Duplicate Salman Khan: ಶರ್ಟ್​ಲೆಸ್ ಆಗಿ ರೋಡ್​ನಲ್ಲಿ ಡ್ಯಾನ್ಸ್, ಇದೆಂಥಾ ಹುಚ್ಚಾಟ?

ಕೆಲವೊಬ್ಬರಂತೂ ನಮ್ಮ ನೆಚ್ಚಿನ ನಟನನ್ನ ಫಾಲೋ ಮಾಡುತ್ತಾರೆ. ಇಲ್ಲೊಬ್ಬ ನಕಲಿ ಸಲ್ಮಾನ್ ಖಾನ್ ಶರ್ಟ್ ಇಲ್ಲದೆ ಒಂದು ಟಾವೆಲ್ ಅನ್ನು ಸೊಂಟಕ್ಕೆ ಸುತ್ತಿಕೊಂಡು ರಸ್ತೆಯ ಮಧ್ಯೆದಲ್ಲಿ ಹೇಗೆ ತನ್ನ ನೆಚ್ಚಿನ ನಟನಂತೆ ಡ್ಯಾನ್ಸ್ ಮಾಡುತ್ತಾ ಆರಾಮಾಗಿ ಅಡ್ಡಾಡಿದ್ದಾನೆ ನೋಡಿ

ನಕಲಿ ಸಲ್ಮಾನ್ ಖಾನ್

ನಕಲಿ ಸಲ್ಮಾನ್ ಖಾನ್

  • Share this:
ಈ ಅಭಿಮಾನ ಎನ್ನುವುದು ಬೇರೊಬ್ಬರಿಗೆ ತೊಂದರೆ (Trouble) ಮಾಡುವಂತೆ ಇರಬಾರದು ಎಂಬುವುದು ಅನೇಕರಿಗೆ ತಿಳಿಯದೇ ಏನೇನೋ ಹುಚ್ಚಾಟ (Insanity) ಮಾಡಿ ಬಿಡುತ್ತಾರೆ. ಕೆಲವೊಮ್ಮೆ ತಮ್ಮ ನೆಚ್ಚಿನ ನಟರನ್ನು (Actor) ಅವರ ಅಭಿಮಾನಿಗಳು (Fans) ಎಷ್ಟೊಂದು ಅನುಕರಣೆ ಮಾಡುತ್ತಾರೆ ಎಂದರೆ ಅಬ್ಬಬ್ಬಾ ಅದನ್ನು ಹೇಳುವುದಕ್ಕೂ ಕಷ್ಟವಾಗುತ್ತದೆ. ಅಭಿಮಾನಿಗಳು ಸಾಮಾನ್ಯವಾಗಿ ಅವರ ನೆಚ್ಚಿನ ನಟನ ಚಲನಚಿತ್ರಗಳು (Movies) ಚಿತ್ರ ಮಂದಿರಗಳಲ್ಲಿ (Movie theater) ಬಿಡುಗಡೆಯಾದರೆ, ಅವರ ದೊಡ್ಡ ದೊಡ್ಡ ಪೋಸ್ಟರ್ (Poster) ಗಳಿಗೆ ಅಭಿಷೇಕ ಮಾಡುವುದು, ದೊಡ್ಡ ದೊಡ್ಡ ಹಾರಗಳನ್ನು ಹಾಕುವುದು, ಶಿಳ್ಳೆ (Whistle) ಹೊಡೆದು ಇಡೀ ದಿನ ಅವರ ಪೋಸ್ಟರ್ ಅನ್ನು ತಮ್ಮ ವಾಹನದ (Vehicle) ಮುಂದೆ ಅಂಟಿಸಿಕೊಂಡು ಊರೆಲ್ಲಾ ರೌಂಡ್ ಹೊಡಿಯುವುದನ್ನು, ಜೋಶ್ ನಿಂದ ಸುತ್ತುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ.

ಕೆಲವೊಬ್ಬರಂತೂ ನಮ್ಮ ನೆಚ್ಚಿನ ನಟನ ಹೇರ್ ಸ್ಟೈಲ್ ಅನ್ನು ಕಾಪಿ ಮಾಡುವುದು, ನಡೆಯುವ ಸ್ಟೈಲ್, ಮಾತಾಡುವ ಶೈಲಿ ಮತ್ತು ಮುಖದ ಹಾವ-ಭಾವಗಳನ್ನು ಸಹ ಅವರ ನೆಚ್ಚಿನ ನಟನಂತೆ ಮಾಡುವುದನ್ನು ನಾವು ನೋಡಿರುತ್ತೇವೆ. ಅವರ ನೆಚ್ಚಿನ ನಟ ಹೇಗೆ ಮಾಡುತ್ತಾರೋ, ಹಾಗೆಯೇ ಇವರು ಮಾಡುತ್ತಾ ಇರುವುದನ್ನು ನಾವು ನೋಡಿರುತ್ತೇವೆ.

ಈ ಚಲನಚಿತ್ರೋದ್ಯಮದ ನಟರ ನಕಲಿ ಎಂಬಂತೆ ಇರುವ ಜನರನ್ನು ಸಹ ನಾವು ನೋಡಿರುತ್ತೇವೆ ಮತ್ತು ಇವರು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಜನಪ್ರಿಯತೆಯನ್ನು ಗಳಿಸಿರುತ್ತಾರೆ. ಇವರು ದಿಟ್ಟೋ ನಾಯಕ ನಟರಂತೆಯೇ ಇರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ನಕಲಿ ಸ್ಟಾರ್ ಗಳು ಕೆಲವೊಮ್ಮೆ ತಮ್ಮ ನೆಚ್ಚಿನ ನಟನ ಮೇಲಿರುವ ಅತಿಯಾದ ಅಭಿಮಾನದಿಂದ ಮತ್ತು ಜನರು ಇವರನ್ನು ನೋಡಿ ಮೆಚ್ಚಿಕೊಳ್ಳಲಿ ಎಂಬ ಅತೀ ಉತ್ಸಾಹದಿಂದ ಎಡವಟ್ಟುಗಳನ್ನು ಮಾಡಿಕೊಳ್ಳುವುದನ್ನು ಸಹ ನಾವು ನೋಡಿರುತ್ತೇವೆ.

ಯಾರಿದು ಸಲ್ಮಾನ್ ಖಾನ್?
ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ, ಈ ನಕಲಿ ಸಲ್ಮಾನ್ ಖಾನ್ ಶರ್ಟ್ ಇಲ್ಲದೆ ಒಂದು ಟಾವೆಲ್ ಅನ್ನು ಸೊಂಟಕ್ಕೆ ಸುತ್ತಿಕೊಂಡು ರಸ್ತೆಯ ಮಧ್ಯೆದಲ್ಲಿ ಹೇಗೆ ತನ್ನ ನೆಚ್ಚಿನ ನಟನಂತೆ ಡ್ಯಾನ್ಸ್ ಮಾಡುತ್ತಾ ಆರಾಮಾಗಿ ಅಡ್ಡಾಡಿದ್ದಾನೆ ನೋಡಿ. ಇವರು ಯಾಕೆ ಈ ಥರ ಮಾಡಿದ್ದಾರೆ ಎಂದು ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು. ಇದರ ನೈಜ ಕಥೆ ನಾವು ಹೇಳುತ್ತೇವೆ ಕೇಳಿ.

ಇದನ್ನೂ ಓದಿ:  Bride Exchange: ಕರೆಂಟು ಹೋದ ಟೈಮಲಿ ವಧು-ವರರೇ ಅದಲು ಬದಲು; ಅವನ ಹುಡುಗಿಗೆ ಇವನು, ಇವನ ಹುಡುಗಿಗೆ ಅವನು ತಾಳಿ ಕಟ್ಟಿದ!

ಸಲ್ಮಾನ್ ಖಾನ್ ಅವರನ್ನು ನೋಡಲು ರಸ್ತೆಯಲ್ಲಿ ಭಾರಿ ಜನಸಮೂಹ
ಭಾನುವಾರ ರಾತ್ರಿ ಲಕ್ನೋ ನಗರದಲ್ಲಿರುವ ಐತಿಹಾಸಿಕ ಕ್ಲಾಕ್ ಟವರ್‌ ಹತ್ತಿರ ನಕಲಿ ಸಲ್ಮಾನ್ ಖಾನ್ ಎಂದು ಖ್ಯಾತಿ ಪಡೆದಿರುವ ಅಜಮ್ ಅನ್ಸಾರಿ ಅವರು ತಮ್ಮದೊಂದು ಚಿಕ್ಕ ರೀಲ್ ಎಂದರೆ ಸಣ್ಣ ವೀಡಿಯೋ ತಯಾರಿಸುತ್ತಿದ್ದರು ಮತ್ತು ನಕಲಿ ಸಲ್ಮಾನ್ ಖಾನ್ ಅವರನ್ನು ನೋಡಲು ರಸ್ತೆಯಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು, ಇದರಿಂದಾಗಿ ಸಹಜ ಎಂಬಂತೆ ಭಾರಿ ಟ್ರಾಫಿಕ್ ಜಾಮ್ ಸಹ ಆಗಿತ್ತು.


View this post on Instagram


A post shared by Azam Ansari (@azam00ansari)
ನಂತರ ಅದೇ ರಸ್ತೆಯಲ್ಲಿ ಪ್ರಾಯಾಣಿಸುತ್ತಿದ್ದಂತಹ ಕೆಲವರು ಈ ನಕಲಿ ಸಲ್ಮಾನ್ ಮಾಡಿದ ಅವಾಂತರದ ಬಗ್ಗೆ ಪೊಲೀಸರಿಗೆ ದೂರನ್ನು ಸಲ್ಲಿಸಿದ್ದಾರೆ. ಈ ದೂರನ್ನು ಸ್ವೀಕರಿಸಿದ ಲಕ್ನೋ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಅನ್ಸಾರಿಯನ್ನು ವಶಕ್ಕೆ ಪಡೆದಿದ್ದಾರೆ. ಠಾಕೂರ್‌ಗಂಜ್ ಪೊಲೀಸರು ಶಾಂತಿ ಭಂಗ ಮಾಡಿರುವುದಕ್ಕೆ ಸೆಕ್ಷನ್ 151 ರ ಅಡಿಯಲ್ಲಿ ಅನ್ಸಾರಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.

ಯೂಟ್ಯೂಬ್‌ನಲ್ಲಿ 1.67 ಲಕ್ಷ ಜನ ಫಾಲೋವರ್ಸ್
 ಲಕ್ನೋದ ರಸ್ತೆಗಳ ಮೇಲೆ ಮತ್ತು ಐತಿಹಾಸಿಕ ಸ್ಮಾರಕಗಳ ಮುಂದೆ ನಿಂತು ಕೊಂಡು ಅನ್ಸಾರಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ಗಾಗಿ ರೀಲ್‌ಗಳನ್ನು ತಯಾರಿಸುವುದನ್ನು ಜನರು ಹೆಚ್ಚಾಗಿ ನೋಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಯೂಟ್ಯೂಬ್‌ನಲ್ಲಿ 1.67 ಲಕ್ಷ ಜನ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Prisoners: ಪುಸ್ತಕ ಓದೋ ಖೈದಿಗಳಿಗೆ ಜೈಲಿನಿಂದ ಬೇಗ ಮುಕ್ತಿ! ಇಂಥಾ ಆಫರ್ ಎಲ್ಲೂ ಸಿಗಲ್ಲ ನೋಡಿ

ಈ ವೀಡಿಯೋದಲ್ಲಿ ಅನ್ಸಾರಿ ಅವರು ರಸ್ತೆಯ ಮಧ್ಯೆದಲ್ಲಿ ಸಲ್ಮಾನ್ ಖಾನ್ ಅವರ ‘ಹರ್ ದಿಲ್ ಜೋ ಪ್ಯಾರ್ ಕರೆಗಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದನ್ನು ನೋಡಬಹುದು. ಈ ವೀಡಿಯೋವನ್ನು ಈಗಾಗಲೇ 13,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.
Published by:Ashwini Prabhu
First published: