Viral News: ಭಾರತದ ಮೊದಲ ಟ್ರಕ್ ಹೌಸ್ ಇದು.. ಎಲ್ಲಿದೆ ಗೊತ್ತಾ?
Truck House Hotel: ಕ್ಲಾಸಿಕ್ ಟ್ರಕ್ ಹೋಟೆಲ್ ಅನ್ನು ಮಹಾರಾಷ್ಟ್ರದ ಕೊಲ್ಲಾಪುರ ನಿಸರ್ಗ ರೆಸಾರ್ಟ್ ನಿರ್ಮಾಣ ಮಾಡಿದೆ.. ಅಲ್ಲದೆ ಈ ವಿಡಿಯೋವನ್ನು ಕೊಲ್ಲಾಪುರದ ನಿಸರ್ಗ ರೆಸಾರ್ಟ್ ತಮ್ಮ ಅಧಿಕೃತ ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದೆ
ಭಾರತ (India) ಪ್ರವಾಸಿಗರ ಪಾಲಿನ ಸ್ವರ್ಗ... ದೇಶ ವಿದೇಶದಿಂದ ಭಾರತಕ್ಕೆ ಸಾವಿರಾರು ಸಂಖ್ಯೆಯ ಪ್ರವಾಸಿಗರು(Tourist) ಪ್ರತಿನಿತ್ಯ ಹರಿದು ಬರುತ್ತಲೇ ಇರುತ್ತಾರೆ.. ಭಾರತದಲ್ಲಿ ಇರುವ ವಿವಿಧ ಪ್ರವಾಸಿ(Place) ತಾಣಗಳನ್ನು ನೋಡಿಕೊಳ್ಳುವುದರ ಜೊತೆಗೆ ಇಲ್ಲಿನ ಅಥಿತ್ಯ ಸ್ವೀಕರಿಸಲು ಸಹ ನಮ್ಮ ದೇಶಕ್ಕೆ ಬರುವ ಪ್ರವಾಸಿಗರೂ ತುದಿಗಾಲಲ್ಲಿ ನಿಂತಿರುತ್ತಾರೆ. ಹೀಗಾಗಿಯೇ ಒಂದೊಂದು ರಾಜ್ಯದಲ್ಲಿ(State) ಒಂದೊಂದು ರೀತಿಯ ಆಚರಣೆ ಸಂಪ್ರದಾಯ(Culture) ಇರುವುದರಿಂದ ಪ್ರವಾಸಿಗರನ್ನು ಸೆಳೆಯಲು ರೆಸಾರ್ಟ್ಗಳು(Resort) ಹೋಟೆಲ್ ಗಳು(Hotel) ಉದ್ದಿಮೆಗಳು ಹಲವಾರು ತಂತ್ರಗಳನ್ನು ಬಳಸುತ್ತವೆ. ಅದ್ರಲ್ಲೂ ಕೇರಳದಂತಹ ಪ್ರವಾಸೋದ್ಯಮ ರಾಜ್ಯಕ್ಕೆ ಬಂದಾಗ ಅಲ್ಲಿನ ಹೌಸ್ ಬೋಟ್ ಗಳು ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.. ಕೇರಳಕ್ಕೆ ಭೇಟಿಕೊಟ್ಟ ಪ್ರತಿಯೊಬ್ಬ ಪ್ರವಾಸಿಗರು ಒಮ್ಮೆಯಾದರೂ ಚಲಿಸುವ ಹೌಸ್ ಬೋಟ್ ನಲ್ಲಿ ಇರಬೇಕು ಎಂದು ಬಯಸುತ್ತಾರೆ.. ಈಗ ಇದೇ ರೀತಿಯ ಹೌಸ್ ಬೋಟ್ ಮಾದರಿಯ ಪರಿಕಲ್ಪನೆಯೊಂದನ್ನು ಇಟ್ಟುಕೊಂಡು ರೆಸಾರ್ಟ್ ಒಂದು ಮಾದರಿಯ ಹೋಟೆಲ್ ನಿರ್ಮಾಣ ಮಾಡಿದೆ.
ಲಾರಿಯಂತೆ ಕಾಣುವ ಹೋಟೆಲ್
ಪ್ರವಾಸಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗರು ತಾವು ಸಾಕಷ್ಟು ಐಷಾರಾಮಿ ದುಬಾರಿ ಹಾಗೂ ವಿಭಿನ್ನ ರೀತಿಯಲ್ಲಿ ಕಾಣುವ ಹೋಟೆಲ್ ನಲ್ಲಿ ವಾಸ ಮಾಡಬೇಕು ಎಂದು ಬಯಸುತ್ತಾರೆ.. ಹೀಗಾಗಿಯೇ ಪ್ರವಾಸಿಗರನ್ನು ಸೆಳೆಯಲು ವಿಭಿನ್ನ ರೀತಿಯ ರೆಸಾರ್ಟ್ ಹಾಗೂ ಹೋಟೆಲ್ ರೂಂಗಳ ನಿರ್ಮಾಣಕ್ಕೆ ಸಾಕಷ್ಟು ಜನರು ಮುಂದಾಗಿದ್ದಾರೆ.. ಅದರಲ್ಲೂ ಅಮೆರಿಕಾದಂತಹ ದೇಶಗಳಲ್ಲಿ ಮೋಟಾರ್ ಮನೆಗಳು ಸಾಕಷ್ಟು ಜನಪ್ರಿಯ ಪಡೆದುಕೊಂಡಿದೆ..ಈಗ ಅದೇ ರೀತಿಯ ಕಾನ್ಸೆಪ್ಟ್ ಇಟ್ಟುಕೊಂಡು ಭಾರತದಲ್ಲಿ ಲಾರಿ ಇಂದ ಮೊದಲ ಟ್ರಕ್ ಹೌಸ್ ನಿರ್ಮಾಣ ಮಾಡಲಾಗಿದೆ.
ಕೊಲ್ಲಾಪುರದ ನಿಸರ್ಗ್ ರೆಸಾರ್ಟ್ ನಿಂದ ಟ್ರಕ್ ಹೋಟೆಲ್ ನಿರ್ಮಾಣ
ಕ್ಲಾಸಿಕ್ ಟ್ರಕ್ ಹೋಟೆಲ್ ಅನ್ನು ಮಹಾರಾಷ್ಟ್ರದ ಕೊಲ್ಲಾಪುರ ನಿಸರ್ಗ ರೆಸಾರ್ಟ್ ನಿರ್ಮಾಣ ಮಾಡಿದೆ.. ಅಲ್ಲದೆ ಈ ವಿಡಿಯೋವನ್ನು ಕೊಲ್ಲಾಪುರದ ನಿಸರ್ಗ ರೆಸಾರ್ಟ್ ತಮ್ಮ ಅಧಿಕೃತ ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದೆ.. ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ರಕ್ ಹೋಟೆಲ್ ಅನ್ನು ರೆಸಾರ್ಟ್ನಿಂದ ಹೊಸ ಪರಿಕಲ್ಪನೆ ಹಾಗೂ ಮೊಬೈಲ್ ಆತಿಥ್ಯದ ಆಯ್ಕೆಯಾಗಿ ನಾವೀನ್ಯತೆಯಿಂದ ನಿರ್ಮಿಸಲಾಗಿದೆ. ಇದು ಹಿಂದೆ ನೋಡಿದ ಇತರ ಸಾಂಪ್ರದಾಯಿಕ ಮೊಬೈಲ್ ಮನೆಗಳಿಗಿಂತ ಭಿನ್ನವಾಗಿದೆ. ನಿಸರ್ಗ್ ರೆಸಾರ್ಟ್ ಟ್ರಕ್ನೊಂದಿಗೆ ಒಂದು ಕೋಣೆಯ ಬಾತ್ರೂಮ್ ಮತ್ತು ಅಡುಗೆ ಮನೆಯನ್ನು ರಚಿಸುವ ಬದಲು ಮರದ ಎರಡು ಅಂತಸ್ತಿನ ಕಾಟೇಜ್ ಅನ್ನು ನಿರ್ಮಿಸಿದೆ.
1970 ರ ಟಾಟಾ ಕ್ಲಾಸಿಕ್ ಟ್ರಕ್ ನಿಂದ ಹೋಟೆಲ್ ನಿರ್ಮಾಣ
1970 ರ ಟಾಟಾ ಕ್ಲಾಸಿಕ್ ಟ್ರಕ್ ನಿಂದ ಈ ಹೋಟೆಲ್ ನಿರ್ಮಾಣ ಮಾಡಲಾಗಿದ್ದು ಇದರ ಒಳಗೆ ಎಡಬಾಗದಲ್ಲಿ ಸಿಂಗ್ ಮತ್ತು ಬಲಭಾಗದಲ್ಲಿ ಆಕರ್ಷಕ ಮರದ ಮೆಟ್ಟಿಲು ನಿರ್ಮಾಣ ಮಾಡಲಾಗಿದೆ.. ಟ್ರಕ್ ಮೇಲ್ಭಾಗದಲ್ಲಿ ಬಾಲ್ಕನಿ ಮಾಡಲಾಗಿದ್ದು ಮಲಗುವ ಕೋಣೆಯನ್ನು ಮಹಡಿಯ ಮೇಲೆ ನಿರ್ಮಾಣ ಮಾಡಲಾಗಿದೆ. ಹೊರಗಿನಿಂದ ನೋಡಲು ಸಂಪೂರ್ಣ ಲಾರಿಯಂತೆ ಕಾಣುವ ಈ ಟ್ರಕ್ ಒಳಗಡೆ ಹೋಗಿ ನೋಡಿದಾಗ ಒಂದು ಕ್ಲಾಸಿಕಲ್ ಶೈಲಿಯ ಹೋಟೆಲ್ ರೂಮ್ ನಂತೆ ಕಾಣಿಸಿಕೊಳ್ಳುತ್ತದೆ.
ಇನ್ನು ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರವಾಸಿಗರು ತಮ್ಮ ವಾಹನಗಳನ್ನು ಚಿಕ್ಕ ಮೊಬೈಲ್ ಮನೆಗಳಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ.. ಈ ಚಿಕ್ಕ ಮೊಬೈಲ್ ಮನೆಗಳ ಮೂಲಕವೇ ಪ್ರಪಂಚ ಪರ್ಯಟನೆ ಮಾಡುತ್ತಿರುವ ಅನೇಕ ಜನರನ್ನ ನಾವು ನೋಡಿದ್ದೇವೆ. ಚಿಕ್ಕ ಮೊಬೈಲ್ ಮನೆಗಳಲ್ಲಿ ವಾಸಕ್ಕೆ ಯೋಗ್ಯವಾದ ಎಲ್ಲ ರೀತಿಯ ಸೌಲಭ್ಯಗಳನ್ನು ಕೂಡ ಅಳವಡಿಸಿಕೊಂಡಿರುತ್ತಾರೆ. ಅದೇ ರೀತಿಯಾಗಿ ಪರಿಕಲ್ಪನೆಯಿಂದ ಸದ್ಯ ಭಾರತದಲ್ಲಿ ಮೊದಲ ಟ್ರಕ್ ಹೌಸ್ ಹೋಟೆಲ್ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಇದು ಕ್ರೇಜ್ ಅನ್ನು ಹುಟ್ಟುಹಾಕುವ ಸಂಭವವಿದೆ.
ಇನ್ನು ಈ ಹಿಂದೆ ಮಹೀಂದ್ರ ಬೊಲೆರೊ ಕ್ಯಾಂಪರ್ ಪಿಕ್-ಅಪ್ ಟ್ರಕ್ ಅನ್ನು ಅದ್ಭುತವಾದ ಕಾರವಾನ್ ಆಗಿ ಮಾರ್ಪಡಿಸಲಾಗಿತ್ತು. ಈ ರೂಪಾಂತರವನ್ನು ಮೋಟರ್ಹೋಮ್ ಅಡ್ವೆಂಚರ್ಸ್ ಮೂಲಕ ಕಾರ್ಯಗತಗೊಳಿಸಲಾಗಿತ್ತು.ಅವರು ವಾಹನದ ಸಂಪೂರ್ಣ ವಿನ್ಯಾಸವನ್ನು ಕಸ್ಟಮೈಸ್ ಮಾಡಿದರು, ಕ್ಯಾಬಿನ್ ಅನ್ನು ಹಾಸಿಗೆಯ ಮೇಲೆ ಇರಿಸಿ ಮತ್ತು ಎರಡು ಜ್ಯಾಕ್ಗಳೊಂದಿಗೆ ಬಾಡಿಯಿಂದ ಬೇರ್ಪಡಿಸಲು ಅಥವಾ ಎತ್ತುವಿಕೆಯನ್ನು ಸುಲಭಗೊಳಿಸಿದರು. ವಾಸ್ತವವಾಗಿ, ಫೋರ್ಸ್ ಟ್ರಾವೆಲರ್ ವಾಹನಗಳು ಕಾರವಾನ್ಗಳಾಗಿ ರೂಪಾಂತರಗೊಂಡ ಅನೇಕ ನಿದರ್ಶನಗಳಿವೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ