Viral Video: ನೀವು ನವಿಲು ಹಾರೋದು ನೋಡಿದ್ದೀರಾ? ಈ ಸ್ಲೋ ಮೋಷನ್ ವೀಡಿಯೋ ನೋಡಿ

ದೃಶ್ಯವು ನೋಡಲು ಸಿಗುವುದು ತುಂಬಾನೇ ಅಪರೂಪ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರಂತೆಯೇ ಈ ನವಿಲುಗಳು ಗಾಳಿಯಲ್ಲಿ ಹಾರುವುದನ್ನು ಸಹ ತುಂಬಾ ಜನರು ನೋಡಿರಲಿಕ್ಕಿಲ್ಲ, ಅಂತಹವರು ಈ ವೀಡಿಯೋವನ್ನು ತಪ್ಪದೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಾವು ಈ ತಿಂಗಳ ಆರಂಭದಲ್ಲಿ ಒಂದು ನವಿಲು (peacock) ಹಾಗೆಯೇ ಹಾರಿಕೊಂಡು ಬಂದು ದೆಹಲಿಯಲ್ಲಿರುವ ಒಂದು ಮನೆಯ ಬಾಲ್ಕನಿಯಲ್ಲಿ ಬಂದು ಕುಳಿತಿರುವ ವೀಡಿಯೋವನ್ನು (Video) ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೆವು. ಆ ನವಿಲು ಸ್ವಲ್ಪ ಹೊತ್ತಿನ ನಂತರ ಅಲ್ಲಿಂದ ಹಾರಿಕೊಂಡು ಎದುರಿಗಿರುವ ಮನೆಯೊಂದರ ಬಾಲ್ಕನಿಗೆ ಹೋದದ್ದು ಸಹ ಅದೇ ವೀಡಿಯೋದ ಕೊನೆಯಲ್ಲಿ ನೋಡಿದ್ದೆವು. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದೆಹಲಿ ನಿವಾಸಿಯೊಬ್ಬರು ತಮ್ಮ ಮನೆಯ ಬಾಲ್ಕನಿಯಲ್ಲಿ ಬಂದು ಕುಳಿತ ನವಿಲಿನ ವೀಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದರು. ಈ ನವಿಲಿನ ವೀಡಿಯೋ 6 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 6 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿತ್ತು.

ಹೀಗೆ ಈ ನವಿಲುಗಳನ್ನು ನೋಡಲು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ? ಕಂದು ಮತ್ತು ಕಪ್ಪು ಬಣ್ಣಗಳ ಮಿಶ್ರಿತ ರೆಕ್ಕೆಗಳನ್ನು ಹಾಗೆ ದೇಹದ ಪಕ್ಕಕ್ಕೆ ಕಟ್ಟಿಕೊಂಡಂತೆ, ಹಿಂದೆ ಉದ್ದನೆಯ ಗರಿಗಳನ್ನು ಬಿಟ್ಟುಕೊಂಡು ಮುಂದೆ ರಾಜಗಾಂಭೀರ್ಯದಲ್ಲಿ ತನ್ನ ಕುತ್ತಿಗೆಯನ್ನು ನೆಟ್ಟಗೆ ಎತ್ತಿಕೊಂಡು ನಡೆದಾಡುವಂತಹ ದೃಶ್ಯ ಕಣ್ಣಿಗೆ ಒಂದು ರೀತಿಯ ಹಬ್ಬ ಅಂತಾನೆ ಹೇಳಬಹುದು.

ವೈರಲ್ ಆದ ನವಿಲಿನ ವಿಡಿಯೋ
ಹೆಚ್ಚಾಗಿ ಈ ನವಿಲುಗಳು ಊರಿನ ಆಚೆ ಇರುವಂತಹ ಹೊಲಗದ್ದೆಗಳಲ್ಲಿ ನೋಡುತ್ತೇವೆ ಮತ್ತು ಯಾವುದಾದರೂ ಮೃಗಾಲಯಕ್ಕೆ ಹೋದರೆ ಅಲ್ಲಿ ನಾವು ಅನೇಕ ಬಣ್ಣಗಳ ಎಂದರೆ ಹಸಿರು ಬಣ್ಣದ ಮತ್ತು ಬಿಳಿ ಬಣ್ಣದ ನವಿಲುಗಳನ್ನು ನೋಡಬಹುದು. ಜನರು, ಈ ನವಿಲುಗಳು ಮಳೆ ಬರುವಾಗ ತನ್ನ ಬಣ್ಣ ಬಣ್ಣದ ಗರಿಗಳನ್ನು ಬಿಚ್ಚಿಕೊಂಡು ನೃತ್ಯ ಮಾಡುತ್ತವೆ ಅಂತ ಕೇಳಿರುತ್ತಾರೆ. ಆದರೆ ಈ ದೃಶ್ಯವು ನೋಡಲು ಸಿಗುವುದು ತುಂಬಾನೇ ಅಪರೂಪ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರಂತೆಯೇ ಈ ನವಿಲುಗಳು ಗಾಳಿಯಲ್ಲಿ ಹಾರುವುದನ್ನು ಸಹ ತುಂಬಾ ಜನರು ನೋಡಿರಲಿಕ್ಕಿಲ್ಲ, ಅಂತಹವರು ಈ ವೀಡಿಯೋವನ್ನು ತಪ್ಪದೆ ನೋಡಿ.

ಇದನ್ನೂ ಓದಿ:  Viral Video: ಬಬಲ್ ಜೊತೆಗೆ ಈ ರಕೂನ್​ಗಳು ಹೇಗೆ ಆಡಿವೆ ಗೊತ್ತಾ! ಈ ವಿಡಿಯೋ ಒಮ್ಮೆ ನೋಡಿ

ವಿಡಿಯೋದಲ್ಲಿ ಅಂಥದ್ದೇನಿದೆ?
ಈಗ ಮತ್ತೊಂದು ನವಿಲಿನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ ಎಂದು ಹೇಳಬಹುದು. 14 ಸೆಕೆಂಡುಗಳ ಸ್ಲೋ ಮೋಷನ್ ವೀಡಿಯೋದಲ್ಲಿ ನವಿಲೊಂದು ಹಾಗೆಯೇ ಗಾಳಿಯಲ್ಲಿ ಹಾರಿಕೊಂಡು ಬರುವುದನ್ನು ನಾವು ನೋಡಬಹುದು. ಇದರ ಹಿನ್ನಲೆಯಲ್ಲಿ ಅನೇಕ ಗಿಡಮರಗಳನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ. ಈ ವೀಡಿಯೋದಲ್ಲಿ ನವಿಲೊಂದು ಅಲ್ಲೇ ಇರುವಂತಹ ಒಂದು ಮರದ ಕಡೆಗೆ ಹಾರಿಕೊಂಡು ಹೋಗುತ್ತಿರುವಂತೆ ತೋರುತ್ತಿದೆ.



ಸೋಮವಾರ ಬ್ಯೂಟೆಂಗೆಬೀಡೆನ್ ಎಂಬ ಹೆಸರಿನ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡ ಈ ಕ್ಲಿಪ್ ಅನ್ನು ಈಗಾಗಲೇ ಸುಮಾರು ಮೂರು ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಹಕ್ಕಿಯ ಹಾರುವ ಸಾಮರ್ಥ್ಯವು ಅದರ ತೂಕವನ್ನು ಒಳಗೊಂಡಂತೆ ಬಹಳಷ್ಟು ಅಂಶಗಳನ್ನು ಅವಲಂಬಿಸಿರುತ್ತದೆ ಎಂದು ಹೇಳಬಹುದು. ನವಿಲು ಉದ್ದವಾದ ಗರಿಗಳನ್ನು ಹೊಂದಿದ್ದು, ದೇಹದ ತೂಕವನ್ನು ಗಾಳಿಯಲ್ಲಿ ಎತ್ತಿಕೊಂಡು ಅದು ತುಂಬಾ ಎತ್ತರಕ್ಕೆ ಹಾರಲು ಅದಕ್ಕೆ ಕಷ್ಟವಾಗುತ್ತದೆ. ಇದು ಸ್ವಲ್ಪ ಎತ್ತರದವರೆಗೆ ಮತ್ತು ದೂರದವರೆಗೆ ಮಾತ್ರ ಹಾರುತ್ತದೆ.

ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ
ಅನೇಕ ಬಳಕೆದಾರರು ಈ ಸುಂದರವಾದ ವೀಡಿಯೋವನ್ನು ನೋಡಿ ತುಂಬಾನೇ ಇಷ್ಟಪಟ್ಟಿದ್ದಾರೆ ಮತ್ತು ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡಿದ್ದಾರೆ. "ನಾನು ಬಹಳಷ್ಟು ನವಿಲುಗಳು ಹಾರುವುದನ್ನು ನೋಡಿದ್ದೇನೆ, ಆದರೆ ಈ ವೀಡಿಯೋದಲ್ಲಿ ನವಿಲು ಹಾರಿದ ಬಗೆಯನ್ನು ಎಲ್ಲಿಯೂ ನೋಡಿರಲಿಲ್ಲ. ವೀಡಿಯೋದಲ್ಲಿ ಅದು ದೂರದಲ್ಲಿ ಹಾರುವಂತೆ ಕಾಣಿಸುತ್ತಿದೆ. ಸಾಮಾನ್ಯವಾಗಿ ನವಿಲುಗಳು ನೆಲದಿಂದ ಸ್ವಲ್ಪ ಎತ್ತರದಲ್ಲಿ ಅಷ್ಟೇ ಹಾರುತ್ತವೆ” ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  Viral Video: ಮಹಿಳೆ ಮೇಲೆ ಆನೆ ಮರಿ ದಾಳಿ! ಮುಂದೇನಾಯ್ತು?

"ಅವುಗಳಲ್ಲಿ ಅನೇಕ ಬಗೆಯ ನವಿಲುಗಳಿವೆ. ಕೆಲವೊಂದು ದೂರ ಹಾರದಿದ್ದರೂ ಸುಮಾರು 1/4 ಮೈಲುಗಳಷ್ಟು ಎಂದರೆ ನಮ್ಮ ಮನೆಯಿಂದ ನಮ್ಮ ನೆರೆಹೊರೆಯವರ ಮನೆಯವರೆಗೆ ಹಾರುತ್ತದೆ” ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು.
Published by:Ashwini Prabhu
First published: