ಕೇರಳ: ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC) ಇತ್ಯಾದಿ ಪರೀಕ್ಷೆಗಳಲ್ಲಿ (Exam) ಅತೀ ಹೆಚ್ಚು ಅಂಕ (Marks) ಪಡೆದು, ತಂದೆ (Father), ತಾಯಿಗಳು (Mother), ಊರಿಗೆ (Native Palce), ಕಲಿತ ಶಾಲೆಗೆ (School) ಹೆಮ್ಮೆ ತಂದ ವಿದ್ಯಾರ್ಥಿಗಳನ್ನು (Students) ಎಲ್ಲರೂ ಅಭಿನಂದಿಸುತ್ತಾರೆ. ಕೆಲವೆಡೆ ರ್ಯಾಂಕ್ (Rank) ಪಡೆದ ವಿದ್ಯಾರ್ಥಿಗಳ ಫೋಟೋಗಳನ್ನು (Photos) ಫ್ಲೆಕ್ಸ್‌ಗಳಲ್ಲಿ (Flex) ಹಾಕಿ, ಎಲ್ಲರಿಗೂ ಕಾಣುವಂತೆ ದೊಡ್ಡದಾಗಿ ಅಭಿನಂದನೆ (Congratulate) ಸಲ್ಲಿಸುತ್ತಾರೆ. ಆದರೆ ಕೇರಳದಲ್ಲಿ (Kerla) ಒಬ್ಬ ವಿದ್ಯಾರ್ಥಿ ಎಸ್ಎಸ್ಎಲ್ಸಿ ಪರೀಕ್ಷೆ ಪಾಸ್ ಆಗಿದ್ದಕ್ಕೆ ತನ್ನ ಫೋಟೋ ಸಮೇತ ದೊಡ್ಡದಾಗಿ ಫ್ಲೆಕ್ಸ್ ಹಾಕಿಕೊಂಡಿದ್ದಾನೆ. ಎಸ್ಎಸ್ಎಲ್‌ಸಿ ಪರೀಕ್ಷೆ ಪಾಸ್ ಆದ ತನಗೆ ಅಭಿನಂದನೆ ಅಂತ ತನ್ನನ್ನೇ ತಾನು ಅಭಿನಂದಿಸಿಕೊಂಡಿದ್ದಾನೆ. ಈ ಫೋಟೋಗಳೀಗ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಭಾರೀ ವೈರಲ್ (Viral) ಆಗಿದೆ. ಇನ್ನು ವಿದ್ಯಾರ್ಥಿ ಹೀಗೆ ಎಸ್ಎಸ್‌ಎಲ್‌ಸಿ ಪರೀಕ್ಷೆ ಪಾಸ್ ಆಗಿದ್ದಕ್ಕೆ ಫ್ಲೆಕ್ಸ್ ಹಾಕಿಸಿಕೊಂಡಿದ್ದರ ಹಿಂದೆಯೂ ಬಲವಾದ ಕಾರಣ ಇದ್ಯಂತೆ!
ತನ್ನನ್ನೇ ತಾನು ಅಭಿನಂದಿಸಿಕೊಂಡ ವಿದ್ಯಾರ್ಥಿ
ಕೇರಳ ರಾಜ್ಯದ ಕೊಡುಮೊನ್-ಅಂಗಡಿಕಲ್ ರಸ್ತೆಯ ಬಳಿ ಆಸಕ್ತಿದಾಯಕ ಫ್ಲೆಕ್ಸ್ ಬೋರ್ಡ್ ಅಳವಡಿಸಲಾಗಿದೆ. 'ಇತಿಹಾಸವು ಕೆಲವು ಜನರಿಗೆ ದಾರಿ ಮಾಡಿಕೊಡುತ್ತದೆ' ಅಂತ ಫೋಟೋದ ಕೆಳಗೆ ಬರೆಯಲಾಗಿದೆ. ಇದು ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಕುಂಜುಕ್ಕು ಅಕಾ ಜಿಷ್ಣು ಎಂಬ ವಿದ್ಯಾರ್ಥಿ ತನಗೆ ತಾನೇ ಅಭಿನಂದನೆ ಸಲ್ಲಿಸಿಕೊಂಡು ಹಾಕಿಸಿಕೊಂಡ ಫ್ಲೆಕ್ಸ್. 2022 ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕುಂಜಕ್ಕು ಅಕಾ ಅವರಿಗೆ ಅಂದರೆ ನನಗೆ ನನ್ನ ಅಭಿನಂದನೆಗಳು ಅಂತ ಫ್ಲೆಕ್ಸ್‌ನಲ್ಲಿ ಬರೆಯಲಾಗಿದೆ.
ವಿರೋಧಿಗಳಿಗೆ ತಿರುಗೇಟು ನೀಡಲು ಫ್ಲೆಕ್ಸ್
ಅಂಗಡಿಕಲ್ ಮೂಲದ ಓಮನಕುಟ್ಟನ್ ಮತ್ತು ದೀಪಾ ದಂಪತಿಯ ಪುತ್ರ ಕುಂಜಕ್ಕು ಅಕಾ ಜಿಷ್ಣು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು, ಪಾಸ್ ಆಗಿದ್ದಾನೆ. ತನ್ನನ್ನು ಅಪಹಾಸ್ಯ ಮಾಡಿದವರಿಗೆ ತಿರುಗೇಟು ನೀಡಲು ವಿದ್ಯಾರ್ಥಿ ಈ ರೀತಿಯ ಫ್ಲೆಕ್ಸ್ ಹಾಕಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Agnipath: ವಿರೋಧದ ನಡುವೆಯೇ ಹೆಜ್ಜೆ ಮುಂದಿಟ್ಟ ಭಾರತೀಯ ವಾಯು ಸೇನೆ! ಅಗ್ನಿಪಥ್ ನೇಮಕಾತಿ ಆರಂಭಿಸಿದ IAF
ಬಡತನದಲ್ಲೇ ಓದಿ ಬೆಳೆದ ವಿದ್ಯಾರ್ಥಿ
ಜಿಷ್ಣುವಿನದ್ದು ಬಡ ಕುಟುಂಬ. ಅವರ ತಂದೆ-ತಾಯಿ ಇಬ್ಬರೂ ದಿನಗೂಲಿ ಕಾರ್ಮಿಕರು. ಜಿಷ್ಣುವಿನ ಕುಟುಂಬವು ಅವರ ಅವಳಿ ಸಹೋದರಿ, ಪೋಷಕರು, ಅಣ್ಣ ವಿಷ್ಣು, ತಂದೆಯ ಅಜ್ಜಿ ಮತ್ತು ಚಿಕ್ಕಪ್ಪ ಅವರನ್ನು ಒಳಗೊಂಡಿದೆ. ಅಜ್ಜಿ ಕಳೆದ 30 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಹೀಗಿದ್ದರು ಬಡತನದಲ್ಲೇ ಓದಿದ ಜಿಷ್ಣು ಮತ್ತು ಆತನ ಸಹೋದರಿ ವಿಷ್ಣುಪ್ರಿಯಾ ಸಾಕಷ್ಟು ಕಷ್ಟಪಟ್ಟು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು.
ತಾಯಿಯ ತವರು ಮನೆಯಲ್ಲಿದ್ದು ಅಧ್ಯಯನ
ಅವರ ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕಿ ಒಂದು ವಾರ ಕಳೆದಿದೆ. ಇಷ್ಟು ದಿನ ಸೀಮೆಎಣ್ಣೆ ದೀಪದ ಮಂದ ಬೆಳಕಿನಲ್ಲಿ ಓದುತ್ತಿದ್ದರು. ಸ್ವಂತ ಮನೆಯ ವಾತಾವರಣವು ಅಧ್ಯಯನಕ್ಕೆ ಯೋಗ್ಯವಾಗಿಲ್ಲದ ಕಾರಣ ಇಬ್ಬರೂ ಅವಳಿ ಮಕ್ಕಳು ಪಠಾಣಪುರಂನಲ್ಲಿರುವ ತಮ್ಮ ತಾಯಿಯ ತವರು ಮನೆಯಲ್ಲಿ ವಾಸವಾಗಿದ್ದರು.
ನೀನು ಪಾಸ್ ಆಗಲ್ಲ ಅಂತ ಗೇಲಿ ಮಾಡಿದ್ದ ಸ್ನೇಹಿತರು
10ನೇ ತರಗತಿಯಲ್ಲಿ ಓದುತ್ತಿದ್ದಾಗ ಇಬ್ಬರೂ ಬಸ್‌ನಲ್ಲಿ 14 ಕಿ.ಮೀ ಪ್ರಯಾಣಿಸಿ ಶಾಲೆ ತಲುಪುತ್ತಿದ್ದರು. ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದಿಲ್ಲ ಎಂದು ಸ್ನೇಹಿತರು ಮತ್ತು ಸಂಬಂಧಿಕರು ಗೇಲಿ ಮಾಡಿದ್ದರಂತೆ. ಅವರ ಮಾತು ತನಗೆ ತೀವ್ರ ನೋವುಂಟು ಮಾಡಿದ್ದು, ಅದಕ್ಕಾಗಿಯೇ ಫ್ಲೆಕ್ಸ್ ಬೋರ್ಡ್ ಅಳವಡಿಸಲು ನಿರ್ಧರಿಸಿದೆ ಅಂತ ವಿದ್ಯಾರ್ಥಿ ಹೇಳಿದ್ದಾನೆ.
ಇದನ್ನೂ ಓದಿ: Missing Boy: ಕಣ್ಣಾಮುಚ್ಚಾಲೆ ಆಡುತ್ತಾ ಗೂಡ್ಸ್ ಟ್ರೈನ್ ಹತ್ತಿದ ಬಾಲಕ ತಲುಪಿದ್ದು ಬೆಂಗಳೂರು; ಕೊನೆಗೂ ಅಮ್ಮನ ಮಡಿಲು ಸೇರಿದ
ಬೇರೆಯವರ ಸಹಾಯದಿಂದ ಫ್ಲೆಕ್ಸ್ ಅಳವಡಿಕೆ
ಫ್ಲೆಕ್ಸ್ ಬೋರ್ಡ್ ಅಳವಡಿಸಿರುವುದು ತನ್ನ ಸಿಹಿ ಸೇಡಿನ ಭಾಗವಾಗಿದೆ ಎಂದು ಜಿಷ್ಣು ಹೇಳಿದ್ದಾರೆ. ಫ್ಲೆಕ್ಸ್‌ಗೆ ಬೇಕಾದಷ್ಟು ಹಣ ಆತನ ಕೈಯಲ್ಲಿ ಇರಲಿಲ್ಲ. ಆಗ ನವಜ್ಯೋತಿ ಕ್ರೀಡಾ ಮತ್ತು ಕಲಾ ಸಮಿತಿ ಎಂಬ ಸಂಸ್ಥೆಯ ನೆರವು ಪಡೆದು ಅವರ ನೆರವಿನಿಂದ ಫ್ಲೆಕ್ಸ್ ಅಳವಡಿಸಿದ್ದಾನೆ. ಇದೀಗ ಮುಂದಿನ ಶಿಕ್ಷಣ ಆರಂಭಿಸಲು ಜಿಷ್ಣು ಮತ್ತು ಆತನ ಸಹೋದರಿ ಸಿದ್ಧತೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ