ಹುಲಿಯನ್ನೇ ಬೆದರಿಸಿದ ಕರಡಿ; ವೈರಲ್​ ಆಯ್ತು ವಿಡಿಯೋ

ಹುಲಿ ಎಂದರೆ ಸಾಕು ನಾವು ಆಕ್ರಮಣ ಶೀಲತೆ ಹೊಂದಿರುವ ಪ್ರಾಣಿ . ಅದಕ್ಕೆ ಬೆದರದೆ ಇರುವವರು ಇಲ್ಲ ಎಂಬುದು ನಮ್ಮ ಸಾಮಾನ್ಯ ಕಲ್ಪನೆ,

ಹುಲಿ ಕರಡಿ

ಹುಲಿ ಕರಡಿ

  • Share this:
    ಚಿಕ್ಕವರಿದ್ದಾಗಿನಿಂದ ಕಾಡು ಪ್ರಾಣಿಗಳ ಕುರಿತಾದ ನೀತಿ ಪಾಠಗಳನ್ನು ಕೇಳಿಕೊಂಡು ಜೀವನದ ಮೌಲ್ಯವನ್ನು ಕಲಿಯುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಬುದ್ಧಿ ಶಕ್ತಿ, ಆಕ್ರಮಣ ಶೀಲತೆ ಕುರಿತಾದ ಅನೇಕ ಪಾಠಗಳು ಇಂದಿನ ಜೀವನಕ್ಕೂ ಪ್ರಸ್ತುತ. ಅದೇ ರೀತಿ ಕಾಡಿನಲ್ಲಿ ನಡೆದ ಘಟನೆಯೊಂದು ಈಗ ಆ ಕಥೆಯನ್ನು ಕಣ್ಣ ಮುಂದೆ ತರುವ ಪ್ರಯತ್ನ ಮಾಡಿದೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ವನ್ಯ ಜೀವಿಗಳ ವಿಡಿಯೋ ಈಗ ಮತ್ತೆ ವೈರಲ್​ ಆಗಿದ್ದು, ಈ ಕಥೆಯನ್ನು ನೆನಪಿಸಲು ಕಾರಣವಾಗಿದೆ. ಅರಣ್ಯಾಧಿಕಾರಿ ಸುಧಾ ರಮೆನ್​ ಟ್ವಿಟರ್​ನಲ್ಲಿ ಕರಡಿ ಮತ್ತು ಹುಲಿಯ ಕಾದಾಟದ ವಿಡಿಯೋ ಹಂಚಿಕೊಂಡಿದ್ದು, ಕಾಡಿನಲ್ಲಿ ನಡೆಯುವ ಸಾಮಾನ್ಯ ದೃಶ್ಯಗಳಿವು ಎಂದಿದ್ದಾರೆ.

    ಹುಲಿ ಎಂದರೆ ಸಾಕು ನಾವು ಆಕ್ರಮಣ ಶೀಲತೆ ಹೊಂದಿರುವ ಪ್ರಾಣಿ . ಅದಕ್ಕೆ ಬೆದರದೆ ಇರುವವರು ಇಲ್ಲ ಎಂಬುದು ನಮ್ಮ ಸಾಮಾನ್ಯ ಕಲ್ಪನೆ, ಆದರೆ, ಕೆಲವೊಂದು ಬಾರಿ ಹುಲಿಯನ್ನು ಕೂಡ ಇತರೆ ಪ್ರಾಣಿಗಳು ಹೆದರಿಸುವ, ಓಡಿಸುವ ವಿಡಿಯೋಗಳು ನಮಗೆ ಕಾಣ ಸಿಗುತ್ತದೆ. ಅಂತಹದೇ ಒಂದು ವಿಡಿಯೋ ಇದಾಗಿದೆ.



    ಕರಡಿಗಳು ಸಾಮಾನ್ಯವಾಗಿ ಹುಲಿಗಳನ್ನು ಕೆಣಕುವ ಪ್ರಯತ್ನವನ್ನು ಬಹುತೇಕ ಸಂದರ್ಭದಲ್ಲಿ ನಡೆಸುತ್ತವೆ. ಈ ಬಾರಿ ಈ ಕೆಣಕುವಿಕೆಯಲ್ಲಿ ಕರಡಿ ಸಫಲವಾಗಿದೆ. ಕೊಳದ ಹತ್ತಿರ ನಿಂತಿದ್ದ ಹುಲಿಯನ್ನು ಕೆಣುಕುವ ಕರಡಿ ಅದನ್ನು ಅಲ್ಲಿಂದ ಓಡಿಸುವಲ್ಲಿ ಯಶಸ್ವಿಯಾಗಿದೆ.



    ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಹಾಗ್ರಾದ್ರೆ ಅರಣ್ಯದ ನಿಯಮವೇನು ಎಂದು ಹಲವರು ಪ್ರಶ್ನಿಸಿದ್ದಾರೆ. ಅಲ್ಲದೇ, ಶಕ್ತಿಯಿಂದ ಅಂತಿಮದ ನಿಯಮ ಎಂದರೆ ಕಾದಾಟದಲ್ಲಿ ಬದುಕುಳಿಯುವುದು ಎಂಬುದು ಮುಖ್ಯ ಎಂದಿದ್ದಾರೆ.

    ಹುಲಿ ಎಂದರೆ ಸಾಕು ಸಾಮಾನ್ಯವಾಗಿ ಕಾಡಿನ ಇತರೆ ಪ್ರಾಣಿಗಳಲ್ಲಿ ಭಯ ಹುಟ್ಟುತ್ತದೆ. ಹಾಗಂತ ಭಯ ಪಟ್ಟುಕೊಂಡರೆ ಬದುಕಲು ಸಾಧ್ಯವೇ. ಆಕ್ರಶೀಲತೆಗೆ ಅ  ಹೋರಾಟದಲ್ಲಿ ಸೆಣಸಾಡಿ, ಮೇಲುಗೈ ಸಾಧಿಸಿದವರಿಗೆ ಜಯ ಎಂದು ಟ್ವೀಟಿಗರೊಬ್ಬರು ಕಮೆಂಟ್​ ಮೂಲಕ ತಿಳಿಸಿದ್ದಾರೆ.
    Published by:Seema R
    First published: