• Home
 • »
 • News
 • »
 • trend
 • »
 • Video: ನಿಗೂಢ ರಾತ್ರಿಯಲ್ಲಿ ಈ ಸ್ಮಶಾನದಲ್ಲಿ ಅಡ್ಡಾಡುತ್ತಿದೆ ಹಿರಿದಾದ ಹೆಬ್ಬಾವು! ವಿಡಿಯೋ ನೋಡಿ ಭಯಪಡಬೇಡಿ

Video: ನಿಗೂಢ ರಾತ್ರಿಯಲ್ಲಿ ಈ ಸ್ಮಶಾನದಲ್ಲಿ ಅಡ್ಡಾಡುತ್ತಿದೆ ಹಿರಿದಾದ ಹೆಬ್ಬಾವು! ವಿಡಿಯೋ ನೋಡಿ ಭಯಪಡಬೇಡಿ

ಹೆಬ್ಬಾವು

ಹೆಬ್ಬಾವು

6 ಅಡಿ ಅಳತೆಯ ಹೆಬ್ಬಾವು ಇದಾಗಿದ್ದು, ಸ್ಮಾರ್ಟ್​ಫೋನ್​ ಮೂಲಕ ಹೆಬ್ಬಾವಿನ ವಿಡಿಯೋ ಚಿತ್ರೀಕರಿಸಿದ್ದಾರೆ. ವಿಡಿಯೋ ಕ್ಲಿಪ್‌ನಲ್ಲಿ ಕೇಳಿಬಂದ ಧ್ವನಿಯ ಪ್ರಕಾರ ಕ್ವಾದ್ರಿ ಚಮನ್ ಸ್ಮಶಾನ ಫಲಕ್ನುಮಾದಲ್ಲಿ ಇದು ಪತ್ತೆಯಾಗಿದೆ.

 • Share this:

  ರಾತ್ರಿ ವೇಳೆ ಸ್ಮಶಾನದ (Graveyard) ಬಳಿ ಹೋಗಲು ಭಯ ಬೀಳುವವರೇ ಜಾಸ್ತಿ. ಅದರಲ್ಲೂ ಕೆಲವರು ಸ್ಮಶಾನದ ಹೆಸರು ತೆಗೆಯುತ್ತಿದ್ದಂತೆಯೇ ಹೆದರುತ್ತಾರೆ. ಆದರೆ ಇಲ್ಲೊಂದು ವಿಡಿಯೋ ವೈರಲ್ (Video Viral)​ ಆಗಿದೆ. ಅದೇನೆಂದರೆ ಸ್ಮಶಾನದಲ್ಲಿ ರಾತ್ರಿ ವೇಳೆ ಹೆಬ್ಬಾವುವೊಂದು ಹರಿದಾಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ಇದು ಹರಿದಾಡುತ್ತಿದ್ದು, ಕಗ್ಗತ್ತಲಲ್ಲಿ ಹೆಬ್ಬಾವು ಹರಿದಾಡುತ್ತಿರುವುದನ್ನು ಸ್ಮಾರ್ಟ್​ಫೋನ್​ (Smart Phone) ಬಳಕೆದಾರ ತನ್ನ ಕ್ಯಾಮೆರಾದ ಮೂಲಕ ಚಿತ್ರಿಕರಿಸಿದ್ದಾನೆ. ಅಂದಹಾಗೆಯೇ, ಒಂದು ಬಾರಿ ಈ ವಿಡಿಯೋ ನೋಡಿ.


  ಹೈದರಾಬಾದ್​ನ ಫಲಕ್ನುಮಾದ ಸ್ಮಶಾನದಲ್ಲಿ ಈ ದೃಶ್ಯ ಕಂಡುಬಂದಿದೆ. ವ್ಯಕ್ತಿಯೋರ್ವ ರುಧ್ರಭೂಮಿಯಲ್ಲಿ ಹರಿದಾಡುತ್ತಿರುವ ಹೆಬ್ಬಾವಿನ ವಿಡಿಯೋವನ್ನು ಚಿತ್ರಿಸಿದ್ದಾನೆ. ಸದ್ಯ ಇದು ವೈರಲ್​ ಆಗುತ್ತಿದೆ.


  ಇದನ್ನೂ ಓದಿ: Gold-Silver Price Today: ಇಳಿಕೆಯ ಹಾದಿ ಮರೆತ ಚಿನ್ನದ ದರ: ಬೆಳ್ಳಿ ಬೆಲೆ ಕೊಂಚ ಅಗ್ಗ!


  6 ಅಡಿ ಅಳತೆಯ ಹೆಬ್ಬಾವು ಇದಾಗಿದ್ದು, ಸ್ಮಾರ್ಟ್​ಫೋನ್​ ಮೂಲಕ ಹೆಬ್ಬಾವಿನ ವಿಡಿಯೋ ಚಿತ್ರೀಕರಿಸಿದ್ದಾರೆ. ವಿಡಿಯೋ ಕ್ಲಿಪ್‌ನಲ್ಲಿ ಕೇಳಿಬಂದ ಧ್ವನಿಯ ಪ್ರಕಾರ ಕ್ವಾದ್ರಿ ಚಮನ್ ಸ್ಮಶಾನ ಫಲಕ್ನುಮಾದಲ್ಲಿ ಇದು ಪತ್ತೆಯಾಗಿದೆ.


  ಇದನ್ನೂ ಓದಿ: Karnataka Weather Report: ಮಂಜು, ಬಿಸಿಲು, ಮಳೆ; ರಾಜ್ಯದ ಈ ಪ್ರದೇಶಗಳಲ್ಲಿ ಹವಾಮಾನ ಹೀಗಿರಲಿದೆ


  ದೃಶ್ಯದಲ್ಲಿ ಕಂಡುಬಂದತೆ ಹೆಬ್ಬಾವು ಒಂದು ಸಮಾಧಿಯಿಂದ ಮತ್ತೊಂದು ಸಮಾಧಿಗೆ ಚಲಿಸುತ್ತಿರುವ ವಿಡಿಯೋವನ್ನು ಇಲ್ಲಿ ಕಾಣಬಹುದಾಗಿದೆ. ಶುಕ್ರವಾರದಂದು ಅಲ್ಲಿನ ಮಕ್ಕಳು ಹುಣಸೆಹಣ್ಣು ಕೊಯ್ಯಲು ಸ್ಮಶಾನಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿ ಹೆಬ್ಬಾವು ಇದೆ ಎಂದು ಪತ್ತೆ ಹಚ್ಚಿದರು. ನಂತರ ಈ ವಿಚಾರವನ್ನನು ಸ್ಥಳೀಯರ ಗಮನಕ್ಕೆ ತಂದರು. ಬಳಿಕ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸುವ ಮೂಲಕ ಹೆಬ್ಬಾವನ್ನು ಕಾಡಿಗೆ ಕೊಂಡೊಯ್ದು ಬಿಡಲಾಗಿದೆ.  ಹಿರಿದಾದ ಹಾವು ಹೆಬ್ಬಾವು


  ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದರೆ ಅಚಚರಿ ಪಡಬೇಕಾಗಿಲ್ಲ. ಅದರಲ್ಲೂ ಸರಿಸೃಪಗಳು ನಗರ ಪ್ರದೇಶದಂತಹ ಮನೆಯಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತವೆ. ಆದರೆ ಇದನ್ನು ಇದ್ದಕ್ಕಿಂದ್ದಂತೆಯೇ ಕಂಡಾಗ ಭಯವಾಗೋದು ಪಕ್ಕಾ. ಹಾಗೆಯೇ ಹೆಬ್ಬಾವು ಕೂಡ ಆಹಾರ ಅರಿಸಿಕೊಂಡು ಸ್ಮಶಾನದಲ್ಲಿ ಅಲೆದಾಡಿದೆ. ಆದರೆ ಇದನ್ನು ರಾತ್ರಿ ವೇಳೆ ಮೊಬೈಲ್​ ಮೂಲಕ ಸೆರೆ ಹಿಡಿಯಲಾಗಿದೆ.


  ಹೆಬ್ಬಾವಿಗೆ ಒಂದು ಬಾರಿ ಯಾವುದಾದರು ಪ್ರಾಣಿ ಸಿಕ್ಕರೆ ಅದನ್ನು ಅಷ್ಟು ಸುಲಭಕ್ಕೆ ಬಿಡುವುದಿಲ್ಲ. ಮಾತ್ರವಲ್ಲದೆ ಹೆಬ್ಬಾವು ಬೇಟೆ ಕಳೆದುಕೊಳ್ಳುವುದು ತೀರಾ ಅಪರೂಪ.

  Published by:Harshith AS
  First published: