Girl Funeral: ಅಂತ್ಯಸಂಸ್ಕಾರದ ವೇಳೆ ಜೀವಂತವಾದ 3 ವರ್ಷದ ಕಂದಮ್ಮ! ಬಳಿಕ ಆಗಿದ್ದೇನು ನೋಡಿ

ಇನ್ನೇನು ವ್ಯಕ್ತಿಯು ಲೋಕವನ್ನು ಬಿಟ್ಟು ಹೋಗಿದ್ದಾನೆ ಅನ್ನೋವಷ್ಟರಲ್ಲಿ ಮತ್ತೆ ಜೀವಂತವಾಗಿ ಮರಳಿ ಬಂದಿರುವ ಘಟನೆಗಳು ಇವೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ. ಆದರೆ ಇಲ್ಲಿ ಜೀವ ಮರಳಿ ಬಂದಿದೆ, ಆದರೆ ಆ ಜೀವ ಹೆಚ್ಚು ಹೊತ್ತು ಹಾಗೆಯೇ ಉಳಿಯಲಿಲ್ಲ.

ಸಾವನ್ನಪ್ಪಿದ ಮಗು

ಸಾವನ್ನಪ್ಪಿದ ಮಗು

  • Share this:
ಸತ್ತಂತಹ (Death) ವ್ಯಕ್ತಿಗಳನ್ನು ಅಂತ್ಯಸಂಸ್ಕಾರ (Funeral) ಮಾಡಲು ತೆಗೆದುಕೊಂಡು ಹೋದಾಗ ಅಲ್ಲಿ ಮತ್ತೆ ಅವರು ಎಚ್ಚರಗೊಂಡಿರುವ ಘಟನೆಗಳ ಬಗ್ಗೆ ನಾವು ಆಗಾಗ್ಗೆ ಕೇಳಿರುತ್ತೇವೆ. ಇಂತಹ ಘಟನೆಗಳು ತುಂಬಾನೇ ಅಪರೂಪವಾದರೂ (Rarely) ಸಹ ನಡೆದಿರುವಂತದ್ದು ಮಾತ್ರ ಸುಳ್ಳಲ್ಲ. ಹೀಗೆ ಇನ್ನೇನು ವ್ಯಕ್ತಿಯು (Person) ಲೋಕವನ್ನು ಬಿಟ್ಟು ಹೋಗಿದ್ದಾನೆ ಅನ್ನೋವಷ್ಟರಲ್ಲಿ ಮತ್ತೆ ಜೀವಂತವಾಗಿ ಮರಳಿ ಬಂದಿರುವ ಘಟನೆಗಳು ಇವೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ (incident) ನಡೆದಿದೆ ನೋಡಿ. ಆದರೆ ಇಲ್ಲಿ ಜೀವ ಮರಳಿ ಬಂದಿದೆ, ಆದರೆ ಆ ಜೀವ ಹೆಚ್ಚು ಹೊತ್ತು ಹಾಗೆಯೇ ಉಳಿಯಲಿಲ್ಲ. 

ಅಂತ್ಯಸಂಸ್ಕಾರದ ಸಮಯದಲ್ಲಿ ದಿಢೀರನೆ ಎಚ್ಚರಗೊಂಡ ಬಾಲಕಿ
ಈ ಘಟನೆ ನಡೆದಿದ್ದು ಮೆಕ್ಸಿಕೋದಲ್ಲಿ ಮೂರು ವರ್ಷದ ಬಾಲಕಿಯೊಬ್ಬಳು ತನ್ನ ಅಂತ್ಯಸಂಸ್ಕಾರದ ಸಮಯದಲ್ಲಿ ದಿಢೀರನೆ ಎಚ್ಚರಗೊಂಡು ಅಲ್ಲಿದ್ದವರನ್ನು ಒಂದು ಕ್ಷಣ ಬೆಚ್ಚಿ ಬೀಳುವಂತೆ ಮಾಡಿದ್ದಂತೂ ನಿಜ. ಅದಕ್ಕೂ ಮುಂಚೆ ವೈದ್ಯರು ಆ ಬಾಲಕಿ ಸತ್ತಿದ್ದಾಳೆ ಎಂದು ತಪ್ಪಾಗಿ ಘೋಷಿಸಿದ್ದರು.

ವರದಿಗಳ ಪ್ರಕಾರ, ಮಗುವಿಗೆ ಹೊಟ್ಟೆ ನೋವು, ವಾಂತಿ ಮತ್ತು ಜ್ವರ ಕಾಣಿಸಿಕೊಂಡ ನಂತರ ಅದನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಹೊಟ್ಟೆಯಲ್ಲಿ ಏನೋ ಒಂದು ದೋಷದಿಂದ ಸಾವನ್ನಪ್ಪಿದೆ ಎಂದು ವೈದ್ಯರು ಆ ಮಗುವಿನ ಪೋಷಕರಿಗೆ ತಿಳಿಸಿದ್ದಾರೆ.

ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ಕರೆದೊಯ್ದ ಪೋಷಕರು
ಸ್ಥಳೀಯ ಪ್ರಕಟಣೆ ಎಲ್ ಯೂನಿವರ್ಸಲ್ ವರದಿಯ ಪ್ರಕಾರ, ಬಾಲಕಿಯ ತಾಯಿ ಆರಂಭದಲ್ಲಿ ಮಗುವನ್ನು ಮಕ್ಕಳ ತಜ್ಞರ ಬಳಿಗೆ ಕರೆದೊಯ್ದರು. ಅವರು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದರು. ಮಗುವಿಗೆ ಪ್ಯಾರಾಸಿಟಮಲ್ ಮಾತ್ರೆಯನ್ನು ಶಿಫಾರಸು ಮಾಡಲಾಯಿತು.

ಆದರೆ ಅವಳ ಸ್ಥಿತಿ ಇನ್ನೂ ಹದಗೆಡಲು ಪ್ರಾರಂಭಿಸಿದ ನಂತರ, ಅವಳನ್ನು ಇನ್ನೊಬ್ಬ ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಅವರು ಅವಳಿಗೆ ವಿಭಿನ್ನ ರೀತಿಯ ಔಷಧಿಗಳನ್ನು ನೀಡಿದರು ಮತ್ತು ಮಗುವಿಗೆ ಹಣ್ಣುಗಳು ಮತ್ತು ನೀರನ್ನು ನೀಡುವಂತೆ ತಾಯಿಗೆ ಹೇಳಿದರು.

ಇದನ್ನೂ ಓದಿ: Viral Story: ಐದೇ ವರ್ಷಕ್ಕೆ ಮಗುವಿಗೆ ಅಮ್ಮನಾದ ಕಂದಮ್ಮ! ಸಣ್ಣ ವಯಸ್ಸಿನಲ್ಲೇ ತಾಯಿಯಾದ ಹೆಣ್ಣು ಮಕ್ಕಳ ನೋವಿನ ಕಥೆ ಇಲ್ಲಿದೆ

ಆದಾಗ್ಯೂ, ಬಾಲಕಿ ಯಾವುದೇ ಆರೋಗ್ಯ ಸುಧಾರಿಸುವ ಲಕ್ಷಣಗಳನ್ನು ತೋರಿಸದ ನಂತರ, ಅವಳ ಕುಟುಂಬವು ಅವಳನ್ನು ಆಸ್ಪತ್ರೆಯ ತುರ್ತು ಕೋಣೆಗೆ ಕರೆದುಕೊಂಡು ಹೋದರು.

ನ್ಯೂಯಾರ್ಕ್ ಪೋಸ್ಟ್ ನ ವರದಿಯ ಪ್ರಕಾರ, ಆಸ್ಪತ್ರೆಯ ವೈದ್ಯರು ಆ ಮಗುವನ್ನು ಆಮ್ಲಜನಕದ ಬೆಂಬಲಕ್ಕೆ ಹಾಕಲು ಬಹಳ ಸಮಯ ತೆಗೆದುಕೊಂಡರು ಮತ್ತು 10 ನಿಮಿಷಗಳ ಇಂಟ್ರಾವೀನಸ್ ದ್ರವಗಳ ನಂತರ, ವೈದ್ಯರು ಅದನ್ನು ತೆಗೆದು ಹಾಕಿದರು ಮತ್ತು ಆ ಮಗು ಸಾವನ್ನಪ್ಪಿದೆ ಎಂದು ಹೇಳಿದರು ಅಂತ ಮಗುವಿನ ತಾಯಿ ಆರೋಪಿಸಿದ್ದಾರೆ.

ಶವಪೆಟ್ಟಿಗೆಯಲ್ಲಿಟ್ಟಿದ್ದ ಮಗುವಿನ ಚಲನವನ್ನು ಕಂಡ ಕುಟುಂಬಸ್ಥರು
ವರದಿಯ ಪ್ರಕಾರ, ಮರುದಿನ ಆಕೆಯ ಅಂತ್ಯಕ್ರಿಯೆಯ ಸಮಯದಲ್ಲಿ, ಮಗುವಿನ ಶವಪೆಟ್ಟಿಗೆಯ ಗಾಜಿನ ಫಲಕದಲ್ಲಿ ಮಗುವಿನ ಅಂಗಾಂಗಗಳ ಚಲನವನ್ನು ಯಾರೋ ಗಮನಿಸಿದರು. ಸ್ವಲ್ಪ ಸಮಯದ ನಂತರ, ಅವಳ ಕುಟುಂಬ ಸದಸ್ಯರಲ್ಲಿ ಒಬ್ಬರು ಅವಳ ಕಣ್ಣುಗಳು ಚಲಿಸುತ್ತಿರುವುದನ್ನು ನೋಡಿದರು.

ಇದನ್ನೂ ಓದಿ: POTS: ಗುರುತ್ವಾಕರ್ಷಣೆಯಿಂದ ಅಲರ್ಜಿ: 23 ಗಂಟೆ ಹಾಸಿಗೆಯಲ್ಲೇ ಕಳೆಯುವ ಮಹಿಳೆ!

ಸೆರೆಬ್ರಲ್ ಎಡಿಮಾದಿಂದ ಮಗು ಸಾವು 
ವರದಿಯ ಪ್ರಕಾರ, ಮಗುವನ್ನು ಮತ್ತೆ ಆಂಬ್ಯುಲೆನ್ಸ್ ನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವಳನ್ನು ಮತ್ತೆ ಜೀವಂತವಾಗಿ ಉಳಿಸಲು ತುಂಬಾನೇ ಪ್ರಯತ್ನ ಮಾಡಿದರು. ಆದರೆ ಅವರ ಎಲ್ಲಾ ಪ್ರಯತ್ನಗಳು ವಿಫಲವಾದವು.

ವೈದ್ಯರ ವಿರುದ್ಧ ದೂರು ದಾಖಲಿಸಿದ ಪೋಷಕರು  
ಎಲ್ ಯೂನಿವರ್ಸಲ್ ವರದಿಯ ಪ್ರಕಾರ, ಅವರ ತಾಯಿ ವೈದ್ಯರ ನಿರ್ಲಕ್ಷ್ಯಕ್ಕಾಗಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಆರೋಗ್ಯ ವೃತ್ತಿಪರರ ವಿರುದ್ಧ ಯಾವುದೇ ದ್ವೇಷವನ್ನು ಹೊಂದಿಲ್ಲವಾದರೂ ಇಂತಹ ಘಟನೆಗಳು ಮತ್ತೆ ಸಂಭವಿಸಬಾರದು ಎಂದು ಅವರ ಮೇಲೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
Published by:Ashwini Prabhu
First published: