Sea Cucumber Viral Video: ಸಮುದ್ರದೊಳಗಿರುವ ಸೌತೆಕಾಯಿ ಬಗ್ಗೆ ನಿಮಗೆಷ್ಟು ಗೊತ್ತು! ಈ ವಿಚಿತ್ರ ಪ್ರಾಣಿಯ ವೈರಲ್ ವೀಡಿಯೋ ಇಲ್ಲಿದೆ

ಸಾಗರವು ರಹಸ್ಯಗಳಿಂದ ತುಂಬಿರುವ ಸ್ಥಳವಾಗಿದೆ. ಸಮುದ್ರದ ಹೆಚ್ಚಿನ ಭಾಗವು ಇನ್ನೂ ಪರಿಶೋಧಿಸಲ್ಪಟ್ಟಿಲ್ಲ. ಏಕೆಂದರೆ ಇದು ತುಂಬಾ ವಿಶಾಲವಾಗಿದೆ. ಸಮುದ್ರ ಸೌತೆಕಾಯಿ ಎಂಬ ವಿಚಿತ್ರವಾಗಿ ಕಾಣುವ ಆಳ ಸಮುದ್ರದ ಜೀವಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ.

ಸಮುದ್ರ ಸೌತೆಕಾಯಿ

ಸಮುದ್ರ ಸೌತೆಕಾಯಿ

  • Share this:
ಭೂಮಿಯೇ (Earth) ವಿಸ್ಮಯ. ಮಾನವನ ಕಲ್ಪನೆಗೂ ಮೀರಿದ ವಿಚಾರಗಳು ಪ್ರಕೃತಿಯಲ್ಲಿ (Nature) ಹುದುಗಿದೆ. ಇನ್ನೂ ಅನೇಕ ವಿಚಾರಗಳು ಮನುಷ್ಯನ ಅರಿವಿಗೆ ಬರತಂದವುಗಳು ಬಹಳನೇ ಇದೆ. ನಾವು ಪ್ರತಿನಿತ್ಯ ಗಾಳಿಯಲ್ಲಿ, ಆಕಾಶದಲ್ಲಿ, ಭೂಮಿಯಲ್ಲಿ ವಿಸ್ಮಯಕಾರಿಯಾದ (Wonder) ಹಲವಾರು ಅಂಶಗಳನ್ನು, ಜೀವಿಗಳನ್ನು ಬೇರೆ ಬೇರೆ ವಿಚಾರಗಳನ್ನು ಕಾಣುತ್ತೇವೆ. ಇನ್ನೂ ಸಮುದ್ರದೊಳಗಂತು (Sea) ಹೊಸ ಪ್ರಪಂಚವೇ (World) ಇದೆ. ಇದಕ್ಕೆ ನಿದರ್ಶನ ಎಂಬಂತೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ  ಸಿ ಕುಕುಂಬರ್ (Sea Cucumber) ಜೀವಿಯ ಅದ್ಭುತವಾದ ವೀಡಿಯೋವೊಂದು ಬಹಳಷ್ಟು ವೈರಲ್ ಆಗುತ್ತಿದೆ.

ಸಾಗರವು ರಹಸ್ಯಗಳಿಂದ ತುಂಬಿರುವ ಸ್ಥಳವಾಗಿದೆ. ಸಮುದ್ರದ ಹೆಚ್ಚಿನ ಭಾಗವು ಇನ್ನೂ ಪರಿಶೋಧಿಸಲ್ಪಟ್ಟಿಲ್ಲ. ಏಕೆಂದರೆ ಇದು ತುಂಬಾ ವಿಶಾಲವಾಗಿದೆ. ವಿಜ್ಞಾನಿಗಳು ಪ್ರತಿದಿನ ವಿಚಿತ್ರ ಜೀವಿಗಳ ಬಗ್ಗೆ ಸಂಶೋಧನೆಗಳನ್ನು ಮಾಡುತ್ತಾರೆ. ಸಮುದ್ರ ಸೌತೆಕಾಯಿ ಎಂಬ ವಿಚಿತ್ರವಾಗಿ ಕಾಣುವ ಆಳ ಸಮುದ್ರದ ಜೀವಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ.

ಇದನ್ನೂ ಓದಿ: Just Miss: ಯಮರಾಜ ಊಟಕ್ಕೆ ಬ್ರೇಕ್ ತಗೊಂಡಿದ್ದಕ್ಕೆ ಈ ವ್ಯಕ್ತಿ ಜೀವ ಉಳಿಯಿತಂತೆ! ವೈರಲ್ ವಿಡಿಯೋ ನೋಡಿ

ಕಮಲದಂತೆ ಅರಳಿದ ಸಿ ಕುಕುಂಬರ್
ವೀಡಿಯೋ ಗಮನಿಸಿದಂತೆ ಆಳ ಸಮುದ್ರದೊಳಗಿರುವ ಸಮುದ್ರ ಸೌತೆಕಾಯಿ (Sea Cucumber) ಕಮಲದಂತೆ ಅರಳುತ್ತದೆ. ಮತ್ತು ತನ್ನ ಕಾಲುಗಳಿಂದ ಆಹಾರವನ್ನು ಸೇವಿಸುತ್ತದೆ. ಇದಕ್ಕೆ ಬರೀ ಎರಡು ಕಾಲುಗಳಲ್ಲ ಬದಲಾಗಿ ಹಲವಾರು ಕಾಳುಗಳಿವೆ. ಅದು ತನ್ನೆಲ್ಲಾ ಕಾಳುಗಳಿಂದ ಆಹಾರವನ್ನು ಸೇವಿಸುತ್ತದೆ.





ವೀಡಿಯೋ ಹಂಚಿಕೊಂಡ ಐಎಫ್ ಎಸ್ ಅಧಿಕಾರಿ
ಈ ಸಮುದ್ರದೊಳಗಿನ ಅದ್ಬುತವಾದ ಸಿ ಕುಕುಂಬರ್ ನ ವೀಡಿಯೋವನ್ನು ಭಾರತೀಯ ಅರಣ್ಯ ಸೇವಾಧಿಕಾರಿ ಸುಸಂತ ನಂದ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಸಿ ಕುಕುಂಬರ್ ಮೊದಲು ಹೂವಿನಂತೆ ಅರಳುತ್ತದೆ ಮತ್ತು ನಂತರದಲ್ಲಿ ತನ್ನ ಅನೇಕ ಕಾಳುಗಳಿಂದ ಆಹಾರವನ್ನು ತಿನ್ನುವ ದೃಶ್ಯವನ್ನು ಕಾಣಬಹುದಾಗಿದೆ.

ಸಖತ್ ವೈರಲ್ ಆದ ವೀಡಿಯೋ
ಈ ಮನಮೋಹಕ ದೃಶ್ಯ ಸಮುದ್ರದೊಳಗಿನ ಸುಂದರ ಪ್ರಪಂಚವನ್ನು ತೆರೆದಿಟ್ಟಿದೆ. ಇದು 17,700 ರಷ್ಟು ವೀಕ್ಷಣೆಯನ್ನು ಪಡೆದಿದೆ ಮತ್ತು 620 ಕ್ಕೂ ಅಧಿಕ ಲೈಕ್ ಗಳನ್ನು ಪಡೆದಿದೆ. ಸಾಕಷ್ಟು ಮಂದಿ ಈ ವೀಡಿಯೋ ರಿಟ್ವೀಟ್ ಮಾಡಿದ್ದಾರೆ. ಇದು ಕಂಡ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ಕಮೆಂಟ್ ಮೂಲಕ ಅಚ್ಚರಿ ವ್ಯಕ್ತ ಪಡಿಸಿದ ನೆಟ್ಟಿಗರು
ಈ ವೀಡಿಯೋವನ್ನು ಗಮನಿಸಿದ ನೆಟ್ಟಿಗರು ವಿಭಿನ್ನ ರೀತಿಯಾದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು "ವಿಸ್ಮಯಕಾರಿ ವಿಷಯಗಳು ಬಾಹ್ಯಕಾಶದಲ್ಲಿ ಮಾತ್ರವಿರುವುದಿಲ್ಲ, ಸಮುದ್ರದ ಆಳದಲ್ಲೂ ಸಾಕಷ್ಟು ವಿಚಿತ್ರಗಳಿವೆ" ಎಂದಿದ್ದಾರೆ. ಇನ್ನೊಬ್ಬರು "ನಾನೂ ಹೀಗೆಯೇ ತಿನ್ನುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಇನ್ನೊಬ್ಬರು "ಸಿನಿಮಾ ನೋಡಲು ಹೋದಾಗ ನನ್ನ ಮತ್ತು ನನ್ನ ಪಾಪ್ ಕಾರ್ನ್​ ಟಬ್ ನಲ್ಲಿರುವ ಪಾಪ್ ಕಾರ್ನ್​ ಅನ್ನು ನಮ್ಮ ಮಕ್ಕಳು ಹೀಗೆಯೇ ತಿನ್ನುತ್ತಾರೆ". ಎಂದು ಹಾಸ್ಯವಾಗಿ ಕಮೆಂಟ್ ಮಾಡಿದ್ದಾರೆ.

ಸಿ ಕುಕುಂಬರ್ ನಲ್ಲಿ ಅನೇಕ ಪ್ರಭೇದಗಳಿವೆ
ಸಸ್ಯಗಳೆಂತೆ ಕಾಣುವ ಈ ಜೀವಿಯನ್ನು ಸಸ್ಯಗಳೆಂದು ಕರೆಯದೆ ಪ್ರಾಣಿಗಳೆಂದು ಕರೆಯುತ್ತಾರೆ. ಸಮುದ್ರ ಸೌತೆಕಾಯಿಗಳಲ್ಲಿ ಸುಮಾರು 1,500 ಜಾತಿಗಳಿವೆ ಮತ್ತು ಅವು ಅನೇಕ ಬಣ್ಣಗಳು, ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತವೆ. ಇದರ ಮೃದುವಾದ ಕೊಳವೆಯಾಕಾರದ ದೇಹವು ಉದ್ದಕ್ಕೂ ಟ್ಯೂಬ್ ಪಾದಗಳನ್ನು ಹೊಂದಿದೆ.

ಇದನ್ನೂ ಓದಿ: Large Mushroom: ಮಳೆ ಬರದಿದ್ದರೂ ದಿಢೀರ್ ತಲೆ ಎತ್ತಿದ ಬೃಹತ್ ಅಣಬೆಗಳು! ಜನರಿಂದ ವಿಶೇಷ ಪೂಜೆ

ರಾಷ್ಟ್ರೀಯ ವನ್ಯಜೀವಿ ಒಕ್ಕೂಟದ ಪ್ರಕಾರ, ಸಮುದ್ರ ಸೌತೆಕಾಯಿಗಳು ಎಕಿನೋಡರ್ಮ್ಸ್ ಎಂಬ ಪ್ರಾಣಿ ವರ್ಗದ ಭಾಗವಾಗಿದೆ. ಇದು ಸ್ಟಾರ್ಫಿಶ್ ಮತ್ತು ಸಮುದ್ರ ಅರ್ಚಿನ್ಗಳನ್ನು ಒಳಗೊಂಡಿದೆ. ಅವು ಸಾಮಾನ್ಯವಾಗಿ ಸಮುದ್ರದ ತಳದಲ್ಲಿ ಕಂಡುಬರುತ್ತವೆ. ಅವು ಸಾಮಾನ್ಯವಾಗಿ ಪಾಚಿ, ಜಲಚರ ಅಕಶೇರುಕಗಳು ಮತ್ತು ತ್ಯಾಜ್ಯ ಕಣಗಳನ್ನು ತಿನ್ನುತ್ತವೆ
Published by:Nalini Suvarna
First published: