• Home
  • »
  • News
  • »
  • trend
  • »
  • Nirmala Sitharaman: ಟೊಮೇಟೋ, ಸೊಪ್ಪು ತಾಜಾ ಇದ್ಯಾ? ಹಾಗಲಕಾಯಿ ಎಷ್ಟಮ್ಮ? ಬೀದಿಬದಿ ತರಕಾರಿ ಖರೀದಿಸಿದ ಸಚಿವೆ!

Nirmala Sitharaman: ಟೊಮೇಟೋ, ಸೊಪ್ಪು ತಾಜಾ ಇದ್ಯಾ? ಹಾಗಲಕಾಯಿ ಎಷ್ಟಮ್ಮ? ಬೀದಿಬದಿ ತರಕಾರಿ ಖರೀದಿಸಿದ ಸಚಿವೆ!

ಬೀದಿಯಲ್ಲಿ ತರಕಾರಿ ಖರೀದಿಸಿದ ಸಚಿವೆ

ಬೀದಿಯಲ್ಲಿ ತರಕಾರಿ ಖರೀದಿಸಿದ ಸಚಿವೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಸಂಜೆ ಚೆನ್ನೈನ ಮೈಲಾಪುರ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿರುವ ವಿಡಿಯೋ ವೈರಲ್ ಆಗಿದೆ. ಏರ್‌ಪೋರ್ಟ್ ರಸ್ತೆಯಲ್ಲಿ ತಮ್ಮ ಕಾರು ನಿಲ್ಲಿಸಿದ ಸಚಿವೆ, ಬೀದಿ ಬದಿ ವ್ಯಾಪಾರಿಗಳಿಂದ ತರಕಾರಿ ಖರೀದಿಸಿದ್ದಾರೆ.

  • Share this:

ಚೆನ್ನೈ: ಕೇಂದ್ರ ಹಣಕಾಸು ಸಚಿವೆ (Central Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಸುದ್ದಿಯಲ್ಲಿದ್ದಾರೆ. ಅದರಲ್ಲೂ ತಮ್ಮ ಸರಳತೆಯಿಂದಾಗಿ (Simplicity) ಸಚಿವೆ ಇದೀಗ ಸುದ್ದಿ ಮಾಡಿದ್ದಾರೆ. ನಿನ್ನೆ ಸಚಿವೆ ನಿರ್ಮಲಾ ಸೀತಾರಾಮನ್ ತಮಿಳುನಾಡಿನ (Tamil Nadu) ಚೆನ್ನೈಗೆ (Chennai) ಖಾಸಗಿ ಕಾರ್ಯಕ್ರಮದ ನಿಮಿತ್ತ ತೆರಳಿದ್ದರು. ಈ ವೇಳೆ ವಿಮಾನ ನಿಲ್ದಾಣದ ರಸ್ತೆ (Airport Road) ಬದಿಯಲ್ಲಿ ಕಾರ್ ನಿಲ್ಲಿಸಿದ ಸಚಿ,ವೆ ತರಕಾರಿ (Vegetables) ಖರೀದಿಸಿದ್ದಾರೆ. ಯಾವುದೋ ಶಾಪಿಂಗ್ ಮಾಲ್‌ನಲ್ಲೋ (Shopping Mall), ದೊಡ್ಡ ವೆಜಿಟೇಬಲ್ ಶಾಪ್‌ನಲ್ಲೇ (Bih Vegetable Shop) ತರಕಾರಿ ಖರೀದಿಸದೇ, ಬೀದಿ ಬದಿಯಲ್ಲಿ ಮಾರುತ್ತಿದ್ದ ವ್ಯಾಪಾರಿಗಳಿಂದ ತರಕಾರಿ ಖರೀದಿಸಿದ್ದಾರೆ. ಅಲ್ಲದೇ ಬೀದಿ ವ್ಯಾಪಾರಿಗಳ (street vendors) ಕಷ್ಟ ಸುಖ ವಿಚಾರಿಸಿದ್ದಾರೆ. ಇದೀಗ ಈ ವಿಡಿಯೋ (Video) ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ (Viral in Social Media) ಆಗಿದೆ.


ಬೀದಿ ಬದಿ ತರಕಾರಿ ಖರೀದಿಸಿದ ಸಚಿವೆ


ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಸಂಜೆ ಚೆನ್ನೈನ ಮೈಲಾಪುರ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿರುವ ವಿಡಿಯೋ ವೈರಲ್ ಆಗಿದೆ. ಏರ್‌ಪೋರ್ಟ್ ರಸ್ತೆಯಲ್ಲಿ ತಮ್ಮ ಕಾರು ನಿಲ್ಲಿಸಿದ ಸಚಿವೆ, ಬೀದಿ ಬದಿ ವ್ಯಾಪಾರಿಗಳಿಂದ ತರಕಾರಿ ಖರೀದಿಸಿದ್ದಾರೆ. ಇದು ಸ್ಥಳೀಯ ನಿವಾಸಿಗಳು ಮತ್ತು ಬೀದಿ ವ್ಯಾಪಾರಿಗಳಿಗೆ ದೊಡ್ಡ ಆಶ್ಚರ್ಯವನ್ನುಂಟು ಮಾಡಿದೆ.




ಖಾಸಗಿ ಕಾರ್ಯಕ್ರಮಕ್ಕಾಗಿ ಚೆನ್ನೈಗೆ ಬಂದಿದ್ದ ಸಚಿವೆ


ಸಚಿವೆ ನಿರ್ಮಲಾ ಸೀತಾರಾಮನ್ ಖಾಸಗಿ ಕಾರ್ಯಕ್ರಮದ ನಿಮಿತ್ತ ಒಂದು ದಿನದ ಪ್ರವಾಸಕ್ಕಾಗಿ ಚೆನ್ನೈಗೆ ಬಂದಿದ್ದರು. ಈ ವೇಳೆ ಅವರು ಕಪಾಲೀಶ್ವರ ದೇವಸ್ಥಾನದ ಮಾದ ಬೀದಿಯಲ್ಲಿರುವ ಲಿಯೋ ಕಾಫಿ ಬಾರ್ ಹೊರಗಿನ ಬೀದಿ ಬದಿಯ ತರಕಾರಿ ಅಂಗಡಿಗೆ ಭೇಟಿ ನೀಡಿದರು. ಅಲ್ಲೇ ವ್ಯಾಪಾರಿಗಳ ಬಳಿ ತರಕಾರಿ ಖರೀದಿಸಿದ್ದಾರೆ.


ಇದನ್ನೂ ಓದಿ: Pizza: ಕಣ್ಣು ಮುಚ್ಚಿ ಪಿಜ್ಜಾ ತಿನ್ನೋ ಮೊದಲು ಈ ಸುದ್ದಿ ಓದಿ, ಪಿಜ್ಜಾದಲ್ಲಿತ್ತು ಗ್ಲಾಸ್ ಪೀಸ್!


ವ್ಯಾಪಾರಿಗಳು, ಗ್ರಾಹಕರೊಂದಿಗೆ ಸಚಿವೆ ಮಾತುಕತೆ


ತರಕಾರಿ ಖರೀದಿಸುವ ವೇಳೆ ಬೀದಿ ಬದಿ ವ್ಯಾಪಾರಿಗಳು, ಮಹಿಳೆಯರ ಜೊತೆ ನಿರ್ಮಲಾ ಸೀತಾರಾಮನ್ ಮಾತುಕತೆ ನಡೆಸಿದರು. ಅವರ ಕಷ್ಟ ಆಲಿಸಿದರು. ಈ ವೇಳೆ ಸಚಿವೆಯನ್ನು ನೋಡಲು ಗ್ರಾಹಕರು ಮತ್ತು ಮಾರಾಟಗಾರರು ಮುಗಿ ಬಿದ್ದರು.


ನಿರ್ಮಲಾ ಸೀತಾರಾಮನ್ ಖರೀದಿಸಿದ್ದೇನು?


ವೀಡಿಯೋದಲ್ಲಿ ನಿರ್ಮಲಾ ಸೀತಾರಾಮನ್ ಕೆಲವು ಸಿಹಿ ಗೆಣಸುಗಳನ್ನು ಆಯ್ದುಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ಜೊತೆಗೆ ಹಾಗಲಕಾಯಿ ಖರೀದಿ ಮಾಡಿದ್ದಾರೆ. ಜೊತೆಗೆ ಹಲವು ತರಕಾರಿಗಳ ಬೆಲೆ ವಿಚಾರಿಸಿದ್ದಾರೆ. ಸೊಪ್ಪುಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಇನ್ನು ಸುಂಡಕ್ಕೈ (ಟರ್ಕಿ ಬೆರ್ರಿ), ಪಿಡಿ ಕರನೈ (ಕಾಡು ಯಾಮ್) ಮತ್ತು ಐದು ಗೊಂಚಲು ಮುಲೈ ಕೀರೈ (ಒಂದು ರೀತಿಯ ಅಮರಂಥ್) ಮತ್ತು ಮನಾಥಕ್ಕಲಿ ಕೀರೈ ಇತ್ಯಾದಿ ಸ್ಥಳೀಯ ತರಕಾರಿಗಳನ್ನು ನಿರ್ಮಲಾ ಸೀತಾರಾಮನ್ ಖರೀದಿಸಿದ್ದಾರೆ.



ಸಚಿವರ ಭದ್ರತಾ ಸಿಬ್ಬಂದಿ ಗನ್‌ಗೆ ಹೆದರಿದ ವ್ಯಾಪಾರಿಗಳು!


ಇನ್ನು ಕೇಂದ್ರ ಸಚಿವರ ಜೊತೆಗಿದ್ದ ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಮಾತನಾಡಿ, ನಿರ್ಮಲಾ ಸೀತಾರಾಮನ್ ಅವರು ಮೊದಲು ತಾಂಡು ಕೀರಾಯಿ ಖರೀದಿಸಲು ನಿಲ್ಲಿಸಿದ್ದರು. ಆದರೆ ಅದು ಲಭ್ಯವಾಗದ ಕಾರಣ ಅವರು ಬದಲಿಗೆ ಇತರೇ ಕೆಲವು ಸೊಪ್ಪನ್ನು ಖರೀದಿಸಿದರು. “ಆರಂಭದಲ್ಲಿ ಮಾರಾಟಗಾರರು ಬಂದೂಕು ಹಿಡಿದ ಕೇಂದ್ರ ಸಚಿವೆಯ ಭದ್ರತಾ ಸಿಬ್ಬಂದಿಯನ್ನು ನೋಡಿ ಹೆದರುತ್ತಿದ್ದರು. ಆದರೆ ಅವರು ಯಾರೆಂದು ನಾವು ವಿವರಿಸಿದಾಗ, ಮಹಿಳೆಯರು ತಮ್ಮ ಭಯವನ್ನು ಹೋಗಲಾಡಿಸಿದರು ಅಂತ ಹೇಳಿದ್ದಾರೆ.


ಸಚಿವೆಯನ್ನು ಕಾಫಿಗೆ ಆಹ್ವಾನಿಸಿದ ವ್ಯಾಪಾರಿಗಳು


ಇನ್ನು ಹತ್ತಿರದ ಹೋಟೆಲ್‌ಗೆ ಒಂದು ಕಪ್ ಕಾಫಿ ಕುಡಿಯುವಂತೆ ಸಚಿವೆಗೆ ಅಲ್ಲಿದ್ದ ವ್ಯಾಪಾರಿಗಳು, ಮಹಿಳೆಯರು ಆಹ್ವಾನ ನೀಡಿದರು.  ಆದರೆ ಅವರು ಮನೆಗೆ ಹಿಂತಿರುಗಲು ವಿಮಾನ ಹಿಡಿಯಬೇಕಾಗಿರುವುದರಿಂದ ಅದು ಸಾಧ್ಯವಾಗಲಿಲ್ಲ. ನಿರ್ಮಲಾ ಸೀತಾರಾಮನ್ ಅವರು ಒಟ್ಟಾರೆ ಅಲ್ಲಿ ಕೇವಲ 20 ನಿಮಿಷಗಳನ್ನು ಕಳೆದಿರಬಹುದು” ಎಂದು ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಹೇಳಿದ್ದಾರೆ.


ಇದನ್ನೂ ಓದಿ: Long Eared Goat: ಈ ಮೇಕೆ ಮರಿಗಿಂತ ಅದರ ಕಿವಿಗಳೇ ಉದ್ದ! ಮುದ್ದು ಪ್ರಾಣಿ ಫೋಟೋ ಸಖತ್ ವೈರಲ್


ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್


ನಿರ್ಮಲಾ ಸೀತಾರಾಮನ್ ಅವರ ಕಚೇರಿ ಟ್ವಿಟ್ಟರ್‌ನಲ್ಲಿ ಹಾಕಿರುವ ವೀಡಿಯೊದಲ್ಲಿ, ಸಚಿವರು ತಾಜಾ ತರಕಾರಿಗಳನ್ನು ಆರಿಸುವುದು ಮತ್ತು ಸಾರ್ವಜನಿಕರು ಮತ್ತು ಮಾರಾಟಗಾರರೊಂದಿಗೆ ಸಂವಹನ ನಡೆಸುತ್ತಿರುವುದನ್ನು ಕಾಣಬಹುದು.

Published by:Annappa Achari
First published: