• Home
  • »
  • News
  • »
  • trend
  • »
  • Success Story: ಟೀ ಮಾರುತ್ತಿದ್ದ ವ್ಯಕ್ತಿ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದೇಗೆ? ಇಲ್ಲಿದೆ ರೋಚಕ ಕಥೆ

Success Story: ಟೀ ಮಾರುತ್ತಿದ್ದ ವ್ಯಕ್ತಿ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದೇಗೆ? ಇಲ್ಲಿದೆ ರೋಚಕ ಕಥೆ

ಪ್ರೊಫೆಸರ್

ಪ್ರೊಫೆಸರ್

ಸುದೀರ್ಘ ಮತ್ತು ಪ್ರಯಾಸಕರ ಕೆಲಸದ ಅವಧಿ ಹೊಂದಿದ್ದರೂ, ಅವರು ಸಮಯ ಸಿಕ್ಕಾಗಲೆಲ್ಲಾ ಪುಸ್ತಕಗಳು ಮತ್ತು ನಿಯುತಕಾಲಿಕಗಳನ್ನು ಓದುತ್ತಿದ್ದರು. ರಫೀಕ್‌ರಿಗೆ ಪುಸ್ತಕಗಳು ಮತ್ತು ಜ್ಞಾನದ ಬಗ್ಗೆ ಇನ್ನಿಲ್ಲದ ದಾಹವಿತ್ತು.

  • Trending Desk
  • 3-MIN READ
  • Last Updated :
  • Share this:

ಯಶಸ್ಸಿ(Success)ಗೆ ಯಾವುದೇ ಅಡ್ಡ ಹಾದಿ ಇಲ್ಲ. ನಿರಂತರ ಶ್ರಮ ಮತ್ತು ಶ್ರದ್ಧೆ ವ್ಯಕ್ತಿಯ ಜೀವನದಲ್ಲಿನ ಅಡೆತಡೆ ನಿವಾರಿಸಲು ಮತ್ತು ಯಶಸ್ಸನ್ನು ಪಡೆಯಲು ಸಹಾಯ ಮಾಡುತ್ತದೆ. ಅಂತದ್ದೇ ಪರಿಶ್ರಮದ ಕಥೆ ರಫೀಕ್ ಇಬ್ರಾಹಿಂ(Rafik Ibrahim) ಅವರದ್ದು. ಒಂದು ಕಾಲದಲ್ಲಿ ಕೇರಳ ಬಸ್ ನಿಲ್ದಾಣದಲ್ಲಿ ಟೀ ಮಾರುತ್ತಿದ್ದ ರಫೀಕ್ ಇಬ್ರಾಹಿಂ ಈಗ ಕಣ್ಣೂರು ವಿಶ್ವವಿದ್ಯಾನಿಲಯ(Kannur University)ದಲ್ಲಿ ಮಲೆಯಾಳಂ ಸಹಾಯಕ ಪ್ರೊಫೆಸರ್ (Malayalam Assistant Professor) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಸ್ಪೂರ್ತಿದಾಯಕ ಜೀವನಗಾಥೆಯನ್ನು ತಿಳಿಯೋಣ ಬನ್ನಿ..


ರಫೀಕ್ ಇಬ್ರಾಹಿಂ ವಯನಾಡ್‍ನಲ್ಲಿ ಜನಿಸಿದರು. ಅವರದ್ದು ಅಷ್ಟೊಂದು ಸ್ಥಿತಿವಂತ ಕುಟುಂಬ ಆಗಿರಲಿಲ್ಲ. 10ನೇ ತರಗತಿಯಲ್ಲಿ ಉತ್ತೀರ್ಣರಾದ ಬಳಿಕ ತಮ್ಮ ಕುಟುಂಬಕ್ಕೆ ಬೆಂಬಲ ನೀಡಲು, ಅವರು ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಬಸ್ ನಿಲ್ದಾಣದಲ್ಲಿ ಚಹಾ ಮಾರಲು ಆರಂಭಿಸಿದರು. ಅಂಗಡಿ ಮುಚ್ಚಿದಾಗ ರಫೀಕ್ ಇಬ್ರಾಹಿಂ, ವಾಹನಗಳನ್ನು ಸ್ವಚ್ಚಗೊಳಿಸಿದರು. ಕೆಲವು ವರ್ಷಗಳ ನಂತರ ಕೆಲಸ ಮಾಡಲಿಕ್ಕಾಗಿ ವಯನಾಡ್‍ಗೆ ಮರಳಿದ ಅವರು, ಚಪ್ಪಲಿ ಅಂಗಡಿಯೊಂದರಲ್ಲಿ ಮಾರಾಟಗಾರನ ಕೆಲಸಕ್ಕೆ ಸೇರಿದರು.


ಇದನ್ನೂ ಓದಿ: Gautam Gambhir: ಗೌತಮ್​ ಗಂಭೀರ್​ಗೆ ಜೀವ ಬೆದರಿಕೆ ಹಾಕಿದ್ದು ಪಾಕ್ ವಿದ್ಯಾರ್ಥಿ; ತನಿಖೆಯಲ್ಲಿ ಬಹಿರಂಗ


ಓದಿನಲ್ಲಿ ಹೆಚ್ಚಿನ ಆಸಕ್ತಿ


ಸುದೀರ್ಘ ಮತ್ತು ಪ್ರಯಾಸಕರ ಕೆಲಸದ ಅವಧಿ ಹೊಂದಿದ್ದರೂ, ಅವರು ಸಮಯ ಸಿಕ್ಕಾಗಲೆಲ್ಲಾ ಪುಸ್ತಕಗಳು ಮತ್ತು ನಿಯುತಕಾಲಿಕಗಳನ್ನು ಓದುತ್ತಿದ್ದರು. ರಫೀಕ್‌ರಿಗೆ ಪುಸ್ತಕಗಳು ಮತ್ತು ಜ್ಞಾನದ ಬಗ್ಗೆ ಇನ್ನಿಲ್ಲದ ದಾಹವಿತ್ತು. ಇದನ್ನು ಗಮನಿಸಿದ ಅವರ ಸ್ನೇಹಿತರ ವಿದ್ಯಾಭ್ಯಾಸ ಮುಂದುವರೆಸಲು ಪ್ರೋತ್ಸಾಹ ನೀಡಿದರು. ಸ್ನೇಹಿತರ ಒತ್ತಾಯಕ್ಕೆ ಮಣಿದು ರಫೀಕ್ ಅರ್ಥಶಾಸ್ತ್ರದಲ್ಲಿ ಪದವಿಪೂರ್ವ ಕೋರ್ಸ್‍ಗೆ ಸೇರಿದರು. ರಫೀಕ್ ಇಬ್ರಾಹಿಂ ಪ್ರಕಾರ, ಈ ಅವಧಿಯಲ್ಲಿ ಕಲ್ಪೆಟ್ಟಾ ಜಿಲ್ಲಾ ಗ್ರಂಥಾಲಯದಲ್ಲಿ ಗರಿಷ್ಠ ಪುಸ್ತಕಗಳನ್ನು ಓದಿದರು. ಕೊನೆಗೆ ಅವರು ಪದವಿ, ಸ್ನಾತಕೊತ್ತರ ಪದವಿ ಮತ್ತು ಪಿಹೆಚ್‍ಡಿ ಪಡೆದರು.


ಕಾಲಾಡಿಯ ಶ್ರೀ ಶಂಕರಾಚಾರ್ಯ ಸಂಷ್ಕೃತ ವಿಶ್ವವಿದ್ಯಾನಿಲಯದಲ್ಲಿ ಮಲೆಯಾಳಂ ಬೋಧಿಸುತ್ತಿದ್ದ ಪಂಡಿತ ಮತ್ತು ವಾಗ್ಮಿ ಸುನೀಲ್ ಪಿ ಇಲಾಯಿಡೋಮ್ ಬರೆದ ‘ಪೊಲಿಟಿಕ್ಸ್ ಆಫ್ ಐಡೆಂಟಿಟಿ ಅಂಡ್ ಕ್ಲಾಸ್’ ಕೃತಿಯು ರಫೀಕ್ ಜೀವನಕ್ಕೆ ಮಹತ್ವದ ತಿರುವು ನೀಡಿತು. ಅದು ಅವರು ಮಲೆಯಾಳಂನಲ್ಲಿ ಉನ್ನತ ಶಿಕ್ಷಣ ಪಡೆಯುವಂತೆ ಮಾಡಿತು ಮತ್ತು ಇಲಾಯಿಡೋಮ್ ಅವರ ಆದರ್ಶವಾದರು.


ಡಾಕ್ಟರೇಟ್ ಕೂಡ ಪಡೆದಿರುವ ರಫೀಕ್


ಅಂತಿಯವಾಗಿ, ಅವರು ಇಲಾಯಿಡೊಮ್ ಕಲಿಸುತ್ತಿದ್ದ ಮಲೆಯಾಳಂ ವಿಭಾಗಕ್ಕೆ ಪ್ರವೇಶ ಪಡೆದರು. ಅವರು ಇಲಾಯಿಡೋಮ್ ಮಾರ್ಗದರ್ಶನದಲ್ಲಿ, ‘ಲಿಟರರಿ ಫಾರ್ಮ್ಸ್‌ ಅಂಡ್‌ ಕಲ್ಚರಲ್ ಹಿಸ್ಟರಿ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆಯುವ ಮೊದಲು, ಎಂಫಿಲ್ ಮುಗಿಸಿದ್ದರು.


ನವೆಂಬರ್ 6 ರಂದು ರಫೀಕ್ ಇಬ್ರಾಹಿಂ , ಕಣ್ಣೂರು ವಿಶ್ವ ವಿದ್ಯಾನಿಯದಲ್ಲಿ ಮಲೆಯಾಳಂ ಭಾಷೆಯ ಸಹಾಯಕ ಪ್ರೊಫೆಸರ್ ಆಗಿ ಸೇರಿಕೊಂಡರು. ವಿದ್ಯಾಭ್ಯಾಸ ಪೂರ್ಣಗೊಳಿಸಿ ಈ ಉದ್ಯೋಗ ಪಡೆಯುವಾಗ ರಫೀಕ್ ಇಬ್ರಾಹಿಂಗೆ 35 ವರ್ಷ ವಯಸ್ಸು.


ಇದನ್ನೂ ಓದಿ: Thai Guavas: ಥಾಯ್ ಪೇರಲೆ ಹಣ್ಣಿನಿಂದ ವರ್ಷಕ್ಕೆ 32 ಲಕ್ಷ ರೂ ಆದಾಯ ಪಡೆಯುತ್ತಿರುವ ರೈತ!


ಕೆಲಸ ಪಡೆದ ನಂತರ , “ನಾನು ಶ್ರೀಗಂಧದ ಅಗರಬತ್ತಿ ಕಾರ್ಖಾನೆಗಳು ಮತ್ತು ಲಾತೆ ಯಂತ್ರಗಳಿಂದ ತುಂಬಿದ ಬೀದಿಗಳಲ್ಲಿ ಅಲೆದಾಡುವುದನ್ನು, ‘ಟೀ ಬೇಕಾ’ ಎಂದು ಕಿರುಚುತ್ತಿದ್ದದ್ದನ್ನು ಮತ್ತು ಗ್ರಾಹಕರಿಗೆ ಹಣ ಪಾವತಿಸುವಂತೆ ಬೇಡಿಕೊಳ್ಳುತ್ತಿದ್ದದ್ದನ್ನು ಕಾಣಬಹುದಿತ್ತು” ಎಂದು ರಫೀಕ್ ಇಬ್ರಾಹಿಂ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Published by:Latha CG
First published: