Viral Video: ಇಷ್ಟೊಂದು ಸುಖಿ ಬೇರೆ ಯಾರಿದ್ದಾರೆ? ಮುದ್ದಾದ ಪಾಂಡಾದ ವಿಡಿಯೋ ವೈರಲ್

ತಮ್ಮದೇ ಲೋಕದಲ್ಲಿ ಕಾಲಕಳೆಯುವ ಪಾಂಡಾಗಳ ವಿಡಿಯೋ ಮನಸ್ಸಿಗೆ ಆಹ್ಲಾದ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗೆ ಸದ್ಯ ಮರದಲ್ಲಿ ಮೇಲೆ ಕೂತು ಯಾವುದೋ ಹಣ್ಣನ್ನು ತಿನ್ನುತ್ತಿರುವ ಪಾಂಡಾದ ವಿಡಿಯೋ ಒಂದು ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.

ಪಾಂಡಾ

ಪಾಂಡಾ

  • Share this:
ಪ್ರಾಣಿಗಳು (Animal) ಏನೇ ಮಾಡಿದ್ರೂ ಚೆಂದ, ಅವುಗಳ ಆಟ, ತುಂಟಾಟ, ಚೆಲ್ಲಾಟ ನೋಡಲು ಒಂದು ರೀತಿ ಖುಷಿ ಎನಿಸುತ್ತದೆ. ಅದ್ರಲ್ಲೂ ಪಾಂಡಗಳು (Panda) ಅಂದರೆ ಕೇಳಬೇಕೆ... ಮುದ್ದಾದ ಪಾಂಡ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಈ ಮುದ್ದು ಪಾಂಡಾಗಳ ವಿಡಿಯೋ ಸಾಕಷ್ಟು ಓಡುತ್ತವೆ. ಇವುಗಳ ವಿಡಿಯೋವನ್ನು ಜನ ತಮ್ಮ ಫೋನ್ ಸ್ಕ್ರೋಲ್ ಮಾಡದೇ ನೋಡಿ ಖುಷಿ ಪಡುತ್ತಾರೆ. ಈ ದೈತ್ಯ ಕಪ್ಪು, ಬಿಳಿ ಪಾಂಡಗಳಿಗೆ ತಿನ್ನುವುದು (Eating) ಮತ್ತು ನಿದ್ರೆ (Sleeping) ಮಾಡುವುದೆಂದರೆ ಬಹಳ ಇಷ್ಟವಾದ ಕೆಲಸ ನೋಡಿ. ಪಾಂಡಾಗಳು ಅವುಗಳು ಮಾಡುವ ತುಂಟಾಟದ ಜೊತೆಗೆ ಹೆಚ್ಚು ತಿನ್ನುವ ಮತ್ತು ನಿದ್ರಿಸುವ ವಿಚಾರದಿಂದ ಸುದ್ದಿಯಲ್ಲಿರುತ್ತವೆ ಮತ್ತು ಅವುಗಳ ವಿಡಿಯೋ ಸಹ ವೈರಲ್ (Viral) ಆಗುತ್ತಿರುತ್ತವೆ.

ತಮ್ಮದೇ ಲೋಕದಲ್ಲಿ ಕಾಲಕಳೆಯುವ ಪಾಂಡಾಗಳ ವಿಡಿಯೋ ಮನಸ್ಸಿಗೆ ಆಹ್ಲಾದ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗೆ ಸದ್ಯ ಮರದಲ್ಲಿ ಮೇಲೆ ಕೂತು ಯಾವುದೋ ಹಣ್ಣನ್ನು ತಿನ್ನುತ್ತಿರುವ ಪಾಂಡಾದ ವಿಡಿಯೋ ಒಂದು ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.

ಮರದ ಮೇಲೆ ಕುಳಿತು ಹಣ್ಣು ಸೇವಿಸುತ್ತಿರುವ ಪಾಂಡಾ
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮರದ ಎತ್ತರದ ಕೊಂಬೆಯ ಮೇಲೆ ಪಾಂಡಾವೊಂದು ಕುಳಿತಿರುವುದನ್ನು ಕಾಣಬಹುದು. ಇದು ಸಂತೋಷದಿಂದ ಮಾವಿನ ಹಣ್ಣಿನಂತೆ ಕಾಣುವ ಯಾವುದೋ ಕೆಂಪನೆಯ ಹಣ್ಣನ್ನು ತಿನ್ನುತ್ತಿದೆ. ಮರದ ಮೇಲೆ ನಿಶ್ಚಿಂತೆಯಿಂದ ಕುಳಿತ ಪಾಂಡಾ ಕೇವಲ ತಿನ್ನುವುದರಲ್ಲಿಯೇ ಮಗ್ನನಾಗಿ ಬಿಟ್ಟಿದೆ. ಹಣ್ಣಿನ ರುಚಿಯೋ ಏನೋ ಅದನ್ನು ತಿನ್ನುವುದರಲ್ಲಿ ಮಗ್ನವಾಗಿಸಿದೆ.

ಇದನ್ನೂ ಓದಿ: Tortoise: 30 ವರ್ಷಗಳ ನಂತರ ತನ್ನ ಒಡತಿಯ ಕೈಗೆ ಸಿಕ್ಕ ಆಮೆ! ಅಷ್ಟಕ್ಕೂ ಎಲ್ಲಿ ಕಾಣೆಯಾಗಿತ್ತು?

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಸುಂದರವಾದ ಪರಿಸರದಲ್ಲಿ ಪಾಂಡಾವು ಅತಿ ಎತ್ತರದ ಮರದ ಕೊಂಬೆ ಮೇಲೆ ಕುಳಿತಿರುವುದನ್ನು ಕಾಣಬಹುದು. ಮರದ ಕೆಳಗೆ ಜುಳು ಜುಳು ಅಂತಾ ತೊರೆ ಹರಿಯುತ್ತಿದೆ, ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಮರ ಗಿಡಗಳ ಪರಿಸರ, ಸಣ್ಣಗೆ ಜಿಮಿ ಜಿಮಿ ಮಳೆ. ಅಬ್ಬಾಬ್ಬಾ ಈ ಸುಂದರ, ಶಾಂತ ಪರಿಸರದಲ್ಲಿ ಈ ಪಾಂಡಾ ಅದನ್ನೆಲ್ಲಾ ಸವಿಯುತ್ತಾ ಸಿಹಿಯಾದ ಹಣ್ಣಿನಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ. ವಿಡಿಯೋದಲ್ಲಿನ ಚಿತ್ರಣವು ಥೇಟ್ ಸಿನಿಮಾದಲ್ಲಿ ತೋರಿಸುವ ದೃಶ್ಯದಂತೆ ಕಾಣಿಸುತ್ತಿದೆ. ಮರದ ಕೊಂಬೆ ಮೇಲೆ ಕೂತು ಸಂತೋಷದಿಂದ ಹಣ್ಣುಗಳನ್ನು ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಚಿಕ್ಕ ವಿಡಿಯೋ ಕ್ಲಿಪ್ ತುಂಬಾ ಆಕರ್ಷಕವಾಗಿದೆ ಮತ್ತು ನೀವು ಅದನ್ನು ಮಿಸ್ ಮಾಡದೇ ನೊಡಲೇ ಬೇಕು.

1 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ, ಹಲವಾರು ಕಾಮೆಂಟ್
ಪರಿಸರ ಜೊತೆ ತನ್ನ ಆಹಾರವನ್ನು ಅನುಭವಿಸುತ್ತ ಕುಳಿತಿರುವ ಪಾಂಡಾದ ವಿಡಿಯೋವನ್ನು ಇಂಡಿಯಾಟುಡೇ ಎಂಬ ಇನ್ಸ್ಟಾಗ್ರಾಮ್ ಖಾತೆಯು ತನ್ನ ಪುಟದಲ್ಲಿ ಹಂಚಿಕೊಂಡಿದೆ. "ಜೀವನವು ಇಷ್ಟೇ ಆಗಿರಬೇಕು ಮತ್ತು ಇನ್ನೇನೂ ಆಗಬಾರದು" ಎಂಬ ಶೀರ್ಷಿಕೆ ಅಡಿಯಲ್ಲಿ ಪಾಂಡಾ ಹಣ್ಣನ್ನು ತಿನ್ನುತ್ತಿರುವ ವಿಡಿಯೋವನ್ನು ಇಂಡಿಯಾಟುಡೇ ಪೋಸ್ಟ್ ಮಾಡಿದೆ.


View this post on Instagram


A post shared by India Today (@indiatoday)
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ, ವೀಡಿಯೊವನ್ನು ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನೆಟಿಗ್ಗರು ಮುದ್ದಾದ ಪಾಂಡಾವನ್ನು ಹೊಗಳಲು ನೂರಾರು ಕಾಮೆಂಟ್ ಸಹ ಮಾಡಿದ್ದಾರೆ.

ಇದನ್ನೂ ಓದಿ: Viral Video: ಈ ಆಮೆಗಳ ವಿಡಿಯೋ 8 ಮಿಲಿಯನ್ ಜನ ನೋಡಿದ್ದಾರೆ! ನೀವಿನ್ನೂ ನೋಡಿಲ್ವಾ?

ಒಬ್ಬ ನೆಟ್ಟಿಗರು "ನಾವು ಹಂಬಲಿಸುವ ಆದರೆ ಹೊಂದಲು ಸಾಧ್ಯವಿಲ್ಲದ ಜೀವನ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು "ಓಹ್ ತುಂಬಾ ಮುದ್ದಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಕ್ಯೂಟಾಗಿದೆ ಎಂದರೆ ಇನ್ನೂ ಹಲವರು ಹೃದಯದ ಎಮೋಜಿಗಳನ್ನು ಪೋಸ್ಟ್ ಮಾಡುವ ಮೂಲಕ ಪಾಂಡಾಗೆ ಪ್ರೀತಿ ತೊರಿದ್ದಾರೆ. ಈ ವಿಡಿಯೋ ನೊಡಿದ ಹಲವರಿಗೆ ಈ ರೀತಿ ಪ್ರಕೃತಿ ಮಧ್ಯೆ ಕಳೆದುಹೋಗಿ ತಮ್ಮಿಷ್ಟದ ಜೀವನ ನಡೆಸುವ ಆಸೆಯಂತೂ ಆಗುವುದು ಖಂಡಿತ.
Published by:Ashwini Prabhu
First published: