ವಿಚಾರಣೆ ನಡೆಸಿದರು. ಆಗ ತಾನು ಅದನ್ನು ತಿಪ್ಪೆಗೆ ಎಸೆದಿದ್ದಾಗಿ ಹೇಳಿದ್ದಾಳೆ. ಇಲಿಗಳು ಚಿನ್ನಾಭರಣವನ್ನು ಗಟಾರಕ್ಕೆ ತಂದು ಅದರೊಂದಿಗೆ ಒಣಗಿದ ರೊಟ್ಟಿಯನ್ನು ತಿನ್ನುತ್ತಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿತ್ತು. ಕೂಡಲೇ ಇಲಿಗಳ ಬಾಯಿಂದ ಚಿನ್ನ ಕಸಿದುಕೊಂಡ ಪೊಲೀಸರು ಅದನ್ನು ಆ ಮಹಿಳೆಗೆ ಹಿಂದಿರುಗಿಸಿದ್ದಾರೆ.
Published by:Annappa Achari
First published: