• Home
 • »
 • News
 • »
 • trend
 • »
 • Viral Video: ಖುಷಿಯಿಂದ ಕುಣಿದಾಡಿದ ಘೇಂಡಾಮೃಗದ ವಿಡಿಯೋ ವೈರಲ್‌! ಅಷ್ಟಕ್ಕೂ ಸಂತೋಷಕ್ಕೆ ಕಾರಣವೇನು ಗೊತ್ತಾ?

Viral Video: ಖುಷಿಯಿಂದ ಕುಣಿದಾಡಿದ ಘೇಂಡಾಮೃಗದ ವಿಡಿಯೋ ವೈರಲ್‌! ಅಷ್ಟಕ್ಕೂ ಸಂತೋಷಕ್ಕೆ ಕಾರಣವೇನು ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಘೇಂಡಾಮೃಗ ಮತ್ತು ಅದನ್ನು ನೋಡಿಕೊಳ್ಳುವ ಕೇರ್‌ ಟೇಕರ್‌ ನಡುವಿನ ಸುಂದರವಾದ ಬಾಂಧವ್ಯವನ್ನು ತೋರಿಸುವ ಚಿಕ್ಕ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 • Share this:

  ಪ್ರಾಣಿಗಳ (Animals) ಪ್ರಪಂಚ ವಿಚಿತ್ರವಾದದ್ದು. ಅವರಲ್ಲೂ ಪ್ರೀತಿ, ಭಾವನೆ, ಖುಷಿ, ದುಃಖ ಎಲ್ಲವೂ ಇರುತ್ತದೆ. ಆದ್ರೆ ಅದನ್ನು ವ್ಯಕ್ತ ಪಡಿಸುವ ರೀತಿ ಬೇರೆ ಬೇರೆ. ತಮಗೆ ಬರುವ ರೀತಿಯಲ್ಲಿ ಅವು ತಮ್ಮ ಭಾವನೆ ವ್ಯಕ್ತಪಡಿಸುತ್ತವೆ. ಇಲ್ಲೊಂದು ಘೇಂಡಾಮೃಗ (Rhino) ಕುಣಿದು ಕುಪ್ಪಳಿಸಿ ಖುಷಿಯನ್ನು ವ್ಯಕ್ತಪಡಿಸಿದ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇತ್ತೀಚೆಗೆ ಹಲವಾರು ಈ ರೀತಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Social Media Viral) ಆಗಿದೆ. ಇದೀಗ ಘೇಂಡಾಮೃಗ ಮತ್ತು ಒಂದು ಹುಡುಗಿಯ ಜೊತೆಗಿನ ವಿಡಿಯೋ ಬಹಳಷ್ಟು ವೈರಲ್ ಆಗುತ್ತಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಮೆಚ್ಚುಗೆಯನ್ನು ವೀಕ್ಷಕರು ವ್ಯಕ್ತಪಡಿಸಿದ್ದಾರೆ.


  ಘೇಂಡಾಮೃಗ ಮತ್ತು ಅದನ್ನು ನೋಡಿಕೊಳ್ಳುವ ಕೇರ್‌ ಟೇಕರ್‌ ನಡುವಿನ ಸುಂದರವಾದ ಬಾಂಧವ್ಯವನ್ನು ತೋರಿಸುವ ಚಿಕ್ಕ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


  ಖುಷಿಯಾಗಿ ಕುಣಿಯುತ್ತೆ ಘೇಂಡಾಮೃಗ!


  ಈಗ ವೈರಲ್ ಆಗಿರುವ ವೀಡಿಯೊವನ್ನು ನವೆಂಬರ್ 11 ರಂದು ಬಿ & ಎಸ್ ಹೆಸರಿನ ಪುಟವೊಂದು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ, ಬೇಲಿಯಿಂದ ಸುತ್ತುವರಿದ ಆವರಣದೊಳಗೆ ಘೇಂಡಾಮೃಗ ನಿಂತಿರುವುದನ್ನು ಗಮನಿಸಬಹುದು. ಕೆಲವು ಸೆಕೆಂಡುಗಳಲ್ಲಿ, ಒಬ್ಬ ಕೇರ್‌ ಟೇಕರ್‌ ಅಲ್ಲಿಗೆ ಬರುತ್ತಾಳೆ.


  ಇದನ್ನೂ ಓದಿ: ಐಫೋನ್ 13ಗೆ ಹೋಲುವ ಸ್ಯಾಮ್​ಸಂಗ್ ಎಸ್22 ಅಲ್ಟ್ರಾ ಸ್ಮಾರ್ಟ್​​ಫೋನ್​ ಬಿಡುಗಡೆ!


  ಯಾಕೆ ಈ ರೀತಿ ವರ್ತಿಸಿದೆ?


  ಒಂಟಿಯಾಗಿದ್ದ ಘೇಂಡಾಮೃಗಕ್ಕೆ ಆಕೆಯನ್ನು ನೋಡಿ ಸಂತೋಷವಾಗುತ್ತೆ. ಘೇಂಡಾಮೃಗವು ಕೇರ್‌ಟೇಕರ್ ಅನ್ನು ನೋಡುತ್ತಾ ಎಡದಿಂದ ಬಲಕ್ಕೆ ನೆಗೆಯುವುದನ್ನು ಪ್ರಾರಂಭಿಸಿದಾಗ ಅದಕ್ಕಾಗಿರೋ ಸಂತೋಷವನ್ನು ನಾವು ನೋಡಬಹುದು. ಈ ಕ್ಷಣ ನೋಡೋಕೆ ತುಂಬಾ ಮುದ್ದಾಗಿದೆ.


  ಸೋಷಿಯಲ್ ಮೀಡಿಯಾದಲ್ಲಿ ವೈರಲ್:


  ಈ ವೀಡಿಯೊಗೆ "ರೈನೋ ತನ್ನ ಕೇರ್‌ಟೇಕರ್‌ ನೋಡಿ ಖುಷಿಯಿಂದ ನೆಗೆದಾಡಿದೆ” ಎಂಬುದಾಗಿ ಟೈಟಲ್ ನೀಡಲಾಗಿದೆ. ಈ ವಿಡಿಯೋವನ್ನು ಹಂಚಿಕೊಂಡಾಗಿನಿಂದ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ವೀಡಿಯೊ 1.3 ಮಿಲಿಯನ್ ವ್ಯೂವ್ಸ್‌ ಗಳನ್ನು ಮತ್ತು 67,000 ಕ್ಕೂ ಹೆಚ್ಚು ಲೈಕ್ಸ್‌ ಗಳನ್ನು ಪಡೆದಿದೆ.


  ಟ್ವಿಟರ್​ನಲ್ಲಿ ವೀಕ್ಷಕರ ಕಮೆಂಟ್​​ಗಳು:


  ಈ ವಿಡಿಯೋಗೆ ಹಲವಾರು ಟ್ವಿಟ್ಟರ್‌ ಬಳಕೆದಾರರು ಹೃದಯಸ್ಪರ್ಶಿ ಕಮೆಂಟ್‌ಗಳನ್ನು ನೀಡಿದ್ದಾರೆ. ಎರಡು ಜೀವಿಗಳ ನಡುವಿನ ಈ ಸಂಬಂಧವನ್ನು ಅನೇಕರು ಅದ್ಭುತ ಎಂದು ಕರೆದಿದ್ದಾರೆ. ಘೇಂಡಾಮೃಗ ಮುದ್ದಾಗಿದೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಇನ್ನೊಬ್ಬರು, "ಇದು ನನ್ನ ನಾಯಿಯನ್ನು ನಾನು ಬಹಳ ದಿನಗಳ ನಂತರ ನೋಡಿದಾಗ ಆಗಿದ್ದ ಸಂತೋಷವನ್ನು ನಪಿಸುತ್ತದೆ!" ಎಂದು ಹೇಳಿದ್ದಾರೆ.


  ಇನ್ನೂ ಕೆಲವು ಬಳಕೆದಾರರು ಪ್ರಾಣಿಗಳನ್ನು ಮೃಗಾಲಯದ ಆವರಣಗಳಲ್ಲಿ ಇರಿಸುವ ಕಲ್ಪನೆಯನ್ನು ಸಹ ಪ್ರಶ್ನಿಸಿದ್ದಾರೆ. ಒಬ್ಬ ಬಳಕೆದಾರರು, "ಮೃಗಾಲಯದ ಬಗ್ಗೆ ನನಗೆ ಮಿಶ್ರ ಭಾವನೆಗಳಿವೆ, ಆದರೆ ಇದು ಅದ್ಭುತವಾಗಿದೆ " ಎಂದು ಕಮೆಂಟ್ ಮಾಡಿದ್ದಾರೆ.  ಘೇಂಡಾಮೃಗದ ಬಗ್ಗೆ ಉತ್ತಮ ಪ್ರತಿಕ್ರಿಯೆ:


  "2019 ರ ಹೊತ್ತಿಗೆ, ಸುಮಾರು 300 ಮೃಗಾಲಯಗಳಲ್ಲಿ 1000 ಕ್ಕೂ ಹೆಚ್ಚು ಘೇಂಡಾಮೃಗಳಿರಲಿವೆ. ವಾಸ್ತವಿಕವಾಗಿ ಹೇಳಲಾದ ಎಲ್ಲಾ ಘೇಂಡಾಮೃಗಗಳು ಬಹಳ ಸರಳವಾದ ಕಾರಣಕ್ಕಾಗಿ ಸೆರೆಯಲ್ಲಿವೆ. ಪ್ರತಿಯೊಂದು ಪ್ರಾಣಿಯು ತನ್ನ ಸ್ಥಾನವನ್ನು ಹೊಂದಲು ಅರ್ಹವಾಗಿದೆ. ನೈಸರ್ಗಿಕ ಆವಾಸಸ್ಥಾನ " ಎಂಬುದಾಗಿ ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ.


  ಮತ್ತೊಬ್ಬ ವ್ಯಕ್ತಿ "ಕ್ಷಮಿಸಿ, ನಾನು ಕೊರಗುತ್ತೇನೆ. ಅವರು ತಮ್ಮ ಕುಟುಂಬಗಳೊಂದಿಗೆ ಕಾಡಿನಲ್ಲಿರಬೇಕು. ಊಹಿಸಿಕೊಳ್ಳಿ, 1000 ಚದರ ಮೀಟರ್ ವಿಸ್ತೀರ್ಣದ ಬಂಗಲೆಯಲ್ಲಿ ಇವುಗಳನ್ನು ಇರಿಸಲಾಗಿದೆ. ಅವು ಏಕಾಂಗಿಯಾಗಿ ಉಳಿದಿವೆ. ಯಾವುದೇ ಭೇಟಿಗಳಿಲ್ಲ, ಕುಟುಂಬದೊಂದಿಗೆ ಸಂಪರ್ಕವಿಲ್ಲ. ಆದರೂ ಇದು ಮುದ್ದಾದ ವಿಡಿಯೋ ಎಂದು ಹೇಳಿದ್ದಾರೆ.


  ಒಟ್ಟಾರೆ ಕಾಡಿನಲ್ಲಿರಬೇಕಾದ ಅನೇಕ ಪ್ರಾಣಿಗಳನ್ನು ಮನುಷ್ಯ ಹಿಡಿದು ತಂದು ಸೆರೆಯಲ್ಲಿಟ್ಟು ಸಂತೋಷ ಪಡುತ್ತಾನೆ. ಅದು ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಹೀಗೆ ತಂದಿಟ್ಟಿರೋ ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಅದರ ಸ್ವಾತಂತ್ರ್ಯವನ್ನು ಕಿತ್ತುಕೊಂಡು, ಅದಕ್ಕೆ ಆಹಾರವನ್ನೂ ಸರಿಯಾಗಿ ನೀಡದೇ ಹಿಂಸೆ ಕೊಟ್ಟರೆ ಅದರಂಥ ಪಾಪ ಮತ್ತೊಂದಿರದು.


  ಆದ್ರೆ ಇಲ್ಲಿರುವ ಘೇಂಡಾಮೃಗವನ್ನು ನೋಡಿದರೆ ಅದನ್ನು ಚೆನ್ನಾಗಿ ನೋಡಿಕೊಂಡಿರುವ ಹಾಗೆ ಕಾಣುತ್ತೆ. ಜೊತೆಗೆ ಅದು ಕೇರ್‌ ಟೇಕರ್‌ ಮೇಲೆ ವ್ಯಕ್ತಪಡಿಸ್ತಿರೋ ಪ್ರೀತಿಯನ್ನು ನೋಡಿದರೆ ಅವರ ನಡುವಿನ ಬಾಂದವ್ಯ ಅದೆಷ್ಟು ಚೆನ್ನಾಗಿದೆ ಎಂಬುದು ಅರ್ಥವಾಗುತ್ತೆ.

  Published by:Prajwal B
  First published: