• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Story: ಪ್ರೈವೇಟ್​ ಜೆಟ್‌ನಲ್ಲಿ ಕೇವಲ 13 ಸಾವಿರಕ್ಕೆ ರಾಜನಂತೆ ಪ್ರಯಾಣಿಸಿದ ಯುಕೆ ಪ್ರಯಾಣಿಕ!

Viral Story: ಪ್ರೈವೇಟ್​ ಜೆಟ್‌ನಲ್ಲಿ ಕೇವಲ 13 ಸಾವಿರಕ್ಕೆ ರಾಜನಂತೆ ಪ್ರಯಾಣಿಸಿದ ಯುಕೆ ಪ್ರಯಾಣಿಕ!

ವಿಮಾನದಲ್ಲಿ ಒಬ್ಬರೇ ಪ್ರಯಾಣ ಮಾಡಿ ವ್ಯಕ್ತಿ

ವಿಮಾನದಲ್ಲಿ ಒಬ್ಬರೇ ಪ್ರಯಾಣ ಮಾಡಿ ವ್ಯಕ್ತಿ

ಇದೀಗ ಪೋರ್ಚುಗಲ್‌ಗೆ ಪ್ರಯಾಣಿಸುತ್ತಿದ್ದ ಯುಕೆ ವ್ಯಕ್ತಿಯೊಬ್ಬರಿಗೆ ಹೇಗೆ ಅದೃಷ್ಟ ಖುಲಾಯಿಸಿದೆ ಎಂದರೆ ಸಂಪೂರ್ಣ ಫ್ಲೈಟ್‌ನಲ್ಲಿಯೇ ಒಬ್ಬರೇ ಪ್ರಯಾಣಿಸುವ ಅವಕಾಶ ಬಂದೊದಗಿದೆ. ಅದು ಕೂಡ ಕೇವಲ 13 ಸಾವಿರ ರೂಪಾಯಿಗೆ ಪ್ರಯಾಣ ಮಾಡೋ ಅವಕಾಶ ಸಿಕ್ಕಿದೆ.

  • Share this:

ಒಮ್ಮೊಮ್ಮೆ ಅದೃಷ್ಟ (Luck) ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳುತ್ತಾರೆ. ಆದರೆ ಅದು ಹೇಗೆ ಬರುತ್ತದೆ, ಯಾವಾಗ ಬರುತ್ತದೆ ಎಂಬುದು ಮಾತ್ರ ರಹಸ್ಯವಾಗಿರುತ್ತದೆ. ಇದೀಗ ಪೋರ್ಚುಗಲ್‌ಗೆ (Portugal) ಪ್ರಯಾಣಿಸುತ್ತಿದ್ದ ಯುಕೆ ವ್ಯಕ್ತಿಯೊಬ್ಬರಿಗೆ ಹೇಗೆ ಅದೃಷ್ಟ ಖುಲಾಯಿಸಿದೆ ಎಂದರೆ ಸಂಪೂರ್ಣ ಫ್ಲೈಟ್‌ನಲ್ಲಿಯೇ (Flight) ಒಬ್ಬರೇ ಪ್ರಯಾಣಿಸುವ ಅವಕಾಶ ಬಂದೊದಗಿದೆ. ಅದು ಕೂಡ ಕೇವಲ 13 ಸಾವಿರ ರೂಪಾಯಿಗೆ ಪ್ರಯಾಣ ಮಾಡೋ ಅವಕಾಶ ಸಿಕ್ಕಿದೆ.


ಒಬ್ಬನೇ ರಾಜನಂತೆ ವಿಮಾನ ಪ್ರಯಾಣ ಮಾಡಿದ ಪ್ರಯಾಣಿಕ


ನ್ಯೂಯಾರ್ಕ್ ಪೋಸ್ಟ್‌ನಲ್ಲಿನ ವರದಿಯ ಪ್ರಕಾರ, ಪಾಲ್ ವಿಲ್ಕಿನ್ಸನ್ ತಮ್ಮ ಕುಟುಂಬವನ್ನು ಭೇಟಿ ಮಾಡುವ ಸಲುವಾಗಿ ಉತ್ತರ ಐರ್ಲೆಂಡ್‌ನಿಂದ ಪೋರ್ಚುಗಲ್‌ಗೆ ಸಂಪೂರ್ಣ ವಿಮಾನದಲ್ಲಿಯೇ ಒಬ್ಬರೇ ಪ್ರಯಾಣಿಸುತ್ತಿದ್ದರು.


65 ವರ್ಷ ವಯಸ್ಸಿನ ಪಾಲ್ ವಿಲ್ಕಿನ್ಸನ್ ತಮ್ಮ ಫ್ಲೈಟ್‌ಗಾಗಿ ವಿಮಾನ ನಿಲ್ದಾಣದ ಗೇಟ್ ಅನ್ನು ತಲುಪಿದಾಗ ಪ್ರಯಾಣಿಕರ ಯಾವುದೇ ಸರತಿ ಸಾಲು ಇಲ್ಲದೇ ಇರುವುದನ್ನು ಗಮನಿಸಿದ್ದಾರೆ. ಆವಾಗಲೇ ವಿಲ್ಕಿನ್ಸನ್‌ಗೆ ಏನೋ ಸಂದೇಹ ಮೂಡಿತ್ತು.


ಇದನ್ನೂ ಓದಿ: ದೇಶದ ಈ ಹಳ್ಳಿಯಲ್ಲಿ ಮಹಿಳೆಯರು ಬಟ್ಟೆನೇ ಧರಿಸಲ್ವಂತೆ!


ವಿಐಪಿ ಅತಿಥಿ ಎಂದು ಸಂಬೋಧಿಸಿದ ಸಿಬ್ಬಂದಿ


ವಿಮಾನ ಪ್ರಯಾಣವನ್ನು ಮುಂದೂಡಲಾಗಿದೆಯೇ ಅಥವಾ ಬೇರೆ ಏನಾದರೂ ಸಮಸ್ಯೆಯಿಂದ ವಿಮಾನವನ್ನು ರದ್ದುಮಾಡಲಾಗಿದೆಯೇ ಎಂದು ವಿಚಾರಿಸುವುದಕ್ಕಾಗಿ ಆತ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ಆದರೆ ಸಿಬ್ಬಂದಿ ನೀವು ನಮ್ಮ ವಿಐಪಿ ಅತಿಥಿ. ಹಾಗಾಗಿ ವಿಮಾನದಲ್ಲಿ ನೀವು ಒಬ್ಬರೇ ಪ್ರಯಾಣಿಸುತ್ತೀರಿ ಎಂದು ಹೇಳಿದಾಗ ಒಮ್ಮೆಲೆ ಸಂತೋಷ, ಇನ್ನೊಂದೆಡೆ ಆಘಾತ ವಿಲ್ಕಿನ್ಸನ್‌ಗೆ ಉಂಟಾಯಿತು.


ಪಾಸ್‌ಪೋರ್ಟ್ ಮೇಲ್ವಿಚಾರಕರಲ್ಲಿ ಕೂಡ ತಮ್ಮ ಸಂದೇಹವನ್ನು ಬಗೆಹರಿಸಿಕೊಂಡ ವಿಲ್ಕಿನ್ಸನ್ ತಾವು ಕೇಳುತ್ತಿರುವ ಸುದ್ದಿ ಹೌದೇ ಅಲ್ಲವೇ ನಿಜವೇ ಸುಳ್ಳೇ ಎಂಬುದನ್ನು ಖಾತ್ರಿಪಡಿಸಿಕೊಂಡರು. ಆದರೆ ಮೇಲ್ವಿಚಾರಕರು ಕೂಡ ನೀವು ನಮ್ಮ ಇಂದಿನ ವಿಐಪಿ ಅತಿಥಿ ಎಂದೇ ಸಂಬೋಧಿಸಿ ವಿಲ್ಕಿನ್ಸನ್ ಅನ್ನು ಇನ್ನಷ್ಟು ಅಚ್ಚರಿಗೆ ತಳ್ಳಿದರು ಎಂದು ಸುದ್ದಿಪತ್ರಿಕೆ ವರದಿ ಮಾಡಿದೆ.


ತಾನೊಬ್ಬನೇ ವಿಮಾನದಲ್ಲಿ ಪ್ರಯಾಣಿಸುತ್ತಿರುವೆ ಎಂಬುದು ಕನಸೋ ನನಸೋ ಎಂದಾಗಿತ್ತು


ಬಹುಶಃ ಸಿಬ್ಬಂದಿಗಳೆಲ್ಲಾ ಹಾಸ್ಯ ಮಾಡುತ್ತಿರಬಹುದು ಅಥವಾ ನಾನು ಒಂದಾ ಬೇಗನೇ ಇಲ್ಲವೇ ತಡವಾಗಿ ವಿಮಾನ ನಿಲ್ದಾಣಕ್ಕೆ ತಲುಪಿರುವೆ. ಹಾಗಾಗಿ ನನ್ನ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ ಎಂಬ ಸೂಚನೆಯನ್ನು ಅವರು ಈ ರೀತಿ ನೀಡುತ್ತಿದ್ದಾರೆ ಎಂದೇ ನಾನು ಭಾವಿಸಿದ್ದೆ ಎಂದು ವಿಲ್ಕಿನ್ಸಿನ್ ತಿಳಿಸಿದ್ದಾರೆ.


ವಿಮಾನದಲ್ಲಿ ಒಬ್ಬರೇ ಪ್ರಯಾಣ ಮಾಡಿ ವ್ಯಕ್ತಿ


ಏನೇ ಆಗಲಿ ಎಂದು ವಿಲ್ಕಿನ್ಸನ್ ವಿಮಾನವನ್ನು ಏರಿದರು ಹಾಗೂ ಫ್ಲೈಟ್‌ನಲ್ಲಿದ್ದ ಮೇಲ್ವಿಚಾರಕರು, ಗಗನ ಸಖಿಯರು ಇವರನ್ನು ರಾಜ ಪಾಲ್ ಎಂದೇ ಮಾತನಾಡಿದರು. ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿಲ್ಕಿನ್ಸನ್ ಸಂಪೂರ್ಣ ವಿಮಾನದಲ್ಲಿ ಒಬ್ಬರೇ ಪ್ರಯಾಣಿಸುವ ಈ ಅನುಭವ ಜೀವನದಲ್ಲಿ ಮರೆಯಲು ಆಗದೇ ಇರುವಂತಹದ್ದು ಎಂದು ಬಣ್ಣಿಸಿದ್ದಾರೆ.


ಅಂತೆಯೇ ನಾನು ನನ್ನ ಸ್ವಂತ ಜೆಟ್‌ನಲ್ಲಿ ಪ್ರಯಾಣಿಸುತ್ತಿದ್ದೇನೆ ಎಂಬ ಭಾವನೆ ನನಗುಂಟಾಯಿತು ಎಂಬ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.


ಪಾಲ್‌ಗೆ ಒಲಿದು ಬಂದ ಅದೃಷ್ಟ


ವಿಮಾನವು ಬೆಲ್‌ಫಾಸ್ಟ್‌ಗೆ ಹೊರಡುವ ಮೊದಲು, ಅವರು ತಮ್ಮದೇ ಆದ ಆಸನವನ್ನು ಆರಿಸಿಕೊಂಡರು ಅಂತೆಯೇ ಕ್ಯಾಪ್ಟನ್‌ನೊಂದಿಗೆ ಮಾತನಾಡಿದಾಗ ಪೋರ್ಚುಗಲ್‌ಗೆ ಹಾಲಿಡೇ ಮೇಕರ್‌ಗಳನ್ನು ಫ್ಲೈಟ್ ಕರೆದೊಯ್ಯುತ್ತಿದ್ದು ಮರಳಿ ಬರಲು ಯಾವುದೇ ಪ್ರಯಾಣಿಕರಿರಲಿಲ್ಲ. ಹೀಗಾಗಿಯೇ ವಿಲ್ಕಿನ್ಸನ್ ಒಬ್ಬರೇ ಪ್ರಯಾಣಿಸುವಂತಾಯಿತು ಹೀಗೆ ಕುಟುಂಬದೊಂದಿಗೆ ಸಮಯ ಕಳೆಯಲು ಬೆಲ್‌ಫಾಸ್ಟ್‌ಗೆ ಭೇಟಿ ನೀಡುತ್ತಿರುವುದು ನನ್ನ ಅದೃಷ್ಟ ಎಂದು ವಿಲ್ಕಿನ್ಸನ್ ತಿಳಿಸಿದ್ದಾರೆ.
ಮೂರು ಮಕ್ಕಳ ತಂದೆಯಾಗಿರುವ ವಿಲ್ಕಿನ್ಸನ್ ಪ್ರವೇಟ್ ಜೆಟ್‌ನಲ್ಲಿ ಒಬ್ಬನೇ ಸವಾರಿ ಮಾಡಲು ತಗುಲುವ ವೆಚ್ಚ ರೂ 25 ಲಕ್ಷವಾಗಿದೆ. ನಾನು ಬರೇ ರೂ 13,000 ದಲ್ಲಿ ಸಂಪೂರ್ಣ ವಿಮಾನದಲ್ಲಿ ಒಬ್ಬನೇ ಪ್ರಯಾಣಿಸಿದೆ ಇದು ನನ್ನ ಅದೃಷ್ಟವಲ್ಲದೆ ಇನ್ನೇನು ಎಂದು ವಿಲ್ಕಿನ್ಸನ್ ತಿಳಿಸಿದ್ದಾರೆ ಎಂದು ಸುದ್ದಿಪತ್ರಿಕೆ ವರದಿಮಾಡಿದೆ.

top videos
    First published: