• Home
  • »
  • News
  • »
  • trend
  • »
  • Viral News: ಈ ಕಪ್ಪೆಗಳ ಸಂಪರ್ಕಕ್ಕೆ ಹೋದ್ರೆ ಜೀವಕ್ಕೇ ಕುತ್ತಂತೆ! ಇದರ ಕಣ್ಣಿನ ಹಿಂದಿರುತ್ತಂತೆ ವಿಷ

Viral News: ಈ ಕಪ್ಪೆಗಳ ಸಂಪರ್ಕಕ್ಕೆ ಹೋದ್ರೆ ಜೀವಕ್ಕೇ ಕುತ್ತಂತೆ! ಇದರ ಕಣ್ಣಿನ ಹಿಂದಿರುತ್ತಂತೆ ವಿಷ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Viral News: ಉತ್ತರ ಅಮೆರಿಕಾದಲ್ಲಿ ಕಂಡುಬರುವ ಅತಿದೊಡ್ಡ ನೆಲಗಪ್ಪೆಗಳಲ್ಲಿ ಒಂದಾಗಿರುವ ಸೊನೊರನ್ ಮರುಭೂಮಿಯ ಟೋಡ್ 7 ಇಂಚುಗಳಷ್ಟು ಉದ್ದವನ್ನು ಹೊಂದಿದೆ. ಹಾಗೂ ಈ ನೆಲಗಪ್ಪೆಯು ವಿಷವನ್ನು ಸ್ರವಿಸುವ ಪ್ರಮುಖವಾದ ಪರೋಟಾಯ್ಡ್ ಗ್ರಂಥಿಗಳನ್ನು ಹೊಂದಿವೆ.

  • Share this:

ಯಾವುದೇ ಉದ್ಯಾನದಲ್ಲಿ ಪ್ರಾಣಿ ಅಥವಾ ಪಕ್ಷಿಗಳ ಸಮೀಪ ಹೋಗುವುದು ಅವುಗಳನ್ನು ಮುದ್ದಿಸುವುದು ಇಲ್ಲವೇ ಆಹಾರ (Food) ನೀಡುವುದನ್ನು ತಡೆಯಲು ಅಲ್ಲಿನ ಸಿಬ್ಬಂದಿಗಳು ಸೂಚನೆಗಳನ್ನು ನೀಡುತ್ತಿರುತ್ತಾರೆ. ಇದೀಗ ಯುಎಸ್‌ನ (US) ಉದ್ಯಾನದಲ್ಲಿರುವ (Park) ದೊಡ್ಡ ನೆಲಗಪ್ಪೆಗಳ ಕುರಿತು ವಿಶೇಷ ಸೂಚನೆಯನ್ನು ಸಿಬ್ಬಂದಿಗಳು ನೀಡಿದ್ದು, ಕಪ್ಪೆಗಳ (Frogs ) ಸಮೀಪ ಸುಳಿದಾಡುವುದು ಇಲ್ಲವೇ ಅವುಗಳ ಸಂಪರ್ಕಕ್ಕೆ ಬರುವುದು ದೇಹದೊಳಕ್ಕೆ ವಿಷದ ಅಂಶ ಸೇರಿಕೊಳ್ಳಲು ಕಾರಣವಾಗುತ್ತದೆ ಹಾಗೂ ಇದು ಪ್ರಾಣಕ್ಕೆ ಸಂಚಕಾರ ತರಬಹುದು ಎಂದು ತಿಳಿಸಿದ್ದಾರೆ.


ಅತಿದೊಡ್ಡ ನೆಲಗಪ್ಪೆ ಸೊನೊರನ್ ಟೋಡ್:


ಉತ್ತರ ಅಮೆರಿಕಾದಲ್ಲಿ ಕಂಡುಬರುವ ಅತಿದೊಡ್ಡ ನೆಲಗಪ್ಪೆಗಳಲ್ಲಿ ಒಂದಾಗಿರುವ ಸೊನೊರನ್ ಮರುಭೂಮಿಯ ಟೋಡ್ 7 ಇಂಚುಗಳಷ್ಟು ಉದ್ದವನ್ನು ಹೊಂದಿದೆ. ಹಾಗೂ ಈ ನೆಲಗಪ್ಪೆಯು ವಿಷವನ್ನು ಸ್ರವಿಸುವ ಪ್ರಮುಖವಾದ ಪರೋಟಾಯ್ಡ್ ಗ್ರಂಥಿಗಳನ್ನು ಹೊಂದಿವೆ. ಕಪ್ಪೆಯ ಸಂಪರ್ಕಕ್ಕೆ ಬಂದಲ್ಲಿ ಅಥವಾ ಕಪ್ಪೆಯ ವಿಷ ಬಾಯಿಗೆ ಸೇರಿದಲ್ಲಿ ಮನುಷ್ಯರನ್ನು ಅಸ್ವಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಯುಎಸ್ ರಾಷ್ಟ್ರೀಯ ಉದ್ಯಾನವನ ತನ್ನ ಫೇಸ್‌ಬುಕ್ ಫೋಸ್ಟ್‌ನಲ್ಲಿ ತಿಳಿಸಿದೆ. ಇಲ್ಲಿ ಬರುವ ಸಂದರ್ಶಕರಿಗೆ ಕಪ್ಪೆಯನ್ನು ನೆಕ್ಕಬಾರದು ಎಂಬ ಸೂಚನಾ ಫಲಕವನ್ನು ಸಿಬ್ಬಂದಿಗಳು ನೇತುಹಾಕಿದ್ದಾರೆ. ಇಲ್ಲವೇ  ವಿಷವನ್ನು ಸಂಗ್ರಹಿಸುವುದು ಅಪಾಯಕಾರಿ ಎಂದು ಸೂಚಿಸಿದೆ.


ಸಂದರ್ಶಕರಿಗೆ ಮತ್ತು ದಾರಿಹೋಕರಿಗೆ ಸೂಚನೆ ನೀಡಿದ ಸಿಬ್ಬಂದಿ:


ಕಪ್ಪೆಯು ತನ್ನ ಗ್ರಂಥಿಗಳಿಂದ ವಿಷವನ್ನು ಸ್ರವಿಸುವ ಕಾರಣ ಉದ್ಯಾನದ ಸಿಬ್ಬಂದಿಗಳು ಭೇಟಿ ನೀಡುವ ವೀಕ್ಷಕರಿಗೆ ವಿಶೇಷ ಎಚ್ಚರಿಕೆಯನ್ನು ನೀಡಿದೆ. ಕೊಲೊರಾಡೋ ನದಿಯ ಟೋಡ್ ಎಂದೂ ಕರೆಯಲ್ಪಡುವ ಸೊನೊರನ್ ಮರುಭೂಮಿ ಟೋಡ್‌ ಅಥವಾ ನೆಲಗಪ್ಪೆ ಉದ್ಯಾನದಲ್ಲಿದೆ. ಹಾಗಾಗಿ ಸಂದರ್ಶಕರು ಮತ್ತು ದಾರಿಹೋಕರು ಈ ಕಪ್ಪೆಯ ಕುರಿತು ಹೆಚ್ಚಿನ ಎಚ್ಚರಿಕೆಯನ್ನು ಹೊಂದಬೇಕು ಎಂದು ತಿಳಿಸಿದ್ದಾರೆ. ಅದಾಗ್ಯೂ ಕಪ್ಪೆಯ ಸ್ರವಿಸುವಿಕೆಯು ಮನರಂಜನಾ ಔಷಧವಾಗಿ ವಿಕಸನಗೊಂಡಿದೆ ಹಾಗೂ ದೀರ್ಘಕಾಲದವರೆಗೆ ಪ್ರಾಣಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.


ಮನುಷ್ಯರಿಗೆ ಅಪಾಯಕಾರಿ ಹೇಗೆ?:


5-MeO-DMT ಮತ್ತು ಇನ್ನೊಂದು DMT (ಬದಲಿ ಟ್ರಿಪ್ಟಮೈನ್ ಮನುಷ್ಯರು ಹಾಗೂ ಪ್ರಾಣಿಗಳಲ್ಲಿ ಕಂಡುಬರುತ್ತದೆ) ಅನುಕರಣೆಯಾದ ಬುಫೋಟೆನಿನ್ ಉತ್ಪಾದನೆಯು ನೆಲಗಪ್ಪೆಯ ಕಣ್ಣುಗಳ ಹಿಂದಿನ ಗ್ರಂಥಿಗಳಿಂದ ಉತ್ಪತ್ತಿಯಾಗುತ್ತದೆ ಎಂಬುದು ಅಧ್ಯಯನಕಾರರು ತಿಳಿಸಿದ್ದಾರೆ.


ಇದನ್ನೂ ಓದಿ: Trending Story: ಕುರಿಗಳು ವೃತ್ತಾಕಾರವಾಗಿ ಸುತ್ತುತ್ತಿರುವುದರ ಹಿಂದಿನ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು! ಏನು ಹೇಳಿದ್ದಾರೆ ನೋಡಿ


ವಿಷ ನಿಯಂತ್ರಣ ವೆಬ್‌ಸೈಟ್‌ನ ಪ್ರಕಾರ, ಕಣ್ಣು ಅಥವಾ ಮೂಗುಗಳಲ್ಲಿ ಬುಪೊ ಟೋಡ್ (ಸಾಮಾನ್ಯವಾಗಿ ಸೊನೊರನ್ ಡೆಸರ್ಟ್ ಟೋಡ್ ಎಂದು ಕರೆಯಲ್ಪಡುತ್ತದೆ) ಸ್ರವಿಸುವಿಕೆಯು ತೀವ್ರವಾದ ಕಿರಿಕಿರಿ, ನೋವು ಮತ್ತು ಅಂಗಾಂಶ ಹಾನಿಯನ್ನು ಉಂಟುಮಾಡಬಹುದು. ಸ್ರವಿಸುವಿಕೆಯನ್ನು ನೆಕ್ಕುವುದು ಅಥವಾ ನುಂಗುವುದು ಬಾಯಿ ಮತ್ತು ಗಂಟಲಿನ ಮರಗಟ್ಟುವಿಕೆಗೆ ಕಾರಣವಾಗಬಹುದು. ಡಿಗೋಕ್ಸಿನ್ ತರಹದ ಸಂಯುಕ್ತಗಳು ಮತ್ತು ಕ್ಯಾಟೆಕೊಲಮೈನ್‌ಗಳ ಪರಿಣಾಮವಾಗಿ ಹೃದಯದ ಮೇಲೆ ಮಾರಣಾಂತಿಕ ಪರಿಣಾಮಗಳನ್ನುಂಟು ಮಾಡಬಹುದು ಎಂಬುದಾಗಿ ತಿಳಿಸಿದೆ.


ಸೊನೊರನ್ ಟೋಡ್ ಅಳಿವಿನ ಅಂಚಿನಲ್ಲಿದೆ:


ಈ ಪರಿಣಾಮಗಳು ಹೃದಯದ ಅನಿಯಮಿತ ಲಯ, ಹೃದಯಾಘಾತ, ಕಡಿಮೆ ರಕ್ತದೊತ್ತಡ ಮತ್ತು ಹೃದಯ ಸ್ತಂಭನವನ್ನು ಒಳಗೊಂಡಿವೆ. ಚರ್ಮದ ಮೂಲಕ ಹೀರಿಕೊಂಡ ನಂತರವೂ ಈ ಸ್ರವಿಸುವಿಕೆಯಿಂದ ತೀವ್ರ ಪರಿಣಾಮಗಳು ಉಂಟಾಗಬಹುದು ಎಂದು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ನೆಲಗಪ್ಪೆಯನ್ನು ಕ್ಯಾಲಿಫೋರ್ನಿಯಾದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಉಲ್ಲೇಖಿಸಲಾಗಿದ್ದು, ನ್ಯೂ ಮೆಕ್ಸಿಕೋದಲ್ಲಿ ಬೆದರಿಕೆಯ ಜೀವಿ ಎಂದು ಉಲ್ಲೇಖಿಸಲಾಗಿದೆ.


ಮಾದಕವಸ್ತುಗಳಲ್ಲಿ ಬಳಕೆ:


ಇತ್ತೀಚಿನ ವರ್ಷಗಳಲ್ಲಿ ಉಭಯಚರಗಳ ಸ್ರವಿಸುವಿಕೆಯನ್ನು ನೆಕ್ಕುವುದು ಜನಪ್ರಿಯತೆಯನ್ನು ಗಳಿಸಿದೆ. ಪ್ರಾಣಿಗಳನ್ನು ಮಾದಕವಸ್ತು ಬಳಕೆಗಾಗಿ ಬಳಸಲು ಬಯಸುವ ಸಂಗ್ರಾಹಕರು ಇರುವುದರಿಂದ ಇದನ್ನು ಬೆದರಿಕೆ ಎಂದು ಪರಿಗಣಿಸಲಾಗಿದೆ. ಹಲವಾರು ಸಾರ್ವಜನಿಕರು ನೆಲಗಪ್ಪೆಯಿಂದ ಹೊರತೆಗೆಯಲಾದ ಜೀವಾಣುಗಳ ಪ್ರಯೋಗವನ್ನು ವರದಿ ಮಾಡಿದ್ದಾರೆ.

Published by:shrikrishna bhat
First published: