• Home
  • »
  • News
  • »
  • trend
  • »
  • Viral Video: ಏರ್‌ಪೋರ್ಟ್‌ಗೆ ಬಂದ ಶ್ರೀರಾಮ, ಕಾಲಿಗೆರಗಿ ನಮಸ್ಕರಿಸಿದ ಮಹಿಳೆ! ಭಕ್ತಿಪೂರ್ವಕ ದೃಶ್ಯ ನೀವೂ ನೋಡಿ

Viral Video: ಏರ್‌ಪೋರ್ಟ್‌ಗೆ ಬಂದ ಶ್ರೀರಾಮ, ಕಾಲಿಗೆರಗಿ ನಮಸ್ಕರಿಸಿದ ಮಹಿಳೆ! ಭಕ್ತಿಪೂರ್ವಕ ದೃಶ್ಯ ನೀವೂ ನೋಡಿ

ರಾಮಯಣದಲ್ಲಿ ಶ್ರೀರಾಮನ ಪಾತ್ರಧಾನಿ ಅರುಣ್ ಗೋವಿಲ್

ರಾಮಯಣದಲ್ಲಿ ಶ್ರೀರಾಮನ ಪಾತ್ರಧಾನಿ ಅರುಣ್ ಗೋವಿಲ್

ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಶ್ರೀರಾಮನ ಪಾತ್ರಧಾರಿ, ನಟ ಅರುಣ್ ಗೋವಿಲ್ ಕಾಲಿಗೆ ನಮಸ್ಕರಿಸಿದ್ದಾಳೆ. ಅರುಣ್ ಗೋವಿಲ್, ಅವರು ಇತ್ತೀಚೆಗೆ ವಿಮಾನ ನಿಲ್ದಾಣವೊಂದರಲ್ಲಿ ಇದ್ದಾಗ, ಅವರ ಬಳಿಗೆ ಆಗಮಿಸಿದ ದಂಪತಿಗಳು ಅವರಿಗೆ ನಮಸ್ಕರಿಸಿದ್ದಾರೆ.

  • Share this:

ನವದೆಹಲಿ: ರಾಮಾಯಣ ಧಾರಾವಾಹಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಕಳೆದ 35 ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ ಅದು. 80–90ರ ದಶಕದಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದವು. ರಮಾನಂದ್ ಸಾಗರ್ ನಿರ್ಮಾಣದ ಈ ಅಧ್ಧೂರಿ ಧಾರಾವಾಹಿಯಲ್ಲಿ ನಟ ಅರುಣ್ ಗೋವಿಲ್ ರಾಮನಾಗಿ ಮಿಂಚಿದ್ದರು. ಈ ಧಾರಾವಾಹಿ ಜನಪ್ರಿಯತೆ ಎಷ್ಟಿದೆ ಎಂದರೆ ಕಳೆದ ಬಾರಿ ಲಾಕ್‌ ಡೌನ್ ಸಮಯದಲ್ಲಿ ಇದನ್ನು ಮರು ಪ್ರಸಾರ ಮಾಡಲಾಯ್ತು. ಪ್ರಪಂಚದಲ್ಲೇ ಮನರಂಜನೆ ವಿಭಾಗದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಧಾರಾವಾಹಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಕಳೆದ ಏಪ್ರಿಲ್‌ 16ರಂದು ರಾತ್ರಿ 9 ಗಂಟೆಗೆ ಪ್ರಸಾರವಾದ ರಾಮಾಯಣ ಧಾರವಾಹಿಯನ್ನು ಭಾರತ ಸೇರಿದಂತೆ ಪ್ರಪಂಚದಾದ್ಯಂತ 7.7 ಕೋಟಿ ಜನರು ವೀಕ್ಷಿಸಿರುವುದು ವಿಶ್ವದಾಖಲೆಯಾಗಿತ್ತು. ಇದೀಗ ಅರುಣ್ ಗೋವಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.


ಅರುಣ್ ಗೋವಿಲ್ ಕಾಲಿಗೆ ನಮಸ್ಕರಿಸಿದ ಮಹಿಳೆ


ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಶ್ರೀರಾಮನ ಪಾತ್ರಧಾರಿ, ನಟ ಅರುಣ್ ಗೋವಿಲ್ ಕಾಲಿಗೆ ನಮಸ್ಕರಿಸಿದ್ದಾಳೆ. ಅರುಣ್ ಗೋವಿಲ್, ಅವರು ಇತ್ತೀಚೆಗೆ ವಿಮಾನ ನಿಲ್ದಾಣವೊಂದರಲ್ಲಿ ಇದ್ದಾಗ, ಅವರ ಬಳಿಗೆ ಆಗಮಿಸಿದ ದಂಪತಿಗಳು ಅವರಿಗೆ ನಮಸ್ಕರಿಸಿದ್ದಾರೆ. ಅದರಲ್ಲೂ, ಮಹಿಳೆಯೊಬ್ಬರು ಅವರಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ.ಮಹಿಳೆಗೆ ಶಾಲು ಹೊದೆಸಿದ ಅರುಣ್ ಗೋವಿಲ್


ರಾಮನ ಪಾತ್ರ ಮಾಡಿದ ಬಳಿಕ ನಟ ಅರುಣ್ ಗೋವಿಲ್ ಅವರನ್ನು ಜನರು ಈ ತರ ಗೌರವಿಸುತ್ತಿರುವುದು ಇದೇ ಮೊದಲೇನಲ್ಲ. ಹೀಗಾಗಿ ಇದನ್ನು ಸಹಜವಾಗಿ ಸ್ವೀಕರಿಸಿದ ಅರುಣ್ ಗೋವಿಲ್, ಆ ಮಹಿಳೆಗೆ ತಮ್ಮಲ್ಲಿದ್ದ ಶ್ರೀರಾಮ ಹೆಸರು ಮುದ್ರಿತ ಶಲ್ಯವೊಂದನ್ನು ಅವರ ಕೊರಳಿಗೆ ಹಾಕುತ್ತಾರೆ. ಮೊದಲಿಗೆ ಆಕೆಯು ಆ ವಸ್ತ್ರವನ್ನು ಸ್ವೀಕರಿಸಲು ನಿರಾಕರಿಸಿದರೂ, ಆನಂತರ ಗೋವಿಲ್ ಬಲವಂತ ಮಾಡಿದ್ದಕ್ಕೆ ಆ ವಸ್ತ್ರವನ್ನು ಪಡೆದು ಅದನ್ನು ಮಡಚಿ ಭಕ್ತಿಯಿಂದ ಕಣ್ಣಿಗೆ ಒತ್ತಿಕೊಳ್ಳುತ್ತಾಳೆ.


ಅರುಣ್ ಗೋವಿಲ್‌ಗೆ ನಮನ


ಇದನ್ನೂ ಓದಿ: Snake Dance Video: ಹಾವು ಹಿಡಿಯಲು ಬಂದವರ ಮುಂದೆ ಮಹಿಳೆಯರ ನಾಗನೃತ್ಯ! ಇದು ದೇವಿ ಪವಾಡ ಎಂದ ಜನ!


ವೈರಲ್ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ


ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.   ಡಾ. ಸುಷ್ಮಿತ ಮಿಶ್ರಾ ಎಂಬ ಐಎಎಸ್ ಅಧಿಕಾರಿಯೊಬ್ಬರು ಟ್ವೀಟ್ ಮಾಡಿರುವ ಇದರ ವಿಡಿಯೋವನ್ನು ಅರುಣ್ ಗೋವಿಲ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ರೀ-ಟ್ವೀಟ್ ಮಾಡಿದ್ದಾರೆ. ಈಗಾಗಲೇ ಅಸಂಖ್ಯಾತ ಲೈಕ್ಸ್ ಪಡೆದಿರುವ ವಿಡಿಯೋ ನೋಡಿ ನೆಟ್ಟಿಗರೂ ಕೂಡ ಭಾವುಕರಾಗಿದ್ದಾರೆ. ವೀಡಿಯೊ 4.65 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 21,000 ಕ್ಕೂ ಹೆಚ್ಚು ಇಷ್ಟಗಳನ್ನು ಸಂಗ್ರಹಿಸಿದೆ. 4,500 ಕ್ಕೂ ಹೆಚ್ಚು ಬಳಕೆದಾರರು ಪೋಸ್ಟ್ ಅನ್ನು ಮರುಹಂಚಿಕೊಂಡಿದ್ದಾರೆ.


ರಾಮಾಯಣ ಧಾರಾವಾಹಿ


ಹಲವು ದಾಖಲೆ ಬರೆದಿದ್ದ ಧಾರಾವಾಹಿ


ರಮಾನಂದ್ ಸಾಗರ್ ಬರೆದ, ನಿರ್ಮಿಸಿ ಮತ್ತು ನಿರ್ದೇಶಿಸಿದ TV ಸರಣಿ ರಾಮಾಯಣ, 1987 ರಲ್ಲಿ ದೂರದರ್ಶನದಲ್ಲಿ ಮೊದಲು ಪ್ರಸಾರವಾಯಿತು ಮತ್ತು ವರ್ಷಗಳಲ್ಲಿ ಆರಾಧನಾ ಸ್ಥಾನಮಾನವನ್ನು ಪಡೆದುಕೊಂಡಿತು. 2020 ರಲ್ಲಿ, COVID-19 ಲಾಕ್‌ಡೌನ್ ಸಮಯದಲ್ಲಿ, ಪ್ರದರ್ಶನವನ್ನು 33 ವರ್ಷಗಳ ನಂತರ ಮತ್ತೆ ಪ್ರಸಾರ ಮಾಡಲಾಯಿತು ಮತ್ತು ಜಾಗತಿಕವಾಗಿ ಹೆಚ್ಚು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮವಾಗುವ ಮೂಲಕ ವಿಶ್ವ ದಾಖಲೆಯನ್ನು ಸ್ಥಾಪಿಸಿತು.


ಇದನ್ನೂ ಓದಿ: Navaratri Special: ಈ ದೇಗುಲದ ವಿಗ್ರಹ, ಗೋಡೆ, ನೆಲವೆಲ್ಲ 8 ಕೋಟಿ ರೂಪಾಯಿ ನೋಟ್‌ನಿಂದ ಅಲಂಕಾರ!


ರಾಮಾಯಣದ ಪಾತ್ರಧಾರಿಗಳಿಗೆ ಗೌರವ


ರಾಮಾಯಣವು ಹಲವಾರು ಪ್ರಸಿದ್ಧ ತಾರೆಯರನ್ನು ಒಳಗೊಂಡಿತ್ತು. ಸೀತೆ ಪಾತ್ರದಲ್ಲಿ ನಟಿ ದೀಪಿಕಾ ಚಿಕಿಲಿಯಾ, ದಾರಾ ಸಿಂಗ್ ಹನುಮಾನ್ ಪಾತ್ರದಲ್ಲಿ, ಅರವಿಂದ್ ತ್ರಿವೇದಿ ರಾವಣನಾಗಿ, ಲಲಿತಾ ಪವಾರ್ ಮಂಥರಾ ಪಾತ್ರದಲ್ಲಿ ಮತ್ತು ವಿಜಯ್ ಅರೋರಾ ಇಂದ್ರಜಿತ್ ಆಗಿ ನಟಿಸಿದ್ದರು. ಎಲ್ಲರನ್ನೂ ಅಭಿಮಾನಿಗಳು ಅದದೇ ಹೆಸರಿನಿಂದ ಕರೆದು, ಗೌರವಿಸುತ್ತಿದ್ದರು.

Published by:Annappa Achari
First published: