Viral Story: ನವ ಯುವಕನಂತೆ ಕಾಣಲು ವರ್ಷಕ್ಕೆ 2 ಮಿಲಿಯನ್ ಖರ್ಚು ಮಾಡುವ ಟೆಕ್ ಬಿಲಿಯನೇರ್

ಬ್ರಿಯಾನ್​ ಜಾನ್ಸನ್​

ಬ್ರಿಯಾನ್​ ಜಾನ್ಸನ್​

ಕ್ಯಾಲಿಫೋರ್ನಿಯಾ ಮೂಲದ ಉದ್ಯಮಿ ಬ್ರಿಯಾನ್ ಜಾನ್ಸನ್ ಬಹು ಬಿಲಿಯನೇರ್ ಆಗಿ ಖ್ಯಾತಿ ಹೊಂದಿದವರಾಗಿದ್ದಾರೆ. 45ರ ಹರೆಯದ ಸಾಫ್ಟ್‌ವೇರ್ ಡೆವಲಪರ್ ವಯಸ್ಸಾಗುವುದನ್ನು ತಡೆಯಲು ವರ್ಷಕ್ಕೆ 2 ಮಿಲಿಯನ್ ಖರ್ಚು ಮಾಡುತ್ತಾರೆ.

  • Share this:

ಕ್ಯಾಲಿಫೋರ್ನಿಯಾ (California) ಮೂಲದ ಉದ್ಯಮಿ ಬ್ರಿಯಾನ್ ಜಾನ್ಸನ್ (Bryan Johnson) ಬಿಲಿಯನೇರ್ (Millionaire) ಆಗಿ ಖ್ಯಾತಿ ಹೊಂದಿದವರಾಗಿದ್ದಾರೆ. 45ರ ಹರೆಯದ ಸಾಫ್ಟ್‌ವೇರ್ ಡೆವಲಪರ್ ವಯಸ್ಸಾಗುವುದನ್ನು ತಡೆಯಲು ವರ್ಷಕ್ಕೆ $ 2 ಮಿಲಿಯನ್ ಖರ್ಚು ಮಾಡುತ್ತಾರೆ. ನಿಯಮಿತವಾಗಿ ರಕ್ತ ವರ್ಗಾವಣೆ ಮಾಡುವ ಉದ್ಯಮಿ (Businessman) ಇದರಿಂದ ಆಂತರಿಕ ಅಂಗಗಳಿಗೆ ನವ ಚೇತನ ಹಾಗೂ ತಾರುಣ್ಯ ದೊರೆಯುತ್ತದೆ ಎಂದು ನಂಬಿದವರು.


ಮಗ ಹಾಗೂ ತಂದೆಯಿಂದ ರಕ್ತ ವಿನಿಮಯ


ಪ್ಲಾಸ್ಲಾ ಸ್ವಾಪಿಂಗ್ ಎಂದು ಕರೆಯಲಾದ ವಿವಾದಾತ್ಮಕ ಪ್ರಕ್ರಿಯೆಗೆ ತಮ್ಮ 17ರ ಹರೆಯದ ಮಗ ಟಾಲ್ಮೇಜ್ ಅನ್ನು ಸೇರಿಸಿಕೊಂಡಿದ್ದು ಈತನ ಮೂಲಕವೇ ರಕ್ತ ಪಡೆದುಕೊಳ್ಳುತ್ತಾರೆ.


ಇತ್ತೀಚೆಗೆ, ಜಾನ್ಸನ್, 70 ವರ್ಷ ವಯಸ್ಸಿನ ತನ್ನ ತಂದೆ ರಿಚರ್ಡ್ ಜೊತೆಗೂಡಿ, ಟೆಕ್ಸಾಸ್‌ನ ಡಲ್ಲಾಸ್ ಬಳಿಯ ಕ್ಲಿನಿಕ್‌ಗೆ ಭೇಟಿ ನೀಡಿ ಮೂರು-ಪೀಳಿಗೆಯ ರಕ್ತ ವಿನಿಮಯ ಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾರೆ. ಜಾನ್ಸನ್ ಅನಾಮಧೇಯ ದಾನಿಗಳಿಂದ ಪ್ಲಾಸ್ಮಾವನ್ನು ಪಡೆಯುತ್ತಾರೆ.


ಪ್ಲಾಸ್ಮಾ ವಿಭಜನೆಯನ್ನು ಅನುಸರಿಸುವ ಜಾನ್ಸನ್


ಪ್ಲಾಸ್ಮಾವನ್ನು ಪಡೆದುಕೊಳ್ಳುವ ಮೊದಲು ದಾನಿಗಳು ಆರೋಗ್ಯವಂತರು ಹಾಗೂ ರೋಗಗಳಿಂದ ಮುಕ್ತರಾದವರು ಎಂದು ಖಚಿತಪಡಿಸಿಕೊಳ್ಳುತ್ತಾರೆ. ಟಾಲ್ಮೇಜ್‌ನ ಒಂದು ಲೀಟರ್ ರಕ್ತವನ್ನು ಪಡೆದುಕೊಂಡಿರುವ ಜಾನ್ಸನ್ ಕೆಂಪು ಮತ್ತು ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್‌ಲೆಟ್‌ಗಳ ಪ್ರತ್ಯೇಕ ಬ್ಯಾಚ್‌ಗಳಾಗಿ ಸಂಸ್ಕರಿಸಿದ್ದಾರೆ.


ಇಲಿಗಳ ಮೇಲೆ ಯಶಸ್ವಿ ಪ್ರಯೋಗ ನಡೆಸಿರುವ ವಿಜ್ಞಾನಿಗಳು


ಟಾಲ್ಮೇಜ್‌ನ ಪ್ಲಾಸ್ಮಾವನ್ನು ಜಾನ್ಸನ್‌ನ ರಕ್ತನಾಳಗಳಿಗೆ ನೀಡಲಾಯಿತು. ಜಾನ್ಸನ್ ತಂದೆ ರಿಚರ್ಡ್ ಕೂಡ ರಕ್ತ ನೀಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದು ಜಾನ್ಸನ್‌ಗೆ ಪ್ಲಾಸ್ಮಾ ನೀಡಿದ್ದಾರೆ.


ಬ್ರಿಯಾನ್​ ಜಾನ್ಸನ್​


ಮಾನವರ ಮೇಲೆ ಈ ಪ್ರಯೋಗವನ್ನು ನಡೆಸುವುದಕ್ಕೂ ಮೊದಲು ವಿಜ್ಞಾನಿಗಳು ಇಲಿಗಳ ಮೇಲೆ ಯಶಸ್ವಿ ಪ್ರಯೋಗವನ್ನು ನಡೆಸಿದ್ದಾರೆ. ರಕ್ತಪರಿಚಲನಾ ವ್ಯವಸ್ಥೆಯನ್ನು ಹಂಚಿಕೊಳ್ಳಲು ಕಿರಿಯ ಮತ್ತು ವಯಸ್ಸಾದ ಇಲಿಗಳನ್ನು ಒಟ್ಟಿಗೆ ಸೇರಿಸಿದಾಗ, ವಯಸ್ಸಾದ ಇಲಿಗಳು ಅರಿವಿನ ಕಾರ್ಯ, ಚಯಾಪಚಯ ಮತ್ತು ಮೂಳೆ ರಚನೆಯಲ್ಲಿ ಸುಧಾರಣೆಗಳನ್ನು ಪ್ರದರ್ಶಿಸಿದವು ಜೊತೆಗೆ ಆದರೆ ಕಿರಿಯ ಇಲಿಗಳು ಆಗಾಗ್ಗೆ ರಕ್ತದಾನದಿಂದ ಧನಾತ್ಮಕ ಪರಿಣಾಮಗಳನ್ನು ತೋರಿಸಿದವು.


ಅದರೆ ಮಾನವರ ವಿಷಯದಲ್ಲಿ ಇದು ಎಷ್ಟು ಪರಿಣಾಮ ಬೀರಲಿದೆ ಎಂಬುದು ಇನ್ನೂ ನಿಖರವಾಗಿಲ್ಲದ ವಿಷಯವಾಗಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.


ಮಾನವರ ಮೇಲೆ ಎಷ್ಟು ಪರಿಣಾಮಾತ್ಮಕವಾಗಿದೆ ಎಂಬುದು ತಿಳಿದುಬಂದಿಲ್ಲ


ಲಾಸ್ ಏಂಜಲೀಸ್‌ನಲ್ಲಿರುವ ಸಿಟಿ ಆಫ್ ಹೋಪ್ ನ್ಯಾಷನಲ್ ಮೆಡಿಕಲ್ ಸೆಂಟರ್‌ನ ಜೀವರಸಾಯನಶಾಸ್ತ್ರಜ್ಞ ಚಾರ್ಲ್ಸ್ ಬ್ರೆನ್ನರ್, ಪ್ಲಾಸ್ಮಾ-ಸ್ವಾಪಿಂಗ್ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು ಇದು ಮಾನವರ ಮೇಲೆ ಎಷ್ಟು ಪರಿಣಾಮಾತ್ಮಕವಾಗಿದೆ ಎಂಬುದನ್ನು ಸೂಚಿಸಲು ಸಾಕಷ್ಟು ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.


ರಕ್ತ ಪ್ಲಾಸ್ಮಾದ ಸಾಂಪ್ರದಾಯಿಕ ಬಳಕೆಯು ಆಘಾತ, ಸುಟ್ಟಗಾಯಗಳು, ಆಘಾತ, ತೀವ್ರವಾದ ಪಿತ್ತಜನಕಾಂಗದ ಕಾಯಿಲೆ ಮತ್ತು ಹೆಪ್ಪುಗಟ್ಟುವಿಕೆಯ ಕೊರತೆಯನ್ನು ಅನುಭವಿಸುತ್ತಿರುವ ರೋಗಿಗಳಿಗೆ ಒದಗಿಸುವುದನ್ನು ಒಳಗೊಂಡಿರುತ್ತದೆ ಎಂಬುದು ಚಾರ್ಲ್ಸ್ ಮಾತಾಗಿದೆ.
ಆ್ಯಂಟಿ ಏಜಿಂಗ್ ಯೋಜನೆ ಪ್ರಾಜೆಕ್ಟ್ ಬ್ಲೂಪ್ರಿಂಟ್


ಜಾನ್ಸನ್ ತಮ್ಮ ಪೇಮೆಂಟ್ ಪ್ರೊಸೆಸಿಂಗ್ ಕಂಪನಿ ಬ್ರೈನ್ಟ್ರೀ ಪೇಮೆಂಟ್ ಸೊಲ್ಯೂಷನ್ಸ್ ಅನ್ನು $800 ಮಿಲಿಯನ್ ಮೌಲ್ಯಕ್ಕೆ ಇಬೇಗೆ ಮಾರಾಟ ಮಾಡಿದ್ದು ಒಬ್ಬ ನುರಿತ ಹಾಗೂ ಖ್ಯಾತ ಬ್ಯುಸಿನೆಸ್‌ಮೆನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.


ಜಾನ್ಸನ್ ಅವರ ಆ್ಯಂಟಿ ಏಜಿಂಗ್ ಯೋಜನೆ ಪ್ರಾಜೆಕ್ಟ್ ಬ್ಲೂಪ್ರಿಂಟ್ 70 ಅಂಗಗಳ ವಯಸ್ಸಾಗುವಿಕೆಯನ್ನು ತಡೆಯುವ ಗುರಿ ಹೊಂದಿದೆ. ಕಠಿಣ ವ್ಯಾಯಾಮ, ಕಡಿಮೆ ಕ್ಯಾಲೋರಿ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ನಿದ್ರೆಯನ್ನು ಟ್ರ್ಯಾಕ್ ಮಾಡುವ ಜಾನ್ಸನ್ ಚಿರಯುವಕನಾಗಿರಲು ಬೇಕಾದ ಎಲ್ಲಾ ಕಟ್ಟುಪಾಡುಗಳನ್ನು ಅನುಸರಿಸುತ್ತಾರೆ.


ಜಾನ್ಸನ್ ಅನುಸರಿಸುವ ದುಬಾರಿ ಚಿಕಿತ್ಸೆಗಳು ಫಲಿತಾಂಶಗಳನ್ನು ಒದಗಿಸಿವೆ ಎಂಬುದು ಇವರ ಅಭಿಪ್ರಾಯವಾಗಿದೆ. ತಮ್ಮ ಹದಿಹರೆಯದಲ್ಲಿ ಆಂತರಿಕ ಅಂಗಗಳು ಕಾರ್ಯನಿರ್ವಹಿಸುವಂತೆ ಮುಪ್ಪಿನಲ್ಲೂ ಕಾರ್ಯನಿರ್ವಹಿಸುವಂತೆ ಮಾಡುವುದು ಅವರ ಗುರಿಯಾಗಿದೆ.

top videos
    First published: