Plane: ಲಾಕ್‌ಡೌನ್​ನಲ್ಲಿ ಸ್ವಂತ ವಿಮಾನವನ್ನೇ ತಯಾರಿಸಿ ಯುರೋಪ್‌ ಪ್ರವಾಸ ಮಾಡಿದ ಕೇರಳದ ವ್ಯಕ್ತಿ

ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಕೆಲವರು ತಮ್ಮ ಕಚೇರಿಯ ಕೆಲಸದ ಜೊತೆಗೆ ಮನೆಯಲ್ಲಿ ಹೊಸ ಹೊಸ ಅಡುಗೆಗಳನ್ನು ಟ್ರೈ ಮಾಡಿದರೆ, ಇನ್ನೂ ಕೆಲವರು ಒಟಿಟಿ ಮಾಧ್ಯಮದಲ್ಲಿ ಇರುವ ಸಿನೆಮಾ ಮತ್ತು ಶೋ ಗಳನ್ನು ನೋಡಿ ಮುಗಿಸಿದರು. ಆದರೆ ಅಶೋಕ್ ಥಮರಕ್ಷನ್ ಬೇರೆ ಯಾವುದರಲ್ಲೋ ನಿರತರಾಗಿದ್ದರು. ಹೌದು, ಯುಕೆ ಮೂಲದ ಎಂಜಿನಿಯರ್ ಆಗಿದ್ದು ತಮಗಾಗಿ ಒಂದು ಸ್ವಂತ ವಿಮಾನವನ್ನೇ ನಿರ್ಮಿಸಿದ್ದಾರಂತೆ.

ತನ್ನದೇ ಆದ ವಿಮಾನ ತಯಾರಿಸಿದ ಕೇರಳದ ವ್ಯಕ್ತಿ

ತನ್ನದೇ ಆದ ವಿಮಾನ ತಯಾರಿಸಿದ ಕೇರಳದ ವ್ಯಕ್ತಿ

  • Share this:
ಎರಡೂವರೆ ವರ್ಷಗಳ ಹಿಂದೆ ಕೋವಿಡ್-19 (Covid-19) ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗ ಕೇಂದ್ರ ಸರ್ಕಾರವು ಮೊದಲ ಬಾರಿಗೆ ಕೋವಿಡ್-ಪ್ರೇರಿತ ಲಾಕ್‌ಡೌನ್ ಅನ್ನು (Lockdown) ಹೇರಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆ ಸಮಯದಲ್ಲಿ ಎಷ್ಟೋ ಜನರು ತಮ್ಮ ಸಮಯವನ್ನು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಿಕೊಂಡರು. ಬಹುತೇಕರು ತಮ್ಮ ಕೆಲಸವನ್ನು  ಮನೆಯಿಂದಲೇ ಮಾಡಿಕೊಳ್ಳುತ್ತಾ ಆರಾಮಾಗಿ ಬಿಡುವಿನ ಸಮಯದಲ್ಲಿ (Free Time) ತಮ್ಮ ಕುಟುಂಬದವರೊಡನೆ ಸಮಯ ಕಳೆದಿದ್ದರು. ಆದರೆ ಕೆಲವರು ಆ ಸಮಯವನ್ನು (Time) ಬಳಸಿಕೊಂಡು ಏನೆಲ್ಲಾ ಸಾಧನೆಗಳನ್ನು (Achievement) ಮಾಡಿದವರು ಸಹ ನಮ್ಮ ಮಧ್ಯೆ ಇದ್ದಾರೆ ಎಂದು ನಾವು ಹೇಳಬಹುದು.

ತಮ್ಮದೇ ಆದ ವಿಮಾನ ತಯಾರಿಸಿದ ಕೇರಳ ಮೂಲದ ವ್ಯಕ್ತಿ
ಕೆಲವರು ತಮ್ಮ ಕಚೇರಿಯ ಕೆಲಸದ ಜೊತೆಗೆ ಮನೆಯಲ್ಲಿ ಹೊಸ ಹೊಸ ಅಡುಗೆಗಳನ್ನು ಟ್ರೈ ಮಾಡಿದರೆ, ಇನ್ನೂ ಕೆಲವರು ಒಟಿಟಿ ಮಾಧ್ಯಮದಲ್ಲಿ ಇರುವ ಸಿನೆಮಾ ಮತ್ತು ಶೋ ಗಳನ್ನು ನೋಡಿ ಮುಗಿಸಿದರು. ಆದರೆ ಅಶೋಕ್ ಥಮರಕ್ಷನ್ ಬೇರೆ ಯಾವುದರಲ್ಲೋ ನಿರತರಾಗಿದ್ದರು. ಹೌದು, ಯುಕೆ ಮೂಲದ ಎಂಜಿನಿಯರ್ ತಮಗಾಗಿ ಒಂದು ಸ್ವಂತ ವಿಮಾನವನ್ನೇ ನಿರ್ಮಿಸುತ್ತಿದ್ದರು. ಇದು ನಾಲ್ಕು ಆಸನಗಳನ್ನು ಹೊಂದಿರುವ ವಿಮಾನವಾಗಿದ್ದು, ಅದರಲ್ಲಿ ಕುಳಿತು ಅವರು ವಿವಿಧ ದೇಶಗಳಿಗೂ ಹೋಗಿ ಬಂದರು.

"ನನ್ನ ಬಾಲ್ಯದಿಂದಲೂ ವಿಮಾನಗಳು ನನ್ನನ್ನು ತುಂಬಾನೇ ಆಕರ್ಷಿಸಿದ್ದವು" ಎಂದು ಮೂಲತಃ ಕೇರಳದ ಅಲಪ್ಪುಳ ಮೂಲದ ಅಶೋಕ್ ಹೇಳಿದರು. ಆರ್‌ಎಸ್‌ಪಿ ಪಕ್ಷದ ನಾಯಕ ಮತ್ತು ಮಾಜಿ ಶಾಸಕ ಎ.ವಿ.ತಮ್ಮಾರಶನ್ ಅವರ ಪುತ್ರ ಅಶೋಕ್ ಅವರು ಪಾಲಕ್ಕಾಡ್ ನ ಎನ್ಎಸ್ಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ ನಂತರ 2006 ರಲ್ಲಿ ಫೋರ್ಡ್ ನ ಉದ್ಯೋಗಿಯಾಗಿ ಯುಕೆಗೆ ಹೋದರು.

ವಿಮಾನ ತಯಾರಿಸುವ ಆಸಕ್ತಿ ಹುಟ್ಟಿದ್ದು ಹೇಗೆ?
"ನಾನು ಯುಕೆ ತಲುಪಿ ಅಲ್ಲಿ ನೆಲೆಸಿದ ನಂತರ, ನಾನು ವಿಮಾನವನ್ನು ಖರೀದಿಸಲು ಉತ್ಸುಕನಾಗಿದ್ದೆ. ನಾನು ಪೈಲಟ್ ಪರವಾನಗಿಯನ್ನು ಪಡೆದುಕೊಂಡೆ ಮತ್ತು ವಿಮಾನಗಳನ್ನು ಹುಡುಕಲು ಪ್ರಾರಂಭಿಸಿದೆ. ಆಗ ನನಗೆ ಸುಮಾರು 5 ರಿಂದ 6 ಕೋಟಿ ರೂಪಾಯಿ ಖರ್ಚಾಗುತ್ತದೆ ಎಂದು ನಾನು ಅರಿತುಕೊಂಡೆ" ಎಂದು ಅಶೋಕ್ ಹೇಳಿದರು. ನಂತರ ಅವರೇ ಒಂದು ವಿಮಾನವನ್ನು ಸ್ವತಃ ತಯಾರಿಸಬೇಕೆಂದು ನಿರ್ಧರಿಸಿದರು. "ಯುಕೆ ಮತ್ತು ಇತರ ದೇಶಗಳಲ್ಲಿ ಅನೇಕ ಜನರು ಸಣ್ಣ ವಿಮಾನಗಳನ್ನು ನಿರ್ಮಿಸುತ್ತಿದ್ದಾರೆ. ಇದರ ಬಿಡಿ ಭಾಗಗಳು ಸುಲಭವಾಗಿ ಲಭ್ಯವಿವೆ" ಎಂದು ಅವರು ಹೇಳಿದರು.

ಇದನ್ನೂ ಓದಿ:  Heart Warming: ವಿಮಾನ ಹತ್ತಿದ ಪೋಷಕರು ಪೈಲಟ್ ಮಗನ ನೋಡಿ ಭಾವುಕ! ಚಂದದ ವಿಡಿಯೋ ಈಗ ವೈರಲ್

"ನಾನು ದಕ್ಷಿಣ ಆಫ್ರಿಕಾದಿಂದ ನನ್ನ ವಿಮಾನದ ಬಿಡಿ ಭಾಗಗಳನ್ನು, ಆಸ್ಟ್ರಿಯಾದಿಂದ ಎಂಜಿನ್ ಮತ್ತು ಯುಎಸ್ ನಿಂದ ಏವಿಯಾನಿಕ್ಸ್ ಉಪಕರಣಗಳನ್ನು ಖರೀದಿಸಿದೆ. ನಾನು ಎಸೆಕ್ಸ್ ನಲ್ಲಿರುವ ನನ್ನ ಮನೆಯ ಬಳಿ ಒಂದು ಪುಟ್ಟ ಕಾರ್ಯಾಗಾರವನ್ನು ಸ್ಥಾಪಿಸಿದೆ ಮತ್ತು ಏಪ್ರಿಲ್ 2020ರಲ್ಲಿ ಕೆಲಸ ಮಾಡಲು ಶುರು ಮಾಡಿದೆ" ಎಂದು ಅಶೋಕ್ ಹೇಳಿದರು.

ಯುಕೆ ವಾಯುಯಾನ ಪ್ರಾಧಿಕಾರವು ನನ್ನ ಕೆಲಸದ ಮೇಲೆ ನಿಗಾ ಇಟ್ಟಿತ್ತು: ಅಶೋಕ್
ಯುಕೆಯಲ್ಲಿ ಕೋವಿಡ್-ಪ್ರೇರಿತ ಲಾಕ್‌ಡೌನ್ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಅವರ ಕಂಪನಿಯು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದರಿಂದ ಅವರು ತಮ್ಮ ಸ್ವಂತ ಯೋಜನೆಯ ಮೇಲೆ ಗಮನ ಹರಿಸಲು ಶುರು ಮಾಡಿದರು. "ಆರಂಭದಲ್ಲಿ, ನಾನು ಎರಡು ಆಸನಗಳ ವಿಮಾನವನ್ನು ನಿರ್ಮಿಸಲು ನಿರ್ಧರಿಸಿದೆ. ಆದಾಗ್ಯೂ, ನನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಕುಟುಂಬ ಪ್ರವಾಸಕ್ಕಾಗಿ ಹೋಗಲು ನನಗೆ ನಾಲ್ಕು ಆಸನಗಳ ವಿಮಾನದ ಅಗತ್ಯವಿತ್ತು. ಆದ್ದರಿಂದ, ನಾನು ಅದನ್ನೇ ಮಾಡಿದ್ದೇನೆ" ಎಂದು ಅವರು ಹೇಳಿದರು.

ಮೂರು ತಿಂಗಳ ಕಾಲ ನಿರಂತರವಾಗಿ ವಿಮಾನದಲ್ಲಿ ಹಾರಾಟ ಪರೀಕ್ಷೆ
ಯುಕೆ ನಾಗರಿಕ ವಿಮಾನಯಾನ ಪ್ರಾಧಿಕಾರವು ಅವರ ಕೆಲಸವನ್ನು ಮೇಲ್ವಿಚಾರಣೆ ಮಾಡಿದೆ ಮತ್ತು ನಿರ್ಮಾಣದ ಪ್ರತಿಯೊಂದು ಹಂತವನ್ನು ಅದರ ಪರಿಶೀಲನೆ ಮತ್ತು ಅನುಮೋದನೆಯ ನಂತರವೇ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು. "ಅವರು ಮೂರು ತಿಂಗಳ ಕಾಲ ನಿರಂತರವಾಗಿ ವಿಮಾನದಲ್ಲಿ ಹಾರಾಟ ಪರೀಕ್ಷೆಗಳನ್ನು ನಡೆಸಿದರು ಮತ್ತು ಅಂತಿಮವಾಗಿ ಫೆಬ್ರವರಿಯಲ್ಲಿ ಹಾರಾಟಕ್ಕೆ ಅದನ್ನು ಒಪ್ಪಿಕೊಂಡರು" ಎಂದು ವಿಮಾನ ನಿರ್ಮಿಸಲು ಸುಮಾರು 1.8 ಕೋಟಿ ಮತ್ತು 1,500 ಗಂಟೆಗಳ ಕಾಲ ವ್ಯಯಿಸಿದ ಅಶೋಕ್ ಹೇಳಿದರು.

ಇದನ್ನೂ ಓದಿ:  Restaurants: ಈ ರೆಸ್ಟೋರೆಂಟ್​ಗಳು ಯಾಕೆ ಅಷ್ಟೊಂದು ಫೇಮಸ್​ ಗೊತ್ತಾ? ಇಲ್ಲಿ ಸಿಗುವ ಮಜಾನೇ ಬೇರೆ!

ಈ ವಿಮಾನವು 520 ಕೆಜಿ ತೂಕವಿದ್ದು, 950 ಕೆಜಿ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ, ಇದರಲ್ಲಿ ನಾಲ್ವರು ಪ್ರಯಾಣಿಕರು ಕುಳಿತುಕೊಳ್ಳಬಹುದು. ಇದು ಒಂದು ಗಂಟೆಯಲ್ಲಿ 250 ಕಿಲೋ ಮೀಟರ್ ದೂರ ಪ್ರಯಾಣಿಸಬಲ್ಲದು.

ಜಿ-ದಿಯಾ
ತಮ್ಮ ವಿಮಾನಕ್ಕೆ ಜಿ-ದಿಯಾ ಎಂದು ಹೆಸರಿಟ್ಟರು, ಅವರ ಮಗಳು ದಿಯಾ (ಜಿ ಎಂಬುವುದು ದೇಶದ ಕೋಡ್). ಹಾರಾಟಕ್ಕೆ ಅನುಮತಿ ಪಡೆದ ನಂತರ, ಅಶೋಕ್ ಮತ್ತು ಅವರ ಇಬ್ಬರು ಸ್ನೇಹಿತರು ಫ್ರಾನ್ಸ್, ಜರ್ಮನಿ ಮತ್ತು ಆಸ್ಟ್ರಿಯಾದಂತಹ ರಾಷ್ಟ್ರಗಳಿಗೆ ಭೇಟಿ ನೀಡಿದರು. ಇಲ್ಲಿಯವರೆಗೆ, ವಿಮಾನವು 86 ಗಂಟೆಗಳ ಹಾರಾಟವನ್ನು ದಾಖಲಿಸಿದೆ. ಮುಂದಿನ ತಿಂಗಳು ಯುಕೆಗೆ ಮರಳಿದ ನಂತರ ಹೆಚ್ಚಿನ ಪ್ರವಾಸಗಳನ್ನು ಯೋಜಿಸುವುದಾಗಿಅಶೋಕ್ ಹೇಳಿದರು.
Published by:Ashwini Prabhu
First published: