Dream-11: 2 ಕೋಟಿ ರೂಪಾಯಿ ಗೆದ್ದು ಶ್ರೀಮಂತನಾದ ಚಾಲಕ; 49 ರೂಪಾಯಿಗೆ ಹೊಡೆಯಿತು ಜಾಕ್ಪಾಟ್!
ಡ್ರೀಮ್ 11 ಗೇಮ್ ಆ್ಯಪ್ ಬಡ ಚಾಲಕನೊಬ್ಬನನ್ನು (Driver) ರಾತ್ರೋ ರಾತ್ರಿ ಶ್ರೀಮಂತನನ್ನಾಗಿ ಮಾಡಿದೆ. ಮನೆಯಲ್ಲಿ ಏನೂ ಇಲ್ಲದೇ ಪರದಾಡುತ್ತಿದ್ದ ಬಡ ಚಾಲಕ ಇಂದು 2 ಕೋಟಿ ರೂಪಾಯಿಗಳ ಒಡೆಯನಾಗಿದ್ದಾನೆ.
ಬಿಹಾರ: ಡ್ರೀಮ್ 11 (Dream 11) ಎಂಬ ಆನ್ಲೈನ್ ಕ್ರಿಕೆಟ್ ಗೇಮ್ (Online Cricket Game) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಕ್ರಿಕೆಟ್ (Cricket) ಪ್ರೇಮಿಗಳಷ್ಟೇ ಅಲ್ಲ, ಕ್ರಿಕೆಟ್ ಆಡದ ಬಹುತೇಕರಿಗೂ ಡ್ರೀಮ್ 11 ಬಗ್ಗೆ ಗೊತ್ತಿರುತ್ತದೆ. ಆ ಆನ್ಲೈನ್ ಕ್ರಿಕೆಟ್ ಗೇಮ್ ಆ್ಯಪ್ (App) ಅಷ್ಟೊಂದು ಜನಪ್ರಿಯ. ಈ ಆ್ಯಪ್ನಲ್ಲಿ ನಾವು ನಮ್ಮಿಷ್ಟದ ತಂಡ (Team) ನಿರ್ಮಿಸಿಕೊಂಡು ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ (Betting) ಆಡಬಹುದು. ಮಿನಿಮಮ್ 15 ರೂಪಾಯಿಗಳಿಂದ ಶುರುವಾಗುವ ಈ ಗೇಮ್ನಲ್ಲಿ ಗೆದ್ದರೆ ಕೋಟ್ಯಾಂತರ ರೂಪಾಯಿ (Crore Rupees) ಗಳಿಸಬಹುದು. ಇದೀಗ ಇದೇ ಗೇಮ್ ಬಡ ಚಾಲಕನೊಬ್ಬನನ್ನು (Driver) ರಾತ್ರೋ ರಾತ್ರಿ ಶ್ರೀಮಂತನನ್ನಾಗಿ ಮಾಡಿದೆ. ಮನೆಯಲ್ಲಿ ಏನೂ ಇಲ್ಲದೇ ಪರದಾಡುತ್ತಿದ್ದ ಬಡ ಚಾಲಕ ಇಂದು 2 ಕೋಟಿ ರೂಪಾಯಿಗಳ ಒಡೆಯನಾಗಿದ್ದಾನೆ.
ಬಿಹಾರದ ವ್ಯಕ್ತಿಗೆ ಜಾಕ್ಪಾಟ್
ಬಿಹಾರದ ಸರನ್ ಜಿಲ್ಲೆಯ ರಮೇಶ್ ಕುಮಾಕ್ ಎಂಬುವರೇ ಡ್ರೀಮ್ 11 ಗೇಮ್ನಿಂದ ಕೋಟ್ಯಾಧಿಪತಿಯಾದ ಬಡ ಡ್ಕೈವರ್. ಇವರು ತಮ್ಮ ಮೊಬೈಲ್ನಲ್ಲಿ ಆನ್ಲೈನ್ ಕ್ರಿಕೆಟ್ ಗೇಮ್ ಅಪ್ಲಿಕೇಶನ್ ಡ್ರೀಮ್ 11ನಲ್ಲಿ ತಮ್ಮ ಐಪಿಎಲ್ ತಂಡವನ್ನು ರಚಿಸಿದ್ದರು. ಅವರು ರಚಿಸಿದ್ದ ತಂಡವು ಮೊದಲನೇ ಸ್ಥಾನ ಪಡೆದಿದೆ. ಈ ಮೂಲಕ ರಮೇಶ್ ಎರಡು ಕೋಟಿ ರೂಪಾಯಿ ಮೊತ್ತವನ್ನು ಗೆದ್ದಿದ್ದಾರೆ.
49 ರೂಪಾಯಿಯಿಂದ ಬಂತು 2 ಕೋಟಿ!
ರಮೇಶ್ ಕುಮಾರ್ ಪಶ್ಚಿಮ ಬಂಗಾಳದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಬಡ ಕೂಲಿ ಕಾರ್ಮಿಕರಾಗಿದ್ದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಹೀಗಾಗಿ ಇವರು ಚಾಲಕನ ಕೆಲಸ ಮಾಡುತ್ತಿದ್ದರು. ಎಷ್ಟೋ ಗೇಮ್ನಲ್ಲಿ ಸಲ ಸೋತಿದ್ದರು. ಆದರೂ ಛಲ ಬಿಡದೇ ಗೇಮ್ ಆಡುತ್ತಿದ್ದರು. ಇದೀಗ 49 ಹಾಕಿ ಟೀಂ ಮಾಡಿಕೊಂಡು ಆಡಿದ್ದಾಗ ಅದೃಷ್ಟವೆಂಬಂತೆ ಗೆದ್ದಿದ್ದಾರೆ. ಇದೀಗ ಬರೋಬ್ಬರಿ 2 ಕೋಟಿ ರೂಪಾಯಿಗಳ ಒಡೆಯಲಾಗಿದ್ದಾರೆ.
ರಮೇಶ್ ಕುಮಾರ್ 49 ರೂಪಾಯಿಗಳನ್ನು ಡ್ರೀಮ್ 11 ನಲ್ಲಿ ಹೂಡಿಕೆ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದರು. ಇತ್ತೀಚೆಗೆ ಪಂಜಾಬ್ ಮತ್ತು ಲಖನೌ ನಡುವೆ ನಡೆದ ಪಂದ್ಯದ ಸಮಯದಲ್ಲಿ ಇವರು ತಮ್ಮ ಟೀಮ್ ರಚಿಸಿದ್ದರು. ಇದರಲ್ಲಿ ವೇಗದ ಬೌಲರ್ ಕಗಿಸೊ ರಬಾಡ ನಾಯಕನಾಗಿ ಮತ್ತು ಉಪನಾಯಕ ಶಿಖರ್ ಧವನ್ನನ್ನು ಆಯ್ಕೆ ಮಾಡಿದ್ದರು. ಈ ಪಂದ್ಯದಲ್ಲಿ ಕಗಿಸೊ ರಬಾಡ ಮೂರು ವಿಕೆಟುಗಳನ್ನು ಕಬಳಿಸಿದರು ಮತ್ತು ಇತರ ಆಯ್ದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಈ ಮೂಲಕ ಅವರು ಡ್ರೀಮ್ 11 ಕಂಟೆಸ್ಟ್ನಲ್ಲಿ ಮೊದಲ ಸ್ಥಾನ ಪಡೆದರು.
ಮರುದಿನ ಮೊಬೈಲ್ಗೆ ಬಂತು ಮೆಸೇಜ್
ಪಂದ್ಯ ಮುಗಿದ ಮರುದಿನ ಬೆಳಗ್ಗೆ ಅವರು ನಂಬರ್ ಒನ್ ಸ್ಥಾನದಲ್ಲಿದ್ದು, ಎರಡು ಕೋಟಿ ರೂಪಾಯಿ ಗೆದ್ದಿದ್ದಾರೆ ಎಂಬ ಸಂದೇಶ ಅವರ ಮೊಬೈಲ್ಗೆ ಬಂತು. ಈಗ 60 ಲಕ್ಷ ರೂಪಾಯಿ ತೆರಿಗೆ ಕಟ್ ಆಗಿ ಅವರ ಖಾತೆಗೆ ಒಂದು ಕೋಟಿ 40 ಲಕ್ಷ ರೂಪಾಯಿ ಬಂದಿದೆ. ರಸುಲ್ಪುರ ಗ್ರಾಮದ ನಿವಾಸಿ ರಮೇಶ್ ಕುಮಾರ್ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.