• Home
  • »
  • News
  • »
  • trend
  • »
  • Drinks: ಇದು ಕೂಗೋ ಕೋಳಿ ಅಲ್ಲ, ಕುಡುಕ ಕೋಳಿ! ಈ ಹುಂಜ ಪ್ರತಿ ತಿಂಗಳು 2 ಸಾವಿರ ರೂಪಾಯಿಯ ಎಣ್ಣೆ ಕುಡಿಯುತ್ತೆ!

Drinks: ಇದು ಕೂಗೋ ಕೋಳಿ ಅಲ್ಲ, ಕುಡುಕ ಕೋಳಿ! ಈ ಹುಂಜ ಪ್ರತಿ ತಿಂಗಳು 2 ಸಾವಿರ ರೂಪಾಯಿಯ ಎಣ್ಣೆ ಕುಡಿಯುತ್ತೆ!

ಆಲ್ಕೋಹಾಲ್ ಕುಡಿಯುವ ಕೋಳಿ

ಆಲ್ಕೋಹಾಲ್ ಕುಡಿಯುವ ಕೋಳಿ

ಊಟವಾದ್ರೂ ಬಿಡ್ತೀವಿ, ಆದ್ರೆ ಸಾರಾಯಿ ಕುಡಿಯೋದನ್ನು ಮಾತ್ರ ಬಿಡೋದಿಲ್ಲ ಅನ್ನೋದು ಕುಡುಕರ ಶಪಥ. ಇದೀಗ ಈ ಕುಡಿಕರ ಸಾಲಿಗೆ ಈ ಹುಂಜ ಕೂಡ ಸೇರಿದ್ಯಂತೆ. ಈ ಹುಂಜ ಅದೆಂತಾ ಕುಡಿತದ ದಾಸನಾಗಿದೆ ಅಂದ್ರೆ, ಆಲ್ಕೋಹಾಲ್ ಇಲ್ಲದೇ ಏನನ್ನೂ ಮಾಡೋದಿಲ್ವಂತೆ!

  • Share this:

ಮಹಾರಾಷ್ಟ್ರ: ಕುಡಿತ (Drinking) ಕೆಟ್ಟದ್ದೂ ಎನ್ನುವುದು ಎಲ್ಲರಿಗೂ ಗೊತ್ತು. ಆದರೂ ಅದೆಷ್ಟೋ ಮಂದಿ ಕುಡಿತದ ದಾಸರಾಗಿ (Drinks Addict) ತಮ್ಮ ಹಣ (Money), ಆರೋಗ್ಯ (Health), ನೆಮ್ಮದಿಯನ್ನು ಕಳೆದುಕೊಳ್ತಾರೆ. ಊಟವಾದ್ರೂ (Meals) ಬಿಡ್ತೀವಿ, ಆದ್ರೆ ಸಾರಾಯಿ (Alcohol) ಕುಡಿಯೋದನ್ನು ಮಾತ್ರ ಬಿಡೋದಿಲ್ಲ ಅನ್ನೋದು ಕುಡುಕರ (Drunkard) ಶಪಥ. ಇದೀಗ ಈ ಕುಡಿಕರ ಸಾಲಿಗೆ ಈ ಹುಂಜ (Cock) ಕೂಡ ಸೇರಿದ್ಯಂತೆ. ಈ ಹುಂಜ ಅದೆಂತಾ ಕುಡಿತದ ದಾಸನಾಗಿದೆ ಅಂದ್ರೆ, ಆಲ್ಕೋಹಾಲ್ ಇಲ್ಲದೇ ಏನನ್ನೂ ಮಾಡೋದಿಲ್ವಂತೆ. ಈ ಕೋಳಿಗೆ ಸಾರಾಯಿ ಕುಡಿಯೋದಕ್ಕೆ ಅಂತಾನೇ ಪ್ರತಿ ತಿಂಗಳು 2 ಸಾವಿರ ರೂಪಾಯಿ ಖರ್ಚಾಗುತ್ತಂತೆ. ಅರೇ ಇದೆನಪ್ಪಾ ಕುಡಿಕ ಕೋಳಿ ಕತೆ? ಈ ಕೋಳಿ ಎಲ್ಲಿರೋದು ಅಂದ್ರಾ? ಹಾಗಿದ್ರೆ ಇಲ್ಲಿದೆ ಓದಿ ಕುಡಿಕ ಕೋಳಿಯ ಇಂಟ್ರೆಸ್ಟಿಂಗ್ ಕಹಾನಿ…


ಕೂಗೋ ಕೋಳಿಗೆ ಪ್ರತಿನಿತ್ಯ ಬೇಕು ಸಾರಾಯಿ!


ಮಹಾರಾಷ್ಟ್ರದ ಕೋಳಿಯೊಂದು ಮದ್ಯದ ಚಟಕ್ಕೆ ಬಿದ್ದಿದ್ದು, ದಿನನಿತ್ಯದ ಡೋಸ್ ನೀಡದಿದ್ದರೆ ಏನನ್ನೂ ತಿನ್ನಲು ಅಥವಾ ಕುಡಿಯಲು ನಿರಾಕರಿಸುತ್ತದೆಯಂತೆ. ಭಂಡಾರಾ ಜಿಲ್ಲೆಯ ಪಿಪಾರಿ ಗ್ರಾಮದಲ್ಲಿ ಭಾವು ಕಟಾರ್ ಎಂಬಾತ ಸಾಕಿರುವ ಕೋಳಿಯೇ ಈಗ ಮದ್ಯದ ದಾಸನಾಗಿರೋ ಕೋಳಿ.


ಕುಡಿಯದ ಮಾಲೀಕನ ಮನೆಯಲ್ಲಿ ಕುಡುಕ ಕೋಳಿ!


ಭಾವಿ ಕಟಾರ್ ತನ್ನ ಜೀವನದಲ್ಲಿ ಎಂದಿಗೂ ಮದ್ಯವನ್ನು ಮುಟ್ಟದ ವ್ಯಕ್ತಿಯಂತೆ. ಆದರೆ ಆತ ತನ್ನ ಮನೆಯಲ್ಲಿ ಸಾಕಿದ ಕೋಳಿಗೆ ಮಾತ್ರ ಪ್ರತಿನಿದ್ಯ ಮದ್ಯ ಸಮಾರಾಧನೆ ನಡೆಯಲೇ ಬೇಕು. ಇಲ್ಲವಾದರೆ ಅದು ಎದ್ದು ಓಡಾಡುವುದೂ ಇಲ್ಲವಂತೆ. ದಿನವಿಡೀ ಸತ್ತಂತೆ, ಉಲ್ಲಾಸ ಕಳೆದುಕೊಂಡು ಒಂದು ಕಡೆ ಬಿದ್ದಿರುತ್ತದೆಯಂತೆ. ಹೀಗಾಗಿ ತನ್ನ ಜೀವನದಲ್ಲಿ ಎಂದಿಗೂ ಆಲ್ಕೋಹಾಲ್ ಕುಡಿಯದ ಭಾವಿ ಕಟಾರ್, ಕೋಳಿಗಾಗಿ ನಿತ್ಯ ಸಾರಾಯಿ ಅಂಗಡಿಗೆ ಹೋಗಿ, ಮದ್ಯ ಖರೀದಿಸಬೇಕಾಗಿದ ಮುಜುಗರದ ಪ್ರಸಂಗ ಎದುರಾಗಿದ್ಯಂತೆ.


ಇದನ್ನೂ ಓದಿ: OMG: ಈ ನಾಯಿಗೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕೆಲಸ, ಭರ್ಜರಿ ಸಂಬಳ! ಹ್ಯಾಪಿನೆಸ್ ಆಫೀಸರ್ ಅಂತೆ ಈ ಡಾಗ್


ಚಿಕಿತ್ಸೆ ನೀಡುವುದಕ್ಕೆ ಕುಡಿಸಿದ ಮದ್ಯವೇ ಚಟವಾಯ್ತು


ಕೆಲವು ತಿಂಗಳ ಹಿಂದೆ ಈ ಕೋಳಿಗೆ ರೋಗ ಬಂದಿತ್ತಂತೆ. ಆಗ ಸ್ಥಳೀಯರಾದ ಮೊಹ್ಫುಲ್ ಎಂಬುವರು ಕೋಳಿಗೆ ಮದ್ಯವನ್ನು ಕುಡಿಯುವುದರಿಂದ ಅದು ಆರೋಗ್ಯಕರವಾಗಿರುತ್ತದೆ ಎಂದು ಹೇಳಿದ್ರಂತೆ. ಆಗ ಭಾವು ಕಟಾರ್ ಅವರು ತನ್ನ ಕೋಳಿಗೆ ಮದ್ಯ ಕುಡಿಸಿದ್ದಾರೆ. ಔಷಧಿಗೆ ಅಂತ ಕುಡಿಸಿದ ಮದ್ಯವೇ ಬರುಬರುತ್ತಾ ಕೋಳಿಗೆ ಕಿಕ್ ಕೊಡೋದಕ್ಕೆ ಶುರು ಮಾಡಿದೆ. ಪ್ರತಿ ನಿತ್ಯ ಆಲ್ಕೋಹಾಲ್ ಕುಡಿಯುುದು ಕೋಳಿಗೆ ಚಟವಾಗಿದೆ.


ಕೋಳಿಯ ಮದ್ಯಕ್ಕಾಗಿ ಪ್ರತಿ ತಿಂಗಳು 2 ಸಾವಿರ ಖರ್ಚು


“ಮದ್ಯವನ್ನು ಕುಡಿಯದೆ ನೀರು ಕುಡಿಯಲು ಕೋಳಿ ಸಿದ್ಧವಿಲ್ಲ. ಹೀಗಾಗಿ ಕೋಳಿಗೆ ಮದ್ಯ ಕುಡಿಸುವುದಕ್ಕೆ ಅಂತಾನೇ ಪ್ರತಿ ತಿಂಗಳು 2000 ರೂಪಾಯಿ ಖರ್ಚು ಮಾಡಬೇಕಾಗುತ್ತಿದೆ’ ಎಂದು ಭಾವು ಕಟಾರ್ ಹೇಳುತ್ತಾರೆ.


ಕೋಳಿ ಕುಡಿತದ ಚಟ ಬಿಡಿಸಲು ಚಿಕಿತ್ಸೆ


ಈ ಕುಡಿಕ ಕೋಳಿಯನ್ನು ಸರಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಕೋಳಿ ಆಲ್ಕೋಹಾಲ್ ಮುಕ್ತವಾಗಬೇಕಾದರೆ ಆಲ್ಕೋಹಾಲ್ ವಾಸನೆಯ ವಿಟಮಿನ್ ಮಾತ್ರೆಗಳನ್ನು ನೀಡಲು ಪ್ರಾರಂಭಿಸಬೇಕು ಎಂದು ಪಶುವೈದ್ಯರು  ತಿಳಿಸಿದ್ದಾರೆ. ಪಶುವೈದ್ಯರು ಹೇಳುವಂತೆ ಕೋಳಿಗೆ 'ಶುದ್ಧ' ಪೆಗ್‌ಗಳನ್ನು ನೀಡಬಾರದು ಮತ್ತು ಬದಲಿಗೆ, ಆಲ್ಕೋಹಾಲ್ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಿ ಪಕ್ಷಿ ಸಂಪೂರ್ಣವಾಗಿ ಆಲ್ಕೋಹಾಲ್ ಮುಕ್ತವಾಗಲು ಅನುವು ಮಾಡಿಕೊಡುತ್ತದೆ.


ಇದನ್ನೂ ಓದಿ: Viral Video: ಹೇ, ಅದು ನನ್ನ ಬೆಡ್ ಎದ್ದೇಳು- ಮಾವುತನ ಜೊತೆ ಆನೆಮರಿಯ ಕ್ಯೂಟ್ ಫೈಟ್! ವಿಡಿಯೋ ವೈರಲ್


ಆಕರ್ಷಣೆಯ ಕೇಂದ್ರ ಬಿಂದುವಾದ ಕೋಳಿ


ಇದೀಗ ಈ ಕೋಳಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕುಡುಕ ಕೋಳಿ ಬಗ್ಗೆ ತಿಳಿದ ಅಕ್ಕಪಕ್ಕದ ಜನ, ಊರ ಜನರೆಲ್ಲ ಈತನ ಮನೆಗೆ ಬರುತ್ತಿದ್ದಾರಂತೆ. ಬಂದವರು ಕೋಳಿ ಅಲ್ಕೋಹಾಲ್ ಕುಡಿಯುವುದನ್ನು ನೋಡಿ ಪುಕ್ಕಟ್ಟೆ ಮನರಂಜನೆ ಪಡೀತಿದ್ದಾರಂತೆ!

Published by:Annappa Achari
First published: