• Home
  • »
  • News
  • »
  • trend
  • »
  • Viral Video: ಚಿಂಪಾಂಜಿ ತನ್ನ ಮರಿಯನ್ನು ತಬ್ಬಿಕೊಂಡ ದೃಶ್ಯ ವೈರಲ್! ಅಂತದ್ದೇನಿದೆ ಈ ವಿಡಿಯೋದಲ್ಲಿ?

Viral Video: ಚಿಂಪಾಂಜಿ ತನ್ನ ಮರಿಯನ್ನು ತಬ್ಬಿಕೊಂಡ ದೃಶ್ಯ ವೈರಲ್! ಅಂತದ್ದೇನಿದೆ ಈ ವಿಡಿಯೋದಲ್ಲಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಾಯಿ ಚಿಂಪಾಂಜಿ ತನ್ನ ನವಜಾತ ಶಿಶುವಿನೊಂದಿಗೆ ಮತ್ತೆ ಒಂದಾಗುವ ಈ ವೀಡಿಯೋ ಖಂಡಿತವಾಗಿಯೂ ನಿಮ್ಮ ಹೃದಯವನ್ನು ಬೆಚ್ಚಗಾಗಿಸುತ್ತದೆ. ಈಗಾಗಲೇ ನಾವು ಈ ರೀತಿಯ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ನೋಡಿರುತ್ತೇವೆ. ಈಗ ಮತ್ತೊಂದು ಇಂತಹದೇ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ ನೋಡಿ.

ಮುಂದೆ ಓದಿ ...
  • Share this:

    ತಾಯಿ (Mother) ತನ್ನ ನವಜಾತ ಶಿಶುವಿನ ಬಗ್ಗೆ ತುಂಬಾನೇ ಕಾಳಜಿಯನ್ನು ಹೊಂದಿರುತ್ತಾಳೆ ಅಂತ ಹೇಳಬಹುದು. ಆದರೆ ಇದು ಮನುಷ್ಯ ಜೀವಿಗಳಿಗಷ್ಟೇ ಸೀಮಿತವಾಗಿಲ್ಲ, ಪ್ರಾಣಿಗಳಿಗೂ (Animals) ಸಹ ತಮ್ಮ ನವಜಾತ ಶಿಶುಗಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಮತ್ತು ಕಾಳಜಿ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು,ಅದೇನೂ ಗೊತ್ತಿಲ್ಲ, ಮನುಷ್ಯನಂತೆ ಪ್ರಾಣಿಗಳಲ್ಲಿಯೂ ಸಹ ಆ ಭಗವಂತ (God) ಭಾವನೆಗಳನ್ನು, ಪ್ರೀತಿ ಮತ್ತು ಅಕ್ಕರೆಯನ್ನು ನೀಡಿದ್ದಾನೆ. ಅದಕ್ಕೆ ನೋಡಿ ಅನೇಕ ಪ್ರಾಣಿಗಳು ತಮ್ಮ ಮರಿಗಳ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತವೆ. ಈ ರೀತಿಯ ಸನ್ನಿವೇಶಗಳನ್ನು ನಾವು ಹಲವು ಬಾರಿ ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಚಿಂಪಾಂಜಿಯ (Chimpanzee) ವಿಡಿಯೋ (Video) ಬಹಳಷ್ಟು ವೈರಲ್ ಆಗಿದೆ.


    ಅದರಲ್ಲೂ ಈ ನಾಯಿಗಳು ತಮ್ಮ ಮರಿಗಳ ಹತ್ತಿರಕ್ಕೆ ಯಾರಾದರೂ ಬರುತ್ತಿದ್ದಾರೆ ಅಂತ ಕಣ್ಣಿಗೆ ಬಿದ್ದರೆ ಸಾಕು, ಜೋರಾಗಿ ಬೊಗಳಲು ಶುರು ಮಾಡುತ್ತವೆ. ಈ ಒಂದು ನಡುವಳಿಕೆ ಪ್ರಾಣಿಗಳಲ್ಲಿಯೂ ಸಹ ತಮ್ಮ ಮರಿಗಳ ಬಗ್ಗೆ ಎಷ್ಟೊಂದು ಪ್ರೀತಿ ಮತ್ತು ಕಾಳಜಿ ಇದೆ ಎನ್ನುವುದನ್ನು ತೋರಿಸುತ್ತದೆ.


    ಈಗಾಗಲೇ ನಾವು ಈ ರೀತಿಯ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ನೋಡಿರುತ್ತೇವೆ. ಈಗ ಮತ್ತೊಂದು ಇಂತಹದೇ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ ನೋಡಿ.




    ತಾಯಿ ಚಿಂಪಾಂಜಿ ತನ್ನ ಶಿಶುವನ್ನ ನೋಡಿದ ತಕ್ಷಣ ಏನು ಮಾಡಿದೆ ಗೊತ್ತೇ?


    ತಾಯಿ ಚಿಂಪಾಂಜಿ ತನ್ನ ನವಜಾತ ಶಿಶುವಿನೊಂದಿಗೆ ಮತ್ತೆ ಒಂದಾಗುವ ಈ ವೀಡಿಯೋ ಖಂಡಿತವಾಗಿಯೂ ನಿಮ್ಮ ಹೃದಯವನ್ನು ಬೆಚ್ಚಗಾಗಿಸುತ್ತದೆ. ಈ ಹೃದಯಸ್ಪರ್ಶಿ ಕ್ಲಿಪ್ ಅನ್ನು ಸೆಡ್ಜ್ವಿಕ್ ಕೌಂಟಿ ಮೃಗಾಲಯವು ತನ್ನ ಸಾಮಾಜಿಕ ಮಾಧ್ಯಮ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದೆ. ನವಜಾತ ಗಂಡು ಮಗು ಮಂಗಳವಾರ ಸಿ-ಸೆಕ್ಷನ್ ಮೂಲಕ ಜನಿಸಿದೆ ಎಂದು ಹೇಳಲಾಗುತ್ತಿದೆ.


    ಇದನ್ನೂ ಓದಿ: 12 ದಿನಗಳಿಂದ ವೃತ್ತಾಕಾರದಲ್ಲಿ ಚಲಿಸುತ್ತಿರುವ ಕುರಿಗಳು! ಏನಾಗಿದೆ ಈ ಪ್ರಾಣಿಗಳಿಗೆ?


    ಚಿಂಪಾಂಜಿಯು ಹುಟ್ಟಿದ ನಂತರ ತನ್ನಷ್ಟಕ್ಕೆ ತಾನೇ ಸರಿಯಾಗಿ ಉಸಿರಾಡುತ್ತಿರಲಿಲ್ಲ, ಆದ್ದರಿಂದ ಆಸ್ಪತ್ರೆಯ ಸಿಬ್ಬಂದಿ ಅದನ್ನು ಎರಡು ದಿನಗಳವರೆಗೆ ಅಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದರು. ವೀಡಿಯೋದಲ್ಲಿ, ಮಹಾಲೆ ಎಂಬ ಹೆಸರಿನ ತಾಯಿ, ಎರಡು ದಿನಗಳ ಪ್ರತ್ಯೇಕತೆಯ ನಂತರ ತನ್ನ ಮಗುವನ್ನು ನೋಡಿದ ನಂತರ ತನ್ನ ಮಗನನ್ನು ತನ್ನ ಎದೆಗೆ ಅಪ್ಪಿಕೊಳ್ಳುತ್ತಾಳೆ. ಮರಿ ಚಿಂಪಾಂಜಿಯನ್ನು ಕುಚೇಜಾ ಎಂದು ಹೆಸರಿಸಲಾಯಿತು, ಇದರರ್ಥ ಸ್ವಾಹಿಲಿಯಲ್ಲಿ 'ಪ್ಲೇ' ಎಂದರ್ಥ.


    ಎರಡು ದಿನ ತಾಯಿ ಚಿಂಪಾಂಜಿ ತನ್ನ ನವಜಾತ ಶಿಶುವಿನಿಂದ ದೂರ ಇರಬೇಕಾಯಿತು..


    ವಿಡಿಯೋ ಜೊತೆಗೆ "ಸುಮಾರು 2 ಪೂರ್ಣ ದಿನಗಳ ನಂತರ, ಮಹಾಲೆ ಮತ್ತು ಮಗು ಇಂದು ಬೆಳಿಗ್ಗೆ ಮತ್ತೆ ಒಂದಾಗಿದ್ದಾರೆ! ಮಹಾಲೆ ತನ್ನ ಹೆರಿಗೆಯನ್ನು ನಿಲ್ಲಿಸಿದ ನಂತರ ಸಿ-ಸೆಕ್ಷನ್ ಮೂಲಕ ಮಗುವಿಗೆ ಜನ್ಮ ನೀಡಿದಳು. ಮಗು ಹುಟ್ಟಿದಾಗ ತನ್ನಷ್ಟಕ್ಕೆ ತಾನೇ ಸಾಕಷ್ಟು ಆಮ್ಲಜನಕವನ್ನು ಪಡೆಯುತ್ತಿರಲಿಲ್ಲ, ಆದ್ದರಿಂದ ಅವನು ತಾಯಿಯ ಬಳಿ ಇರುವಷ್ಟು ಆರೋಗ್ಯಕರವಾಗುವವರೆಗೂ ವೈದ್ಯಕೀಯ ತಂಡದಿಂದ ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆಯಲು ಆಸ್ಪತ್ರೆಯಲ್ಲಿಯೇ ಉಳಿಯಬೇಕಾಯಿತು" ಎಂದು ಅವರು ಹೇಳಿದರು.


    ಇನ್ನೊಂದು ಪೋಸ್ಟ್ ನಲ್ಲಿ ಏನಿದೆ?


    ಮತ್ತೊಂದು ಪೋಸ್ಟ್ ನಲ್ಲಿ, ಮೃಗಾಲಯವು ಮಗು ಮತ್ತು ತಾಯಿ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಫಾಲೋವರ್ಸ್ ಗಳಿಗೆ ತಿಳಿಸಿದೆ. "ಜಸ್ಟ್ ಇನ್ ದಿ ಕೀಪರ್ಸ್: ಮಹಾಲೆ ಮತ್ತು ಬೇಬಿ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ನಮ್ಮ ಹುಡುಗನಿಗೆ ಈಗ ಒಂದು ಹೆಸರಿದೆ! ಕುಚೇಜಾ ಎಂದರೆ ಸ್ವಾಹಿಲಿಯಲ್ಲಿ "ಪ್ಲೇ" ಎಂದರ್ಥ. ಈ ವೀಡಿಯೋದಲ್ಲಿ, ಅವನು ಶುಶ್ರೂಷೆ ಮಾಡುವಾಗ ತಾಯಿ ಮತ್ತು ಮಗನ ನಡುವಿನ ಮಧುರ ಕ್ಷಣವನ್ನು ನೀವು ನೋಡಬಹುದು" ಎಂದು ಬರೆದಿದ್ದಾರೆ.


    ಮೃಗಾಲಯದ ಪ್ರಾಣಿ ಆರೋಗ್ಯ ನಿರ್ದೇಶಕಿ ಡಾ.ಹೀದರ್ ಅರೆನ್ಸ್ ಅವರು ಇತರ ವೈದ್ಯರೊಂದಿಗೆ ಸೇರಿ ಚಿಂಪಾಂಜಿಯ ಹೆರಿಗೆ ಮಾಡಿಸುವುದು ಮತ್ತು ಮಗು ಚಿಂಪಾಂಜಿಯ ಆರೋಗ್ಯವನ್ನು ನೋಡಿಕೊಳ್ಳುವ ಕೆಲಸಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು ಎಂದು ವರದಿ ತಿಳಿಸಿದೆ.

    Published by:Prajwal B
    First published: