Viral Video: ಚೆಂಡನ್ನು ಕಳೆದುಕೊಂಡ ಶ್ವಾನ ಫುಲ್ ಸ್ಯಾಡ್! ಸಂತೈಸುತ್ತಿರುವ ವಿಡಿಯೋ ವೈರಲ್

 ವೈರಲ್ ವಿಡಿಯೋ

ವೈರಲ್ ವಿಡಿಯೋ

ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಹೌದು ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ ಚೆಂಡು ಕಳೆದುಕೊಂಡ ಮುದ್ದಿನ ಸಾಕು ನಾಯಿಯೊಂದನ್ನು ಮನೆಯ ಮಾಲಕ ಸಮಾಧಾನ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

 • Share this:

  ಸಾಕು ನಾಯಿಗಳ (Pet Dog) ಜೊತೆ ಮನೆಯವರಿಗೆ ಇಂದು ಪ್ರೀತಿ ಕಮ್ಮಿ ಯಾಗಲು ಸಾಧ್ಯವಿಲ್ಲ, ಹೌದು ಪ್ರೀತಿಯಿಂದ ಅದನ್ನು ಹಾಕಿದರೆ ಅದು ಮನುಷ್ಯರಂತೆ ಒಳ್ಳೆಯ ಬುದ್ಧಿಯಿಂದ ವರ್ತಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಹಲವಾರು ವಿಡಿಯೋಗಳು (Videos) ಸಾಕು ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಮುದ್ದಾದ ವಿಡಿಯೋಗಳು ವೈರಲ್ (Viral) ಆಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂತಹದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಹೌದು ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ ಚೆಂಡು (Ball) ಕಳೆದುಕೊಂಡ ಮುದ್ದಿನ ಸಾಕು ನಾಯಿಯೊಂದನ್ನು ಮನೆಯ ಮಾಲಕ ಸಮಾಧಾನ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.


  ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿನಿತ್ಯ ಅನೇಕ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಆಘಾತಕಾರಿಯಾಗಿದ್ದರೆ, ಇನ್ನೂ ಕೆಲವು ಫನ್ನಿಯಾಗಿರುತ್ತವೆ. ಮತ್ತೆ ಕೆಲವು ಮಾಹಿತಿಯುಕ್ತ ವಿಡಿಯೋಗಳಾಗಿರುತ್ತವೆ.


  ಇದನ್ನೂ ಓದಿ: Viral Video: ಮಕ್ಕಳನ್ನು ಅಕ್ಕರೆಯಿಂದ ಶಾಲೆಗೆ ಕರೆದೊಯ್ಯುವ ಅಪ್ಪ! ಪ್ರೀತಿ ಮುಂದೆ ವಿಕಲಾಂಗತೆ ಸಮಸ್ಯೆಯೇ ಅಲ್ಲ


  ಶ್ವಾನ ಪ್ರಿಯರೇ ಹೃದಯ ಕದ್ದ ಮುದ್ದು ಗೋಲ್ಡನ್ ರೆಟ್ರೀವರ್ ನಾಯಿ


  ಸಾಮಾನ್ಯವಾಗಿ ಫ್ಯಾಮಿಲಿ ಡಾಗ್ ಮನೆಯ ಎಲ್ಲಾ ಸದಸ್ಯರೊಂದಿಗೆ ಅವು ಕೂಡ ಒಂದಾಗಿ ಮನೆಯ ಮಂದಿಯ ಪ್ರೀತಿಗೆ ಪಾತ್ರವಾಗುತ್ತದೆ. ಈ ನಾಯಿಗೆ ಸಂಬಂಧಪಟ್ಟ ವಿಡಿಯೋ ಇದೀಗ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಆಗಿದೆ.


  ಎಲ್ವನ್ ಉದ್ಯಾವನದಲ್ಲಿ ಆಡುತ್ತಿದ್ದ ನಾಯಿ ತನ್ನ ಚೆಂಡನ್ನು ಕಳೆದುಕೊಂಡಿದೆ. ಇದರಿಂದ ತುಂಬಾ ದುಃಖಿತನಾದ ಈ ನಾಯಿಯು ಚಿಕ್ಕ ಮಗುವಿನಂತೆ ಬೇಸರ ಮಾಡಿಕೊಂಡು ಕುಳಿತುಕೊಂಡಿದೆ.


  ಈ ವಿಡಿಯೋ ನೋಡಿ,  ಈ ನಾಯಿಯನ್ನು ಮಾಲೀಕ, ತನ್ನ ಮಡಿಲಿನಲ್ಲಿ ಮಲಗಿಸಿಕೊಂಡು ಸಮಾಧಾನ ಮಾಡಿದ್ದಾರೆ.


  ಬೇಸರದಲ್ಲಿರುವ ನಾಯಿಯ ತಲೆ ಸವರುತ್ತಾ, ಚುಂಬಿಸುತ್ತಾ ಸಮಾಧಾನ ಮಾಡುತ್ತಿರುವ ವಿಡಿಯೋ ಶ್ವಾನ ಪ್ರಿಯರ ಮನಸು ಕರಗುವಂತೆ ಮಾಡುತ್ತಿದೆ. ಈ ವಿಡಿಯೋ ಬಹಳಷ್ಟು ಮೆಚ್ಚುಗೆಯನ್ನೂ ಪಡೆದುಕೊಂಡಿದೆ.


  4,000ಕ್ಕೂ ಹೆಚ್ಚು ಮೆಚ್ಚುಗೆಗಳು ವ್ಯಕ್ತವಾಗಿವೆ


  ವಿಡಿಯೋವನ್ನು ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಲಾಗಿದ್ದು, ಸುಮಾರು 4,000ಕ್ಕೂ ಹೆಚ್ಚು ಮೆಚ್ಚುಗೆಗಳು ವ್ಯಕ್ತವಾಗಿವೆ. ಕಾಮೆಂಟ್​ ಬಾಕ್ಸ್​ನಲ್ಲಿ ನೆಟ್ಟಿಗರು, ನಾಯಿಮರಿಗಾಗಿ ಹೊಸ ಚೆಂಡನ್ನು ಖರೀದಿಸುವಂತೆ ಕೆಲವರು ಮುದ್ದಿನ ತಂದೆಯನ್ನು ಒತ್ತಾಯಿಸಿದರೆ, ಇನ್ನು ಕೆಲವರು ಈ ಮುದ್ದಿನ ನಾಯಿಗೆ ನಮ್ಮದೊಂದು ಪ್ರೀತಿಯ ಅಪ್ಪುಗೆ ಕೊಡಲು ಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ.


  ಇದನ್ನೂ ಓದಿ: Cinnamon Bath: 25 ವರ್ಷವಾದ್ರೂ ಸಿಂಗಲ್ಲಾ? ಅಂಥವರಿಗಿಲ್ಲಿ ಮಸಾಲೆ ಸ್ನಾನದ ಶಿಕ್ಷೆ


  ವಾಸ್ತವ ಏನಂದರೆ ನಾಯಿಗಳು ಮಾನವರ ಒಳ್ಳೆಯ ಮಿತ್ರರು ಸಹ ಹೌದು


  ವಾಸ್ತವ ಏನಂದರೆ ನಾಯಿಗಳು ಮಾನವರ ಒಳ್ಳೆಯ ಮಿತ್ರರು ಸಹ ಹೌದು. ನಾಯಿಗಳಿಗೆ ಮನುಷ್ಯರ ಭಾವನೆಗಳು ಮತ್ತು ಮೂಡ್ ಚೆನ್ನಾಗಿ ಅರ್ಥವಾಗುತ್ತವೆ. ಅವುಗಳು ನಿಮ್ಮನ್ನು ಖುಷಿಯಾಗಿ ಇರಿಸಲು ಸಾಕಷ್ಟು ಶ್ರಮಪಡುತ್ತವೆ. ನಾಯಿಗಳು ತಮ್ಮ ಯಜಮಾನರಿಂದ ಹೆಚ್ಚಿಗೆ ಏನನ್ನು ಬಯಸುವುದಿಲ್ಲ. ಅವುಗಳು ಅನ್ನ ಹಾಕಿದ ತನ್ನ ಧಣಿಗೆ ಪ್ರಾಮಾಣಿಕವಾಗಿರುತ್ತದೆ. ಪ್ರಪಂಚದಲ್ಲಿ ಮನುಷ್ಯರಿಗೆ ಅತಿ ಹೆಚ್ಚು ಬೆಲೆ ನೀಡುವ ಪ್ರಾಣಿ ಎಂದರೆ ಅದು ನಾಯಿ ಮಾತ್ರ.


  ಎರಡು ವರ್ಷಗಳ ಹಿಂದೆ ಕಾಡು ಕೋತಿಯೊಂದು ತನ್ನ ನೆಚ್ಚಿನ ನಾಯಿಯನ್ನು ಎಲ್ಲೆಂದರಲ್ಲಿ ಸವಾರಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಿಷ್ಕಲ್ಮಶ ಪ್ರೀತಿಯನ್ನು ತೋರಿಸಿದರೆ ಸಾಕುಪ್ರಾಣಿಗಳು ಕೂಡ ತಮ್ಮ ಸ್ವಂತ ಮಕ್ಕಳಂತೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತದೆ. ಅವುಗಳಿಗೂ ಸಹ ಭಾವನೆಗಳು ಇವೆ ಎಂಬುದು ಈ ವಿಡಿಯೋ ನೋಡಿದ ನಂತರ ತಿಳಿಯುತ್ತದೆ.

  Published by:Swathi Nayak
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು