• Home
  • »
  • News
  • »
  • trend
  • »
  • Chennai Thief: ಶ್ರೀಮಂತರ ಮನೆಗೆ ಕನ್ನ, ಕದ್ದ ವಸ್ತು ಬಡವರಿಗೆ ದಾನ! ಕೊನೆಗೂ ಬಲೆಗೆ ಬಿದ್ದ 'ಒಳ್ಳೆ ಕಳ್ಳ'!

Chennai Thief: ಶ್ರೀಮಂತರ ಮನೆಗೆ ಕನ್ನ, ಕದ್ದ ವಸ್ತು ಬಡವರಿಗೆ ದಾನ! ಕೊನೆಗೂ ಬಲೆಗೆ ಬಿದ್ದ 'ಒಳ್ಳೆ ಕಳ್ಳ'!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18 Kannada
  • Last Updated :
  • Chennai, India
  • Share this:

ಚೆನ್ನೈ: ನಿಮಗೆ ನಟ ಅರ್ಜುನ್ ಸರ್ಜಾ (Arjun Sarja) ಅಭಿನಯದ ‘ಜಂಟಲ್‌ಮೆನ್’ (Gentlemen) ಎಂಬ ತಮಿಳು ಸಿನಿಮಾ (Tamil Cinema) ನೆನಪಿರಬಹುದು. ಸಮಾಜದ ಬಡತನ (Poverty) ಕಳೆಯೋದಕ್ಕೆ ಅಂತ ಆ ಸಿನಿಮಾದ ಹೀರೋ (Hero) ಮಂತ್ರಿಗಳು, ಅಧಿಕಾರಿಗಳು, ಶ್ರೀಮಂತರ ಮನೆ ದರೋಡೆ ಮಾಡ್ತಾನೆ. ಇದರಲ್ಲಿ ಅವನ ಉದ್ದೇಶ ಬಡವರಿಗೆ ಸಹಾಯ ಮಾಡೋದೇ ಆಗಿರುತ್ತೆ. ಇಲ್ಲಿ ಇಂಥದ್ದೇ ರಿಯಲ್ ಘಟನೆಯೊಂದು (Real Incident) ಬೆಳಕಿಗೆ ಬಂದಿದೆ. ಇಲ್ಲಿ ಕಾನೂನಿನ ಪ್ರಕಾರ ಆ ವ್ಯಕ್ತಿ ಕಳ್ಳ, ದರೋಡೆ ಕೋರ. ಆದ್ರೆ ಬಡವರ ಪಾಲಿಗೆ ಆತನೇ ದಾನವೀರ, ಆತನೇ ಜಂಟಲ್‌ಮೆನ್, ಆತನೇ ಹೀರೋ! ಇಂಥದ್ದೊಂದು ವಿಲಕ್ಷಣ ಘಟನೆ ತಮಿಳುನಾಡಿನ (Tamil Nadu) ಚೆನ್ನೈನಲ್ಲಿ (Chennai) ವರದಿಯಾಗಿದೆ.


ರೀಲ್ ಹೀರೋನಂತೆ ರಿಯಲ್ ಲೈಫ್‌ನಲ್ಲಿ ಕಳ್ಳತನ!


1993ರಲ್ಲಿ ತೆರೆಗೆ ಬಂದ ತಮಿಳು ಸಿನಿಮಾ ಜಂಟಲ್‌ಮೆನ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಆ ಸಿನಿಮಾದ ಹೀರೋನಂತೆ ತಮಿಳುನಾಡಿನಲ್ಲೂ ವ್ಯಕ್ತಿಯೊಬ್ಬ ಕಳ್ಳತನಕ್ಕೆ ಇಳಿದಿದ್ದ. ತಾನು ಕದ್ದ ವಸ್ತುಗಳನ್ನು ಬಡವರಿಗಾಗಿ ನೀಡುತ್ತಿದ್ದ. ಹೀಗೆ ಕಳ್ಳತನ ಮಾಡಿ ಬಡವರಿಗೆ ನೆರವು ನೀಡುತ್ತಿದ್ದ 33 ವರ್ಷದ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನಿಂದ 11 ಪವನ್ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.


ಆಸ್ಪತ್ರೆಯಿಂದ ಮನೆಗೆ ಬಂದಿದ್ದ ವ್ಯಕ್ತಿಗೆ ಶಾಕ್!


ಇತ್ತೀಚೆಗೆ, ಚೆನ್ನೈ ಸಮೀಪದ ತಾಂಬರಂ ಎಂಬ ಏರಿಯಾದ 55 ವರ್ಷದ ನಿವಾಸಿ ವರದರಾಜನ್ ಎಂಬುವರು ಅನಾರೋಗ್ಯದ ಕಾರಣ ಎರಡು ದಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಸುಧಾರಿಸಿಕೊಂಡು, ಅವರು ಮನೆಗೆ ವಾಪಸ್ ಬಂದಿದ್ದಾರೆ. ಆಗ ಅವರಿಗೆ ಅಲ್ಲಿ ಶಾಕ್ ಕಾದಿದ್ದು! ಯಾಕೆಂದ್ರೆ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಅವರು ತಮ್ಮ ಮನೆಯ ಬಾಗಿಲು ತೆರೆದಿರುವುದನ್ನು ಕಂಡು ಗಾಬರಿಗೊಂಡರು. ಒಳಗೆ ಬಂದು ನೋಡಿದಾಗ ಲಾಕರ್ ಸಹ ಓಪನ್ ಆಗಿತ್ತು. ಅದರಲ್ಲಿ ಇರಿಸಲಾಗಿದ್ದ ಎಂಟು ಪವನ್ ಚಿನ್ನಾಭರಣಗಳು ಕಳ್ಳರು ಕದ್ದೊಯ್ದಿದ್ದರು. ಹೀಗಾಗಿ ಕೂಡಲೇ ವರದರಾಜನ್ ಸಮೀಪದ ಪೊಲೀಸ್ ಠಾಣೆಗೆ ತೆರಳಿ, ದರೋಡೆ ನಡೆದಿರುವ ಬಗ್ಗೆ ದೂರು ನೀಡಿದ್ದಾರೆ.


ಇದನ್ನೂ ಓದಿ:  Madhya Pradesh: ನಂಬಿಕೆ ದ್ರೋಹ ಮಾಡ್ಬೇಡಿ: ಯುವತಿಯ ಕತ್ತು ಸೀಳಿ ಶವದ ವಿಡಿಯೋ ಶೇರ್ ಮಾಡಿದ ಪಾಪಿ!


ಸಿಸಿ ಕ್ಯಾಮರಾದಲ್ಲಿ ಸಿಕ್ಕಿತ್ತು ಕಳ್ಳನ ಸುಳಿವು


ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆ ನಡೆದ ಸ್ಥಳಕ್ಕೆ ತೆರಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆ ಸಿಸಿಟಿವಿಯಲ್ಲಿ ಓರ್ವ  ವ್ಯಕ್ತಿ ಚಲನವಲನ ದಾಖಲಾಗಿತ್ತು. ಆತ ಯಾರು ಅಂತ ಪರಿಶೀಲಿಸಿದಾಗ, ಆತ ಎಗ್ಮೋರ್‌ ಎಂಬ ಪ್ರದೇಶದಲ್ಲಿ  ವಾಸಿಸುವ 33 ವರ್ಷದ ಅನ್ಬುರಾಜ್ ಎಂಬುದು ತಿಳಿದು ಬಂತು.


ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್


ಆದರೆ ಅಷ್ಟರಲ್ಲಾಗಲೇ ಅನ್ಬುರಾಜ್ ಎಸ್ಕೇಪ್ ಆಗಿದ್ದ. ಕೊನೆಗೆ ಎಗ್ಮೋರ್ ರೈಲು ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತು ದಿನಗಳಿಗೂ ಹೆಚ್ಚು ಕಾಲ ಶೋಧ ನಡೆಸಿದ ಅಪರಾಧ ವಿಭಾಗದ ಪೊಲೀಸರು, ಕೊನೆಗೂ ಅನ್ಬುರಾಜ್‌ನನ್ನು ಬಂಧಿಸಿದ್ದಾರೆ.


ತನಿಖೆಯಲ್ಲಿ ಸ್ಫೋಟಕ ಮಾಹಿತಿ


ಅಂದಹಾಗೆ ಈ ಅನ್ಬುರಾಜ್ ಸಾದಾ ಸೀದ ಕಳ್ಳನಲ್ಲ. ಈತ ಕಳೆದ ನಾಲ್ಕು ತಿಂಗಳಲ್ಲಿ ಪೆರುಂಗಲತ್ತೂರ್ ಪ್ರದೇಶದಲ್ಲಿ ಮಾತ್ರ ಪ್ರತಿ ತಿಂಗಳು ಒಂದು ಮನೆಯನ್ನು ಲೂಟಿ ಮಾಡುತ್ತಾ ಇದ್ದನಂತೆ! ತಿಂಗಳಿಗೊಮ್ಮೆ ರೈಲಿನಲ್ಲಿ ಬರುವ ಅನ್ಬುರಾಜ್, ತಾಂಬರಂ ಮತ್ತು ಪೆರುಂಗಲತ್ತೂರ್ ಎಂಬ ಪ್ರದೇಶಗಳ ಸುತ್ತಮುತ್ತ ಮನೆ ಲೂಟಿ ಮಾಡುತ್ತಿದ್ದನಂತೆ.


ಕದ್ದ ಹಣದಿಂದ ಬಡವರಿಗೆ ಸಹಾಯ


ಹೌದು, ವಿಚಾರಣೆ ವೇಳೆ ಕಳ್ಳ ಈ ರೀತಿಯ ಹೇಳಿಕೆ ನೀಡಿದ್ದಾನೆ. ಆರೋಪಿ ಅನ್ಬುಮಣಿ ಕದ್ದ ಒಡವೆಗಳನ್ನು ಮಾರಿ, ಹಣ ತರುತ್ತಿದ್ದನಂತೆ. ಬಳಿಕ ಅದರಿಂತ ರಸ್ತೆ ಮತ್ತು ರೈಲ್ವೆ ನಿಲ್ದಾಣದ ಪಕ್ಕದಲ್ಲಿ ಬೀಡುಬಿಟ್ಟಿರುವ ನಿರಾಶ್ರಿತರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಕೊಡಿಸುತ್ತಿದ್ದನಂತೆ!


ಇದನ್ನೂ ಓದಿ:  Crime News: ಅಣ್ಣನ ಮೇಲಿನ ದ್ವೇಷಕ್ಕೆ ತಂಗಿ ಹೆಸರಲ್ಲಿ ಫೇಕ್ ಅಕೌಂಟ್! ಅಶ್ಲೀಲ ಫೋಟೋ ಹಾಕಿದ್ದು ಮತ್ತೋರ್ವ ಯುವತಿ!


ಬಡವರಿಗೆ ದಾನ ಮಾಡಿದ ತೃಪ್ತಿ ಇದೆ ಎಂದ ಆರೋಪಿ!


ವಿಚಾರಣೆ ಬಳಿಕ ಆರೋಪಿ ಅನ್ಬುರಾಜ್‌ನನ್ನು ತಾಂಬರಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ತಾನು ಕದ್ದ ಹಣದಿಂದ ಅಗತ್ಯವಿರುವವರಿಗೆ ಆಹಾರ, ಬಟ್ಟೆ ಮತ್ತು ಇತರ ವಸ್ತುಗಳನ್ನು ನೀಡಿದ್ದೇನೆ. ಈ ತೃಪ್ತಿ ನನಗಿದೆ ಅಂತ ಹೇಳಿದ್ದಾನೆ. ಸದ್ಯ ಆತನ್ನು ಜೈಲಿಗೆ ಕಳಿಸಲಾಗಿದೆ.

Published by:Annappa Achari
First published: