Viral Video: ಬಡವಳಾದರೂ ಹೃದಯದಲ್ಲಿ ಸಿರಿವಂತೆ; ಈ ವಯೋವೃದ್ಧೆಯ ಜೀವನೋತ್ಸಾಹ, ನಿರರ್ಗಳ ಇಂಗ್ಲೀಷ್ ಮಾತು ನಿಜಕ್ಕೂ ಸೋಜಿಗ

ಬದುಕಿನ ಬಗ್ಗೆ ಇವರಿಗಿರುವ ನಂಬಿಕೆ, ಬದುಕನ್ನು ಸ್ವೀಕರಿಸಿರುವ ಬಗೆ ನೋಡಿದರೆ ಎಂತಹವರಿಗೂ ಅಸೂಯೆ ಹುಟ್ಟುತ್ತದೆ.

Latha CG | news18
Updated:July 17, 2019, 4:41 PM IST
Viral Video: ಬಡವಳಾದರೂ ಹೃದಯದಲ್ಲಿ ಸಿರಿವಂತೆ; ಈ ವಯೋವೃದ್ಧೆಯ ಜೀವನೋತ್ಸಾಹ, ನಿರರ್ಗಳ ಇಂಗ್ಲೀಷ್ ಮಾತು ನಿಜಕ್ಕೂ ಸೋಜಿಗ
ವಯೋವೃದ್ಧೆ
Latha CG | news18
Updated: July 17, 2019, 4:41 PM IST
ಆಕೆ ತಲೆಕೂದಲು ಬೆಳ್ಳಗಾಗಿರುವ ಸುಮಾರು 60 ವರ್ಷ ಆಸುಪಾಸಿನ ಮಹಿಳೆ. ಮೈ ಮೇಲೆ ಒಂದು ಒಡವೆಯನ್ನೂ ಹಾಕಿಲ್ಲ. ಮುಖದಲ್ಲಿ ಮಾತ್ರ ಮಂದಹಾಸದ ಒಡವೆ ಮನೆ ಮಾಡಿದೆ. ನೋಡಿದಾಕ್ಷಣ ಶಿಕ್ಷಣವಿಲ್ಲದ ಯಾವುದೋ ಹಿಂದುಳಿದ ಪ್ರದೇಶದಿಂದ ಬಂದಿರುವ ಬಡ ಮಹಿಳೆ ಎನಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅವರ ಮೊಗದಲ್ಲಿರುವ ಆತ್ಮವಿಶ್ವಾಸ, ನಗು ಎಲ್ಲಕ್ಕಿಂತ ಹೆಚ್ಚಾಗಿ ಅವರು ಪಟಪಟ ಮಾತನಾಡುವ ಇಂಗ್ಲಿಷ್​​ ಭಾಷೆ ನೋಡಿದರೆ ನೀವು ದಂಗಾಗುವುದು ಗ್ಯಾರಂಟಿ.

ಹೌದು, ಇಂತಹ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್​ ಆಗಿದೆ. ಬದುಕಿನ ಬಗ್ಗೆ ಇವರಿಗಿರುವ ನಂಬಿಕೆ, ಬದುಕನ್ನು ಸ್ವೀಕರಿಸಿರುವ ಬಗೆ ನೋಡಿದರೆ ಎಂತಹವರಿಗೂ ಅಸೂಯೆ ಹುಟ್ಟುತ್ತದೆ. ಹರಳು ಉರಿದಂತೆ ಪಟ ಪಟನೆ ಕೇಳಿದ ಪ್ರಶ್ನೆಗಳಿಗೆ ಇಂಗ್ಲಿಷ್​ನಲ್ಲೇ ಉತ್ತರಿಸುತ್ತಾರೆ. ಬಡವಳಾದರೂ ಹೃದಯದಲ್ಲಿ ಸಿರಿವಂತೆ ಈಕೆ. ಈ ವಯೋವೃದ್ಧೆಯ ಜೀವನೋತ್ಸಾಹ, ನಿರರ್ಗಳ ಇಂಗ್ಲೀಷ್ ಮಾತು ನಿಜಕ್ಕೂ ಸೋಜಿಗ.



"ನಾನೇನೂ ಓದಿಲ್ಲ. ನನಗೇನು ತಿಳಿದಿಲ್ಲ ಎಂದು ಮಾತು ಆರಂಭಿಸುವ ಅವರು, ನನ್ನ ಗಂಡ ನನ್ನನ್ನು ತುಂಬಾ ಪ್ರೀತಿ ಮಾಡುತ್ತಾರೆ. ಆದರೆ ಅವರು ಈಗ ಇಲ್ಲ. ನಾನು ಕೂಡ ಪ್ರೀತಿ ಮಾಡುತ್ತೇನೆ. ನನಗೆ ಮಕ್ಕಳು-ಮೊಮ್ಮಕ್ಕಳು ಇದ್ದಾರೆ. ಅವರೆಲ್ಲಾ ಕೆಲಸಕ್ಕೆ ಹೋಗುತ್ತಾರೆ. ತುಂಬಾ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ಜಾಲಿಯಾಗಿದ್ದೇನೆ. ನಾನು ಕೂಡ ಕೆಲಸಕ್ಕೆ ಹೋಗುತ್ತೇನೆ," ಎನ್ನುತ್ತಾರೆ.

ಮಹಿಳೆಯರ ಸೀರೆ ಮೋಹಕ್ಕೆ ವೇದಿಕೆಯಾದ ಟ್ವಿಟರ್​; ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿಸುತ್ತಿರುವ #SareeTwitter

"ನಾಳೆ ಭಾನುವಾರ ನನಗಿಷ್ಟದ ಅಡುಗೆ ಮಾಡಿ ಚೆನ್ನಾಗಿ ಊಟ ಮಾಡುತ್ತೇನೆ. ಚಿಕನ್​, ಮಟನ್​, ಫಿಶ್​ ಎಲ್ಲಾ ಅಡುಗೆ ಮಾಡುತ್ತೇನೆ. ನಾನು ಹಾಡುತ್ತೇನೆ, ಕುಣಿಯುತ್ತೇನೆ, ಪಾರ್ಟಿಗಳಿಗೆ ಹೋಗುತ್ತೇನೆ. ದೇವಸ್ಥಾನಕ್ಕೂ ಹೋಗುತ್ತೇನೆ. ದೇವರು ನನ್ನ ಜೊತೆ ಯಾವಾಗಲೂ ಇರುತ್ತಾರೆ. ರಾತ್ರಿ ವೇಳೆ ನನ್ನ ಗಂಡ ಕನಸಲ್ಲಿ ಬಂದು ಮಾತನಾಡುತ್ತಾರೆ, ನನ್ನನ್ನು ಪ್ರೀತಿಸುತ್ತಾರೆ," ಎಂದು ನಗುತ್ತಲೇ ಹೇಳಿದ್ದಾರೆ.
First published:July 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...