Love Story: ಈ ಜೋಡಿಯ ಒಂದು ಕಪ್ ಚಹಾದಿಂದ ವೈರಲ್ ಆಗ್ತಿದೆ ಇವರಿಬ್ಬರ ಲವ್ ಸ್ಟೋರಿ

ಅಫ್ಜಲ್ ಮತ್ತು ಸಬೀನಾ

ಅಫ್ಜಲ್ ಮತ್ತು ಸಬೀನಾ

ಒಂದು ಸುಂದರವಾದ ಪ್ರೇಮಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ ಎಂದು ಹೇಳಬಹುದು. ಇನ್‌ಸ್ಟಾಗ್ರಾಮ್ ಖಾತೆಯಲ್ಲಿರುವ ‘ದಿ ಡೆಲ್ಲಿ ವಾಲಾ’ ಎಂಬ ಪುಟವನ್ನು ಹೊಂದಿರುವ ಮಯಾಂಕ್ ಆಸ್ಟಿನ್ ಸೂಫಿ ಅವರು ಪ್ರೀತಿಯಲ್ಲಿರುವ ಯುವ ಜೋಡಿಯ ಸೂಪರ್ ಸ್ವೀಟ್ ಕಥೆಯನ್ನು ಪೋಸ್ಟ್ ಮಾಡಿದ್ದಾರೆ ನೋಡಿ.

ಮುಂದೆ ಓದಿ ...
  • Share this:

ಮನಸ್ಸಿಗೆ ತುಂಬಾನೇ ಮುದ ನೀಡುವ ಕಥೆಗಳು (Story) ಎಂದರೆ ಈ ಪ್ರೇಮಕಥೆಗಳು (Love story) ಎಂದು ಹೇಳಿದರೆ ತಪ್ಪಾಗುವುದಿಲ್ಲ, ಏಕೆಂದರೆ ಈ ‘ಪ್ರೀತಿ’ ಎಂಬುದು ಅನೇಕರಿಗೆ ತುಂಬಾನೇ ಚಿಕ್ಕ ಪದವಾಗಿ ಕಾಣಿಸಬಹುದು, ಆದರೆ ಇದಕ್ಕಿರುವ ಅಗಾಧ ಶಕ್ತಿಯನ್ನು (Enormous power) ಯಾರು ತಾನೇ ಅಲ್ಲಗಳೆಯುವುದಕ್ಕೆ ಸಾಧ್ಯ ಹೇಳಿ? ಹೌದು.. ಎರಡು ಮನಸ್ಸುಗಳು (Two Minds) ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಪರಸ್ಪರರ ಪ್ರೀತಿಯಲ್ಲಿ ಬಿದ್ದಾಗ ಎರಡು ಮನಸ್ಸುಗಳು ಹೇಗೆ ಪರಸ್ಪರರಿಗಾಗಿ ಮಿಡಿಯುತ್ತವೆ ಎಂಬುದನ್ನು ನಾವು ಅನೇಕ ಪ್ರೇಮಕಥೆಗಳಲ್ಲಿ ಓದಿರುತ್ತೇವೆ ಮತ್ತು ಸಿನೆಮಾಗಳಲ್ಲಿ ಸಹ ನೋಡಿರುತ್ತೇವೆ.


ಇಲ್ಲಿಯೂ ಸಹ ಅಂತಹದೇ ಒಂದು ಸುಂದರವಾದ ಪ್ರೇಮಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ ಎಂದು ಹೇಳಬಹುದು. ಇನ್‌ಸ್ಟಾಗ್ರಾಮ್ ಖಾತೆಯಲ್ಲಿರುವ ‘ದಿ ಡೆಲ್ಲಿ ವಾಲಾ’ ಎಂಬ ಪುಟವನ್ನು ಹೊಂದಿರುವ ಮಯಾಂಕ್ ಆಸ್ಟಿನ್ ಸೂಫಿ ಅವರು ಪ್ರೀತಿಯಲ್ಲಿರುವ ಯುವ ಜೋಡಿಯ ಸೂಪರ್ ಸ್ವೀಟ್ ಕಥೆಯನ್ನು ಪೋಸ್ಟ್ ಮಾಡಿದ್ದಾರೆ ನೋಡಿ.ಜೋಡಿಗೆ ಚಹಾ ಎಂದರೆ ಅಚ್ಚುಮೆಚ್ಚು
ಅಫ್ಜಲ್ ಮತ್ತು ಸಬೀನಾ ಎಂಬ ದಂಪತಿಗಳ ಫೋಟೋಗಳು ದೆಹಲಿಯ ಸರಾಯ್ ಕಾಳೆ ಖಾನ್ ನ ಚಹಾ ಅಂಗಡಿಯಲ್ಲಿ ತೆಗೆಸಿಕೊಂಡಿದ್ದು ಎಂದು ಹೇಳಲಾಗುತ್ತಿದೆ. ಈ ಫೋಟೋಗಳಲ್ಲಿ, ಹುಡುಗ ಕಂದು ಬಣ್ಣದ ಶರ್ಟ್ ನೊಂದಿಗೆ ಕಪ್ಪು ಜೀನ್ಸ್ ಧರಿಸಿದ್ದರೆ, ಹುಡುಗಿ ಸಲ್ವಾರ್ ಕಮೀಜ್ ಧರಿಸಿದ್ದಾಳೆ.


ಇದನ್ನೂ ಓದಿ:  Viral Video: ಮಕ್ಕಳನ್ನು ಅಕ್ಕರೆಯಿಂದ ಶಾಲೆಗೆ ಕರೆದೊಯ್ಯುವ ಅಪ್ಪ! ಪ್ರೀತಿ ಮುಂದೆ ವಿಕಲಾಂಗತೆ ಸಮಸ್ಯೆಯೇ ಅಲ್ಲ


"ಅವರಿಬ್ಬರಿಗೂ ಚಾಯ್ (ಟೀ ) ಎಂದರೆ ಅಚ್ಚುಮೆಚ್ಚು ಮತ್ತು ಅವರು ಚಾಯ್ ಸೇವಿಸುತ್ತಿರುವಾಗ, ಅವರು ಅದನ್ನು ಒಂದೇ ಲೋಟದಿಂದ ಕುಡಿಯುತ್ತಾರೆ. "ನಮಗೆ ಹೀಗೆ ಒಂದೇ ಕಪ್ ನಲ್ಲಿ ಚಾಯ್ ಕುಡಿಯುವುದು ತುಂಬಾನೇ ಚೆನ್ನಾಗಿ ಅನ್ನಿಸುತ್ತದೆ". ಏಕೆಂದರೆ ನಾವು ಒಬ್ಬರನ್ನೊಬ್ಬರು ತುಂಬಾನೇ ಇಷ್ಟ ಪಡುತ್ತೇವೆ ಎಂದು ಸಬೀನಾ ಹೇಳಿದ್ದಾರೆ.


ಒಂದೇ ತಟ್ಟೆಯಲ್ಲಿ ಊಟ
ಇಷ್ಟೇ ಅಲ್ಲದೆ 21 ವರ್ಷದ ಅಫ್ಜಲ್ ಮತ್ತು 19 ವರ್ಷದ ಸಬೀನಾ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಾರಂತೆ. ಈ ದಂಪತಿಗಳು ಒಂದು ವರ್ಷದ ಹಿಂದೆ ಮದುವೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು. ಅಫ್ಜಲ್ ದಿನಗೂಲಿ ಕಾರ್ಮಿಕನಾಗಿರುವುದರಿಂದ ಅವರ ಪೋಷಕರು ಇವರ ಮದುವೆಯ ಪರವಾಗಿರಲಿಲ್ಲ. ಆದರೆ ನಿಜವಾದ ಕಾರಣ ಎಂದರೆ ಅಫ್ಜಲ್ ಮತ್ತು ಸಬೀನಾ ಚಿಕ್ಕಂದಿನಿಂದಲೂ ಪರಿಚಯವಿದ್ದವರು ಎಂದು ಅವರು ಈ ಮದುವೆಗೆ ಆಕ್ಷೇಪಿಸಿದ್ದರು. ಆದರೆ ಇವರಿಬ್ಬರು ಒಂದು ವರ್ಷದ ಹಿಂದೆಯಷ್ಟೆ ವಿವಾಹವಾದರು. "ಅದೊಂದು ಪ್ರೇಮ ವಿವಾಹವಾಗಿತ್ತು" ಎಂದು ಸಬೀನಾ ತಿಳಿಸಿದ್ದಾರೆ.


ಅಫ್ಜಲ್ ಮತ್ತು ಸಬೀನಾ ತಮ್ಮ ಮದುವೆಯ ನಂತರ ಬಾಡಿಗೆ ಕೋಣೆಯಲ್ಲಿ ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸಿದರು. ಅವನು ತನ್ನ ಹೆಂಡತಿಗೆ ತನ್ನ ಕೆಲಸದ ನಂತರ ಊಟವನ್ನು ಬೇಯಿಸಲು ಸಹಾಯ ಮಾಡುತ್ತಾನೆ. “ಸಬೀನಾ ನನ್ನ ಮಾತನ್ನು ಕೇಳದೆ ಇದ್ದಾಗ ನನಗೆ ಕೋಪ ಬರುತ್ತದೆ ಮತ್ತು ನಾನು ಅವಳೊಂದಿಗೆ ಜಗಳವಾಡುತ್ತೇನೆ” ಎಂದು ಅಫ್ಜಲ್ ಅವರು ಹೇಳಿದ್ದಾರೆ. ಇದೇ ಕಾರಣವನ್ನು ಸಬೀನಾ ಸಹ ಅಫ್ಜಲ್ ಬಗ್ಗೆ ಹೇಳುತ್ತಾರೆ.


ಸಾರ್ವಜನಿಕ ಉದ್ಯಾನವನದಲ್ಲಿ ವಿವಾಹ
ವೈವಾಹಿಕ ಜೀವನವು ಅವರಿಬ್ಬರನ್ನೂ ಕೆಲವು ರೀತಿಯಲ್ಲಿ ಬದಲಾಯಿಸಿದೆ. "ನಾನು ಹೆಚ್ಚು ಜವಾಬ್ದಾರಿಯುತನಾಗಿದ್ದೇನೆ, ಹೆಚ್ಚು ಶ್ರಮಜೀವಿಯಾಗಿದ್ದೇನೆ" ಎಂದು ಹೇಳಿಕೊಂಡಿದ್ದಾರೆ. ಅವರು ಪ್ರತಿದಿನ ಕೇವಲ 300 ರೂಪಾಯಿಗಳನ್ನು ಗಳಿಸುತ್ತಾರೆ ಮತ್ತು ಅದರಿಂದ ಮನೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ವಿವರಿಸುತ್ತಾರೆ. "ನಾನು ಇನ್ನೂ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಬೇಕು" ಎಂದು ಅಫ್ಜಲ್ ಹೇಳಿದ್ದಾರೆ. ಈ ದಂಪತಿಗಳು ಸಾರ್ವಜನಿಕ ಉದ್ಯಾನವನದಲ್ಲಿ ವಿವಾಹವಾದರು. ಪೋಸ್ಟ್ ನ ಶೀರ್ಷಿಕೆಯ ಪ್ರಕಾರ ಮದುವೆಗೆ ಬಂದ ಅತಿಥಿಗಳಿಗೆ ತಂಪು ಪಾನೀಯ ಮತ್ತು ಬಿಳಿ ರಸಗುಲ್ಲಾಗಳನ್ನು ನೀಡಲಾಯಿತು.


ಇದನ್ನೂ ಓದಿ:  Viral Video: ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದ ಅಳಿಲುಗಳು, ನಮಗೆ ತುಂಬಾ ಹೊಟ್ಟೆ ಕಿಚ್ಚಾಗುತ್ತಿದೆ ಎಂದ ನೆಟ್ಟಿಗರು!


ಈ ಪೋಸ್ಟ್ ನೋಡಿದ ನೆಟ್ಟಿಗರು ಯುವ ಜೋಡಿ ಮತ್ತು ಪೋಸ್ಟ್ ಹಂಚಿಕೊಂಡ ಮಯಾಂಕ್ ಅವರ ಬಗ್ಗೆ ತುಂಬಾನೇ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. "ಭಯಾನಕ ಸುದ್ದಿಗಳಿರುವ ಜಗತ್ತಿನಲ್ಲಿ ಎಂತಹ ಸುಂದರವಾದ ಪೋಸ್ಟ್" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

Published by:Ashwini Prabhu
First published: