• Home
  • »
  • News
  • »
  • trend
  • »
  • Tiger Shark: ಟೈಗರ್ ಶಾರ್ಕ್ ವಾಂತಿಯಲ್ಲಿ ಮನುಷ್ಯನ ತೋಳು: ಕೊಲೆಯ ರಹಸ್ಯ ಬಯಲು

Tiger Shark: ಟೈಗರ್ ಶಾರ್ಕ್ ವಾಂತಿಯಲ್ಲಿ ಮನುಷ್ಯನ ತೋಳು: ಕೊಲೆಯ ರಹಸ್ಯ ಬಯಲು

ಸಾಂಧರ್ಭಿಕ ಚಿತ್ರ

ಸಾಂಧರ್ಭಿಕ ಚಿತ್ರ

Tiger Shark: ನಾನು ಶಾರ್ಕ್‍ನಿಂದ 3 ಅಥವಾ 4 ಮೀಟರ್‌ಗಳಷ್ಟು ದೂರದಲ್ಲಿದ್ದೆ ಮತ್ತು ಅದರ ಬಾಯಿಯಿಂದ ಅತ್ಯಂತ ದುರ್ವಾಸನೆಯುಳ್ಳ ಕಂದು ಬಣ್ಣದ ನೊರೆ ದಂಡಿಯಾಗಿ ಹೊರ ಬರುವುದನ್ನು ನೋಡಿದೆ” ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ

  • Share this:

ಬಚ್ಚಿಟ್ಟ ಕೊಲೆಯ ರಹಸ್ಯಗಳು ಕೆಲವೊಮ್ಮೆ ವಿಭಿನ್ನ ಮತ್ತು ವಿಚಿತ್ರ ರೀತಿಯಲ್ಲಿ ಬಯಲಾಗುವುದುಂಟು. ಅಂತದ್ದೇ ವಿಚಿತ್ರವೊಂದು ಆಸ್ಟ್ರೇಲಿಯದ(Australia) ಸಿಡ್ನಿಯಲ್ಲಿ ಸಂಭವಿಸಿದೆ. ಅದೇನೆಂದರೆ, ಅಲ್ಲಿನ ಕೂಗಿ ಅಕ್ವೇರಿಯಂನಲ್ಲಿ(Coogee Aquarium) ಟೈಗರ್ ಶಾರ್ಕ್ (Tiger shark)ಒಂದು ಟ್ಯಾಟು ಉಳ್ಳ ಮಾನವನ ತೋಳನ್ನು ವಾಂತಿ(vomited) ಮಾಡಿದ್ದು, ಕೊಲೆಯ ತನಿಖೆ ಮಾಡಲು ಪ್ರಚೋದನೆ ನೀಡಿದೆ. ವರದಿಗಳ ಪ್ರಕಾರ, ಅಕ್ವೇರಿಯಂ ಮಾಲೀಕ ಬ್ರೆಟ್ ಹಬ್ಸನ್(Bret Hobson), ಹೆಚ್ಚು ಹೆಚ್ಚು ಗ್ರಾಹಕರನ್ನು( customers)  ಆಕರ್ಷಿಸಲು ಶಾರ್ಕ್ ಒಂದನ್ನು ಸೆರೆಹಿಡಿದು ತಂದಿದ್ದರು. ಆದರೆ ಅದೇ ದಿನ ಸಂಜೆ ಸುಮಾರು 4.30ರ ಸುಮಾರಿಗೆ ಆ ಶಾರ್ಕ್ ಒದ್ದಾಡತೊಡಗಿತು ಮತ್ತು ವಾಂತಿ ಮಾಡತೊಡಗಿತು. ಇದನ್ನು ಕಂಡು ಜನರು (people)ಕಕ್ಕಾಬಿಕ್ಕಿಯಾಗಿದ್ದಾರೆ.


ಕೈಯನ್ನು ವಾಂತಿ ಮಾಡಿದ 13 ಅಡಿ ಉದ್ದದ ಶಾರ್ಕ್
ವಾಂತಿಯಲ್ಲಿ ಮೊದಲಿಗೆ ಒಂದು ಹೆಗ್ಗಣ, ಬಳಿಕ ಒಂದು ಹಕ್ಕಿಯ ದೇಹ ಹೊರ ಬಂತು. ಆದರೆ ಅಲ್ಲಿ ಅಂದು ನೆರೆದಿದ್ದವರಿಗೆ ದಿಗ್ಭ್ರಮೆ ಹುಟ್ಟಿಸಿದ ಸಂಗತಿ ಎಂದರೆ, ಆ 13 ಅಡಿ ಉದ್ದದ ಶಾರ್ಕ್, ಕತ್ತರಿಸಿದ ಮಾನವನ ಕೈಯನ್ನು ವಾಂತಿ ಮಾಡಿದ್ದು. ಆ ಕತ್ತರಿಸಿದ ಕೈ ಜಿಮ್ಮಿ ಸ್ಮಿತ್ ಎಂಬವನಿಗೆ ಸೇರಿದ್ದು ಎಂದು ಪೊಲೀಸರ ತನಿಖೆಯಲ್ಲಿ ನಂತರ ಪತ್ತೆ ಹಚ್ಚಲಾಯಿತು.


ಇದನ್ನೂ ಓದಿ: Murder for Pizza: ಪಿಜ್ಜಾ ವಿಚಾರಕ್ಕೆ ಮಗುವನ್ನೇ ಹೊಡೆದು ಕೊಂದ ಕ್ರೂರಿ ತಂದೆ


ಟೈಗರ್ ಶಾರ್ಕ್ ಮಾಡಿದ ವಾಂತಿಯಿಂದ ಹೊರ ಬಂದ ಆ ಕತ್ತರಿಸಿದ ತೋಳಿನ ಮುಂಭಾಗದ ಮೇಲೆ ಒಂದು ಮುಖ್ಯವಾದ ಹಚ್ಚೆ ಇತ್ತು. ಶಾರ್ಕ್ ಬಾಯಿಯಿಂದ ‘ಗಾಢ ಕಂದು ನೊರೆ’ ಯೊಂದಿಗೆ ಏನೋ ಒಂದು ಹೊರಗೆ ಬಂತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.


ದುರ್ವಾಸನೆಯುಳ್ಳ ಕಂದು ಬಣ್ಣದ ನೊರೆ
“ನಾನು ಶಾರ್ಕ್‍ನಿಂದ 3 ಅಥವಾ 4 ಮೀಟರ್‌ಗಳಷ್ಟು ದೂರದಲ್ಲಿದ್ದೆ ಮತ್ತು ಅದರ ಬಾಯಿಯಿಂದ ಅತ್ಯಂತ ದುರ್ವಾಸನೆಯುಳ್ಳ ಕಂದು ಬಣ್ಣದ ನೊರೆ ದಂಡಿಯಾಗಿ ಹೊರ ಬರುವುದನ್ನು ನೋಡಿದೆ” ಎಂದು ನಾರ್ಸಿಸ್ ಲಿಯೋ ಎಂಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಇಬ್ಬರು ಬಾಕ್ಸರ್‌ಗಳು ಕಿತ್ತಾಡುವ ಚಿತ್ರವುಳ್ಳ ಹಚ್ಚೆ ನೋಡಿದ ಬಳಿಕ ಪೊಲೀಸರಿಗೆ ಸುಳಿವು ಸಿಕ್ಕಿತು. ಆ ತೋಳಿನ ಮಣಿಕಟ್ಟಿಗೆ ಹಗ್ಗವನ್ನು ಕೂಡ ಕಟ್ಟಲಾಗಿತ್ತು.


ದೊಡ್ಡ ತಿರುವು
ಈ ತೋಳಿನ ಪ್ರಕರಣದ ತನಿಖೆಗೆ ದೊಡ್ಡ ತಿರುವೊಂದು ಸಿಕ್ಕಿದೆ. ಅದೇನೆಂದರೆ ಆ ತೋಳು ಶಾರ್ಕ್ ಹೊಟ್ಟೆಯಿಂದ ಹೊರ ಬಂದಿದ್ದರೂ, ಅದನ್ನು ಶಾರ್ಕ್ ಕಚ್ಚಿಲ್ಲ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಸ್ಮಿತ್ , ಮಾದಕ ವಸ್ತುಗಳ ಕಳ್ಳ ಸಾಗಾಣೆಯ ನೇತೃತ್ವ ವಹಿಸಿದ್ದ ಸ್ಥಳೀಯ ಅಪರಾಧಿ ರೆಜಿನಾಲ್ಡ್ ಹೋಮ್ಸ್‌ನ ಗ್ಯಾಂಗ್‍ಗೆ ಸೇರಿದವನಾಗಿದ್ದ.


ಬ್ಲಾಕ್‍ಮೇಲ್ ಮಾಡಿದ್ದರು


ಅವರಿಬ್ಬರು ಫೋರ್ಜರಿ ಮಾಡಿದ ಆರೋಪಕ್ಕೆ ಒಳಗಾಗಿದ್ದ ಪ್ಯಾಟ್ರಿಕ್ ಬ್ರಾಡಿ ಎಂಬ ಮಾಜಿ ಸೈನಿಕನ ಜೊತೆ ಕೈ ಜೋಡಿಸಿದ್ದರು. ಅವರೆಲ್ಲರು ಗ್ರಾಹಕರ ಚೆಕ್‍ಗಳನ್ನು ನಕಲಿ ಮಾಡುವ ಕೆಲಸದಲ್ಲಿ ತೊಡಗಿಕೊಂಡ ನಂತರ, ಸ್ಮಿತ್ ಮತ್ತು ಹೋಲ್ಸ್ ಆ ಗುಂಪಿನಿಂದ ಹೊರ ಬಂದರು. ಆಗ ಆತ ಅವರಿಬ್ಬರನ್ನು ಬ್ಲಾಕ್‍ಮೇಲ್ ಮಾಡತೊಡಗಿದ್ದ ಎಂದು ಬಹಿರಂಗವಾಗಿದೆ.


ಇದನ್ನೂ ಓದಿ: Pakistan: ಪಾಕಿಸ್ತಾನದಲ್ಲಿ ಹಿಂದು ಬಾಲಕನ ಭೀಕರ ಹತ್ಯೆ, ಬಳಿಕ ಶವದ ಮೇಲೆ ಅತ್ಯಾಚಾರ!


ವಾಂತಿ ಮಾಡಿದ 3 ವಾರದ ನಂತರ
ಪೊಲೀಸರು ಸ್ಮಿತ್ ಚಲನಾವಲನಗಳನ್ನು ಕಡೆಯ ಬಾರಿಗೆ ಗಮನಿಸಿದ್ದು, ಆತ ಬ್ರಾಡಿಯೊಂದಿಗೆ ಹೊಟೇಲ್ ಒಂದರಲ್ಲಿ ಮದ್ಯಪಾನ ಮಾಡುತ್ತಿದ್ದಾಗ. ಶಾರ್ಕ್ ತೋಳನ್ನು ವಾಂತಿ ಮಾಡಿದ 3 ವಾರದ ನಂತರ, ಸ್ಮಿತ್ ಕೊಲೆಯ ಆರೋಪದ ಮೇಲೆ ಬ್ರ್ಯಾಡಿಯನ್ನು ಬಂಧಿಸಲಾಯಿತು. ಆದರೆ ಶವ ಸಿಗದೇ ಇದ್ದ ಕಾರಣ ಅದೊಂದು ಕೊಲೆ ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ವರದಿಗಳು ಇದೀಗ ತಿಳಿಸಿವೆ.

Published by:vanithasanjevani vanithasanjevani
First published: