ಜನರು (Peoples) ರೈಲಿನಲ್ಲಿ (Railway) ಪ್ರಯಾಣಿಸುತ್ತಾರೆ (Travel). ರೈಲು ಪ್ರಯಾಣ, ಪ್ರಯಾಣಿಕರಿಗೆ ಒಂದು ರೀತಿಯ ಜೀವನ (Life) ಮಾರ್ಗವಾಗಿದೆ. ದಿನನಿತ್ಯದ ಸಣ್ಣ ಪುಟ್ಟ ಪ್ರಯಾಣಕ್ಕೆ ಲೋಕಲ್ ರೈಲಿನಲ್ಲಿ (Local Train) ಜನಜಂಗುಳಿ ಹೆಚ್ಚಾಗಿದ್ದು, ಈ ಬಾರಿ ಇಂತಹದ್ದೊಂದು ಚಿತ್ರಣ ಕಣ್ಣ ಮುಂದೆ ಬಂದಿದ್ದು, ಇದನ್ನು ನೋಡಿ ಜನ ಮಾತ್ರವಲ್ಲ ಭಾರತೀಯ ರೈಲ್ವೇ ಕೂಡ ಬೆಚ್ಚಿ ಬಿದ್ದಿದೆ. ಲೋಕಲ್ ರೈಲಿನಲ್ಲಿ ಮನುಷ್ಯರ ಜೊತೆ ಕುದುರೆಯೂ (Horse) ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಮನುಷ್ಯರ ನಡುವೆ ಲೋಕಲ್ ರೈಲಿನಲ್ಲಿ ಕುದುರೆಯೂ ನಿಂತಿರುವುದನ್ನು ಚಿತ್ರಗಳಲ್ಲಿ ಕಾಣಬಹುದು. ಮನುಷ್ಯರೊಂದಿಗೆ ಲೋಕಲ್ ರೈಲಿನಲ್ಲಿ ಕುದುರೆ ಪ್ರಯಾಣಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇದು ವಿಚಿತ್ರವೆನಿಸುತ್ತದೆ, ಅಲ್ಲವೇ? ಆದರೆ ನಿಜಕ್ಕೂ ಕುದುರೆ ರೈಲಿನಲ್ಲಿ ಸವಾರಿ ಮಾಡಿದೆ.
ರೈಲಿನಲ್ಲಿ ಪ್ರಯಾಣ ಮಾಡಿದ ಕುದುರೆ
ರೈಲು ಬೋಗಿಗಳಲ್ಲಿ ಜನರ ನಡುವೆ ನಿಂತಿರುವ ಕುದುರೆಯ ಚಿತ್ರಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಲೋಕಲ್ ಟ್ರೈನ್ ಒಳಗೆ ಕುದುರೆಯ ಚಿತ್ರಗಳು ವೈರಲ್ ಆಗುತ್ತಿದ್ದು, ಈ ಚಿತ್ರಗಳು ಪಶ್ಚಿಮ ಬಂಗಾಳದವು.
ಮತ್ತು ಸೀಲ್ಡಾ ಡೈಮಂಡ್ ಹಾರ್ಬರ್ ಡೌನ್ ಲೋಕಲ್ ಟ್ರೈನ್ನ ಚಿತ್ರಗಳು ಎಂದು ಹೇಳಲಾಗುತ್ತಿದೆ. ಈ ಚಿತ್ರಗಳು ವೈರಲ್ ಆದ ನಂತರ, ಜನರು ಈ ಚಿತ್ರಗಳಿಗೆ ಸಾಕಷ್ಟು ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಈ ಕ್ಯಾಂಟೀನ್ನಲ್ಲಿ 1 ರೂಪಾಯಿಗೆ ತಿಂಡಿ ಸಿಗುತ್ತೆ, ಹಸಿವು ನೀಗಿಸೋಕೆ ಇನ್ನೇನು ಬೇಕು?
ಕುದುರೆ ಪ್ರವೇಶಿಸಲು ಹೇಗೆ ಅನುಮತಿ ಸಿಕ್ಕಿತು ನೆಟ್ಟಿಗರ ಪ್ರಶ್ನೆ
ಜನರು ಆಶ್ಚರ್ಯಚಕಿತರಾಗಿದ್ದಾರೆ. ಇದು ಹೇಗೆ ಸಂಭವಿದೆ? ನಿಲ್ದಾಣದೊಳಗೆ ಕುದುರೆ ಹೇಗೆ ಬಂತು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಕುದುರೆ ಪ್ರವೇಶಿಸಲು ಹೇಗೆ ಅನುಮತಿ ಸಿಕ್ಕಿತು? ಅಂದ ಹಾಗೆ ಘಟನೆಯು ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಸೀಲ್ಡಾ-ಡೈಮಂಡ್ ಹಾರ್ಬರ್ ಡೌನ್ ಲೋಕಲ್ ರೈಲಿನಲ್ಲಿ ಕುದುರೆ
ಸೀಲ್ಡಾ-ಡೈಮಂಡ್ ಹಾರ್ಬರ್ ಡೌನ್ ಲೋಕಲ್ ರೈಲಿನಲ್ಲಿ ಕುದುರೆಯೊಂದು ಮನುಷ್ಯರೊಂದಿಗೆ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಇದರೊಂದಿಗೆ ಕುದುರೆಗಳು ಕೂಡ ರೈಲಿನೊಳಗೆ ಪ್ರವೇಶಿಸಲು ಅನುಮತಿ ಪಡೆದಿವೆಯೇ ಎಂದು ಜನರು ಭಾರತೀಯ ರೈಲ್ವೆಯನ್ನು ಸಹ ಪ್ರಶ್ನಿಸುತ್ತಿದ್ದಾರೆ.
ಕುದುರೆ ಟಿಕೆಟ್ ತೆಗೆದುಕೊಂಡಿದ್ದೀರಾ ಎಂದು ಹಲವರು ಕೇಳುತ್ತಿದ್ದಾರೆ. ಅದೇ ಸಮಯದಲ್ಲಿ, ಭಾರತೀಯ ರೈಲ್ವೇ ಇದನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಅನೇಕರು ಕೇಳುತ್ತಿದ್ದಾರೆ. ಕುದುರೆ ರೈಲಿನಲ್ಲಿ ಇದ್ದಾಗ ಅಲ್ಲಿ ಕುದುರೆಯ ಮಾಲೀಕನೂ ಇದ್ದ.
ಆದರೆ, ಚಿತ್ರವನ್ನು ಯಾವಾಗ ತೆಗೆಯಲಾಗಿದೆ ಎಂಬುದು ದೃಢಪಟ್ಟಿಲ್ಲ. ಆದರೆ ಘಟನೆಯ ಕುರಿತು ಪೂರ್ವ ರೈಲ್ವೆ ತನಿಖೆ ಆದೇಶಿಸಿದೆ.
ಅಂತರ್ಜಾಲದಲ್ಲಿ ಚಿತ್ರ ವೇಗವಾಗಿ ಹರಡುತ್ತಿದೆ
ಈ ಚಿತ್ರಗಳು ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ವೈರಲ್ ಆಗುತ್ತಿವೆ. ಕುದುರೆಯನ್ನು ರೈಲಿನಲ್ಲಿ ಕರೆದೊಯ್ಯಲು ಅನುಮತಿ ಹೇಗೆ ಸಿಕ್ಕಿತು ಎಂಬ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ. ಅದೇ ಸಮಯದಲ್ಲಿ, ಕೆಲವರು ಕುದುರೆ ಟಿಕೆಟ್ ತೆಗೆದುಕೊಂಡಿದೆಯೇ ಎಂದು ಕೇಳಿದ್ದಾರೆ.
ಇನ್ನು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಇದು ನಿಜವೇ? ಎಂದು ಆಶ್ಚರ್ಯ ಪಟ್ಟಿದ್ದಾರೆ.
ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ರೈಲಿನಲ್ಲಿ ಜನರ ಮಧ್ಯೆ ನಿಂತು ಪ್ರಯಾಣಿಸಿದ ಕುದುರೆ
ಸ್ಥಳೀಯ ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಅವರ ನಡುವೆ ಕುದುರೆ ನಿಂತಿರುವುದು ವೈರಲ್ ಆಗಿರುವ ಚಿತ್ರಗಳಲ್ಲಿ ಕಂಡು ಬರುತ್ತಿದೆ. ಕುದುರೆಯೊಂದಿಗೆ ರೈಲು ಹತ್ತಿದ ವ್ಯಕ್ತಿಯನ್ನು ಪ್ರಯಾಣಿಕರು ವಿರೋಧಿಸಿದರು. ಆದರೆ ಅವರು ಎಲ್ಲವನ್ನೂ ನಿರ್ಲಕ್ಷಿಸಿದ್ದಾರೆ ಎಂದು 'ಎಚ್ಟಿ' ವರದಿ ಹೇಳಿದೆ.
ತನಿಖೆಗೆ ಆದೇಶ...
'ದಕ್ಷಿಣ 24 ಪರಗಣ' ಜಿಲ್ಲೆಯ ಬರುಯಿಪುರದಲ್ಲಿ ನಡೆದ ರೇಸ್ನಲ್ಲಿ ಕುದುರೆ ಭಾಗವಹಿಸಿತ್ತು ಎಂದು ಹೇಳಲಾಗಿದೆ. ಪೂರ್ವ ರೈಲ್ವೇ ವಕ್ತಾರರು ತಮ್ಮ ಫೋಟೋವನ್ನು ಸಹ ಸ್ವೀಕರಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಸೂಟು ಧರಿಸಿ, ಬೀದಿ ಬದಿಯಲ್ಲಿ ಚಾಟ್ಸ್ ಮಾರುತ್ತಿರುವ ಯುವಕನ ವಿಡಿಯೋ ವೈರಲ್
ಆದರೆ, ನಿಜವಾಗಿ ಇಂತಹ ಘಟನೆ ನಡೆದಿದೆಯೋ ಇಲ್ಲವೋ ಎಂಬುದು ತನಗೆ ತಿಳಿದಿಲ್ಲ ಎಂದು ಹೇಳಿದರು. ಇದೀಗ ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿಯಂತೆ ಹರಡುತ್ತಿದ್ದು, ಇದರ ಹಿಂದಿನ ಕಥೆಯನ್ನು ತಿಳಿಯಲು ಜನರು ಕಾತರರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ