ಬೇಸಿಗೆ (Summer Season) ಬಂತೆಂದರೆ ಸಾಕು ಸೆಖೆಯೋ ಸೆಖೆ. ಎಷ್ಟು ಜ್ಯೂಸ್ ಕುಡಿದ್ರು ಕೂಡ ಸಾಕಾಗೋದಿಲ್ಲ. ಹೀಗೆಯೇ ಜೀವಿ ಸಂಕುಲಗಳು ಕೂಡ ಆಹಾರ, ನೀರನ್ನು ಅರಸುತ್ತಾ ಒಂದು ಸ್ಥಳದಿಂದ (Place) ಇನ್ನೊಂದು ಸ್ಥಳಕ್ಕೆ ಬರುತ್ತೆ. ಹೀಗೆ ಬಂದಂತಹ ಜೀವಿಗಳಲ್ಲಿ ಪ್ರಮುಖವಾಗಿ ಹಾವು ಕೂಡ ಒಂದು. ಅದ್ರಲ್ಲೂ ಈ ಹಾವುಗಳು ಹಳ್ಳಿ ಬದಿಯಲ್ಲಿ ಹೆಚ್ಚಾಗಿ ಓಡಾಡುತ್ತವೆ. ಹಂಚಿನ ಮನೆಗಳು ಇದ್ರೆ ಒಳಗೆ ಬಂದು ತಂಪಾಗಿ ಮಲಗಿರುತ್ತದೆ. ಹೀಗಾಗಿ ಹಾವನ್ನು ಜನರು ಓಡಿಸಲು ಬರುತ್ತಾರೆ. ಆದರೆ, ಯಾವುದೇ ಕಾರಣಕ್ಕೂ ಅದನ್ನು ಬಡಿದು ಹೊಡೆದು ಸಾಯಿಸಬಾರದು. ಉರಗ ತಜ್ಞರಲ್ಲಿ ಹೇಳಿ ಆ ಹಾವನ್ನು (Snake) ಹಿಡಿಸಬೇಕು. ಇದೀಗ ಅಂತದ್ದೇ ಒಂದು ವಿಷಯ ವೈರಲ್ (Viral) ಆಗ್ತಾ ಇದೆ.
ಕೇವಲ ಹಳ್ಳಿ ಪ್ರದೇಶಗಳಲ್ಲಿ ಮಾತ್ರವಲ್ಲ. ಸಿಟಿ ಪ್ರದೇಶಗಳಲ್ಲಿಯೂ ಹಾವು ಬರುತ್ತೆ ಗೊತ್ತಾ? ಸುಳ್ಳಲ್ಲ. ಕಾಡುಗಳನ್ನು ನಾಶ ಮಾಡಿ ಆ ಸ್ಥಳಗಳನ್ನು ಮನುಷ್ಯರು ಆವರಿಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಜೀವಿಗಳು ಏನು ಮಾಡುತ್ತೆ ಪಾಪ. ಅವುಗಳು ತಮ್ಮ ಆವಸ್ಥಾನವನ್ನು ಹುಡುಕಿಕೊಂಡು ಬರುತ್ತದೆ. ಹೀಗೆ ಬಂದಾಗ ಜನರು ಹೆದರುತ್ತಾರೆ ಮತ್ತು ಅದಕ್ಕೆ ಹೊಡೆಯೋದು ಬಡಿಯೋದು ಎಲ್ಲಾ ಮಾಡುತ್ತಾರೆ.
ಇದನ್ನೂ ಓದಿ: ಎಂತ ಕಾಲ ಬಂತಪ್ಪಾ! ಅಜ್ಜನ ಅಂತ್ಯಕ್ರಿಯೆ ವಿಡಿಯೋ ಪೋಸ್ಟ್ ಮಾಡಿದ ಯೂಟ್ಯೂಬರ್
ಅದೇ ರೀತಿ ಆಸ್ಟ್ರೇಲಿಯಾ ಕ್ವೀನ್ಸ್ಲ್ಯಾಂಡ್ನಲ್ಲಿ ಮನೆಯೊಂದಕ್ಕೆ ಹೊಕ್ಕಿದ ಅತ್ಯಂತ ವಿಷಕಾರಿ ಹಾವು ನುಗ್ಗಿದ್ದು, ಮಹಿಳೆಯ ಬೆಡ್‌ರೂಮ್ ಹಾಸಿಗೆಯಲ್ಲೇ ಮಲಗಿದ್ದ ದೃಶ್ಯ ಕಂಡುಬಂದಿದೆ. ಹಾವು ಸುಮಾರು 6 ಅಡಿ ಉದ್ಧ ಇತ್ತು ಎಂದು ಹೇಳಲಾಗಿದೆ. ತನ್ನ ಹಾಸಿಗೆ ಮೇಲೆ ಮಲಗಿದ್ದ ಹಾವನ್ನು ಕಂಡೊಡನೆ ಮಹಿಳೆ ಎದ್ನೋ ಬಿದ್ನೋ ಅಂತಾ ಓಡಿಬಂದಿದ್ದಾಳೆ.
ಇದನ್ನೂ ಓದಿ: ಮಹಿಳೆಯರು ಉಡುವ ಈ ಪ್ರಸಿದ್ಧ ಸೀರೆಗಳನ್ನು ತಯಾರಿಸಲು ಎಷ್ಟುದಿನ ಬೇಕು ಗೊತ್ತಾ? ಇಲ್ಲಿದೆ ನೋಡಿ ವಿವರ
ತಕ್ಷಣ ಬಾಗಿಲು ಹಾಕಿಕೊಂಡು ಹಾವು ಹೊರಕ್ಕೆ ಹೋಗದಂತೆ ತಡೆದಿದ್ದಾಳೆ. ಬಾಗಿಲು ಸಂದಿಯನ್ನು ಟವೆಲ್‌ನಿಂದ ಮುಚ್ಚಿದ್ದಾಳೆ. ನಂತರ ಸ್ಥಳೀಯ ಉರಗ ರಕ್ಷಕರೊಬ್ಬರಿಗೆ ಕರೆ ಮಾಡಿ ಬರಲು ಹೇಳಿದ್ದು, ಹಾವನ್ನು ರಕ್ಷಣೆ ಮಾಡಿದ ನಂತರ ಮಹಿಳೆ ತನ್ನ ರೂಮಿಗೆ ಪ್ರವೇಶ ಮಾಡಿದ್ದಾಳೆ.
ಸದ್ಯಕ್ಕೆ ಈ ಹಾವಂತೂ ಸಖತ್ ಸೋಶಿಯಲ್ ಮೀಡಿಯಾದಲ್ಲಿ ಸದ್ಧನ್ನು ಮಾಡ್ತಾ ಇದೆ. ಯಾವ ಪ್ರಾಣಿಯಾದ್ರೂ ಆಗಬಹುದು. ಈ ಹಾವುಗಳು ಬರೋದು ಅಂದ್ರೆ ಒಂದು ರೀತಿಯಾಗಿ ಭಯ ಅಲ್ವಾ? ಹಾವಿನಿಂದ ಈ ರೀತಿಯಾಗಿ ನೀವು ಪಾರಾಗಬಹುದು.
ಇದನ್ನೂ ಓದಿ: ಕಪಲ್ ಕಿಸ್ ಮಾಡುವಾಗ ಕಣ್ಣು ಮುಚ್ಚಿಕೊಳ್ಳೋದು ಏಕೆ?
ಮನೆಯೆದುರು ಗಾರ್ಡನ್ ಇದ್ದರೆ, ಅಲ್ಲಿರುವ ಒಳಹುಲ್ಲಿನ ರಾಶಿ, ಎತ್ತರದ ಹುಲ್ಲು ಕತ್ತರಿಸಿ ಮಟ್ಟಸ ಮಾಡಿ. ಎಲೆ ರಾಶಿ ಮತ್ತು ಕೊಳೆತ ಹುಲ್ಲು ಇಲಿಗಳಿಗೆ ಆವಾಸ. ಮನೆಯಲ್ಲಿ ಹಕ್ಕಿ ಸಾಕುತ್ತೀರಾ? ಹಕ್ಕಿ ಮೊಟ್ಟೆಗಳಿಗೆ ಹಾವುಗಳು ಆಕರ್ಷಿತವಾಗುತ್ತವೆ. ಹಕ್ಕಿಗಳು ಕೆಳಗೆ ಚೆಲ್ಲುವ ಆಹಾರದತ್ತ ಇಲಿಗಳು, ಅವುಗಳ ಮೂಲಕ ಹಾವುಗಳು ಆಕರ್ಷಿತವಾಗುತ್ತವೆ.
ಸ್ವಿಮ್ಮಿಂಗ್ ಪೂಲ್ ಇದ್ದಲ್ಲಿ ಹುಷಾರಾಗಿರಬೇಕು. ಇದರಲ್ಲಿರುವ ನೀರಿಗೂ ತಂಪಿಗೂ ಕಪ್ಪೆ- ಇಲಿ ಆ ಮೂಲಕ ಹಾವುಗಳು ಆಕರ್ಷಿತ ಆಗಬಹುದು. ಒಂದು ವೇಳೆ ಹಾವು ಮನೆಯೊಳಗೆ ಬಂದಿದ್ದರೆ, ಅದು ವಿಷಪೂರಿತ ಎಂದು ಗೊತ್ತಾದರೆ ತಕ್ಷ ಣವೇ ಹಾವು ಹಿಡಿಯುವವರಿಗೆ ಕರೆ ಮಾಡಿ. ಅದು ವಿಷಕಾರಿಯಲ್ಲದ ಹಾವು ಎಂದು ನಿಮಗೆ ಖಚಿತವಾಗಿ ತಿಳಿದಿದ್ದರೆ ಮಾತ್ರ ಅದನ್ನು ಹೊರಹಾಕಲು ನೀವೇ ಮುಂದಾಗಬಹುದು.
ಒಂದು ಹೋಸ್ ಪೈಪ್ ತೆಗೆದುಕೊಂಡು ಜೋರಾಗಿ ನೀರು ಚಿಮ್ಮುವ ಮೂಲಕ ಅದನ್ನು ಹೊರ ಹಾಕಬಹುದು.ಹಾವುಗಳು ಅಮೋನಿಯ ವಾಸನೆಯನ್ನು ದ್ವೇಷಿಸುತ್ತವೆ. ಅದರ ಹತ್ತಿರ ಬರುವುದಿಲ್ಲ. ಬಟ್ಟೆ ಚಿಂದಿಗಳನ್ನು ಅಮೋನಿಯದಲ್ಲಿ ನೆನೆಸಿ ಮತ್ತು ಅವುಗಳನ್ನು ತೆರೆದ ಪ್ಲಾಸ್ಟಿಕ್ ಚೀಲದಲ್ಲಿ ಇಡಿ. ಸಾಮಾನ್ಯವಾಗಿ ಹಾವುಗಳು ಕಂಡುಬರುವ ಜಾಗದಲ್ಲಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ