Viral Video: ಅಯ್ಯೋ..! ದೈತ್ಯ ಹಲ್ಲಿ ಮುಖವನ್ನು ಮುದ್ದಾಡಿದರೂ ಈಕೆಗೆ ಸ್ವಲ್ಪವೂ ಭಯವಿಲ್ಲ!

ಹಾವು , ಹಲ್ಲಿ, ಮೊಸಳೆ, ಉಡ ಇತ್ಯಾದಿಗಳನ್ನು ಕಂಡಾಗ ಹೆಚ್ಚಿನವರಿಗೆ ಭಯ ಆಗೇ ಆಗುತ್ತದೆ. ಅದರಲ್ಲೂ ನಾಲಗೆ ಹೊರಗೆ ಹಾಕುತ್ತಾ ಹೆದರಿಸುವ ದೈತ್ಯ ಹಲ್ಲಿಯನ್ನು ಕಂಡರೆ..? ಅಬ್ಬಬ್ಬಾ ಭಯವಾಗುತ್ತದೆ ಎನ್ನುತ್ತೀರಾ? ಆದರೆ ಇಲ್ಲೊಬ್ಬಳು ಮಹಿಳೆ ತನಗೆ ಅದರ ಯಾವುದೇ ಭಯವಿಲ್ಲಾ ಎನ್ನುತ್ತಿದ್ದಾರೆ..! ಅದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋನೇ ಸಾಕ್ಷಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಎಲ್ಲರಿಗೂ ಒಂದಲ್ಲ ಒಂದು ರೀತಿಯ ಭಯವಿರುತ್ತದೆ. ಕೆಲವರಿಗೆ ದೊಡ್ಡ ದೊಡ್ಡ ವಿಷಯಗಳ ಕುರಿತು ಭಯವಿದ್ದರೆ, ಇನ್ನು ಕೆಲವರು ಚಿಕ್ಕ ಚಿಕ್ಕ ಸಂಗತಿಗೂ ಹೆದರುತ್ತಾರೆ. ವನ್ಯ ಜೀವಿಗಳಿಗಂತೂ ಸಾಮಾನ್ಯವಾಗಿ ಎಲ್ಲರೂ ಹೆದರಿಯೇ ಹೆದರುತ್ತಾರೆ, ಸಾಕು ಪ್ರಾಣಿಗಳಿಗೂ ಹೆದರುವವರು ಇಲ್ಲವೆಂದಲ್ಲ. ಕೆಲವೊಮ್ಮೆ ಒಂಟಿ ಸಲಗ ಕಂಡರೂ ಹೆದರದವರು ಯಕಶ್ಚಿತ್ ಜಿರಳೆಗೆ ಹೆದರುವುದುಂಟು. ಆದರೆ ಹರಿದಾಡುವ ಸರೀಸೃಪಗಳನ್ನು ಕಂಡು ಹೆದರದವರ ಸಂಖ್ಯೆ ಬಹಳ ಕಡಿಮೆ ಎಂದರೆ ತಪ್ಪಿಲ್ಲ. ಹಾವು , ಹಲ್ಲಿ, ಮೊಸಳೆ, ಉಡ ಇತ್ಯಾದಿಗಳನ್ನು ಕಂಡಾಗ ಹೆಚ್ಚಿನವರಿಗೆ ಭಯ ಆಗೇ ಆಗುತ್ತದೆ. ಅದರಲ್ಲೂ ನಾಲಗೆ ಹೊರಗೆ ಹಾಕುತ್ತಾ ಹೆದರಿಸುವ ದೈತ್ಯ ಹಲ್ಲಿಯನ್ನು ಕಂಡರೆ..? ಅಬ್ಬಬ್ಬಾ ಭಯವಾಗುತ್ತದೆ ಎನ್ನುತ್ತೀರಾ? ಆದರೆ ಇಲ್ಲೊಬ್ಬಳು ಮಹಿಳೆ ತನಗೆ ಅದರ ಯಾವುದೇ ಭಯವಿಲ್ಲಾ ಎನ್ನುತ್ತಿದ್ದಾರೆ..! ಅದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋನೇ ಸಾಕ್ಷಿ.


ಆ ವಿಡಿಯೋದಲ್ಲಿ ಅಂತದ್ದೇನಿದೆ ಅಂತೀರಾ? ಅದರಲ್ಲಿ ಮಹಿಳೆಯೊಬ್ಬರು ಕಪ್ಪಗಿನ ದೈತ್ಯ ಹಲ್ಲಿಯನ್ನು ಮಗುವಿನಂತೆ ಸೊಂಟದಲ್ಲಿ ಎತ್ತಿಕೊಂಡು ಮುದ್ದಾಡುತ್ತಿರುವ ದೃಶ್ಯವಿದೆ. ಹಲ್ಲಿಗೂ ಅದರಲ್ಲಿ ಯಾವುದೇ ಅಭ್ಯಂತರ ಇದ್ದಂತೆ ಕಾಣುವುದಿಲ್ಲ, ಅದು ಕೂಡ ಆರಾಮವಾಗಿ ಆಕೆ ಸೊಂಟದ ಮೇಲೆ ಕೂತು, ಮಗುವಿನಂತೆ ಖುಷಿ ಪಡುತ್ತಿರುವುದನ್ನು ನೋಡಬಹುದು. ವಿಡಿಯೋದಲ್ಲಿ, ಈ ದೈತ್ಯ ಹಲ್ಲಿ ಒಂದು ಫಿಲಿಫೈನ್ ನೀರು ಹಲ್ಲಿಯಾಗಿದ್ದು, ತನ್ನೊಂದಿಗೆ ಚೆನ್ನಾಗಿ ಹೊಂದಿಕೊಂಡಿದೆ ಎಂದು ಆ ಮಹಿಳೆವಿವರಿಸುತ್ತಾರೆ..


ಆಕೆ ತರಬೇತಿ ಪಡೆದ ವೃತ್ತಿಪರ ಮಹಿಳೆ. ದೈತ್ಯ ಹಲ್ಲಿಯ ಜೊತೆ ಸ್ನೇಹ ಬೆಳೆಸುವ ಬಗ್ಗೆ ಊಹಿಸಲು ಸಾಧ್ಯವೇ? ಇನ್‍ಸ್ಟಾಗ್ರಾಂನಲ್ಲಿ ದ ರೆಪ್ಟೈಲ್ ಜೂ ಎಂಬ ಖಾತೆಯಿಂದ ಫೋಸ್ಟ್ ಮಾಡಲಾಗಿರುವ ಈ ವಿಡಿಯೋದಲ್ಲಿ “ಅವನು ಒಬ್ಬ ಸ್ವೀಟ್ ಹಾರ್ಟ್, ನಮ್ಮೆಲ್ಲರ ಜೊತೆ ಚೆನ್ನಾಗಿ ಹೊಂದಿಕೊಳ್ಳುವವನು ಅವನು” ಎನ್ನುತ್ತಾರೆ ಆ ಮಹಿಳೆ. “ನಾವು ಈ ದೊಡ್ಡ ಟೆಡ್ಡಿ ಬೇರನ್ನು ಪ್ರೀತಿಸುತ್ತೇವೆ” ಎಂಬ ಅಡಿ ಬರಹವನ್ನು ಕೂಡ ನೀಡಲಾಗಿದೆ.


ಈ ವಿಡಿಯೋವನ್ನು ಹಂಚಿಕೊಂಡಾಗಿನಿಂದ ಈವರೆಗೆ ಸುಮಾರು 20,000ಕ್ಕೂ ಹೆಚ್ಚು ಮೆಚ್ಚುಗೆ ಗಳಿಸಿದ್ದು, ನೂರಾರು ಪ್ರತಿಕ್ರಿಯೆಗಳನ್ನು ಸಹ ಪಡೆದಿದೆ.


ಆದರೆ ಹೆಚ್ಚಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋ ಕಂಡು ದಂಗಾಗಿದ್ದಾರೆ. ದೈತ್ಯ ಹಲ್ಲಿಯೊಂದು ತನ್ನನ್ನು ಎತ್ತಿಕೊಂಡಿರುವವಳ ಮುಖವನ್ನು ಪ್ರೀತಿಯಿಂದ ನೆಕ್ಕುವುದು ಎಂದರೆ ಸುಮ್ಮನೆಯೇ..? ನೆಟ್ಟಿಗರ ಪ್ರತಿಕ್ರಿಯೆಗಳು ಕೂಡ ಅದಕ್ಕೆ ತಕ್ಕಂತೆ ಅಚ್ಚರಿದಾಯಕವಾಗಿಯೇ ಇದೆ. ಒಬ್ಬರು “ಅದು ನಿಮ್ಮನ್ನು ಮುದ್ದಾಡುತ್ತಿದೆ” ಎಂದು ಪ್ರತಿಕ್ರಿಯಿಸಿದರೆ, ಇನ್ನೊಬ್ಬರು “ ಸುಂದರ ದೈತ್ಯ” ಎಂದು ಮೆಚ್ಚುಗೆಯಿಂದ ಬರೆದರೆ, ಮತ್ತೊಬ್ಬರು “ಅದು ನಿಮ್ಮ ರುಚಿ ನೋಡುತ್ತಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.


First published: