Girl's Campaign: ಶಾಲೆ ವಿರುದ್ಧವೇ ಸಿಡಿದೆದ್ದ ವಿದ್ಯಾರ್ಥಿನಿ! ಬಾಲಕಿಯರ ಮಾನ ಕಾಪಾಡಲು ಅಭಿಯಾನ

ವಿದ್ಯಾರ್ಥಿನಿಯೊಬ್ಬಳು (Student) ಶಾಲೆಯು ನಡೆದುಕೊಂಡ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಲ್ಲದೆ ಅದು ವಿದ್ಯಾರ್ಥಿನಿಯರ ಘನತೆಯನ್ನು ಮೂರು ಕಾಸಿಗೆ ಹರಾಜು ಹಾಕಿದೆ ಎಂಬರ್ಥದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಜಾರಾ ಸ್ಟುವರ್ಟ್

ಜಾರಾ ಸ್ಟುವರ್ಟ್

  • Share this:
ಸ್ಕಾಟೀಶ್ ಸೆಕಂಡರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು (Student) ಶಾಲೆಯು ನಡೆದುಕೊಂಡ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಲ್ಲದೆ ಅದು ವಿದ್ಯಾರ್ಥಿನಿಯರ ಘನತೆಯನ್ನು ಮೂರು ಕಾಸಿಗೆ ಹರಾಜು ಹಾಕಿದೆ ಎಂಬರ್ಥದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ವಿದ್ಯಾರ್ಥಿನಿಯ ಪ್ರಕಾರ, ಶಾಲಾಡಳಿತವು ಹೆಣ್ಣು ಮಕ್ಕಳಿಗೆ (Girls) ಅಗತ್ಯವಾಗಿರುವಂತಹ ಯಾವುದೇ ರೀತಿಯ ಸ್ಯಾನಿಟರಿ ಉತ್ಪನ್ನಗಳನ್ನು ಶೌಚಾಲಯ ಅಥವಾ ರೆಸ್ಟ್ ರೂಮ್ ಗಳಲ್ಲಿ ಲಭ್ಯವಾಗದಂತೆ ಇಡದೆ ತಮ್ಮ ಘನತೆಗೆ ಧಕ್ಕೆ ತರುವಂತೆ ಮಾಡಿದೆ ಎಂದು ಜಾರಾ ಸ್ಟುವರ್ಟ್ (Zara Stuart) ಹೇಳಿಕೊಂಡಿದ್ದಾರೆ. ಜಾರಾ ಸ್ಟುವರ್ಟ್ ಅವರು ಹಾಗೂ ಇತರೆ ಕೆಲ ವಿದ್ಯಾರ್ಥಿನಿಯರು ಮುಟ್ಟಾದ ಸಂದರ್ಭದಲ್ಲಿ ರಕ್ತಸ್ರಾವದ ನಡುವೆಯೂ ತಮಗೆ ಬೇಕಾಗಿದ್ದ ಕೆಲ ಅಗತ್ಯ ಸ್ಯಾನಿಟರಿ ಉತ್ಪನ್ನಗಳಿಗಾಗಿ ಶಾಲೆಯ ಕಚೇರಿಯವರೆಗೂ (Office) ನಡೆದು ಹೋಗಬೇಕು ಎಂದು  ಶಾಲೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೌಚಾಲಯಗಳಲ್ಲಿ ಮುಟ್ಟಿಗೆ ಸಂಬಂಧಿಸಿದ ನೈರ್ಮಲ್ಯ ಉತ್ಪನ್ನ
ಸಾಮಾನ್ಯವಾಗಿ ಪಾಶ್ಚಿಮಾತ್ಯ ಅಥವಾ ಮುಂದುವರೆದ ದೇಶಗಳಲ್ಲಿ ಋತುಮತಿಯಾಗುವ ಹೆಣ್ಣು ಮಕ್ಕಳಿಗೆ ಮಾಸಿಕ ಋತುಸ್ರಾವ ಸಂಭವಿಸುವಾಗ ಅವರಿಗೆ ಅನುಕೂಲವಾಗಲೆಂದು ಶೌಚಾಲಯಗಳಲ್ಲಿ ಮುಟ್ಟಿಗೆ ಸಂಬಂಧಿಸಿದ ನೈರ್ಮಲ್ಯ ಉತ್ಪನ್ನಗಳನ್ನು ಇಟ್ಟಿರುತ್ತಾರೆ. ಆದರೆ, ಈ ಸಂದರ್ಭದಲ್ಲಿ ಜಾರಾ ಅವರು ಹೇಳುವಂತೆ ಅವರ ಶಾಲೆಯಲ್ಲಿ ಈ ರೀತಿ ವ್ಯವಸ್ಥೆ ಇರಲಿಲ್ಲ, ಬದಲಾಗಿ ಅವರಿಗೆ ಏನಾದರೂ ಉತ್ಪನ್ನದ ಅಗತ್ಯತೆ ಇದ್ದಲ್ಲಿ ಅವರು ಅದನ್ನು ಪಡೆಯಲು ಸ್ವಲ್ಪ ದೂರವಿರುವಂತಹ ಶಾಲಾ ಆಡಳಿತ ಕಚೇರಿಯವರೆಗೂ ನಡೆದುಕೊಂಡು ಹೋಗಬೇಕಾಗಿದೆ.ಮಾಧ್ಯಮದೊಂದಿಗೆ ಶಾಲೆಯ ಫೋಟೋಗಳನ್ನು ಹಂಚಿಕೊಂಡ ವಿದ್ಯಾರ್ಥಿನಿ 
ಇದೇ ವಿಷಯವಾಗಿ ಜಾರಾ ಅವರು ಯುಕೆಯ ಡೈಲಿ ರಿಕಾರ್ಡ್ ಮಾಧ್ಯಮದೊಂದಿಗೆ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು ಅದರಲ್ಲಿ ಶಾಲೆಯ ಶೌಚಲಯದಲ್ಲಿ ಯಾವುದೇ ಸ್ಯಾನಿಟರಿ ಉತ್ಪನ್ನಗಳು ಲಭ್ಯವಿಲ್ಲದೆ ಇರುವುದನ್ನು ನೋಡಬಹುದಾಗಿದೆ. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜಾರಾ ಹೇಳಿದರು, ಅವರು ತರಗತಿಯೊಳಗಿದ್ದಾಗ ಅವರಿಗೆ ಮುಟ್ಟಾಗುತ್ತಿರುವ ಸೂಚನೆ ಸಿಕ್ಕಿತು ಹಾಗೂ ಅದು ಎಲ್ಲೆಡೆ ಗೋಚರವಾಗದಂತೆ ಪ್ಯಾಡ್ ಬಳಸಬೇಕಾದ ಅನಿವಾರ್ಯತೆ ಉಂಟಾಗಿ ಅವರು ಆತಂಕಗೊಂಡರು.

ಈ ಬಗ್ಗೆ ಜಾರಾ ಸ್ಟುವರ್ಟ್ ಏನು ಹೇಳಿದ್ದಾರೆ  
ಅವರು ಈ ಸಂದರ್ಭವನ್ನು ಮಾಧ್ಯಮಕ್ಕೆ ಈ ರೀತಿ, "ನನ್ನ ಹೃದಯವೇ ಕಳಚಿ ಬಿದ್ದಂತಾಯಿತು, ಏಕೆಂದರೆ ನನಗೆ ಮುಟ್ಟಾಗುತ್ತಿದೆ ಎಂದು ಗೊತ್ತಾದಾಗ ನನ್ನ ಬಳಿ ಯಾವ ಪ್ಯಾಡ್ ಸಹ ಇರಲಿಲ್ಲ. ಆದರೆ, ನಾನು ತ್ವರಿತವಾಗಿ ಪ್ಯಾಡ್ ಪಡೆಯಬೇಕಿದ್ದರೆ ಮೆಟ್ಟಿಲುಗಳನ್ನಿಳಿದು ಕಚೇರಿಗೆ ಹೋಗಿ ಅದನ್ನು ಪಡೆದು ಮತ್ತೆ ಮೆಟ್ಟಿಲುಗಳನ್ನು ಹತ್ತಿ ಶೌಚಾಲಯದೊಳಗೆ ಹೋಗಬೇಕಾಗಿತ್ತು, ಇದು ಎಲ್ಲವೂ ಒಂದು ಹನಿ ರಕ್ತವು ಹೊರ ಬರದಂತೆ ಮಾಡುವುದು ಅಸಾಧ್ಯವೇ ಆಗಿತ್ತು" ವಿವರಿಸುತ್ತಾರೆ.

ಇದನ್ನೂ ಓದಿ:  Mobile Addiction: ಅತಿಯಾದ ಸೋಶಿಯಲ್‌ ಮೀಡಿಯಾದ ಬಳಕೆ ಆರ್ಥಿಕ ಅಸಮಾನತೆಗೆ ಕಾರಣವಾಗಿದ್ಯಂತೆ

ಮುಂದುವರೆಯುತ್ತ, "ನನಗೆ ಅದಾಗಲೇ ರಕ್ತಸ್ರಾವ ಸ್ಕರ್ಟ್ ವರೆಗೂ ತಲುಪಿದೆ ಎಂದೆನಿಸಿತ್ತು. ನಾನು ಮೊದಲನೇ ಮಹಡಿಯಲ್ಲಿದ್ದೆ, ಅಲ್ಲಿಂದ ನಾನು ಕಚೇರಿಗೆ ಹೋಗಲು ಸ್ವಲ್ಪ ನಡೆಯಲೇ ಬೇಕಾಗಿತ್ತು" ಎಂದು ಹೇಳಿದರು. ವಾಸ್ತವದಲ್ಲಿ ಕೆಲ ಸಮಯದ ಹಿಂದೆ ಹುಡುಗರ ಶೌಚಾಲಯದಲ್ಲಿ ಕೆಲ ಅಹಿತಕರ ಘಟನೆಯಾದ ಮೇಲೆ ಶಾಲಾ ಸಿಬ್ಬಂದಿಯಿಂದ ಶೌಚಾಲಯದಲ್ಲಿ ಇರಿಸಲಾಗಿದ್ದ ಸ್ಯಾನಿಟರಿ ಉತ್ಪನ್ನಗಳನ್ನು ತೆಗೆಯಲಾಗಿದೆ. ಇದರಿಂದಾಗಿ ಹುಡುಗಿಯರಿಗೆ ಬೇಕಾಗುವಂತಹ ಪ್ಯಾಡುಗಳನ್ನು ಸಹ ಪಡೆಯುವುದು ಕಷ್ಟವಾಗಿದೆ. ಈ ಕಾರಣದಿಂದಾಗಿಯೇ ಜಾರಾ ತನ್ನ ಮುಟ್ಟಿನ ಸಂದರ್ಭದ ಫಜೀತಿಯನ್ನು ಅನುಭವಿಸಬೇಕಾಯಿತು.

ಅಭಿಯಾನಕ್ಕೆ ಮುಂದಾದ ಶಾಲಾ ವಿದ್ಯಾರ್ಥಿನಿಯರು
ಜಾರಾ ಅವರ ಪ್ರಕಾರ, ಕೆಲ ಸಮಯದ ಹಿಂದೆ ಹುಡುಗರ ಶೌಚಾಲಯದಲ್ಲಿ ನಡೆದಿದ್ದ ಅಹಿತಕರ ಘಟನೆಯ ಹಿಂದಿರುವ ಕಾರಣಕರ್ತನನ್ನು ಹಿಡಿಯದೆ ಶಾಲಾ ಆಡಳಿತವು ತರಗತಿ ನಡೆಯುವ ಸಮಯದಲ್ಲಿ ಶೌಚಾಲಯಗಳನ್ನು ಮುಚ್ಚುತ್ತಿದ್ದು ಕೇವಲ ಬಿಡುವಿನ ವೆಳೆಗಳಲ್ಲಿ ತೆರೆಯುತ್ತಿರುವುದು ಸ್ವೀಕಾರಾರ್ಹವಲ್ಲ, ಇದರಿಂದಾಗಿಯೇ ಹುಡುಗಿಯರು ಅನಿರೀಕ್ಷಿತವಾಗಿ ಆಗುವ ತಮ್ಮ ಮುಟ್ಟಿನ ಸಮಯದಲ್ಲಿ ಸಾಕಷ್ಟು ಮುಜುಗರ ಹಾಗೂ ಆತಂಕದ ಕ್ಷಣಗಳನ್ನು ಅನುಭವಿಸಬೇಕಾಗಿದ್ದು ಇದು ಹೆಣ್ಣನ್ನು ಅವಳ ಘನತೆಯಿಂದ ಹೊರಹಾಕುವುದಂತಾಗಿದೆ ಎಂದಿದ್ದಾರೆ.ಇದನ್ನೂ ಓದಿ: Viral Video: ವೀಲ್ ಚೇರ್​ನಲ್ಲಿದ್ದ ಹುಡುಗನಿಗೆ ರೈಲು ಹತ್ತಲು ಸಹಾಯ ಮಾಡಿದ ಭದ್ರತಾ ಸಿಬ್ಬಂದಿ! ಹೃದಯಸ್ಪರ್ಶಿ ವಿಡಿಯೋ ವೈರಲ್

ಇದನ್ನು ಸುಮ್ಮನೆ ಬಿಡದ ಜಾರಾ ಇದಕ್ಕಾಗಿ ಹೋರಾಡಲು ನಿರ್ಧರಿಸಿ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ. ಪ್ರಸ್ತುತ ಅವರ ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು ಇಲ್ಲಿಯವರೆಗೂ 312 ಜನರು ಅದನ್ನು ಬೆಂಬಲಿಸಿ ಹಸ್ತಾಕ್ಷರ ಹಾಕಿದ್ದಾರೆ. ಜಾರಾ ತಮ್ಮ ಅಭಿಯಾನದ ಮೂಲಕ ಮತ್ತೆ ಶೌಚಾಲಯಗಳು ಎಂದಿನಂತೆ ತೆರೆಯುವಂತೆ ಮಾಡಿ ಅದರಲ್ಲಿ ಅಗತ್ಯವಿರುವ ಎಲ್ಲ ಸ್ಯಾನಿಟರಿ ಉತ್ಪನ್ನಗಳು ಲಭ್ಯ ಇರುವಂತೆ ಪ್ರಯತ್ನಿಸುತ್ತಿದ್ದಾರೆ.
Published by:Ashwini Prabhu
First published: