Viral Video: ಪುಟ್ಟ ಕಂದಮ್ಮಗಳ ಜೊತೆ ನಾಯಿ ಮರಿ ತುಂಟಾಟ! ಮಿಸ್ ಮಾಡದೇ ಈ ವಿಡಿಯೋ ನೋಡಿ ಖುಷಿಪಡಿ

ಈ ಪುಟ್ಟ ಕಂದಮ್ಮಗಳ ಜೊತೆಯಲ್ಲಿ ಆಟವಾಡಿಕೊಂಡಿರುವ ನಾಯಿಮರಿಗಳನ್ನು ನೋಡುವುದು ಮನಸ್ಸಿಗೆ ಎಷ್ಟೊಂದು ಮುದ ನೀಡುತ್ತದೆ ಎಂದರೆ ಅದನ್ನು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ.

ಮಗುವಿನೊಂದಿಗೆ ನಾಯಿ ಸವಿ ನಿದ್ದೆ!

ಮಗುವಿನೊಂದಿಗೆ ನಾಯಿ ಸವಿ ನಿದ್ದೆ!

  • Share this:
    ಪುಟ್ಟ ಕಂದಮ್ಮಗಳನ್ನು (Baby) ನೋಡಿದರೆ ಯಾರಿಗೆ ತಾನೇ ಅವರನ್ನು ಮುದ್ದು ಮಾಡಬೇಕೆಂದು ಅನ್ನಿಸುವುದಿಲ್ಲ ಹೇಳಿ..? ಹೊರಗಡೆ ಕೆಲಸದಲ್ಲಿ (Work) ಎಂತಹದೇ ಒತ್ತಡವಿದ್ದರೂ (Stress) ಮನೆಗೆ ಬಂದು ಕಂದಮ್ಮನ ಮುಖ ನೋಡಿದರೆ ಮತ್ತು ಅವರ ಜೊತೆಗೆ ಆಟವಾಡಿದರೂ (Playing) ಸಾಕು ಎಲ್ಲಾ ಒತ್ತಡವು ಹಾಗೆ ಮಾಯವಾಗುತ್ತದೆ. ಕೆಲವರಂತೂ ಮನೆಗೆ ಬಂದರೆ ಸಾಕು ಎಲ್ಲವನ್ನೂ ಮರೆತು ತಮ್ಮ ಮನೆಯಲ್ಲಿರುವ ಪುಟ್ಟ ಕಂದಮ್ಮಗಳ ಮತ್ತು ಮಕ್ಕಳ ಜೊತೆಗೆ ಆಟವಾಡಿಕೊಂಡು ಎಲ್ಲವನ್ನೂ ಮರೆತೇ ಬಿಡುತ್ತಾರೆ. ಈ ಅನುಭವ ಬರೀ ನಾವು ಮನುಷ್ಯರಿಗೆ ಆಗುವುದಿಲ್ಲ ಎಂದು ಅನ್ನಿಸುತ್ತೆ. ನಮ್ಮ ಮನೆಯಲ್ಲಿ ನಾವು ಸಾಕುವ ಪ್ರಾಣಿಗಳಿಗೂ (Pet Animals) ನಮ್ಮ ಮನೆಯಲ್ಲಿರುವ ಪುಟ್ಟ ಕಂದಮ್ಮಗಳನ್ನು ನೋಡಿ ತುಂಬಾನೇ ಆನಂದವಾಗುತ್ತದೆ.

    ಮಕ್ಕಳ ಜೊತೆ ಸಾಕು ಪ್ರಾಣಿಗಳ ಆಟ

    ಅದರಲ್ಲೂ ಸಾಕುಪ್ರಾಣಿಗಳು ನಾಯಿ, ಬೆಕ್ಕು ಇದ್ದರಂತೂ ಮುಗಿದೇ ಹೋಯ್ತು. ಮಗುವಿನ ಜೊತೆಗೆ ಆಟವಾಡಲು ಅವು ಸಹ ತುಂಬಾನೇ ಇಷ್ಟ ಪಡುತ್ತವೆ. ಈ ಮಕ್ಕಳು ಸಹ ಸಾಕುಪ್ರಾಣಿಗಳ ಜೊತೆಗೆ ಆಟವಾಡುತ್ತಾ, ಖುಷಿಯಾಗಿರುವುದನ್ನು ನಾವು ನೋಡುತ್ತೇವೆ.

    ನಾಯಿ ಮರಿಯ ತುಂಟಾಟದ ವಿಡಿಯೋ ವೈರಲ್

    ಈ ನಾಯಿಮರಿಗಳು ನಿಜವಾಗಿಯೂ ಮನುಷ್ಯನ ಅತ್ಯುತ್ತಮ ಸ್ನೇಹಿತ ಮತ್ತು ಅದಕ್ಕಾಗಿಯೇ ಅನೇಕರು ಈ ನಾಯಿಮರಿಗಳನ್ನು ಮನೆಯಲ್ಲಿ ಸಾಕಿಕೊಂಡಿರುತ್ತಾರೆ. ಈ ನಾಯಿಮರಿಗಳು ಮನೆಯಲ್ಲಿ ಪುಟ್ಟ ಕಂದಮ್ಮಗಳ ಜೊತೆಯಲ್ಲಿ ಮಾಡುವ ಅನೇಕ ರೀತಿಯ ತುಂಟಾಟಗಳ ವಿಡಿಯೋ ತುಣುಕುಗಳು ಹೆಚ್ಚಾಗಿ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವುದನ್ನು ನಾವು ನೋಡಬಹುದಾಗಿದೆ.

    ಇದನ್ನೂ ಓದಿ: Viral Video: ಮೂರು ಹಾವುಗಳೊಂದಿಗೆ ಯುವಕನ ಹುಚ್ಚಾಟ! ವಿಷ ಸರ್ಪದ ದಾಳಿಯ ಭಯಾನಕ ವಿಡಿಯೋ ಇಲ್ಲಿದೆ

    ಅದರಲ್ಲೂ ಈ ಪುಟ್ಟ ಕಂದಮ್ಮಗಳ ಜೊತೆಯಲ್ಲಿ ಆಟವಾಡಿಕೊಂಡಿರುವ ನಾಯಿಮರಿಗಳನ್ನು ನೋಡುವುದು ಮನಸ್ಸಿಗೆ ಎಷ್ಟೊಂದು ಮುದ ನೀಡುತ್ತದೆ ಎಂದರೆ ಅದನ್ನು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ.

    ಇಲ್ಲಿಯೂ ಸಹ ಅಂತಹದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎಂದು ಹೇಳಬಹುದು. ಇದರಲ್ಲಿ ನಾಯಿಮರಿಯೊಂದು ಮಗುವನ್ನು ಮೊದಲ ಬಾರಿ ಭೇಟಿಯಾಗುವುದಕ್ಕೆ ಎಷ್ಟೊಂದು ಹಾತೊರೆಯುತ್ತಿದೆ ಎನ್ನುವುದನ್ನು ಇಲ್ಲಿ ನೋಡಬಹುದಾಗಿದೆ.

    ವೈರಲ್ ಆಯ್ತು ನಾಯಿ ಮರಿಯ ತುಂಟಾಟ

    ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ನಾಯಿಮರಿಯೊಂದು ತನ್ನ ಮನೆಯ ಒಡೆಯನ ಮಗುವನ್ನು ಮೊದಲ ಬಾರಿಗೆ ಭೇಟಿಯಾಗುವುದನ್ನು ಮತ್ತು ನಂತರ ಮಗುವನ್ನು ಮುದ್ದಾಗಿ ನೋಡುತ್ತಿದ್ದುದ್ದನ್ನು ಸಹ ನೋಡಬಹುದಾಗಿದೆ.

    ಮೂರು ದಿನಗಳ ಹಿಂದೆ ವಿಡಿಯೋ ಅಪ್‌ಲೋಡ್

    ಈ ಕ್ಯೂಟ್‌ ವಿಡಿಯೋವನ್ನು 3 ದಿನಗಳ ಹಿಂದೆ ಇನ್‌ಸ್ಟಾಗ್ರಾಮ್ ಪುಟದಲ್ಲಿ ಗೋಲ್ಡನ್ ರಿಟ್ರೀವರ್ ಯೂನಿಯನ್ ಹಂಚಿಕೊಂಡಿದೆ ಮತ್ತು ಇದು ಇಲ್ಲಿಯವರೆಗೆ 94,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, 9,500 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

    ಮಗುವಿನ ಜೊತೆ ನಾಯಿಮರಿ ತುಂಟಾಟ

    ವಿಡಿಯೋ ತುಣುಕಿನಲ್ಲಿ ನಾಯಿಮರಿ ಮಗುವನ್ನು ಭೇಟಿಯಾಗಲು ಎಷ್ಟು ಉತ್ಸುಕವಾಗಿದೆ ಎಂದರೆ ಅದು ತನ್ನ ಹಿಂಗಾಲುಗಳ ಮೇಲೆ ಎದ್ದು ನಿಂತಿರುವುದನ್ನು ಕಾಣಬಹುದು. ಅಲ್ಲದೆ, ನಾಯಿಮರಿ ಮಗುವಿನೊಂದಿಗೆ ಒಟ್ಟಿಗೆ ಮಲಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು ಮತ್ತು ಮಗುವನ್ನು ನೋಡಲು ನಾಯಿಮರಿ ಮಗುವಿನ ಮೇಲೆ ಮಲಗಿರುವುದನ್ನು ಸಹ ನೋಡಬಹುದಾಗಿದೆ. ನಾಯಿಮರಿ ಮತ್ತು ಮಗುವಿನ ಮುದ್ದುತನವನ್ನು ಪ್ರೀತಿಸುವ ಜನರು ಇದಕ್ಕೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.




    "ಎರಡು ಕ್ಯೂಟಿಗಳು ಒಟ್ಟಿಗೆ ಇರುವುದು ತುಂಬಾನೇ ಮುದ್ದಾಗಿದೆ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. "ಮಕ್ಕಳನ್ನು ಬೆಳೆಸುವಲ್ಲಿ ನೀವು ಏಕಾಂಗಿಯಲ್ಲ, ಎಂದು ಗೋಲ್ಡನ್ ರಿಟ್ರೀವರ್ ನಿಮಗೆ ಹೇಳುತ್ತದೆ" ಎಂದು ಇನ್ನೊಬ್ಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. "ಸುಂದರವಾಗಿದೆ, ಇವರಿಬ್ಬರು ಎಂದೆಂದಿಗೂ ಉತ್ತಮ ಸ್ನೇಹಿತರಾಗಿರುತ್ತಾರೆ" ಎಂದು ಮತ್ತೊಬ್ಬರು ಬರೆದಿದ್ದಾರೆ.

    ಇದನ್ನೂ ಓದಿ: Viral Video: ಎರಡು ಕಾಡೆಮ್ಮೆಗಳು ಫೈಟ್ ಮಾಡೋದನ್ನ ನೋಡಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ರೋಮಾಂಚಕ ವಿಡಿಯೋ

    ಈ ವಿಡಿಯೋವನ್ನು ಮೂಲತಃ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋರ್ಡ್ ಮತ್ತು ಪಾಮರ್ ಹಂಚಿಕೊಂಡಿದ್ದಾರೆ. ನಾಯಿಗೆ ಪಾಮರ್ ಎಂದು ಹೆಸರಿಡಲಾಗಿದ್ದು, ಮಗುವಿಗೆ ಫೋರ್ಡ್ ಎಂದು ಹೆಸರಿಡಲಾಗಿದೆ. ಈ ಖಾತೆಯು ಮಗು ಮತ್ತು ನಾಯಿಮರಿಯ ಬಹಳಷ್ಟು ವಿಡಿಯೋಗಳನ್ನು ಹಂಚಿಕೊಂಡಿದೆ. ಈ ಖಾತೆಯು 14,000ಕ್ಕೂ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಹೊಂದಿದೆ.
    Published by:Annappa Achari
    First published: