Viral Video: ಪಪ್ಪಾ ಹುಷಾರಾಗಿರಿ-ಸ್ವಿಮ್ ಮಾಡೋ ಅಪ್ಪನಿಗೆ ಮುದ್ದು ಮಗಳ ಕಾಳಜಿ

ಇನ್ಸ್ಟಾಗ್ರಾಂ ವಿಡಿಯೋ ವೈರಲ್

ಇನ್ಸ್ಟಾಗ್ರಾಂ ವಿಡಿಯೋ ವೈರಲ್

ಒಂದು ವಿಡಿಯೋ ಇದೀಗ ಇನ್ಸ್ಟಾಗ್ರಾಂ ನಲ್ಲಿ ವೈರಲ್ ಆಗುತ್ತಿದೆ. ಒಂದು ಪುಟ್ಟ ಮಗು ತನ್ನ ತಂದೆಯ ಬಳಿ ಈಜುಕೊಳದಲ್ಲಿ ಹುಷಾರಾಗಿರು ಎಂದು ಹೇಳುವ ವಿಡಿಯೋ ತುಂಬಾ ಮುದ್ದಾಗಿದೆ.

  • Share this:

ಇತ್ತೀಚೆಗೆ ಇನ್ಸ್ಟಾಗ್ರಾಮ್ (Instagram) ನಲ್ಲಿ ಪುಟ್ಟ ಮಕ್ಕಳಿಗಾಗಿ ಒಂದು ಪೇಜ್ ನಲ್ಲಿ ಇರುತ್ತವೆ. ತಮ್ಮ ಮಕ್ಕಳ ಮುದ್ದಾದ ವೀಡಿಯೋಗಳನ್ನು ಸೆರೆಹಿಡಿದು ಹೆತ್ತವರು ಆ ಪೇಜ್ ನಲ್ಲಿ ಪೋಸ್ಟ್ (Post) ಮಾಡುತ್ತಾರೆ. ಪುಟ್ಟ ಮಕ್ಕಳ ತೊದಲುನುಡಿ ತುಂಟಾಟ ಆಟೋಟಗಳು ನೋಡಲು ತುಂಬಾ ಮುದ್ದಾಗಿರುತ್ತವೆ. ಅಷ್ಟೇ ಅಲ್ಲ ಇಂತಹ ವಿಡಿಯೋಗಳು ನೋಡಲು ಮುದನೀಡುತ್ತವೆ. ಅಂತಹುದೇ ಒಂದು ವಿಡಿಯೋ (Video) ಇದೀಗ ಇನ್ಸ್ಟಾಗ್ರಾಂ ನಲ್ಲಿ ವೈರಲ್ (Viral) ಆಗುತ್ತಿದೆ. ಒಂದು ಪುಟ್ಟ ಮಗು (Baby) ತನ್ನ ತಂದೆಯ ಬಳಿ ಈಜುಕೊಳದಲ್ಲಿ ಹುಷಾರಾಗಿರು ಎಂದು ಹೇಳುವ ವಿಡಿಯೋ ತುಂಬಾ ಮುದ್ದಾಗಿದೆ.


ಹೆಣ್ಣು ಮಕ್ಕಳಿಗೆ ಅಪ್ಪ ಅಂದರೆ ವಿಪರೀತ ಅಕ್ಕರೆ. ಅಪ್ಪಂದಿರಿಗೂ ಅಷ್ಟೇ ಮಗನಿಗಿಂತ ಮಗಳೇ ಮೆಚ್ಚು.  ಜಗತ್ತಿನಲ್ಲಿ ತಂದೆ ಮತ್ತು ಮಗಳ ಬಾಂಧವ್ಯವು ತುಂಬಾ ಪವಿತ್ರ ವಾಗಿರುವುದು. ಹೌದು ತನ್ನ ಮಗಳಿಗಾಗಿ ತಂದೆ ಯಾವುದೇ ತ್ಯಾಗಮಾಡಲು ಸಿದ್ಧನಿರುತ್ತಾನೆ. ಮಗಳು ಕೂಡ ತನ್ನ ತಂದೆಯನ್ನು ಅಷ್ಟೇ ಪ್ರೀತಿಯಿಂದ ಗೌರವದಿಂದ ನೋಡಿಕೊಳ್ಳುತ್ತಾಳೆ.


ಇದನ್ನೂ ಓದಿ: Golgappa: ಗೋಲ್​ಗಪ್ಪ ಇಂದು ನಿನ್ನೆಯದಲ್ಲ! ದ್ರೌಪದಿ ಪಾಂಡವರಿಗೆ ಮಾಡಿಕೊಟ್ಟ ಸ್ಪೆಷಲ್​ ಫುಡ್​ ಇದೇನಾ?


ಪಾಪಾ ಬಿ‌ ಕೇರ್ ಫುಲ್ ನಾ ! ಎನ್ನುವ ತೊದಲು ಮಾತು


ನಿಮ್ಮ ದಿನವನ್ನು ಉಜ್ವಲಗೊಳಿಸುವಂತಹ ಹೃದಯಸ್ಪರ್ಶಿ ವೀಡಿಯೊಗಾಗಿ ನೀವು ಹುಡುಕುತ್ತಿರುವಿರಾ?  ಈ ಸುಂದರ ವಿಡಿಯೋದಲ್ಲಿ ಪುಟ್ಟ ಮಗು ತನ್ನ ತಂದೆಯ ಬಳಿ ಪಾಪಾ ಬಿ‌ ಕೇರ್ ಫುಲ್ ನಾ ! ಎನ್ನುವ ತೊದಲು ಮಾತನ್ನು ಹೇಳುತ್ತಾಳೆ! ಇದನ್ನು ನೋಡಿದಾಗ ತಂದೆಯ ಮತ್ತು ಮಗಳ ನಡುವಿನ ಬಾಂಧವ್ಯ ಎಷ್ಟು ಗಟ್ಟಿ ಇರುತ್ತದೆ ಎನ್ನುವುದಕ್ಕೆ ಸಾಕ್ಷಿ ಎಂದರೆ ತಪ್ಪಾಗಲಾರದು.

View this post on Instagram


A post shared by Hanaya Jain (@hanayaandmom)

ತೊದಲು ನುಡಿಯಲ್ಲಿ ಅಪ್ಪ ಹುಷಾರಾಗಿರು' ಎಂದು ಹೇಳುತ್ತಾಳೆ. ದೂರದಲ್ಲಿ ಈಜುತ್ತಿರುವ ಆಕೆಯ ತಂದೆಗೆ ಆಕೆಯ ಧ್ವನಿ ಕೇಳಲು ಸಾಧ್ಯವಾಗದಿದ್ದರೂ, ಆಕೆಯ ಮಧುರವಾದ ಹಾವಭಾವ ಈಗ ಜನರ ಮನಗೆದ್ದಿದೆ.


ಇದನ್ನೂ ಓದಿ: Snake Bite: ಟಾಯ್ಲೆಟ್​ನಲ್ಲಿ ಕೂತು ವಿಡಿಯೋ ಗೇಮ್ಸ್ ಆಡ್ತಿದ್ದ! ಹಾವು ಕಚ್ಚಿದ್ದೆಲ್ಲಿಗೆ ನೋಡಿ


 1.4 ಮಿಲಿಯನ್ ಗಿಂತಲೂ ಹೆಚ್ಚಿನ ವೀಕ್ಷಣೆ!


ಕೆಲ ದಿನಗಳ ಹಿಂದೆ ವಿಡಿಯೋ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡಾಗಿನಿಂದ, ಕ್ಲಿಪ್ ವೈರಲ್ ಆಗಿದೆ. ಇಲ್ಲಿಯವರೆಗೆ, ಇದು ಇಲ್ಲಿವರೆಗೆ ಈ ವಿಡಿಯೋ ಸುಮಾರು 1.4 ಮಿಲಿಯನ್ ಗಿಂತಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದಿದೆ.ಮತ್ತು ಸಂಖ್ಯೆಗಳು ಮಾತ್ರ ಹೆಚ್ಚುತ್ತಿವೆ.


ಈ ಮುದ್ದಾದ ವಿಡಿಯೋ ಗೆ ನೇಟಿಜನ್ಸ್ ಗಳು ಉತ್ತಮ ರೀತಿಯಲ್ಲಿ ಕಮೆಂಟ್ಸ್ ನೀಡುತ್ತಿದ್ದಾರೆ. ವಿಡಿಯೋ ತುಂಬಾ ಮುದ್ದಾಗಿದೆ ಎಂದು ಒಂದು ಬಳಕೆದಾರರು ಕಮೆಂಟ್ ಮಾಡಿದರೆ, ಇನ್ನೊಬ್ಬರು ತಂದೆ ಮತ್ತು ಮಗಳ ಬಾಂಧವ್ಯ ಯಾವಾಗಲು ವಿಶೇಷ ಎಂದು ಕಾಮೆಂಟ್ ಮಾಡಿದ್ದಾರೆ.


ತಂದೆ ಮಗಳ ಈ ಬಾಂಧವ್ಯಕ್ಕೆ ಯಾರ ಕಣ್ಣು ಬೀಳದಿರಲಿ

top videos


    ತಂದೆ ನಿಜವಾದ ಸೂಪರ್ ಹೀರೋ. ಸದಾ ಹೃದಯವಂತಿಕೆ ಮತ್ತು ಸ್ಫೂರ್ತಿಯ ಚಿಲುಮೆಯಂತೆ ಇರುವ ತಂದೆ ಮಕ್ಕಳ ಪಾಲಿನ ದೊಡ್ಡ ಶಕ್ತಿ. ತಂದೆ ಮಗಳ ಈ ಬಾಂಧವ್ಯಕ್ಕೆ ಯಾರ ಕಣ್ಣು ಬೀಳದಿರಲಿ. ಜೀವನದುದ್ದಕ್ಕೂ ಇದೇ ರೀತಿ ಅವರಿಬ್ಬರ ಬಾಂಧವ್ಯವೂ ಕೂಡಿರಲಿ. ಜಗತ್ತಿನಲ್ಲಿ ಶ್ರೇಷ್ಠ ಸಂಬಂಧ ವಾಗಿರುವ ತಂದೆ-ಮಗಳ ಸಂಬಂಧಕ್ಕೆ ಇಂತಹ ವಿಡಿಯೋಗಳು ಸಾಕ್ಷಿಯಾಗಿರುತ್ತದೆ. ಈ ವಿಡಿಯೋಗಳು ನೋಡುಗರಿಗೆ ಮುದ ನೀಡುವುದರ ಜೊತೆಗೆ ಒಂದು ತವ ಸಂದೇಶವನ್ನು ನೀಡುತ್ತದೆ ಎಂದರೆ ಸುಳ್ಳಾಗದು. ಬದುಕಿನ ಕಷ್ಟದ ನಡುವೆಯೂ ಎಲ್ಲವನ್ನೂ ಸಹಿಸಿಕೊಂಡು, ಎಲ್ಲಾ ಸಮಸ್ಯೆಯ ಎದುರೂ ಗುರಾಣಿಯಂತೆ ನಿಂತು ಕುಟುಂಬವನ್ನು ಕಾಪಾಡುವವರು ತಂದೆ ಅಂತಹ ತಂದೆಗೊಂದು ಸಲಾಂ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು