Viral Video: ಕಾಡಿನಿಂದ ನಾಡಿಗೆ ಬಂದ ಗಜರಾಜ, ರಸ್ತೆಯಲ್ಲಿ ರಾಜಾರೋಷವಾಗಿ ಸುತ್ತಾಟ!

ರಸ್ತೆಯಲ್ಲಿ ರಾಜಾರೋಷವಾಗಿ ಸುತ್ತಾಡಿದ ಕಾಡಾನೆ

ರಸ್ತೆಯಲ್ಲಿ ರಾಜಾರೋಷವಾಗಿ ಸುತ್ತಾಡಿದ ಕಾಡಾನೆ

ಅಸ್ಸಾಂ ರಾಜ್ಯದಲ್ಲಿನ ತೇಜಪುರ್ ದಲ್ಲಿ ಕಾಡು ಆನೆಯೊಂದು ನಗರಕ್ಕೆ ಬಂದು ರಾತ್ರಿ ಹೊತ್ತು ರಾಜಾರೋಷವಾಗಿ ರಸ್ತೆಯ ಮೇಲೆ ನಡೆದುಕೊಂಡು ಹೋಗಿ ವಿಧ್ವಂಸಕ ಕೃತ್ಯ ಎಸಗುತ್ತಿರುವ ವಿಡಿಯೋವೊಂದು ಆನ್ಲೈನ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  • Share this:

ಈಗಂತೂ ಮನುಷ್ಯ (Man) ಈ ದೊಡ್ಡದಾಗಿ ಬೆಳೆದು ನಿಂತಂತಹ ಗಿಡ ಮರಗಳನ್ನು ಕಡಿದು ಹಾಕಿ ತನ್ನ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಪ್ರಯತ್ನದಲ್ಲಿ ಕಾಡುಗಳು (Jungle) ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಕಡಿಮೆ ಆಗುತ್ತಿವೆ.  ಹೀಗೆ ಕಾಡು ಬರಿದಾದರೆ, ಕಾಡಿನಲ್ಲಿ ಬದುಕಬೇಕಾದ ಪ್ರಾಣಿಗಳು (Animals) ನೆಲೆ ಹುಡುಕಿಕೊಂಡು ನಾಡಿಗೆ ಬರುವುದು ಸಹಜ ಅಲ್ಲವೇ? ಹೌದು.. ಅದಕ್ಕಾಗಿಯೇ ಕಾಡುಗಳನ್ನು ಉಳಿಸಿ ಅಂತ ಅನೇಕರು ಹೇಳುತ್ತಾರೆ. ಹೀಗೆ ಕಾಡು ನಾಶವಾದರೆ, ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರುತ್ತವೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಆಗಿ ಇಲ್ಲೊಂದು ವೈರಲ್ ವಿಡಿಯೋ (Viral video)  ಇದೆ ನೋಡಿ.


ಕಾಡಿನಿಂದ ನಾಡಿಗೆ ಬಂದ ಆನೆ
ಅಸ್ಸಾಂ ರಾಜ್ಯದಲ್ಲಿನ ತೇಜಪುರ್ ದಲ್ಲಿ ಕಾಡು ಆನೆಯೊಂದು ನಗರಕ್ಕೆ ಬಂದು ರಾತ್ರಿ ಹೊತ್ತು ರಾಜಾರೋಷವಾಗಿ ರಸ್ತೆಯ ಮೇಲೆ ನಡೆದುಕೊಂಡು ಹೋಗಿ ವಿಧ್ವಂಸಕ ಕೃತ್ಯ ಎಸಗುತ್ತಿರುವ ವಿಡಿಯೋವೊಂದು ಆನ್ಲೈನ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


ವೈರಲ್ ವಿಡಿಯೋದಲ್ಲಿ ಏನಿದೆ 
ರಾತ್ರಿ ವೇಳೆ ಕಾಡು ಆನೆಯೊಂದು ಅಲ್ಲಿಯೇ ಸ್ಥಳದಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನವನ್ನು ತನ್ನ ಕಾಲಿಂದ ಜಾಡಿಸಿ ಒದೆಯುತ್ತಿರುವುದನ್ನು ಈ ವಿಡಿಯೋದಲ್ಲಿ ನಾವು ನೋಡಬಹುದು. ಈ 25 ಸೆಕೆಂಡುಗಳ ವೀಡಿಯೋದಲ್ಲಿ ನಾವು ಆ ಕಾಡು ಆನೆಯೊಂದು ರಸ್ತೆಯ ಮೇಲೆ ನಡೆದು ಹೋಗುತ್ತಿದ್ದರೆ, ಅಲ್ಲಿಯೇ ಸುತ್ತಮುತ್ತಲಿದ್ದ ಜನರು ಹೆದರಿಕೊಂಡು ದೂರ ಓಡಿಕೊಂಡು ಹೋಗುವುದನ್ನು ಮತ್ತು ಕೂಗಿಕೊಳ್ಳುವುದನ್ನು ನಾವು ನೋಡಬಹುದು.


ಇದನ್ನೂ ಓದಿ: Viral Video: ಬರೋಬ್ಬರಿ 14 ಸಿಂಹಗಳ ಬಾಯಿಯಿಂದ ತಪ್ಪಿಸಿಕೊಂಡ ಆನೆ! ಸಾವು ಗೆದ್ದ ಗಜರಾಜನ ವಿಡಿಯೋ ಇಲ್ಲಿದೆ ನೋಡಿ


ವಿಡಿಯೋದಲ್ಲಿ ಜನರು ಭಯಭೀತರಾಗಿ ಓಡುವುದು ಮತ್ತು ಕಿರುಚುವುದು ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಆನೆಯು ತುಂಬಾನೇ ಕೋಪಗೊಂಡು ಅಲ್ಲಿದ್ದ ಬೈಕ್ ಅನ್ನು ಒದ್ದು ಹಾಗೆ ಸಿಟ್ಟಿನಿಂದ ಮುನ್ನುಗ್ಗುತ್ತಿರುವುದನ್ನು ನಾವು ನೋಡಬಹುದಾಗಿದೆ.


ಟ್ವಿಟ್ಟರ್ ಬಳಕೆದಾರ ಬಿಕಾಶ್ ಅಧಿಕಾರಿ ಅವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ "ಪ್ರೀತಿಯ ಮಾಮಾ, ನಾನು ತೇಜಪುರ್ ದ ನಿವಾಸಿಯಾಗಿದ್ದು, ಈ ಕಾಡು ಆನೆಯೊಂದು ಕಳೆದ ರಾತ್ರಿ ನನ್ನ ಮನೆಯ ಮುಂದೆಯೇ ಹಾದು ಹೋಗಿದೆ ಮತ್ತು ನಗರದ ನಡು ರಸ್ತೆಯಲ್ಲಿ ತುಂಬಾ ದೂರ ನಡೆದುಕೊಂಡು ಹೋಗಿದೆ. ನೀವು ಈ ವಿಷಯದಲ್ಲಿ ಕೂಡಲೇ ಮಧ್ಯ ಪ್ರವೇಶಿಸಬೇಕು ಮತ್ತು ಹೀಗೆ ಕಾಡಿಂದ ನಾಡಿಗೆ ಬರುತ್ತಿರುವ ಪ್ರಾಣಿಗಳನ್ನು ನಿಕಟವಾಗಿ ಗಮನಿಸಬೇಕು. ಈ ಕಾಡು ಆನೆಯ ಆರೋಗ್ಯ ಸ್ಥಿತಿಯನ್ನು ನೀವು ಒಮ್ಮೆ ನೋಡಿ ಎಂದು ನಾನು ಹೇಳಲು ಬಯಸುತ್ತೇನೆ. ಪ್ರತಿಯೊಬ್ಬ ಮನುಷ್ಯನಿಗೂ ನಾಚಿಕೆಯಾಗಬೇಕು, ಈಗಲಾದರೂ ನಮ್ಮ ಪ್ರಕೃತಿಯನ್ನು ರಕ್ಷಿಸಿ" ಎಂದು ಹೇಳಿದ್ದಾರೆ.


ಕಾಡು ಆನೆಯಿಂದ ಊರಿನ ಆಸ್ತಿಪಾಸ್ತಿಗಳಿಗೆ ಹಾನಿ
ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಈ ಟ್ವೀಟ್ ಮಾಡಲಾಗಿದ್ದು, ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಕಾಡು ಆನೆಯು ಹಲವಾರು ವಾಹನಗಳು ಮತ್ತು ಆಸ್ತಿಪಾಸ್ತಿಗಳನ್ನು ಹಾನಿಗೊಳಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಕಾಡಾನೆ ದಕ್ಷಿಣದ ದಡದಿಂದ ಬ್ರಹ್ಮಪುತ್ರ ನದಿಯನ್ನು ದಾಟಿ ತೇಜಪುರ್ ನಗರವನ್ನು ಪ್ರವೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಆಹಾರ ಹುಡುಕಿಕೊಂಡು ಮನೆಗೆ ದಾಳಿ
ಆರಂಭದಲ್ಲಿ, ಈ ಆನೆ ಅಡುಗೆಮನೆಯಲ್ಲಿ ಆಹಾರವನ್ನು ಹುಡುಕಲು ಚಾನ್ಮಾರಿ ಪ್ರದೇಶದಲ್ಲಿರುವ ಒಂದು ಮನೆಗೆ ಕಾಲಿಟ್ಟಿತು. ನಂತರ, ಅದು ತೇಜಪುರ್ ನಲ್ಲಿರುವ ಹಡಗು ಬಂದರಿನ ಮೂಲಕ ಚಿತ್ರಲೇಖಾ ಉದ್ಯಾನವನವನ್ನು ಪ್ರವೇಶಿಸಿತು. ಬ್ರಹ್ಮಪುತ್ರ ನದಿಯ ದಡದಲ್ಲಿರುವ ಗಣೇಶ ದೇವಾಲಯ ಮತ್ತು ರಾಜ್ಯ ಸಾರಿಗೆ ನಿಗಮದ ಬಸ್ ನಿಲ್ದಾಣವನ್ನು ತಲುಪಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.


ಇದನ್ನೂ ಓದಿ:  Viral Video: ಇದು ಆನೆ ಬೀಡಿ ಎಳೆಯುವುದಾ ಅಥವಾ ಹೊಗೆ ಬಿಡುವುದಾ? ನೀವೇ ಹೇಳಿ

top videos


    ಆದರೆ ಆಗಸ್ಟ್ 27 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಅರಣ್ಯ ಅಧಿಕಾರಿಗಳು ಈ ಕಾಡು ಆನೆಯನ್ನು ಬ್ರಹ್ಮಪುತ್ರ ನದಿ ದಡದ ಕಡೆಗೆ ಕಳುಹಿಸುವುದರಲ್ಲಿ ಯಶಸ್ವಿಯಾದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗೆ ಕಾಡು ಪ್ರಾಣಿಗಳು ಒಮ್ಮೊಮ್ಮೆ ನಗರಕ್ಕೆ ಬಂದಿರುವುದು ಇದೇನು ಮೊದಲನೆಯ ಘಟನೆ ಅಲ್ಲ ಬಿಡಿ. ಈ ಹಿಂದೆಯೂ ಅನೇಕ ಕಡೆಗಳಲ್ಲಿ ಕಾಡಿಗೆ ಹತ್ತಿರವಿರುವ ನಗರ ಪ್ರದೇಶಗಳಿಗೆ ಪ್ರಾಣಿಗಳು ನುಗ್ಗಿ ಬಂದಿರುವುದನ್ನು ನೋಡಿದ್ದೇವೆ.

    First published: