Viral Video: ಸೈನಿಕರಿಗೆ ರಾಷ್ಟ್ರಧ್ವಜ ನೀಡಿ ಸೆಲ್ಯೂಟ್ ಹೊಡೆದ ಪುಟಾಣಿ! ದೇಶಭಕ್ತಿ ಸಾರುವ ದೃಶ್ಯ ನೀವೂ ನೋಡಿ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿಂತಿದ್ದ ಭದ್ರತಾ ಪಡೆಯ ಯೋಧರನ್ನು ಸಮೀಪಿಸಿದ ಪುಟ್ಟ ಮಗು, ಮೊದಲಿಗೆ ಯೋಧರೊಬ್ಬರಿಗೆ ತ್ರಿವರ್ಣ ನೀಡುತ್ತಾಳೆ. ಬಳಿಕ ಕೊಂಚ ದೂರು ನಿಂತು ಮುದ್ದು ಮುದ್ದಾಗಿ ಸೆಲ್ಯೂಟ್ ಹೊಡೆದು, ಗೌರವ ಸಲ್ಲಿಸಿದ್ದಾಳೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ (75th Independence day) ಸಂಭ್ರಮ ಮನೆಮಾಡಿದೆ. ಅಮೃತ ಮಹೋತ್ಸವದ (Amrit Mahotsav) ಅಂಗವಾಗಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ (National Flag) ಹಾರಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರೆ ನೀಡಿದ್ದರು. ಇದೀಗ ಪ್ರಧಾನಿ ಕರೆಗೆ ಸ್ಪಂದಿಸಿರುವ ಕನ್ನಡಿಗರು, ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ (Har Ghar Tiranga Abhiyan) ಆರಂಭಿಸಿದ್ದಾರೆ. ಈ ನಡುವೆ ಪುಟ್ಟ ಮಗುವಿನ ದೇಶಭಕ್ತಿಯ ವಿಡಿಯೋ ಒಂದು ವೈರಲ್ ಆಗಿದೆ. ಎಲ್ಲರಂತೆ ತಾನೂ ರಾಷ್ಟ್ರಧ್ವಜವನ್ನು ಹಿಡಿಯುವ ಕಂದಮ್ಮ (Small Baby), ಅದಕ್ಕೆ ತನ್ನದೇ ರೀತಿಯ ಗೌರವ ಸೂಚಿಸಿದ್ದಾಳೆ. ಸಾಲದ್ದಕ್ಕೆ ಅದನ್ನು ಮುಖ್ಯ ವ್ಯಕ್ತಿಗಳಿಗೆ ನೀಡಿ, ಅವರನ್ನೂ ಗೌರವಿಸಿದ್ದಾಳೆ. ಇಂಟರ್‌ನೆಟ್‌ನಲ್ಲಿ (Internet) ಸದ್ಯ ಈ ವಿಡಿಯೋ ವೈರಲ್ (Video Viral) ಆಗಿದ್ದು, ಪುಟಾಣಿಯ ದೇಶಭಕ್ತಿಗೆ ನೆಟ್ಟಿಗರು ಸಲಾಂ ಎಂದಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕಂದಮ್ಮನ ದೇಶಭಕ್ತಿ

ಇದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಸುರೇಶ್ ನಖ್ವಾ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪುಟ್ಟ ಕಂದಮ್ಮ ರಾಷ್ಟ್ರಧ್ವಜ ಹಿಡಿದು, ತನ್ನ ದೇಶಭಕ್ತಿ ಪ್ರದರ್ಶಿಸಿದೆ.



ಸೈನಿಕರಿಗೆ ಧ್ವಜ ಕೊಟ್ಟು ಸೆಲ್ಯೂಟ್ ಹೊಡೆದ ಪುಟಾಣಿ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿಂತಿದ್ದ ಭದ್ರತಾ ಪಡೆಯ ಯೋಧರನ್ನು ಸಮೀಪಿಸಿದ ಪುಟ್ಟ ಮಗು, ಮೊದಲಿಗೆ ಯೋಧರೊಬ್ಬರಿಗೆ ತ್ರಿವರ್ಣ ನೀಡುತ್ತಾಳೆ. ಬಳಿಕ ಕೊಂಚ ದೂರು ನಿಂತು ಮುದ್ದು ಮುದ್ದಾಗಿ ಸೆಲ್ಯೂಟ್ ಹೊಡೆದು, ಗೌರವ ಸಲ್ಲಿಸಿದ್ದಾಳೆ.

ಇದನ್ನೂ ಓದಿ: Har Ghar Tiranga: ರಾಜ್ಯಾದ್ಯಂತ ಹರ್ ಘರ್ ತಿರಂಗಾ ಅಭಿಯಾನ, ಮನೆ ಮನೆಯಲ್ಲೂ ಹಾರುತಿಹುದು ನೋಡು ನಮ್ಮ ಬಾವುಟ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಂದಮ್ಮನ ವಿಡಿಯೋ

ಸುರೇಶ್ ನಖ್ವಾ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಬಳಿಕ ಈ  ದೃಶ್ಯವನ್ನೀಗ ಟ್ವಿಟ್ಟರಿನಲ್ಲಿ ಹಲವರು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಪುಟಾಣಿಯ ದೇಶಭಕ್ತಿಗೆ ಸಲಾಂ ಎನ್ನುತ್ತಿದ್ದಾರೆ.

ರಾಜ್ಯಾದ್ಯಂತ ಹರ್ ಘರ್ ತಿರಂಗಾ ಅಭಿಯಾನ

ರಾಜ್ಯದಲ್ಲಿ ಜನರು ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವರಾದ ಡಾ. ಕೆ.ಸುಧಾಕರ್, ಆರ್. ಅಶೋಕ್ ಸೇರಿದಂತೆ ಹಲವು ರಾಜಕೀಯ ನಾಯಕರು ಧ್ವಜಾರೋಹಣ ನೆರವೇರಿಸಿದ್ದಾರೆ. ಇನ್ನು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನ ಸಾಮಾನ್ಯರೂ ಕೂಡ ತಿರಂಗಾ ಹಾರಿಸಿ, ಅಮೃತ ಮಹೋತ್ಸವದ ಸಂಭ್ರಮ್ರಕ್ಕೆ ಮುನ್ನುಡಿ ಬರೆದಿದ್ದಾರೆ.

ಸಿಎಂ ಬೊಮ್ಮಾಯಿ ಮನೆಯಲ್ಲಿ ಧ್ವಜಾರೋಹಣ

ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ತಮ್ಮ ನಿವಾಸದ ಮುಂದೆ ರಾಷ್ಟ್ರಧ್ವಜ ಹಾರಿಸಿದರು. ಈ ಸಂದರ್ಭದಲ್ಲಿ ಬೊಮ್ಮಾಯಿ ಅವರೊಂದಿಗೆ ಕುಟುಂಬದ ಸದಸ್ಯರು ಮತ್ತು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಇದ್ದರು.

ಇದನ್ನೂ ಓದಿ: Independence Day 2022: 42 ವರ್ಷಗಳಲ್ಲಿ 3 ಮಿಲಿಯನ್ ರಾಷ್ಟ್ರಧ್ವಜ ತಯಾರಿ! ಇದರ ಹಿಂದಿದ್ದಾರೆ ಅಬ್ದುಲ್ ಚಾಚಾ

ವಿಧಾನಸೌಧದಲ್ಲಿ ಚಾಲನೆ ನೀಡಿದ ಸಿಎಂ

ಇನ್ನು ವಿಧಾನಸೌಧದಲ್ಲಿ ಹರ್ ಘರ್ ತಿರಂಗ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದರು. ಬಳಿಕ ಅಲ್ಲಿ ನೆರೆದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮನ್ನು ನೋಡಿದಾಗ 25 ವರ್ಷ ನನಗೆ ಕಡಿಮೆ ಆಗಿರೋ ಅನುಭವ ಆಗುತ್ತಿದೆ. ಭವ್ಯ ಭಾರತದ ಭವಿಷ್ಯ ನೀವೆಲ್ಲ. ಈಗ 75 ವರ್ಷದ ಸ್ವತಂತ್ರ ದಿವಸ ಬಂದಿದೆ, 75 ವರ್ಷ ಅಂದ್ರೆ ತರುಣ ದೇಶ‌ ಭಾರತ, ಅತಿ ಹೆಚ್ಚು ಯುವಕರು ಭಾರತದಲ್ಲಿ ಇದ್ದಾರೆ.  ಭಾರತದ ಶಕ್ತಿಯನ್ನು ಇಡಿ ವಿಶ್ವವೇ ಗಮನಿಸುತ್ತಿದೆ ಅಂತ ಹೇಳಿದ್ರು.
Published by:Annappa Achari
First published: