ಶಿಕ್ಷಕಿ ವಿರುದ್ಧವೇ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟ ಬಾಲಕ!
ಶಿಕ್ಷಕಿ ವಿರುದ್ಧವೇ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟ ಬಾಲಕ!#News18Kannada pic.twitter.com/KTFsGUg0yq
— News18 Kannada (@News18Kannada) March 7, 2022
ನಿನ್ನ ಶಿಕ್ಷಕಿಯನ್ನು ವಿಚಾರಿಸುತ್ತೇನೆ ಎಂದ ಪೊಲೀಸ್
ಪೊಲೀಸರ ಪ್ರಶ್ನೆಗೆ ಉತ್ತರಿಸಿದ ಬಾಲಕ ಅನಿಲ್, ನನಗೆ ನನ್ನ ಶಾಲೆಯಲ್ಲಿ ಟೀಚರ್ ಹೊಡೆದಿದ್ದಾರೆ. ಅವರನ್ನು ಬಂಧಿಸಿ ಎಂದಿದ್ದಾನೆ. ಆಗ ಪೊಲೀಸ್ ಅಧಿಕಾರಿ, ಶಿಕ್ಷಕಿ ನಿನಗೆ ಯಾಕೆ ಹೊಡೆದರು ಎಂದು ಪ್ರಶ್ನಿಸಿದ್ದಕ್ಕೆ, ಮುಗ್ಧವಾಗಿ ನಾನು ಸರಿಯಾಗಿ ವಿದ್ಯಾಭ್ಯಾಸ ಮಾಡುತ್ತಿಲ್ಲ ಎಂದು ಹೊಡೆದಿದ್ದಾರೆ ಎಂದು ಹೇಳಿಕೊಂಡಿದ್ದಾನೆ.
ಅಷ್ಟಕ್ಕೇ ಬಿಡದ ಮಹಿಳಾ ಪೊಲೀಸ್ ಅಧಿಕಾರಿ, ಶಿಕ್ಷಕಿ ಬೇರೆಯವರಿಗೂ ಹೊಡೆಯುತ್ತಾರಾ? ನಿನಗೊಬ್ಬನಿಗೇ ಹೊಡೆಯುತ್ತಾರಾ ಎಂದು ಕೇಳಿದ್ದಾರೆ. ಆಗ ಉತ್ತರಿಸಿದ ಅನಿಲ್, ಇಲ್ಲ ಅವರು ನನಗೆ ಮಾತ್ರ ಹೊಡೆಯುತ್ತಾರೆ ಎಂದಿದ್ದಾನೆ.
ಠಾಣೆಯಲ್ಲೇ ಪಟ್ಟು ಹಿಡಿದು ಕುಳಿತ ಬಾಲಕ
ಆತನ ದೂರು ಕೇಳಿದ ರಮಾದೇವಿ, ಆತನೊಂದಿಗೆ ಶಾಲೆಗೆ ಹೋಗಲು ಸಿದ್ಧರಾಗಿದ್ದಾರೆ. ಬಾ ನಾನೇ ನಿನ್ನ ಶಿಕ್ಷಕಿ ಜೊತೆ ಮಾತನಾಡುತ್ತೇನೆ. ಹೊಡೆಯಬೇಡಿ ಅಂತ ಅವರಿಗೆ ಹೇಳುತ್ತೇನೆ ಎಂದ್ದಾರೆ. ಆದರೆ ಅನಿಲ್ ಮಾತ್ರ ತಾನು ಶಿಕ್ಷಕಿಯೊಂದಿಗೆ ರಾಜಿಯಾಗುವುದಿಲ್ಲ. ಶಾಲೆಗೆ ಬರುವುದೂ ಇಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದ. ಅವರನ್ನು ಬಂಧಿಸಲೇ ಬೇಕು ಅಂತ ಆಗ್ರಹಿಸಿದ್ದ.
ಇದನ್ನೂ ಓದಿ: Spider Man: ಸುಳ್ಳಲ್ಲ ಕಣ್ರೀ, ಈ ಪುಟ್ಟ ಹುಡುಗನ Birth Dayಗೆ ಸ್ಪೈಡರ್ ಮ್ಯಾನ್ ಬಂದಿದ್ದ! ಬೇಕಿದ್ರೆ ವಿಡಿಯೋ ನೋಡಿ
ಕೌನ್ಸೆಲಿಂಗ್ ಮಾಡಿ ಶಾಲೆಗೆ ಕರೆದೊಯ್ದ ಪೊಲೀಸರು
ಹುಡುಗನ ಮಾತು ಕೇಳಿ ಮಹಿಳಾ ಪೊಲೀಸ್ ಅಧಿಕಾರಿ ಆಶ್ಚರ್ಯಕ್ಕೆ ಒಳಗಾದ್ರು. ಕೂಡಲೇ ಅವನಿಗೆ ಬುದ್ಧಿ ಹೇಳಿ, ಬಳಿಕ ಅವನಿಗೆ ಕೌನ್ಸಿಲಿಂಗ್ ಮಾಡಿದ್ರು. ನಂತರ ಖುದ್ದು ಅವರೇ ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಶಿಕ್ಷಕಿಗೂ ಬುದ್ಧಿಮಾತು ಹೇಳಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ