Dance Video: ಸ್ನೇಹಿತನ ಮದುವೆಯಲ್ಲಿ ಸೈನಿಕನ ಸಖತ್ ಸ್ಟೆಪ್! ನೀವೂ ಒಮ್ಮೆ ನೋಡಿ ಆ ಸ್ಪೆಷಲ್ ಡ್ಯಾನ್ಸ್‌

ಆಗಷ್ಟೇ ತರಬೇತಿ ಮುಗಿಸಿ ಬಂದ ಯೋಧನೊಬ್ಬ ಸ್ನೇಹಿತನ ಮದುವೆಯಲ್ಲಿ ಸಖತ್ ಆಗಿ ಕುಣಿದಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಮದುವೆಯಲ್ಲಿ ಸೈನಿಕನ ಡ್ಯಾನ್ಸ್

ಮದುವೆಯಲ್ಲಿ ಸೈನಿಕನ ಡ್ಯಾನ್ಸ್

 • Share this:
  ಮದುವೆ (Marriage) ಸಮಾರಂಭ (Function) ಎಂದರೆ ಬರಿ ಶಾಸ್ತ್ರ, ಸಂಪ್ರದಾಯ, ಮದುವೆ ಊಟ, ವಧು-ವರರ ಉಡುಪು ಮತ್ತು ಧರಿಸಿರುವ ಚಿನ್ನ (Gold) ಅಷ್ಟೇ ಅಲ್ಲ, ಮದುವೆ ಸಮಾರಂಭದಲ್ಲಿ ಇದೆಲ್ಲದರ ಜೊತೆಗೆ ಇನ್ನೊಂದು ಮುಖ್ಯವಾದದ್ದು ಇರಲೇಬೇಕು, ಆಗಲೇ ಮದುವೆ ಸಮಾರಂಭಕ್ಕೆ ಒಂದು ವಿಶೇಷವಾದ ಕಳೆ ಮತ್ತು ಮದುವೆಗೆ ಬಂದ ಅತಿಥಿಗಳಿಗೂ (Guest) ಮನೋರಂಜನೆ (Entertainment) ಎಂದು ಹೇಳಬಹುದು. ಈಗಾಗಲೇ ಮನೋರಂಜನೆ ಎಂದ ತಕ್ಷಣವೇ ನಿಮ್ಮ ತಲೆಯಲ್ಲಿ ಇದಕ್ಕೆ ಉತ್ತರ ಸಿಕ್ಕಿರುತ್ತದೆ. ಹೌದು.. ವಿಭಿನ್ನವಾಗಿ ಡ್ಯಾನ್ಸ್ (Dance) ಮಾಡುವವರೇ ಇರಲಿಲ್ಲ ಎಂದರೆ ಆ ಮದುವೆ ಸಮಾರಂಭದ ಸಂಭ್ರಮ ಸಪ್ಪೆ ಸಪ್ಪೆ ಆಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

  ವೈರಲ್ ಆಯ್ತು ಇವರ ಡ್ಯಾನ್ಸ್

  ಈಗಂತೂ ಮದುವೆ ಸಮಾರಂಭಗಳಲ್ಲಿ ಹಿಟ್ ಚಲಚಿತ್ರದ ಹಾಡುಗಳಿಗೆ ಸ್ಟೆಪ್ಸ್ ಹಾಕಿದ್ದೇ ಹಾಕಿದ್ದು, ಈ ವಿಡಿಯೋಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇಲ್ಲಿ ನಡೆದ ಒಂದು ಮದುವೆ ಸಮಾರಂಭದಲ್ಲಿ ಸಹ ಒಬ್ಬ ವ್ಯಕ್ತಿ ಸ್ಟೆಪ್ಸ್ ಹಾಕಿರೋದನ್ನ ನೋಡಿದರೆ ನೀವು ತುಂಬಾನೇ ನಗ್ತೀರಾ.

  ಈ ವ್ಯಕ್ತಿ ಮಾಡಿದ ಡ್ಯಾನ್ಸ್ ನಿಜಕ್ಕೂ ತುಂಬಾನೇ ವಿಭಿನ್ನವಾಗಿದೆ ಎಂದು ಹೇಳಬಹುದು. ಹೆಚ್ಚಾಗಿ ಮದುವೆ ಸಮಾರಂಭಗಳಲ್ಲಿ ತಮ್ಮ ಎರಡು ಕೈಗಳನ್ನು ಮೇಲಕ್ಕೆ ಎತ್ತಿಕೊಂಡು ಪಂಜಾಬಿ ಸ್ಟೈಲ್‌ನ ಡ್ಯಾನ್ಸ್ ಅನ್ನು ತುಂಬಾ ಸಾಮಾನ್ಯವಾಗಿ ನೋಡುತ್ತೇವೆ.

  1.20 ಲಕ್ಷಕ್ಕೂ ಅಧಿಕ ಬಾರಿ ವಿಡಿಯೋ ವೀಕ್ಷಣೆ

  ಮದುವೆ ಸಮಾರಂಭದಲ್ಲಿ ವಿಶಿಷ್ಟವಾಗಿ ಹೆಜ್ಜೆ ಹಾಕಿರುವುದನ್ನು ತೋರಿಸುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಗುರುವಾರ ಬೆಳಿಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಕೆಲವೇ ಗಂಟೆಗಳಲ್ಲಿ ಆ ವಿಡಿಯೋವನ್ನು 1.20 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

  ಇದನ್ನೂ ಓದಿ: Viral Video: ಚಲಿಸುತ್ತಿರುವ ಬೈಕ್‌ ಮೇಲೆಯೇ ರೊಮ್ಯಾನ್ಸ್! ಪ್ರೇಮಿಗಳ ಹುಚ್ಚಾಟಕ್ಕೆ ಛೀ, ಥೂ ಎಂದ ಜನರು

  ಸ್ಪೆಷಲ್ ಡ್ಯಾನ್ಸ್ ಮಾಡಿದ ಯೋಧ

  "ತರಬೇತಿ ಮುಗಿದ ಕೂಡಲೇ ಯೋಧ ತನ್ನ ಸ್ನೇಹಿತನ ಮದುವೆ ಸಮಾರಂಭದ ಬಾರಾತ್ ತಲುಪಿದ್ದಾನೆ" ಎಂದು ಕಾಬ್ರಾ ತಮ್ಮ ಟ್ವೀಟ್‌ನಲ್ಲಿ ಶೀರ್ಷಿಕೆಯನ್ನು ಬರೆದು ತಿಳಿಸಿದ್ದಾರೆ. ಮದುವೆ ನಡೆದ ಸ್ಥಳವನ್ನು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿಲ್ಲ.

  ಸೆಲ್ಯೂಟ್ ಹೊಡೆಯುತ್ತಲೇ ಮಸ್ತ್ ಡ್ಯಾನ್ಸ್

  29 ಸೆಕೆಂಡುಗಳ ಈ ವಿಡಿಯೋ ಮದುವೆಯಲ್ಲಿ ಡ್ರಮ್ಮರ್‌ಗಳ ಸುತ್ತಲೂ ಮೆರವಣಿಗೆ ಹೋಗುತ್ತಿದ್ದು, ಆ ವ್ಯಕ್ತಿ ಹಾಗೆ ನಡೆದುಕೊಂಡು ಬರುವ ಮೂಲಕ ವಿಡಿಯೋ ಶುರುವಾಗುತ್ತದೆ. ತಕ್ಷಣವೇ ಆ ವ್ಯಕ್ತಿ ಕೆಲವು ಹೆಜ್ಜೆಗಳನ್ನು ಹಿಂದಕ್ಕೆ ತೆಗೆದುಕೊಂಡು ವಿಭಿನ್ನವಾದ ಡ್ಯಾನ್ಸ್ ಸ್ಟೆಪ್ಸ್ ಹಾಕಲು ಶುರು ಮಾಡುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು. ಇಷ್ಟಕ್ಕೆ ಸುಮ್ಮನಾಗದ ಆ ವ್ಯಕ್ತಿ ತುಂಬಾನೇ ನೇರವಾಗಿ ನಿಂತುಕೊಂಡು ಡ್ಯಾನ್ಸ್ ಮಾಡುವ ಮೊದಲು ಸೆಲ್ಯೂಟ್ ಅನ್ನು ಸಹ ನೀಡುತ್ತಾರೆ.

  ಡ್ಯಾನ್ಸ್‌ನಲ್ಲೇ ವ್ಯಾಯಾಮ, ಕ್ರಿಕೆಟ್ ಆಟ!

  ನಂತರ ಅವನು ಒಂದು ಬದಿಗೆ ಹೋಗಿ ಮತ್ತು ಜಂಪಿಂಗ್ ಜಾಕ್‌ಗಳನ್ನು ಪ್ರದರ್ಶಿಸುತ್ತಾನೆ. ಆ ವ್ಯಕ್ತಿ ಕ್ರಿಕೆಟ್ ಪಂದ್ಯದಲ್ಲಿ ಚೆಂಡನ್ನು ಎಸೆಯಲು ತಯಾರಾಗುತ್ತಿರುವಂತೆ ತನ್ನ ಒಂದು ತೋಳನ್ನು ಗರಗರನೆ ತಿರುಗಿಸುತ್ತಾನೆ. ಅವನು ಮತ್ತೆ ಇನ್ನೊಂದು ಕೈಯನ್ನು ಹಾಗೆಯೇ ತಿರುಗಿಸಿ ವ್ಯಾಯಾಮ ಮಾಡುತ್ತಾ ಮತ್ತೆ ತನ್ನ ಸ್ಟೆಪ್‌ಗಳನ್ನು ಮತ್ತೆ ಹಾಕುತ್ತಾನೆ. ಇದುವರೆಗೂ ಈ ವಿಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.  ನೆಟ್ಟಿಗರಿಂದ ವಿವಿಧ ರೀತಿಯ ಕಾಮೆಂಟ್

  ಈ ವಿಶಿಷ್ಟ ಡ್ಯಾನ್ಸ್ ಸ್ಟೆಪ್ಸ್ ಮಾತ್ರ ನೆಟ್ಟಿಗರನ್ನು ತುಂಬಾನೇ ಸಂತೋಷ ಪಡಿಸುತ್ತಿದೆ ಎಂದು ಹೇಳಬಹುದು. "ಇವು ತರಬೇತಿಯ ಅಡ್ಡ ಪರಿಣಾಮಗಳು" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. "ಅದಕ್ಕಾಗಿಯೇ ಸಿಒ ಯಾವುದೇ ರಜೆಗಳನ್ನು ನೀಡುವುದಿಲ್ಲ" ಎಂದು ಇನ್ನೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

  ಇದನ್ನೂ ಓದಿ: Shocking Video: ಪ್ರೇಮಿ ಜೊತೆ ತಂಗಿ ಜಾಲಿ ರೈಡ್! ಕೋಪಗೊಂಡ ಅಣ್ಣ ಮಾಡಿದ್ದೇನು ಅಂತ ಈ ಭಯಾನಕ ವಿಡಿಯೋ ನೋಡಿ

  “ಸರಿಯಾಗಿ ಡ್ಯಾನ್ಸ್ ಮಾಡಲು ಗೊತ್ತಿರದೆ ಇದ್ದಾಗ, ಡ್ಯಾನ್ಸ್ ಮಾಡಲು ಒತ್ತಾಯಿಸಿದಾಗ ಇಂತಹ ಡ್ಯಾನ್ಸ್ ಪ್ರದರ್ಶನ ಹೊರ ಬರುತ್ತವೆ” ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. "ಮದುವೆಗಳಲ್ಲಿ ಡ್ಯಾನ್ಸ್ ಮಾಡುವ ಎಲ್ಲಾ ಯುವಕರು ಒಂದೇ ರೀತಿಯ ಪೊಲೀಸ್ ತರಬೇತಿ ವ್ಯಾಯಾಮವನ್ನು ಮಾಡಿದರೆ ಮಾತ್ರ ಅವರ ಆರೋಗ್ಯವು ಸುಧಾರಿಸುತ್ತದೆ ಮತ್ತು ನಾವು ಶಿಸ್ತನ್ನು ಸಹ ನೋಡುತ್ತೇವೆ" ಎಂದು ಇನ್ನೊಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
  Published by:Annappa Achari
  First published: